For Quick Alerts
ALLOW NOTIFICATIONS  
For Daily Alerts

ದೇಹದ ಬೊಜ್ಜು ಕರಗಿಸಲು ಕೆಲವೊಂದು ಸಲಹೆಗಳು

By Harsha V.S
|

ಬೊಜ್ಜು ದೇಹ(ಒಬೆಸಿಟಿಯು) ಮನುಷ್ಯನ ದೇಹದಲ್ಲಿ ಅತಿಯಾಗಿ ಕೊಬ್ಬು ಮತ್ತು ಮಿತಿ ಮೀರಿದ ದೇಹದ ತೂಕವಿರುವ ಒಂದು ಸ್ಥಿತಿ. ಮಧುಮೇಹ, ಹೃದ್ರೋಗ, ಕೆಲವು ರೀತಿಯ ಕರ್ಕರೋಗ, ಸ್ಟ್ರೋಕ್ ಇತ್ಯಾದಿ ಹಲವಾರು ಮಾರಕ ರೋಗಗಳಿಗೆ ಬೊಜ್ಜು ದೇಹ ಕಾರಣವಾಗಬಹುದು. ಒಬೆಸಿಟಿಯು ಎಲ್ಲಾ ವಯಸ್ಸಿನ ವರ್ಗದವರಿಗೂ ಬರುವ ಸಾಧ್ಯತೆ ಇರುತ್ತದೆ.

ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ಮತ್ತು ಯಾವುದೇ ವ್ಯಾಯಾಮ ಅಥವಾ ಚಟುವಟಿಕೆ ಇಲ್ಲದ ಜೀವನಶೈಲಿ ಒಬೆಸಿಟಿ ಬರಲು ಮುಖ್ಯ ಕಾರಣವಾಗಿರುತ್ತದೆ. ಬೊಜ್ಜು ದೇಹ ಬೆಳವಣಿಗೆಗೆ ಅನುವಂಶಿಕವಾದ ಕಾರಣವಿರುವುದು ಸಹ ವಾಸ್ತವ. ಒಬೆಸಿಟಿ ಪರಿಹಾರಕ್ಕಾಗಿ ಮಾರುಕಟ್ಟೆಯಲ್ಲಿ ಅನೇಕ ತೂಕ ತಗ್ಗಿಸುವ ಚಿಕಿತ್ಸೆಗಲಿದ್ದರೂ ಅವು ಪರಿಣಾಮಕಾರಿ ಅಲ್ಲ ಹಾಗು ಸುರಕ್ಷಿತವೂ ಅಲ್ಲ.

ಅನೇಕ ಗೃಹ ಪರಿಹಾರಗಳು ಮತ್ತು ಜೀವನ ಶೈಲಿಯ ಬದಲಾವಣೆಯಿಂದ ಒಬೆಸಿಟಿಯಿಂದ ನಿವಾರಣೆಪಡೆಯಲು ಇಲ್ಲವೇ ಹತೋಟಿಯಲ್ಲಿಡಲು ಸಾಧ್ಯ. ಬೊಜ್ಜು ದೇಹದಿಂದ ಮುಕ್ತಿ ಪಡೆಯಲು ಈ ಕೆಳಗಿನ ಗೃಹ ಪರಿಹಾರಗಳನ್ನು ಪ್ರಯತ್ನಿಸಿ. ಈ ಗೃಹ ಪರಿಹಾರಗಳು ಮನುಷ್ಯರಿಗೆ ಬೊಜ್ಜು ದೇಹ ನಿಯಂತ್ರಣದಲ್ಲಿ ಮಾತ್ರವಲ್ಲ ಆರೋಗ್ಯವಾದ ದೇಹ ಮತ್ತು ಮನಸ್ಸನ್ನು ಪಡೆಯಲು ಸಹಾಯವಾಗಿರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪುರುಷರ ಸ್ತನಗಳ ಗಾತ್ರವನ್ನು ತಗ್ಗಿಸಲು ಸೂಕ್ತ ಸಲಹೆಗಳು

