For Quick Alerts
ALLOW NOTIFICATIONS  
For Daily Alerts

ದಿನಪೂರ್ತಿ ಮೈಗಂಟಿದ ಡ್ರೆಸ್ ಹಾಕುವುದು ಒಳ್ಳೆಯದಲ್ಲ!

By ವಿವೇಕ್
|

ಸಡಿಲವಾದ ಬಟ್ಟೆಗಳನ್ನು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಹೆಚ್ಚಾಗಿ ನಾವು ಮೈಗೆ ಫಿಟ್ ಆಗಿರುವ ಡ್ರೆಸ್ ಧರಿಸಲು ಇಷ್ಟಪಡುತ್ತೇವೆ. ಮೈ ಅಳತೆಗೆ ತಕ್ಕಂತೆ ಡ್ರೆಸ್ ಹಾಕಿದರೆ ನಮ್ಮ ಪರ್ಸಾನಾಲಿಟಿ ಆಕರ್ಷಕವಾಗಿ ಕಾಣುವುದು. ಹಾಕಿದಾಗ ಮೈಯಿಂದ ಕಳಚಿ ಬೀಳುವಷ್ಟು ಸಡಿಲವಾದ ಡ್ರೆಸ್ ಧರಿಸಿದರೆ ನೋಡುವರು ನಮ್ಮ ಬಗ್ಗೆ ಡ್ರೆಸ್ಸಿಂಗ್ ಸೆನ್ಸ್ ಇಲ್ಲ ಅಥವಾ 'ಈ ವ್ಯಕ್ತಿ ಏನಪ್ಪಾ ಇಷ್ಟೊಂದು ಲೂಸ್ ಬಟ್ಟೆ ಧರಿಸಿದ್ದಾನೆ, ಬೇರೆ ಬಟ್ಟೆನೇ ಸಿಕ್ಕಿಲ್ವಾ? ' ಎಂದು ಅಂದುಕೊಳ್ಳುತ್ತಾರೆ.

ಆದ್ದರಿಂದ ಹೊರಗಡೆ ಹೋಗುವಾಗ, ಆಫೀಸ್ ಗೆ ಹೋಗುವಾಗ ಆಕರ್ಷಕವಾದ ಡ್ರೆಸ್ ಧರಿಸೋಣ, ಮನೆಗೆ ಬಂದ ಮೇಲೆ ಆರೋಗ್ಯದ ದೃಷ್ಟಿಯಿಂದ ತುಂಬಾ ಸಡಿಲವಾದ ಡ್ರೆಸ್ ಧರಿಸಿದರೆ ಒಳ್ಳೆಯದು, ಮನೆಯಲ್ಲಿ ತುಂಬಾ ಸಡಿಲವಾದ ಡ್ರೆಸ್ ಧರಿಸಿ ಎಂದು ಏಕೆ ಹೇಳುತ್ತಿದ್ದೇನೆ ಅಂದರೆ ಈ ಕೆಳಗಿನ ಗುಣಗಳು ನಿಮಗೂ ದೊರೆಯಲಿ ಎಂಬ ಉದ್ದೇಶದಿಂದ. ಈ ಲೇಖನ ಓದಿ, ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬೇಕೆಂದು ಬಯಸುವುದಾದರೆ ಸಡಿಲವಾದ ಡ್ರೆಸ್ ಧರಿಸಿ. ಆಯ್ಕೆ ನಿಮಗೆ ಬಿಟ್ಟದ್ದು:

