For Quick Alerts
ALLOW NOTIFICATIONS  
For Daily Alerts

ನಿಮಗೆ ತಿಳಿದಿರದ ಮೆದುಳಿನ 7 ವಿಸ್ಮಯಕಾರಿ ಸಾಮರ್ಥ್ಯಗಳು

By Super
|

ಮೆದುಳಿನ ಕಾರ್ಯಕ್ಷಮತೆಯ ಬಗ್ಗೆ, ಅದರ ಕಾರ್ಯವೈಖರಿಯ ಬಗ್ಗೆ ನಿಖರವಾಗಿ ತಿಳಿದು ಬಂದಿರುವುದು ವಾಸ್ತವದ ಹತ್ತಿಪ್ಪತ್ತು ಶೇಖಡಾ ಮಾತ್ರ. ಇನ್ನುಳಿಸ ಎಂಭತ್ತು ಶೇಖಡಾ ತಿಳಯಲ್ಪಡುವುದು ಇನ್ನೂ ಬಾಕಿ ಇದೆ. ಒಂದು ಸಂಶೋಧನೆಯ ಪ್ರಕಾರ ನಾವು ಉಪಯೋಗಿಸುವುದು ಮೆದುಳಿನ ಶೇಖಡಾ ಏಳು ಮಾತ್ರ.

ಪಂಚೇಂದ್ರಿಯಗಳ ಮೂಲಕ ನಾವು ಮೆದುಳಿನಲ್ಲಿ ಪಡೆಯುವ ಸಂವೇದನೆಗಳ ಮೂಲಕವೇ ಹೊರತು ಪಂಚೇಂದ್ರಿಯಗಳೇ ನಿಜವಾದ ಸಂವೇದನೆಯ ಅಂಗಗಳಲ್ಲ. ಉದಾಹರಣೆಗೆ ಕಣ್ಣು. ಕಣ್ಣಿನಲ್ಲಿ ಮೂಡುವ ತಲೆಕೆಳಗಾದ ಬಿಂಬವನ್ನು ದೃಷ್ಟಿನರದ ಮೂಲಕ ಪಡೆದ ಮೆದುಳು ದೃಶ್ಯವನ್ನು ಮೂಡಿಸುತ್ತದೆಯೇ ವಿನಃ ಕಣ್ಣೇ ದೃಶ್ಯವನ್ನು ನೋಡುವುದಿಲ್ಲ.

ಅಂತೆಯೇ ಇತರ ಇಂದ್ರಿಯಗಳೂ ಸಹಾ. ನಮ್ಮ ಊಹೆಗೂ ನಿಲುಕದ ಆರನೆಯ ಇಂದ್ರಿಯವೂ ಮೆದುಳಿನ ಇನ್ನೊಂದು ಸಾಮರ್ಥ್ಯವೇ. ಈ ಲೇಖನದಲ್ಲಿ ಮೆದುಳಿನ ಅಪ್ರತಿಮ ಸಾಮರ್ಥ್ಯದ ಏಳು ವಿಸ್ಮಯಕಾರಿ ವಿಷಯಗಳ ಬಗ್ಗೆ ಬೆಳಕು ಚೆಲ್ಲಾಲಾಗಿದೆ.

ಮಿದುಳನ್ನು ಚುರುಕುಗೊಳಿಸುವ ರಹಸ್ಯ!