1. ಹಸಿರು ಚಹಾ

1. ಹಸಿರು ಚಹಾ

ಹಸಿರು ಚಹಾ ತೂಕ ತಗ್ಗಿಸಲು ಬಹಳ ಪರಿಣಾಮಕಾರಿ ಎಂದು ತಿಳಿದುಕೊಳ್ಳಲಾಗಿದೆ ಹಾಗು ಇದು ಯಾವುದೇ ರೀತಿಯ ಡಯಟಿಂಗ್ ಅಥವಾ ತೂಕ ತಗ್ಗಿಸುವ ಮಾತ್ರೆಗಳ ಸಹಾಯವಿಲ್ಲದೆ ದೇಹದ ತೂಕ ತಗ್ಗಿಸಲು ಸಹಾಯವಾಗಿರುತ್ತದೆ. ಉತ್ತಮ ಗುಣಮಟ್ಟದ ಹಸಿರು ಚಹಾ ಎಲೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಒಂದೆರಡು ನಿಮಿಷ ಕುದಿಸಬೇಕು. ನಂತರ ಈ ಹಸಿರು ಚಹಾವನ್ನು ಸೇವಿಸುವುದು. ಹೀಗೆ ಪ್ರತಿ ದಿನ ಎರಡು ಮೂರು ಸಲ ಮಾಡಿದಲ್ಲಿ ಕೆಲವೇ ದಿನಗಳಲ್ಲಿ ಪರಿಣಾಮವನ್ನು ಕಾಣಬಹುದು.

2.ಸೇಬಿನ ಸೈಡರ್ ವಿನೆಗರ್ ಮತ್ತು ನಿಂಬೆ ರಸ

2.ಸೇಬಿನ ಸೈಡರ್ ವಿನೆಗರ್ ಮತ್ತು ನಿಂಬೆ ರಸ

ಒಂದು ಚಹಾಚಮಚ ಸೇಬಿನ ಸೈಡರ್ ವಿನೆಗರ್ ಮತ್ತು ಒಂದು ಚಹಾಚಮಚ ನಿಂಬೆ ರಸವನ್ನು ಒಂದು ಬಟ್ಟಲು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಬೇಕು. ಈ ನೀರನ್ನು ಪ್ರತಿದಿನ ಬರಿಹೊಟ್ಟೆಯಲ್ಲಿ ಎರಡು ಮೂರು ತಿಂಗಳವೆರಗೆ ಸೇವಿಸಬೇಕು. ನೀರು ನಿಮ್ಮ ದೇಹದ ನೀರಿನಾಂಶವನ್ನು ಹೆಚ್ಚಿಸಿಡುತ್ತದೆ ಮತ್ತು ಸೇಬಿನ ಸೈಡರ್ ವಿನೆಗರ್ ನಿಮ್ಮ ಮೆಟಬಾಲಿಸಮ್ ವೃದ್ಧಿಸುತ್ತದೆ. ನಿಂಬೆಯ ರಸವು ರುಚಿಯನ್ನು ಉತ್ತಮವಾಗಿಸುತ್ತದೆ. ಇದರಿಂದ ನೀವು ಪ್ರತ್ಯಕ್ಷ ಪರಿಣಾಮವನ್ನು ಕಾಣುವಿರಿ.

3. ಜೇನುತುಪ್ಪದಿಂದ ನಿಮ್ಮ ದಿನವನ್ನು ಪ್ರಾರಂಭಿಸಿ

3. ಜೇನುತುಪ್ಪದಿಂದ ನಿಮ್ಮ ದಿನವನ್ನು ಪ್ರಾರಂಭಿಸಿ

ಒಂದು ಚಹಾಚಮಚದಷ್ಟು ಜೇನನ್ನು ಬಿಸಿನೀರಿನಲ್ಲಿ ಮಿಶ್ರಣಮಾಡಿ ಇದಕ್ಕೆ ಒಂದು ಚಹಾ ಚಮಚದಷ್ಟು ನಿಂಬೆ ರಸವನ್ನು ಸೇರಿಸಿ. ಇದನ್ನು ಬೆಳಗ್ಗೆ ಇದ್ದಿದ ತಕ್ಷಣ ಬರಿಹೊಟ್ಟೆಯಲ್ಲಿ ಸೇವಿಸಿ. ಪರಿಣಾಮಕಾರಿಯಾಗಿ ತೂಕ ತಗ್ಗಿಸಲು ಪ್ರತಿದಿನ ಎರಡು ಮೂರು ತಿಂಗಳವರೆಗೂ ಸೇವಿಸಿ.