1 . ಸಡಿಲವಾದ ಡ್ರೆಸ್ ಧರಿಸಿದರೆ ವಿಟಮಿನ್ ಡಿ ದೇಹಕ್ಕೆ ದೊರೆಯುತ್ತದೆ

1 . ಸಡಿಲವಾದ ಡ್ರೆಸ್ ಧರಿಸಿದರೆ ವಿಟಮಿನ್ ಡಿ ದೇಹಕ್ಕೆ ದೊರೆಯುತ್ತದೆ

ಸೂರ್ಯನ ಬಿಸಿಲು ನಮ್ಮ ತ್ವಚೆಗೆ ಉಂಟುಮಾಡಬಹುದಾದ ಹಾನಿಯನ್ನು ಊಹಿಸಿಕೊಂಡು, ಸನ್ ಸ್ಕ್ರೀನ್ ಲೋಷನ್ ಅನ್ನು ಶರೀರವಿಡೀ ಯದ್ವಾ ತದ್ವಾ ಲೇಪಿಸಿಕೊಳ್ಳುವ ಅಭ್ಯಾಸ ನಮ್ಮದು. ಆದರೆ, ಇಲ್ಲಿ ಒಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ, ನೀವು ಸೂರ್ಯನ ಬಿಸಿಲಿಗೆ, ಧೀರ್ಘಕಾಲದವರೆಗೆ ತೆರೆದುಕೊಂಡಾಗ ಮಾತ್ರ ತ್ವಚೆಗೆ ಹಾನಿಯುಂಟಾಗುತ್ತದೆ. ಪ್ರತಿದಿನ ಮುಂಜಾವಿನ ಎಳೆಬಿಸಿಲಿಗೆ 10 ರಿಂದ 15 ನಿಮಿಷಗಳ ಕಾಲ ನಿಮ್ಮ ಮೈಯೊಡ್ಡಿರಿ. ಈ ರೀತಿ ಮಾಡುವುದರಿಂದ ನಿಮ್ಮ ಶರೀರದಲ್ಲಿ ವಿಟಮಿನ್ D ಯ ಹೆಚ್ಚಿನ ಉತ್ಪತ್ತಿಗೆ ಸಹಾಯಕವಾಗುತ್ತದೆ ಮತ್ತು ನಿಮ್ಮ ಮನಸ್ಥಿತಿಯೂ ಕೂಡ ಇದರಿಂದ ಉಲ್ಲಾಸಗೊಳ್ಳುತ್ತದೆ.

2 . ಆರೋಗ್ಯಯುತ ತ್ವಚೆಯನ್ನು ದಯಪಾಲಿಸುತ್ತದೆ

2 . ಆರೋಗ್ಯಯುತ ತ್ವಚೆಯನ್ನು ದಯಪಾಲಿಸುತ್ತದೆ

ನಮ್ಮ ತ್ವಚೆಗೂ ಸಹ ಉಸಿರಾಡಲು ಗಾಳಿಯ ಅವಶ್ಯಕತೆಯಿದೆ. ಬಿಗಿಯಾದ ಉಡುಪುಗಳಿಂದ ನಿಮ್ಮನ್ನು ನೀವು ಮುಚ್ಚಿಕೊಂಡಾಗ, ನಿಮ್ಮ ಚರ್ಮವು ದುರ್ಬಲಗೊಳ್ಳುತ್ತದೆ. ಇದಕ್ಕೆ ಕಾರಣವೇನೆಂದರೆ, ಬೆವರಿನ ಮೂಲಕ ನಿಮ್ಮ ಶರೀರದಿಂದ ಬಿಡುಗಡೆಯಾದ ವಿಷಯುಕ್ತ ತ್ಯಾಜ್ಯಗಳು, ಪುನ: ನಿಮ್ಮ ಚರ್ಮದಿಂದ ಹೀರಿಕೊಳ್ಳಲ್ಪಡುತ್ತವೆ. ಸಡಿಲವಾದ ಉಡುಪು ನಿಮ್ಮ ತ್ವಚೆಯ ಉಸಿರಾಟಕ್ಕೆ ಸಹಕಾರಿಯಾಗುತ್ತದೆ ಮತ್ತು ತನ್ಮೂಲಕ ನಿಮ್ಮ ಶರೀರದ ತ್ಯಾಜ್ಯ ವಿಷ ವಸ್ತುಗಳು ಹೊರಹಾಕಲ್ಪಡುತ್ತವೆ.

3. ತ್ವಚೆಯು ಕೆಂಪಗಾಗುವುದನ್ನು ತಡೆಯಿರಿ

3. ತ್ವಚೆಯು ಕೆಂಪಗಾಗುವುದನ್ನು ತಡೆಯಿರಿ

ನೀವು ಧರಿಸಿರಬಹುದಾದ ಬಿಗಿಯಾದ ಬ್ರಾ ಅಥವಾ ನಿಮ್ಮ ಬಿಗಿಯಾದ ಪ್ಯಾಂಟಿಯ ಎಲಾಸ್ಟಿಕ್ ಪಟ್ಟಿಯಿಂದ, ದೇಹದ ಆಯಾ ಭಾಗದ ಚರ್ಮವು ಕೆಂಪಗಾಗುವುದನ್ನು ತಡೆಗಟ್ಟಬಹುದು. ಸಡಿಲವಾದ ಡ್ರೆಸ್ ಧರಿಸಿದರೆ ಶರೀರದಾದ್ಯಂತ ರಕ್ತಪರಿಚಲನೆಯು ಉತ್ತಮಗೊಳ್ಳಲು ಸಹಾಯವಾಗುತ್ತದೆ.

