For Quick Alerts
ALLOW NOTIFICATIONS  
For Daily Alerts

ದಿನನಿತ್ಯ ತುಳಸಿ ಎಲೆಯ ಸೇವನೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?

By Super
|

ತುಳಸಿಯು ಹಿಂದೂ ಧಾರ್ಮಿಕ ಸಂಪ್ರದಾಯಗಳ ಪವಿತ್ರ ಸ್ಥಾನವನ್ನು ಹೊಂದಿದೆ. ಭಾರತೀಯರು ತುಳಸಿಯನ್ನು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಪೂಜಿಸುತ್ತಾರೆ ಮತ್ತು ಈ ಪವಿತ್ರ ಸಸ್ಯದ ಔಷಧೀಯ ಗುಣಗಳನ್ನು ನೋಡಿದರೆ ನಿಮಗೂ ಅದರ ಮಹತ್ವದ ಅರ್ಥವಾಗುತ್ತದೆ.

ತುಳಸಿ ಧಾರ್ಮಿಕವಾಗಿ ಮಾತ್ರ ಹೆಸರುಗಳಿಸಿಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳೂ ಇದೆ. ಆದರೆ ಈ ಅಂಶ ತುಳಸಿ ಬೆಳೆಸಿದ ಎಷ್ಟೋ ಜನರಿಗೂ ತಿಳಿದಿರುವುದಿಲ್ಲ. ಇದರ ಎಲೆಯ ಗಂಧವೇ ವಾತಾವರಣವನ್ನು ತಂಪು ಮತ್ತು ಕಲ್ಮಶರಹಿತವಾಗಿಸುವ ಶಕ್ತಿ ಹೊಂದಿದೆ.

ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ನಂಬಿಕೆಯೂ ಇದೆ. ಹತ್ತಾರು ಬಗೆಯ ತುಳಸಿ ಗಿಡಗಳು

ಜ್ವರ ಮತ್ತು ನೆಗಡಿ ಕಾಯಿಲೆಗಳನ್ನು ವಾಸಿಮಾಡುತ್ತದೆ

ಜ್ವರ ಮತ್ತು ನೆಗಡಿ ಕಾಯಿಲೆಗಳನ್ನು ವಾಸಿಮಾಡುತ್ತದೆ

ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಹೊಂದಿರುವ ತುಳಸಿ ಎಲೆಯು ಮಲೇರಿಯ, ಡೆಂಗ್ಯೂ ಮತ್ತು ದೀರ್ಘಕಾಲದ ಜ್ವರಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದೆ. ಎಳೆಯ ತುಳಸಿ ಎಲೆಗಳನ್ನು ಚಹಾ ಜೊತೆಯಲ್ಲಿ ಕುಡಿಸಿ ಸೇವಿಸಿದರೆ ಬಹಳಮಟ್ಟಿಗೆ ಮೇಲ್ಕಂಡ ಕಾಯಿಲೆಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ನೆಗಡಿಯ ಸಂದರ್ಭದಲ್ಲಿ ತುಳಸಿ ಎಲೆಗಳ ರಸವನ್ನು ಸೇವಿಸಿದರೆ ತ್ವರಿತವಾಗಿ ಪರಿಹಾರ ಪಡೆಯಬಹುದು.

ಉಸಿರಾಟದ ತೊಂದರೆಗಳಿಗೆ ಪರಿಹಾರ ನೀಡುತ್ತದೆ

ಉಸಿರಾಟದ ತೊಂದರೆಗಳಿಗೆ ಪರಿಹಾರ ನೀಡುತ್ತದೆ

ತುಳಸಿ ಎಲೆಗಳ ಜೊತೆ ಶುಂಠಿ ಮತ್ತು ಜೇನುತುಪ್ಪ ಸೇರಿಸಿ ಮಾಡಿದ ಕಷಾಯ ವಿವಿಧ ಉಸಿರಾಟದ ತೊಂದರೆಗಳಾದ ನೆಗಡಿ, ಶೀತ, ಅಸ್ತಮಾ ಮತ್ತು ಬ್ರಾಂಕೈಟಿಸ್ ಮುಂತಾದ ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಅತ್ಯುತ್ತಮ ನಿವಾರಣೋಪಾಯವಾಗಿದೆ. ಈ ಕಷಾಯವು ಶ್ವಾಸಕೋಶಗಳಲ್ಲಿ ಕಟ್ಟಿರುವ ಲೋಳೆಯನ್ನು ಬಿಡಿಸಿ ನರಳುವವರ ಉಸಿರಾಟಕ್ಕೆ ಪರಿಹಾರಕೊಡುತ್ತದೆ.