ನಿದ್ರೆಯ ಹೊತ್ತಿನಲ್ಲಿ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ

ನಿದ್ರೆಯ ಹೊತ್ತಿನಲ್ಲಿ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ

ದೇಹದ ಹೆಚ್ಚಿನ ಅನೈಚ್ಛಿಕ ಚಟುವಟಿಕೆಗಳು ರಾತ್ರಿ ನಡೆಯುತ್ತವೆ. ನಿದ್ದೆಯ ಹೊತ್ತಿನಲ್ಲಿ ಮೆದುಳೂ ವಿಶ್ರಾಂತಿ ಪಡೆಯುತ್ತದೆ, ಅಂದರೆ ಯಾವ ಕಾರ್ಯವನ್ನೂ ಮಾಡದೇ ಸ್ಥಗಿತವಾಗಿರುತ್ತದೆ ಎಂದು ಭಾವಿಸಿದ್ದೇವೆ. ಆದರೆ ನಿದ್ದೆಯ ಹೊತ್ತಿನಲ್ಲೂ ಮೆದುಳು ಅನೈಚ್ಛಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಕನಸುಗಳ ಮೂಲಕ ಇನ್ನೊಂದು ಪ್ರಪಂಚವನ್ನೇ ತೋರಿಸುತ್ತಾ ಸಕ್ರಿಯವಾಗಿರುತ್ತದೆ.

ಮುಂದಾಗುವುದರ ಬಗ್ಗೆ ಮುನ್ಸೂಚನೆ ನೀಡುತ್ತದೆ

ಮುಂದಾಗುವುದರ ಬಗ್ಗೆ ಮುನ್ಸೂಚನೆ ನೀಡುತ್ತದೆ

ಕೆಲವೊಮ್ಮೆ ನಮಗೆ ಮುಂದೇನೋ ಒಳ್ಳೆಯದೋ, ಕೆಟ್ಟದ್ದೋ ಆಗುತ್ತದೆ ಎಂಬ ಭಾವನೆ ಮೂಡಿ ಕಾಲಕ್ರಮೇಣ ಬಲವಾಗುತ್ತಾ ಹೋಗುತ್ತದೆ. ಭವಿಷ್ಯದಲ್ಲಾಗುವ ಘಟನೆಗಳನ್ನು ಮುಂಚಿತವಾಗಿ ಹೇಳುವ ಸಾಮರ್ಥ್ಯದ ಬಗ್ಗೆ ವಿಶ್ವದ ಎಲ್ಲಾ ತತ್ವಶಾಸ್ತ್ರಜ್ಞರು ಹಾಗೂ ಮನಃಶಾಸ್ತ್ರಜ್ಞರು ಖಚಿತವಾಗಿ ಏನನ್ನೂ ಹೇಳಲಾಗದೇ ಕೈಚೆಲ್ಲಿದ್ದಾರೆ. ನಮ್ಮ ಕನಸುಗಳಲ್ಲಿ ಭವಿಷ್ಯದ ವಿಷಯಗಳು ಕಂಡುಬರುವುದು ಹಾಗೂ ಆ ಸಮಯದಲ್ಲಿ ಡೋಪಮೈನ್ ಎಂಬ ಕಿಣ್ವ ಮೆದುಳಿನಲ್ಲಿ ಕ್ರಿಯಾಶೀಲವಾಗಿರುವುದು ಸಂಶೋಧನೆಗಳ ಮೂಲಕ ಕಂಡುಬಂದಿದ್ದರೂ ಯಥಾವತ್ತಾಗಿ ಮೆದುಳು ಹೇಗೆ ಭವಿಷ್ಯವನ್ನು ಕಂಡುಕೊಳ್ಳುತ್ತದೆ ಎಂಬ ವಿಷಯ ಇನ್ನೂ ಸವಾಲಾಗಿಯೇ ಉಳಿದಿದೆ.

