For Quick Alerts
ALLOW NOTIFICATIONS  
For Daily Alerts

ಹೊಟ್ಟೆ ನೋವಿಗೆ ಕೆಲವೊಂದು ಮನೆಮದ್ದುಗಳು

By manu
|

ಹೊಟ್ಟೆ ನೋವು ಎನ್ನುವುದು ಎಲ್ಲಾ ವಯಸ್ಸಿನಲ್ಲಿ ವಿವಿಧ ಕಾರಣಗಳಿಂದ ಬರುವಂತಹ ಸಾಮಾನ್ಯ ಆರೋಗ್ಯ ಸಮಸ್ಯೆ. ಹೊಟ್ಟೆನೋವು ತೀವ್ರ, ಗಂಭೀರ ಅಥವಾ ಕಡಿಮೆ ಇದ್ದರೂ ಅದಕ್ಕೆ ಅಜೀರ್ಣ, ಆಹಾರ ವಿಷವಾಗುವುದು, ಆಹಾರದ ಅಲರ್ಜಿ, ಅಲ್ಸರ್, ಮಲಬದ್ಧತೆ, ಹೊಟ್ಟೆಯ ವೈರಸ್, ಗ್ಯಾಸ್ ಹರ್ನಿಯಾ, ಕ್ರೊಹ್ನ ರೋಗ, ಯುಟಿಐ, ಅಪೆಂಡಿಟ್ಸ್ ಮತ್ತು ಇತರ ಕೆಲವು ಸಾಮಾನ್ಯ ಕಾರಣಗಳಿರಬಹುದು.
ಹೊಟ್ಟೆನೋವು ತೀವ್ರವಾಗಿದ್ದರೆ ಮತ್ತು ನಿರಂತರವಾಗಿದ್ದರೆ ಆಗ ವೈದ್ಯರನ್ನು ಭೇಟಿಯಾಗಬೇಕು. ಹೊಟ್ಟೆನೋವಿನಿಂದ ಸ್ವಲ್ಪ ಮಟ್ಟಿನ ಆರಾಮ ಕೊಡುವ ಮನೆಮದ್ದುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೊಟ್ಟೆ ನೋವು, ಅಜೀರ್ಣಕ್ಕೆ ಇಲ್ಲಿದೆ ಮನೆಮದ್ದು

Home remedies for stomach pain

ಪುದೀನಾ
ಹೊಟ್ಟೆ ನೋವು ನಿವಾರಿಸಲು ಪುದೀನಾ ಒಳ್ಳೆಯ ಮದ್ದು. ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಂಡು ಜಗಿಯಿರಿ. ಅದೇ ರೀತಿ ಪುದೀನಾ ಎಲೆಗಳನ್ನು ಹಾಕಿ ಒಂದು ಕಪ್ ಚಹಾ ಮಾಡಿ ಕುಡಿದರೆ ಹೊಟ್ಟೆ ನೋವು ಶಮನವಾಗುತ್ತದೆ. ಒಂದು ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ ಕೆಲವು ಪುದೀನಾ ಎಲೆಗಳನ್ನು ಹಾಕಿ ಕೆಲವು ಹೊತ್ತು ಕುದಿಸಿ, ಈ ನೀರನ್ನು ಕುಡಿಯಿರಿ. ಹಸಿವು ಇಲ್ಲದಿರುವುದನ್ನು ಇದು ನಿವಾರಿಸುತ್ತದೆ ಮತ್ತು ಋತುಚಕ್ರದ ವೇಳೆ ಆಗುವ ಹೊಟ್ಟೆನೋವಿಗೆ ಇದು ಒಳ್ಳೆಯ ಪರಿಹಾರ.

ಅಲೋವೆರಾ ಜ್ಯೂಸ್
ಅಲೋವೆರಾದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವಂತಹ ಶಕ್ತಿಯಿದೆ. ಅಲೋವೆರಾದ ವೈದ್ಯಕೀಯ ಗುಣಗಳೆಂದರೆ ಅದು ನೋವಿಗೆ ಕಾರಣವಾಗುವ ಸೂಕ್ಷ್ಮಣುಗಳ ವಿರುದ್ಧ ಹೋರಾಡುತ್ತದೆ. ಅರ್ಧ ಕಪ್ ನಷ್ಟು ಅಲೋವೆರಾ ಜ್ಯೂಸ್ ಕುಡಿಯಿರಿ ಮತ್ತು ವಿವಿಧ ರೀತಿಯ ಕರುಳಿನ ಸಮಸ್ಯೆಗಳನ್ನು ಕಡಿಮೆ ಮಾಡಿ. ವಿವಿಧ ರೀತಿಯ ಹೊಟ್ಟೆಯ ಸಮಸ್ಯೆಗಳಾದ ಅತಿಸಾರ, ಮಲಬದ್ಧತೆ, ಗ್ಯಾಸ್, ಸೆಳೆತ ಮತ್ತು ಹೊಟ್ಟೆ ಉಬ್ಬುವುದಕ್ಕೆ ಇದು ಒಳ್ಳೆಯ ಚಿಕಿತ್ಸೆಯೆಂದು ಪರಿಗಣಿಸಲಾಗಿದೆ.