ಗಂಟಲ ಕೆರೆತವನ್ನು ಗುಣಪಡಿಸುತ್ತದೆ

ಗಂಟಲ ಕೆರೆತವನ್ನು ಗುಣಪಡಿಸುತ್ತದೆ

ಬೆಚ್ಚಗಿರುವ ನೀರಿಗೆ ತುಳಸಿ ಎಲೆಯ ರಸವನ್ನು ಬೆರಸಿ ಮುಕ್ಕಳಿಸಿದರೆ ಗಂಟಲು ಕೆರತವನ್ನು ತೊಡೆದುಹಾಕಲು ಅತ್ಯಂತ ಸಹಾಯಕವಾಗುತ್ತದೆ.

ಬಾಯಿಯೊಳಗಿನ ಸೋಂಕನ್ನು ನಿವಾರಿಸುತ್ತದೆ

ಬಾಯಿಯೊಳಗಿನ ಸೋಂಕನ್ನು ನಿವಾರಿಸುತ್ತದೆ

ತುಳಸಿ ಎಲೆಯನ್ನು ಬಾಯಿಯೊಳಗಿನ ಹುಣ್ಣು ಮತ್ತು ಸೋಂಕುಗಳ ಚಿಕಿತ್ಸೆಗೆ ಅತ್ಯುತ್ತಮ ಔಷಧಿ. ತ್ವರಿತವಾಗಿ ಗುಣಹೊಂದಲು ಕೇವಲ ಕೆಲವು ತುಳಸಿ ಎಲೆಗಳನ್ನು ನುಣ್ಣಗೆ ಅಗಿಯಬೇಕು. ಇದು ಬಾಯಿಯನ್ನು ಉತ್ತಮವಾಗಿ ಸ್ವಚ್ಚಗೊಳಿಸುವ ಸಾಮಗ್ರಿಯೂ ಆಗಿದೆ.

ಕ್ರಿಮಿ ಕೀಟಗಳ ಕಚ್ಚುವಿಕೆಯನ್ನು ಗುಣಪಡಿಸುತ್ತದೆ

ಕ್ರಿಮಿ ಕೀಟಗಳ ಕಚ್ಚುವಿಕೆಯನ್ನು ಗುಣಪಡಿಸುತ್ತದೆ

ಒಂದು ಟೀ ಚಮಚ ತುಳಸಿ ಎಲೆಯ ರಸ ಅಥವ ತಾಜ ತುಳಸಿ ಬೇರಿನ ಪೇಸ್ಟ್ ಕ್ರಿಮಿಕೀಟಗಳ ಕಡಿತ ಮತ್ತು ಪೀಡಿತ ಭಾಗಗಳಲ್ಲಿ ಲೇಪಿಸಿಕೊಂಡರೆ ಗುಣಪಡಿಸಲು ಸಹಾಕಾರಿಯಾಗಿದೆ. ತಾಜ ರಸವೂ ಸಹ ನೇರವಾಗಿ ಪೀಡಿತ ಭಾಗಗಳಲ್ಲಿ ಬಳಸಿ ಶೀಘ್ರ ಪರಿಹಾರ ಕಂಡುಕೊಳ್ಳಬಹುದು.

ಆಗಾಗ್ಗೆ ವಾಂತಿಯಾಗುವುದನ್ನು ಶಮನಗೊಳಿಸುತ್ತದೆ

ಆಗಾಗ್ಗೆ ವಾಂತಿಯಾಗುವುದನ್ನು ಶಮನಗೊಳಿಸುತ್ತದೆ

ವಾಂತಿಯಾಗುವುದರಿಂದ ಶೀಘ್ರಪರಿಹಾರ ಪಡೆಯಲು ತುಳಸಿರಸದ ಜೊತೆ ಜೇನುತುಪ್ಪವನ್ನು ಮಿಶ್ರಣಮಾಡಿ ಸೇವಿಸಬೇಕು.