4. ಬಿಸಿನೀರು ಕುಡಿಯಿರಿ

4. ಬಿಸಿನೀರು ಕುಡಿಯಿರಿ

ನಿಮಗೆ ತಣ್ಣೀರು ಕುಡಿಯುವ ಅಭ್ಯಾಸವಿದ್ದಲ್ಲಿ ತಣ್ಣೀರು ಬಿಟ್ಟು ಬಿಸಿನೀರನ್ನು ಕುಡಿಯಿರಿ. ಬಿಸಿನೀರು ದೇಹದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸಬಲ್ಲದು. ಊಟದ ಅರ್ಧ ಘಂಟೆ ನಂತರ ಬಿಸಿ ನೀರನ್ನು ಕುಡಿಯಿರಿ. ಊಟದಾನಂತರ ತಕ್ಷಣವೇ ಎಂದೂ ನೀರು ಕುಡಿಯಬೇಡಿ.

5. ಪುದಿನ ಎಲೆಗಳು

5. ಪುದಿನ ಎಲೆಗಳು

ಪುದಿನ ಜೀರ್ಣ ಗುಣಗಳನ್ನು ಹೊಂದಿದೆ ಆದ್ದರಿಂದ ಆರೋಗ್ಯಕರವಾಗಿ ಆಹಾರದ ಜೀರ್ಣಕ್ಕೆ ಸಹಾಯ ಮಾಡುತ್ತದೆ. ಪುದಿನ ಎಳೆಯ ರಸದ ಕೆಲವು ತೊಟ್ಟುಗಳನ್ನು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಊಟದ ಅರ್ಧಘಂಟೆ ಸಮಯದನಂತರ ಕುಡಿದರೆ ಸುಲಭ ಜೀರ್ಣಕ್ಕಾಗಿ ಮೆಟಬಾಲಿಸಂ ವೃದ್ಧಿಸಲು ಸಹಾಯವಾಗಿರುತ್ತದೆ. ದೇರ್ಘಾವದಿಯಲ್ಲಿ ದೇಹದ ತೂಕ ತಗ್ಗಿಸಲು ಪರಿನಾಮಕಾರಿಯಾಗಿರುತ್ತದೆ.

6. ದೊಡ್ಡ ಜೀರಿಗೆ (ಸೋಂಪು)

6. ದೊಡ್ಡ ಜೀರಿಗೆ (ಸೋಂಪು)

ದೊಡ್ಡ ಜೀರಿಗೆ ಹಸಿವನ್ನು ಕಡಿಮೆಯಾಗಿಸಲು ಬಹು ಪ್ರಸಿದ್ಧ ಪುರಾತನ ಗೃಹ ಪರಿಹಾರ. 6 ರಿಂದ 8 ದೊಡ್ಡ ಜೀರಿಗೆ ಬೀಜಗಳನ್ನು ನೀರಿನಲ್ಲಿ ಕೆಲ ನಿಮಿಷಗಳ ಕಾಲ ಕುದಿಸಿ. ನಂತರ ಬೇಜಗಳನ್ನು ತೆಗೆದು ನೀರನ್ನು ಮಾತ್ರ ಪ್ರತಿದಿನ ಬೆಳಗ್ಗೆ ಬರಿಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಹಸಿವು ಕಡಿಮೆಯಾಗುವುದು.

7. ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ

7. ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ

ಹೋಟೆಲ್ ರೆಸ್ಟೋರೆಂಟ್ ಹಾಗು ರಸ್ತೆ ಬದಿಯ ಅಂಗಡಿಗಳಲ್ಲಿ ಪದೆ ಪದೆ ತಿನ್ನುವುದರಿಂದ ನಿಮ್ಮದ ದೇಹದ ತೂಕವು ಸುಲಭವಾಗಿ ಹೆಚ್ಚುವುದು ಎಂದು ಎಲ್ಲರಿಗೂ ತಿಳಿದ ಸಂಗತಿಯೇ. ಮನೆಯಲ್ಲಿ ಕಡಿಮೆ ಎಣ್ಣೆಯ ಮತ್ತು ಕೊಬ್ಬಿನಿಂದ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ. ಸೊಪ್ಪು ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ಒಬೆಸಿಟಿಯನ್ನು ತಡೆಗಟ್ಟಬಹುದು.