4. ಆರೋಗ್ಯಯುತ ಚುರುಕಾದ ಮೆದುಳಿಗಾಗಿ

4. ಆರೋಗ್ಯಯುತ ಚುರುಕಾದ ಮೆದುಳಿಗಾಗಿ

ಅಧ್ಯಯನವೊಂದರ ಪ್ರಕಾರ, ಬರಿಗಾಲಿನಲ್ಲಿ ಓಡುವುದರಿಂದ, ವಯಸ್ಕರಲ್ಲಿ, ಅಲ್ಜೈಮರ್ಸ್ ಎಂಬ ಮರೆವಿಗೆ ಸಂಬಂಧಿಸಿದ ಖಾಯಿಲೆಯ ಅಪಾಯವು ಕಡಿಮೆಯಾಗುತ್ತದೆ. ಬರಿಗಾಲಿನ ನಡಿಗೆ ಅಥವಾ ಓಡಾಟವು ಮೆದುಳನ್ನು ಸಕಾರಾತ್ಮಕ ರೀತಿಯಲ್ಲಿ ಪ್ರಚೋದಿಸುವಲ್ಲಿ ಸಹಕಾರಿಯಾಗಿದೆ. ಮುಂಬೈಯ ಸಾಮಾನ್ಯ ತಜ್ಞವೈದ್ಯ (General Physician) ಡಾ. ಸುನೆಸರ ಅವರು ಹೇಳುವಂತೆ, ಕಾಲಿನ ಹಿಮ್ಮಡಿಯಲ್ಲಿ ಉಂಟಾಗುವ ಪ್ರಚೋದನೆಯು, ನಮ್ಮ ಮೆದುಳು ಹೆಚ್ಚು ಹೆಚ್ಚು ನ್ಯೂರಾನ್ (ನರ ವಾಹಕ) ಗಳ ಜೋಡಣೆಯನ್ನು ಉತ್ತೇಜಿಸುತ್ತದೆ. ಅಲ್ಲದೇ, ಇದು ಮೆದುಳಿನ flexibility ಯು ವೃದ್ಧಿಸಲು ಸಹಕಾರಿಯಾಗಿದೆ.

5 . ಇದು ನಿಮ್ಮನ್ನು ಉಲ್ಲಸಿತರನ್ನಾಗಿಸುತ್ತದೆ

5 . ಇದು ನಿಮ್ಮನ್ನು ಉಲ್ಲಸಿತರನ್ನಾಗಿಸುತ್ತದೆ

ಖಿನ್ನತೆ, ಕೀಳರಿಮೆ, ಮತ್ತಿತರ ಅನೇಕ ಮಾನಸಿಕ ಸಮಸ್ಯೆಗಳಿಗೆ, ಸಡಿಲವಾದ ಡ್ರೆಸ್ ಧರಿಸುವುದು ಅಥವಾ ಮೈ ಮೇಲೆ ಬಟ್ಟೆ ಇಲ್ಲದಿರುವುದು ಒಂದು ರೀತಿಯ ಚಿಕಿತ್ಸಾತ್ಮಕ ಸ್ಪಂದನವಿದ್ದಂತೆ. ಬೆತ್ತಲಾಗಿ ಬಿದ್ದುಕೊಳ್ಳುವ ಕ್ರಿಯೆಯು, ನಿಮ್ಮ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಕಾರಿಯಾಗಿದೆ, ನಿಮ್ಮ ದೇಹ ವ್ಯವಸ್ಥೆಯ ವಿಷವನ್ನು ಹೋಗಲಾಡಿಸುತ್ತದೆ ಹಾಗೂ ತನ್ಮೂಲಕ ನಿಮಗೆ ಒಂದು ರೀತಿಯ ಬೆಚ್ಚಗಿನ ಮತ್ತು ಬಿಡುಗಡೆಯ ಅನುಭವವನ್ನು ಕೊಡುತ್ತದೆ.

6. ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ

6. ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ

ಬಟ್ಟೆಗಳು ಬೆವರಿನಿಂದ ನೆನೆದು ತೊಪ್ಪೆಯಾದಾಗ, ಅವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕವಾಗಬಲ್ಲವು ಮತ್ತು ತನ್ಮೂಲಕ ನಾನಾ ವಿಧಧ ಸೋಂಕುಗಳನ್ನುಂಟು ಮಾಡಬಹುದು. ಸಡಿಲವಾದ ಡ್ರೆಸ್ ನಿಮ್ಮನ್ನು ಇಂತಹ ಹಾನಿಕಾರಕ ಫಂಗೈ ಮತ್ತು ಬ್ಯಾಕ್ಟೀರಿಯಾಗಳ ಅಪಾಯದಿಂದ ರಕ್ಷಿಸುತ್ತದೆ ಮತ್ತು ನಿಮ್ಮ ವೈಯುಕ್ತಿಕ ಸ್ವಚ್ಚತೆಯನ್ನು ಕಾಪಾಡುತ್ತದೆ.