ಪುರುಷರು ತಮ್ಮ ಮೆದುಳಿನ ಶೇ. 10ರಷ್ಟು ಮಾತ್ರ ಉಪಯೋಗಿಸುತ್ತಾರೆ

ಪುರುಷರು ತಮ್ಮ ಮೆದುಳಿನ ಶೇ. 10ರಷ್ಟು ಮಾತ್ರ ಉಪಯೋಗಿಸುತ್ತಾರೆ

ವಿಶ್ವದಲ್ಲಿ ಇಂದು ಸಾಧಿಸಲಾಗಿರುವ ಅಗಣಿತ ಸಂಶೋಧನೆ ಹಾಗೂ ಅಭಿವೃದ್ಧಿಗಳ ಹಿಂದೆ ಲಕ್ಷಾಂತರ ಜನರು ತಮ್ಮ ಶಕ್ತಿಯನ್ನು ವ್ಯಯಿಸಿದ್ದಾರೆ. ಸೋಜಿಗವೆಂದರೆ ಈ ಎಲ್ಲಾ ಕೆಲಸಗಳಿಗೆ ಬಳಕೆಯಾಗಿದ್ದು ಪ್ರತಿಯೊಬ್ಬರ ಮೆದುಳಿನ ಸಾಮರ್ಥ್ಯದ ಗರಿಷ್ಟ ಶೇ. ಹತ್ತರಷ್ಟು ಮಾತ್ರ. ಅಂದರೆ ಜನಸಾಮಾನ್ಯರು ಉಪಯೋಗಿಸುವ ಸಾಮರ್ಥ್ಯ ಸುಮಾರು ಏಳು ಶೇಖಡಾ ಮಾತ್ರ. ಮಹಿಳೆಯರು ಪುರುಷರಿಗಿಂತ ಕಡಿಮೆ ಮೆದುಳನ್ನು ಉಪಯೋಗಿಸುತ್ತಾರೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ಮೆದುಳಿಗೆ ನೋವಿನ ಸಾಕ್ಷಾತ್ಕಾರವಾಗುವುದಿಲ್ಲ

ಮೆದುಳಿಗೆ ನೋವಿನ ಸಾಕ್ಷಾತ್ಕಾರವಾಗುವುದಿಲ್ಲ

ಉಗುರು ಮತ್ತು ಕೂದಲುಗಳ ಹೊರತಾಗಿ ದೇಹದ ಯಾವುದೇ ಅಂಗಕ್ಕೆ ಚುಚ್ಚಿದರೆ, ಕತ್ತರಿಸಿದರೆ ನೋವುಂಟಾಗುತ್ತದೆ. ಆದರೆ ಮೆದುಳನ್ನು ಚುಚ್ಚಿದರೆ ಅಥವಾ ಕತ್ತರಿಸಿದರೆ ನೋವು ಉಂಟಾಗುವುದಿಲ್ಲ. ಏಕೆಂದರೆ ದೇಹದ ಪ್ರತಿ ಜೀವಕೋಶವೂ ಮೆದುಳಿಗೆ ಸರಮಂಡಲದ ಮೂಲಕ ಸಂಪರ್ಕ ಹೊಂದಿದೆ. ನೋವುಂಟಾದಾಗ ಜೀವಕೋಶಗಳಲ್ಲಿರುವ ನೋವು ಸಂವೇದಕಗಳು (Pain Receptors) ಮೆದುಳಿಗೆ ಸಂಜ್ಞೆಗಳನ್ನು ಕಳುಹಿಸಿ ನೋವಿನ ಸಂವೇದನೆ ಮೂಡಿಸುತ್ತವೆ. ಆದರೆ ಮೆದುಳಿನಲ್ಲಿ ನೋವು ಸಂವೇದಕಗಳೇ ಇಲ್ಲದಿರುವುದರಿಂದ ನೋವಾಗುವುದೇ ಇಲ್ಲ.

ಜಾಣತನಕ್ಕೆ ಅನುಗುಣವಾಗಿ ಮೆದುಳಿನ ಗಾತ್ರವಿದೆ

ಜಾಣತನಕ್ಕೆ ಅನುಗುಣವಾಗಿ ಮೆದುಳಿನ ಗಾತ್ರವಿದೆ

ಮೆದುಳಿನ ಉಪಯೋಗಕ್ಕನುಗುಣವಾಗಿ ಮೆದುಳಿನ ಗಾತ್ರ ಪ್ರತಿ ವ್ಯಕ್ತಿಗಳಲ್ಲಿ ಕೊಂಚ ವ್ಯತ್ಯಾಸವಿರುತ್ತದೆ. ಸಾಧಾರಣವಾಗಿ ಮೇಧಾವಿಗಳ ಮೆದುಳಿನ ಗಾತ್ರ ಸಾಮಾನ್ಯರಿಗಿಂತ ಕೊಂಚ ದೊಡ್ಡದಿರುವುದು ಈ ನಂಬಿಕೆಗೆ ಗ್ರಾಸ ನೀಡುತ್ತದೆ.

