For Quick Alerts
ALLOW NOTIFICATIONS  
For Daily Alerts

ರಾಗಿ ಮುದ್ದೆಯ 12 ಆರೋಗ್ಯ ಪ್ರಯೋಜನಗಳು

|

ನಿಮಗೆ ರಾಗಿಯ ಬಗ್ಗೆ ತಿಳಿದಿದೆಯೇ? ರಾಗಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದರ ರುಚಿ ಸಪ್ಪೆಯಾಗಿರುವುದರಿಂದ. ಆದರೆ ರಾಗಿ ನಮ್ಮ ದೇಹದಲ್ಲಿ ಉಂಟುಮಾಡುವ ಜಾದೂ ನಿಮಗೆ ತಿಳಿಯಿತೆಂದರೆ

ಇಂದೇ ನೀವು ಅದನ್ನು ಬಳಸಲು ಪ್ರಾರಂಭಿಸುವಿರಿ. ಹೆಚ್ಚಾಗಿ ರಾಗಿಯನ್ನು ಅಗೆಯುವುದಕ್ಕಿಂತ ನುಂಗುವುದು ವಾಡಿಕೆ. ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ಕಷಾಯ, ರಾಗಿ ರೊಟ್ಟಿ ಹೀಗೆ ಒಂದಾ ಎರಡಾ ರಾಗಿಯ ರೆಸಿಪಿಗಳು. ರಾಗಿಯಿಂದ ತಯಾರಿಸುವ ಪ್ರತಿಯೊಂದು ಆಹಾರ ಪದಾರ್ಥವು ದೇಹಕ್ಕೆ ತಂಪು ಮತ್ತು ಆರೋಗ್ಯ ವರ್ಧಕ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಯಿಯ ಹುಣ್ಣಿನ ಚಿಕಿತ್ಸೆಗೆ ಗೃಹೋಪಾಯಗಳು

ಇಂದಿನ ಲೇಖನದಲ್ಲಿ ರಾಗಿಯಿಂದ ತಯಾರಿಸಲ್ಪಟ್ಟ ಮುದ್ದೆಯ ಆರೋಗ್ಯ ಪ್ರಯೋಜನಗಳನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ರಾಗಿ ಧಾನ್ಯಗಳಲ್ಲಿ ಶ್ರೇಷ್ಠವಾದುದು. ಅದಕ್ಕಿರುವ ಮಹತ್ವ ಘನತೆ ಬೇರೆ ಧಾನ್ಯಗಳಿಗಿಲ್ಲ. ರಾಗಿಯಿಂದ ಮಾಡಲಾದ ರಾಗಿಮುದ್ದೆ ದೇಹಕ್ಕೆ ತುಂಬಾ ತಂಪು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮುಟ್ಟಿನ ನೋವನ್ನು ತಡೆಯಲು ಪರಿಣಾಮಕಾರಿ ಸಲಹೆಗಳು

ತಮ್ಮ ದೇಹ ತೂಕವನ್ನು ಇಳಿಸುವ ಯೋಜನೆ ಇದ್ದವರು ರಾಗಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ಸಸ್ಯಾಹಾರಿಗಳಿಗೆ ಪ್ರೋಟೀನ್ ಶ್ರೀಮಂತವಾಗಿರುವ ರಾಗಿ ದೇಹ ತೂಕ ಇಳಿಸುವವರಿಗೆ ವರದಾನವೇ ಸರಿ.

ದಕ್ಷಿಣ ಭಾರತದಲ್ಲಿ ರಾಗಿ ಮುದ್ದೆ ತುಂಬಾ ಜನಪ್ರಿಯ. ಕರ್ನಾಟಕದಲ್ಲಂತೂ ಪ್ರತೀ ದಿನ ರಾಗಿ ಮುದ್ದೆಯನ್ನು ತಿಂದೇ ತಮ್ಮ ದೈನಂದಿನ ಕಾಯಕವನ್ನು ಪ್ರಾರಂಭಿಸುವವರು ಬಹುತೇಕ ಮಂದಿ. ರಾಗಿ ಮುದ್ದೆಯ ಇನ್ನಷ್ಟು ಆರೋಗ್ಯ ಪ್ರಯೋಜನಗಳತ್ತ ಕಣ್ಣು ಹಾಯಿಸಿ.

ದೇಹ ಕೊಬ್ಬನ್ನು ಹಾಗೂ ತೂಕ ಇಳಿಸುವಲ್ಲಿ ಸಹಕಾರಿ:

ದೇಹ ಕೊಬ್ಬನ್ನು ಹಾಗೂ ತೂಕ ಇಳಿಸುವಲ್ಲಿ ಸಹಕಾರಿ:

ಹೆಚ್ಚಿನ ಕೊಬ್ಬನ್ನು ಹಾಗೂ ತೂಕವನ್ನು ಕರಗಿಸುವ ಯೋಜನೆ ನಿಮ್ಮದಾಗಿದ್ದರೆ, ರಾಗಿ ಮುದ್ದೆಯನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸಿ. ರಾಗಿಯಲ್ಲಿರುವ ಅಮೀನೊ ಏಸಿಡ್ ಟ್ರೈಪ್ಟೋಫನ್ ಹಸಿವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಮೂಳೆಗಳಿಗೆ ಉತ್ತಮ:

ಮೂಳೆಗಳಿಗೆ ಉತ್ತಮ:

ರಾಗಿ ಮುದ್ದೆಯ ಇನ್ನೊಂದು ಪರಿಣಾಮಕಾರಿ ಪ್ರಯೋಜನವೆಂದರೆ ನಿಮ್ಮ ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇದ್ದು, ಮಕ್ಕಳಿಗೆ ಹಾಗೂ ವೃದ್ಧರಿಗೆ ಆವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಇದು ಹೊಂದಿದೆ.