7. ಫಲವತ್ತತೆಯನ್ನು ಹೆಚ್ಚಿಸುತ್ತದೆ

7. ಫಲವತ್ತತೆಯನ್ನು ಹೆಚ್ಚಿಸುತ್ತದೆ

ಬಿಗಿಯಾದ ಎಲಾಸ್ಟಿಕ್ ಗಳಿರುವ ಒಳ ಉಡುಪುಗಳನ್ನು ಧರಿಸುವುದರಿಂದ, ನಿಮ್ಮ ಶಿಶ್ನ ಮತ್ತು ಜನನಾಂಗದ ಭಾಗಗಳಿಗೆ ರಕ್ತದ ಹರಿಯುವಿಕೆಯು ಕುಂಠಿತವಾಗುತ್ತದೆ. ಬಿಗಿಯಾದ ಒಳಉಡುಪು ಮತ್ತು ಸೊಂಟದ ಕೆಳಭಾಗದಲ್ಲಿ ದರಿಸಲ್ಪಡುವ ಜೀನ್ಸ್ ಗಳು ನೇರವಾಗಿ ನಿಮ್ಮ ಶಿಶ್ನದ ಮೇಲೆ ಒತ್ತಡವನ್ನು ಹೇರುತ್ತವೆ ಮತ್ತು ತನ್ಮೂಲಕ, ಆ ಭಾಗದ ಸುತ್ತಮುತ್ತಲ ನರಗ್ರಾಹಕಗಳನ್ನು ನಿಧಾನವಾಗಿ ಮತ್ತಷ್ಟು ನಾಶಪಡಿಸಿ ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ.

8 . ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

8 . ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ಸಡಿಲವಾದ ಡ್ರೆಸ್ ರಕ್ತದ ಪರಿಚಲನೆಯನ್ನು ಸುಧಾರಿಸಿ, ನಿಮ್ಮ ಕಿಬ್ಬೊಟ್ಟೆಯ ಭಾಗದ ಒತ್ತಡವನ್ನು ಕಡಿಮೆಮಾಡುತ್ತದೆ. ಬಿಗಿಯಾದ ಒಳಉಡುಪುಗಳು ರಕ್ತಪರಿಚಲನೆಯನ್ನೇ ನಿಲ್ಲಿಸಿಬಿಡಬಲ್ಲವು ಮತ್ತು ಚರ್ಮದ ವೃಣಗಳಿಗೂ ಕಾರಣವಾಗಬಲ್ಲವು. ನಿಯಮಿತವಾಗಿ, ಬಿಗಿ ಉಡುಪುಗಳನ್ನು ಕಳಚಿ ಸಡಿಲವಾದ ಉಡುಪುಗಳನ್ನು ಧರಿಸಿ ಮಲಗಿ.

9 . ಉತ್ತಮ ನಿದ್ದೆಗಾಗಿ

9 . ಉತ್ತಮ ನಿದ್ದೆಗಾಗಿ

ರಾತ್ರಿಯ ವೇಳೆ, ಒಳ್ಳೆಯ ನಿದ್ದೆಗಾಗಿ, ಕೆಲವೊಮ್ಮೆ ಬೆತ್ತಲಾಗಿ ಮಲಗುವುದನ್ನು ರೂಡಿಸಿಕೊಳ್ಳಿ. ಮೈ ಮೇಲೆ ಬಟ್ಟೆಗಳಿಲ್ಲದಿರುವಾಗ, ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿರಾಳತೆಯನ್ನು ಅನುಭವಿಸುವಿರಿ.

9 . ಲೈಂಗಿಕ ಆಸಕ್ತಿ ಹೆಚ್ಚಿಸಲು

9 . ಲೈಂಗಿಕ ಆಸಕ್ತಿ ಹೆಚ್ಚಿಸಲು

ಬೆತ್ತಲಾಗುವುದರಿಂದ ಅಥವಾ ಸಡಿಲವಾದ ಡ್ರೆಸ್ ಧರಿಸುವುದರಿಂದ ಲೈಂಗಿಕ ಆಸಕ್ತಿಯು ಹೆಚ್ಚುತ್ತದೆ.

English summary

Why We Should Wear Loose Dress

Find out some reasons of why you should wear very loose dress sometimes. Find out the healthy reasons behind the idea of wearing very loose dress.
X
Desktop Bottom Promotion