ನಿಂಬೆ ರಸ
ಬಿಸಿ ನೀರಿಗೆ ನಿಂಬೆ ರಸ ಹಾಕಿ ಕುಡಿದರೆ ಹೊಟ್ಟೆ ನೋವನ್ನು ನಿವಾರಿಸಬಹುದು. ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ನಿಂಬೆ ಹಿಂಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಕುಡಿಯಿರಿ. ನಿಂಬೆ ಇಲ್ಲದಿದ್ದರೆ ನಿಂಬೆರಸ ಕೂಡ ಕೆಲಸ ಮಾಡುತ್ತದೆ.

ಅಡುಗೆ ಸೋಡಾ
ಅಲ್ಕಾ-ಸೆಲ್ಟ್ಜರ್ ನಂತೆ ಕೆಲಸ ಮಾಡುವ ಇದು ಎದೆ ಉರಿ ಮತ್ತು ಅಜೀರ್ಣ ತಡೆಯುತ್ತದೆ ಆ್ಯಂಟ್ಸಿಡ್ ನಂತೆ ಕೆಲಸ ಮಾಡುತ್ತದೆ ಮತ್ತು ಹೊಟ್ಟೆ ಸಮಸ್ಯೆ ನಿವಾರಿಸುತ್ತದೆ. ಆ್ಯಂಟ್ಸಿಡ್ ಗಳು ಅಡುಗೆ ಸೋಡಾದಂತೆ ಸೋಡಿಯಂ ಬೈಕಾರ್ಬೊನೇಟ್ಸ್ ಆಗಿದೆ. ಒಂದು ಚಮಚ ಅಡುಗೆ ಸೋಡಾವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಮತ್ತು ಕುಡಿದರೆ ತಕ್ಷಣ ಪರಿಹಾರ ಸಿಗುತ್ತದೆ.

ಶುಂಠಿ
ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣ ಮತ್ತು ಇತರ ಆರೋಗ್ಯಕಾರಿ ಲಾಭಗಳಿವೆ. ಇದು ಜೀರ್ಣಕ್ರಿಯೆ ಸರಾಗವಾಗಿಸಿ ಹೊಟ್ಟೆ ನೋವು ಕಡಿಮೆ ಮಾಡುತ್ತದೆ. ಒಣಗಿದ ಶುಂಠಿಗಿಂತ ಹಸಿ ಶುಂಠಿ ಹೆಚ್ಚು ಪರಿಣಾಮಕಾರಿ. ನೀರಿಗೆ ಕೆಲವು ತುಂಡು ಶುಂಠಿ ಹಾಕಿ ಕುದಿಸಿ, ಬಳಿಕ ಅದರ ನೀರನ್ನು ಕುಡಿದರೆ ಹೊಟ್ಟೆ ನೋವಿನಿಂದ ಆರಾಮ ಪಡೆಯಬಹುದು. ನಿಮಗೆ ಮಸಾಲೆ ಆಹಾರಗಳು ಹಿತಕಾರಿಯಲ್ಲದಿದ್ದರೆ ಆಗ ನೀವು ಆರೋಗ್ಯಕಾರಿ ಆಹಾರ ಮಳಿಗೆಯಿಂದ ಶುಂಠಿಯ ಪೂರಕ ಪಡೆಯಬಹುದು.

ಬಿಸಿ ಅಕ್ಕಿಯ ಶಾಖ
ನೋವಿನ ಜಾಗಕ್ಕೆ ಬಿಸಿ ಶಾಖ ಕೊಡುವುದು ಸಮಸ್ಯೆಗೆ ಕಡಿಮೆ ಮಾಡಲು ಒಂದು ಪರಿಣಾಮಕಾರಿ ಮನೆಮದ್ದು. ನಿಮ್ಮಲ್ಲಿ ಹೀಟಿಂಗ್ ಪ್ಯಾಡ್ ಇಲ್ಲದಿದ್ದರೆ ಆಗ ಹತ್ತಿ ಬಟ್ಟೆ ಮತ್ತು ಅಕ್ಕಿಯ ನೆರವು ಪಡೆಯಬಹುದು. ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ ಮತ್ತು ಅದನ್ನು ಹತ್ತಿರ ಬಟ್ಟೆಗೆ ಹಾಕಿ ಕಟ್ಟಿ ಮತ್ತು ಹೊಟ್ಟೆಗೆ ಅದರ ಶಾಖ ನೀಡಿ. ಬಟ್ಟೆಯನ್ನು ತುಂಬಾ ಬಿಗಿಯಾಗಿ ಕಟ್ಟಬೇಡಿ. ಯಾಕೆಂದರೆ ಅಕ್ಕಿ ಕಾಳುಗಳು ಅತ್ತಿಂದ ಇತ್ತ ಚಲಿಸುತ್ತಿರಬೇಕು. ತುಂಬಾ ಬಿಸಿಯಿದ್ದರೆ ಎಂದೆರಡು ನಿಮಿಷ ತಡೆದು ಶಾಖ ನೀಡಿ. ಕೆನ್ನೀಲಿ ಅಥವಾ ಕ್ಯಾಮೊಮೈಲ್ ಹೂಗಳನ್ನು ಇದಕ್ಕೆ ಹಾಕಿದರೆ ಆಗ ಅರೋಮಾದ ಭಾವನೆಯಾಗುತ್ತದೆ.

English summary

Home remedies for stomach pain

Stomach pain is a common health problem that affects all walks of ages due to various reasons. Whether the stomach pain is sharp, serious or slightly low there are few common causes such as indigestion, food poisoning, food allergies, ulcers, constipation, stomach virus, gas, hernia, crohn’s disease, UTI, appendicitis and few other.
X
Desktop Bottom Promotion