ಮಧುಮೇಹಿಗಳಿಗೆ ಸೂಕ್ತ:

ಮಧುಮೇಹಿಗಳಿಗೆ ಸೂಕ್ತ:

ಮಧುಮೇಹದಿಂದ ನೀವು ಬಳಲುತ್ತಿದ್ದೀರಾ? ನಿಮಗೆ ಸೇವಿಸಲು ಇದೊಂದು ಪರಿಪೂರ್ಣ ಆಹಾರವಾಗಿದೆ. ಮಧುಮೇಹದ ಮೆಲ್ಲಿಟಸ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ:

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ:

ರಾಗಿಯಲ್ಲಿರುವ ಅಮೀನೊ ಏಸಿಡ್ ಲೆಸಿತಿನ್ ಹಾಗೂ ಮೆಥೊನಿನ್ ನಿಮ್ಮ ಜೀರ್ಣಾಂಗವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕೆಳಮಟ್ಟಕ್ಕೆ ತರುವ ಮೂಲಕ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.

ನೀವು ಒಬ್ಬ ಅನೀಮಿಕ್ ಆಗಿದ್ದರೆ:

ನೀವು ಒಬ್ಬ ಅನೀಮಿಕ್ ಆಗಿದ್ದರೆ:

ನೀವು ಅನಿಮೀಯಾದಿಂದ ಬಳಲುತ್ತಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ನೈಸರ್ಗಿಕ ಐರನ್‌ನ ಮೂಲ ರಾಗಿ ಗಿಡವಾಗಿದೆ.

ನಿಮಗೆ ರಿಲ್ಯಾಕ್ಸ್ ಆಗಲು ಸಹಕಾರಿ:

ನಿಮಗೆ ರಿಲ್ಯಾಕ್ಸ್ ಆಗಲು ಸಹಕಾರಿ:

ರಾಗಿಗಿರುವ ಇನ್ನೊಂದು ಮಹತ್ವದ ಗುಣವೆಂದರೆ ಅದು ನಿಮಗೆ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಒತ್ತಡಪೂರ್ಣ ಜೀವನದಿಂದ ಮುಕ್ತಿ ಸಿಗಲು ನಿಮ್ಮ ಪಥ್ಯದಲ್ಲಿ ಸೇರಿಸಬೇಕಾದ ಒಂದು ಉತ್ತಮ ಸಾಮಾಗ್ರಿ ರಾಗಿ ಮುದ್ದೆಯಾಗಿದೆ.

ದೇಹವನ್ನು ತಂಪುಗೊಳಿಸುತ್ತದೆ:

ದೇಹವನ್ನು ತಂಪುಗೊಳಿಸುತ್ತದೆ:

ಬೇಸಿಗೆ ಸಮಯದಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಶಕ್ತಿ ರಾಗಿಗಿದೆ. ಬೇಸಿಗೆ ಸಮಯದಲ್ಲಿ ಕಂಡುಬರುವ ಹಲವಾರು ರೋಗಗಳಿಗೆ ಪರಿಣಾಮಕಾರಿ ಮದ್ದು ಸಹ ರಾಗಿಯಾಗಿದೆ.

ಸದೃಢತೆಗೆ:

ಸದೃಢತೆಗೆ:

ನಿಮ್ಮ ಸಾಮರ್ಥ್ಯ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು, ರಾಗಿ ಮುದ್ದೆಯನ್ನು ನಿಮ್ಮ ಆಯ್ಕೆಯಾಗಿಸಿಕೊಳ್ಳಿ. ಇದರಲ್ಲಿರುವ ಪ್ರೊಟೀನ್ ವಿಟಮಿನ್‌ಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿರಿಸುತ್ತದೆ.

ಮಲಬದ್ಧತೆಗೆ ಉಪಯೋಗಕಾರಿ:

ಮಲಬದ್ಧತೆಗೆ ಉಪಯೋಗಕಾರಿ:

ರಾಗಿ ಮುದ್ದೆಯಲ್ಲಿರುವ ಫೈಬರ್ ಗುಣ ಮಲಬದ್ಧತೆಗೆ ಸಹಾಯಕಾರಿ. ನೀವು ಸುಲಭವಾದ ಮಲಬದ್ಧತೆಯನ್ನು ಹೊಂದಲು ನಿತ್ಯವೂ ರಾಗಿಮುದ್ದೆ ಸೇವಿಸಿ.

ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ:

ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ:

ಹೌದು, ರಾಗಿ ಮುದ್ದೆಯ ಆರೋಗ್ಯಕಾರಿ ಪ್ರಯೋಜನವೆಂದರೆ ನಿಮ್ಮ ಥೈರಾಯ್ಡ್ ಅನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಹೈಪೋಥೈರಾಯ್ಡ್‌ನಿಂದ ಬಳಲುತ್ತಿರುವವರಿಗೆ ಇದು ಉತ್ತಮ.

ನೂತನ ತಾಯಂದಿರಿಗೆ:

ನೂತನ ತಾಯಂದಿರಿಗೆ:

ನೂತನ ತಾಯಂದಿರಿಗೆ, ಹಿಮೋಗ್ಲೋಬೀನ್ ಮಟ್ಟಗಳನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಸಹಕಾರಿಯಾದುದು.

English summary

12 Health Benefits Of Ragi Ball/Mudde

You may have heard about millet or ragi. The ragi ball/mudde is not liked by many because of its bland taste. Moreover, this ball needs to be swallowed and not chewed on, therefore making it a lot more tough to eat. However, this ragi ball comes with a lot of health benefits.
X
Desktop Bottom Promotion