8. ಚಹಾದಲ್ಲಿ ಮಸಾಲೆ ಬೆರಸುವುದು

8. ಚಹಾದಲ್ಲಿ ಮಸಾಲೆ ಬೆರಸುವುದು

ಮಸಾಲೆಗಲು ದೇಹದತೂಕವನ್ನು ನೈಸರ್ಗಿಕವಾಗಿ ಹಾಗು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಬಹು ಉತ್ತಮ. ತ್ವರಿತ ಹಾಗು ಉತ್ತಮವಾಗಿ ತೂಕ ತಗ್ಗಿಸಲು ಎರಡು ಮೂರು ಶುಂಠಿ ಚೂರು, ಕರಿಮೆಣಸು, ಏಲಕ್ಕಿ, ಲವಂಗ ಮತ್ತು ಚಕ್ಕೆಗಳನ್ನೂ ನಿಮ್ಮ ಹಸಿರು ಚಹಾಗೆ ಬೆರಸಿ ಸೇವಿಸಿ. ಈ ಮಸಾಲೆ ಚಹಾವನ್ನು ದಿನಕ್ಕೆ ಎರಡು ಮೂರು ಬಾರಿ ಪ್ರತಿನಿತ್ಯ ಸೇವಿಸಿದರೆ ಒಂದೇ ತಿಂಗಳಲ್ಲಿ ಪರಿಣಾಮ ಕಾಣಬಹುದು.

9. ಕರಿಬೇವಿನ ಎಲೆಗಳು

9. ಕರಿಬೇವಿನ ಎಲೆಗಳು

ಹತ್ತು ಹನ್ನೆರಡು ದೊಡ್ಡ ಕರಿ ಬೇವಿನ ಎಲೆಗಳನ್ನು ಮುಂಜಾನೆ ಬರಿಹೊಟ್ಟೆಯಲ್ಲಿ ಚೆನ್ನಾಗಿ ಅಗೆದು ಅದರ ರಸವನ್ನು ಕುಡಿಯಬೇಕು. ಹೀಗೆ ಎರಡು ಮೂರು ತಿಂಗಳು ಮಾಡಿದಲ್ಲಿ ದೇಹದತೂಕ ಕಡಿಮೆಯಾಗಿರುವುದು ನೀವು ಕಾಣಬಹುದು.

10. ತರಕಾರಿ ಮತ್ತು ಹಣ್ಣುಗಳು

10. ತರಕಾರಿ ಮತ್ತು ಹಣ್ಣುಗಳು

ಸೊಪ್ಪಿನ ತರಕಾರಿ ಟೊಮೇಟೊ ಹಾಗು ಕ್ಯಾರಟ್ ಗಳನ್ನು ದಿನವೂ ತೆಗೆದುಕೊಳ್ಳಿ. ಟೊಮೇಟೊ ಬೆಳಗ್ಗಿನ ತಿಂಡಿಗೆ ತೆಗೆದುಕೊಂಡರೆ ತೂಕ ತಗ್ಗಿಸಲು ಪರಿಣಾಮಕಾರಿಯಾಗಿರುತ್ತದೆ. ತರಕಾರಿ ಹಾಗು ಹಣ್ಣುಗಳನ್ನು ತಿನ್ನುವುದನ್ನು ಹೆಚ್ಚಿಸಿ ಹಾಗು ಕಡಿಮೆ ಕ್ಯಾಲರಿ ಉಳ್ಳ ಆಹಾರವನ್ನು ಹಸಿವು ಹೊಟ್ಟೆ ತುಂಬುವಂತಹ ಆಹಾರವನ್ನು ತೆಗೆದುಕೊಳ್ಳಿ.

11. ಶಾರೀರಿಕ ವ್ಯಾಯಾಮ

11. ಶಾರೀರಿಕ ವ್ಯಾಯಾಮ

ಒಬೆಸಿಟಿ ಕಡಿಮೆಯಾಗಲು ಚುರುಕಾಗಿ ನಡೆಯುವುದು ಬಹಳ ಪರಿಣಾಮಕಾರಿ ಹಾಗು ಇದು ದೇಹದ ಆರೋಗ್ಯಕ್ಕೂ ಉತ್ತಮ. ಜಿಮ್ ನಲ್ಲಿ 30 ರಿಂದ 45 ನಿಮಿಷಗಳ ಕಾಲ ವಾರಕ್ಕೆ ನಾಲ್ಕು ಐದು ದಿನಗಳು ಮಾಡಿದರೆ ತೂಕ ತಗ್ಗಿಸಲು ಸಹಾಯವಾಗಿರುತ್ತದೆ.

English summary

Home Remedies For Obesity

Obesity is the condition in which a person is overweight and has a high degree of body fat. Obesity is measured by the Body Mass Index of a person
X
Desktop Bottom Promotion