ದೇಹದ ಅತ್ಯಂತ ಹೆಚ್ಚಿನ ಚೈತನ್ಯ ಮೆದುಳಿಗೆ ಬೇಕಾಗುತ್ತದೆ

ದೇಹದ ಅತ್ಯಂತ ಹೆಚ್ಚಿನ ಚೈತನ್ಯ ಮೆದುಳಿಗೆ ಬೇಕಾಗುತ್ತದೆ

ದೇಹದ ಇತರ ಎಲ್ಲಾ ಅಂಗಗಳಿಗಿಂತ ಹೆಚ್ಚಿನ ಚೈತನ್ಯ ಮೆದುಳಿಗೆ ಅಗತ್ಯವಿದೆ. ಹಾಗಾಗಿ ಹೃದಯದಿಂದ ಮೆದುಳಿಗೆ ಪೂರೈಕೆಯಾಗುವ ರಕ್ತ ಬೇರೆಲ್ಲಾ ಅಂಗಗಳಿಗಿಂತ ಹೆಚ್ಚು.

ಹದಿಹರೆಯ ದಾಟುವವರೆಗೂ ಮೆದುಳು ಪೂರ್ಣವಾಗಿ ಬೆಳವಣಿಗೆಯಾಗಿರುವುದಿಲ್ಲ

ಹದಿಹರೆಯ ದಾಟುವವರೆಗೂ ಮೆದುಳು ಪೂರ್ಣವಾಗಿ ಬೆಳವಣಿಗೆಯಾಗಿರುವುದಿಲ್ಲ

ಹದಿಹರೆಯಕ್ಕೆ ಬಂದಾಗ ದೇಹದ ಇತರ ಭಾಗಗಳು ಪೂರ್ಣ ಬೆಳವಣಿಗೆ ಪಡೆದಿದ್ದರೂ ಹದಿಹರೆಯ ಪೂರ್ಣವಾಗುವವರೆಗೂ ಮೆದುಳು ಪರಿಪೂರ್ಣ ಬೆಳವಣಿಗೆಯನ್ನು ಪಡೆದಿರುವುದಿಲ್ಲ. ಸಾಧಾರಣವಾಗಿ ಬೆಳವಣಿಗೆ ಪರಿಪೂರ್ಣತೆಯ ಹೊತ್ತಿನಲ್ಲಿ ಅಂದರೆ ಸುಮಾರು ಹದಿನಾರು-ಹದಿನೆಂಟು ವರ್ಷಗಳಲ್ಲಿ ಯುವಜನತೆಯ ಮನೋಭಾವ ವಿಭಿನ್ನವಾಗಿರುತ್ತದೆ. ಅದಕ್ಕೇ ಹದಿನಾರಕ್ಕೆ ಬಂದವರೊಡನೆ ಸ್ನೇಹಿತರಾಗಿ ವ್ಯವಹರಿಸಿ ಎಂದು ಹಿರಿಯರು ಹೇಳುತ್ತಾರೆ.

English summary

7 Incredible Facts About The Human Brain You Probably Didn't Know

The human brain is perhaps the biggest mystery that still remains unsolved. Be it in the realm of medicine or philosophy, questions pertaining to the human brain and the mind in particular have left leading researchers and philosophers overwhelmed. In this article, we look at some startling facts about the human brain.
X
Desktop Bottom Promotion