ಕ್ಯಾನ್ಸರ್ ರೋಗವನ್ನು ತಡೆಯುತ್ತದೆ

ಕ್ಯಾನ್ಸರ್ ರೋಗವನ್ನು ತಡೆಯುತ್ತದೆ

ತುಳಸಿ ಎಲೆಯು ರಕ್ತದಲ್ಲಿ ಕ್ಯಾನ್ಸರ್ ಉಂಟುಮಾಡುವ ಗೆಡ್ಡೆಗಳನ್ನು ಸಂಪರ್ಕಿಸಿತ್ತದೆ ಮತ್ತು ಸ್ತನ ಕ್ಯಾನ್ಸರ್ ಸೇರಿದಂತೆ ಹಲವಾರು ಕ್ಯಾನ್ಸರ್ ರೋಗಗಳ ಚಿಕಿತ್ಸೆಗೆ ಸಹಾಯಕವಾಗುತ್ತದೆ. ತುಳಸಿಯ ಕ್ಯಾನ್ಸರ್ ವಿರೋಧಿ ಗುಣಗಳಿಂದ ಬಾಯಿಯ ಕ್ಯಾನ್ಸರ್ ಬೆಳವಣಿಗೆಗೆ ಪ್ರತಿಬಂಧಿಸುತ್ತದೆ.

ಶ್ವಾಸಕೋಶಗಳ ಅಸ್ವಸ್ಥತೆಯನ್ನು ಗುಣಪಡಿಸುತ್ತದೆ

ಶ್ವಾಸಕೋಶಗಳ ಅಸ್ವಸ್ಥತೆಯನ್ನು ಗುಣಪಡಿಸುತ್ತದೆ

ತುಳಸಿಯಲ್ಲಿರುವ ವಿಟಮಿನ್ ಸಿ, ಯುಜೆನಾಲ್ (ಲವಂಗದ ಎಣ್ಣೆ ಆಧಾರಿತ) ಮತ್ತು ಕ್ಯಾಂಫೀನ್ (ಒಂದು ವಾಣಿಜ್ಯ ತೈಲ) ಶ್ವಾಸಕೋಶಗಳೊಳಗೆ ಟಿಬಿ (ಕ್ಷಯ ರೋಗ) ಹಾಗೂ ಧೂಮಪಾನದ ಹೊಗೆಯ ದಟ್ಟಣೆಯಿಂದ ಆಗುವ ಅಪಾಯಗಳನ್ನು ಗುಣಪಡಿಸಲು ಪರಿಣಾಮಕಾರಿಯಾಗಿದೆ.

ಧೂಮಪಾನ ತ್ಯಜಿಸಲು ಸಹಾಯಕಾರಿ

ಧೂಮಪಾನ ತ್ಯಜಿಸಲು ಸಹಾಯಕಾರಿ

ತುಳಸಿಯು ಧೂಮಪಾನದ ಅಭ್ಯಾಸವನ್ನು ಬಿಡಲು ಬಹಳಷ್ಟು ಸಹಾಯಮಾಡುತ್ತದೆ. ನೀವು ಧೂಮಪಾನದ ಪ್ರಚೋದನೆಯ ಒತ್ತಡ ಬಂದಾಗ ತಾಜಾ ತುಳಸಿ ಎಲೆಯನ್ನು ತಿನ್ನಿ. ಅದು ನಿಮ್ಮ ಪ್ರಚೋದನೆಯನ್ನು ನಿಗ್ರಹಿಸುತ್ತದೆ.

English summary

15 Health Benefits of Basil that You Should Know

Basil is a native to India and holds a sacred place in the Hindu religious customs. Indians worship basil every morning and evening, and if you see the medicinal properties of this holy herb, you will also understand its significance. Here’re a few health benefits of basil.
X
Desktop Bottom Promotion