For Quick Alerts
ALLOW NOTIFICATIONS  
For Daily Alerts

ವಿಟಮಿನ್‍ ಡಿಯ ಪ್ರಾಮುಖ್ಯತೆ ಏನು?

By Super
|

ವಿಟಮಿನ್ ಡಿ ನಾವು ತಿನ್ನುವ ಪೋಷಕಾಂಶವೂ ಹೌದು ಅದೇ ರೀತಿ ನಮ್ಮ ದೇಹ ತಯಾರಿಸುವ ಹಾರ್ಮೋನ್ ಕೂಡ ಹೌದು. ವಿಶ್ವದಾದ್ಯಂತ ಸರಿಸುಮಾರು 1 ಬಿಲಿಯನ್ ಮಂದಿಯ ರಕ್ತದಲ್ಲಿ ವಿಟಮಿನ್ ಡಿಯ ಕೊರತೆಯಿದೆಯಂತೆ. ಈ ಕೊರತೆಯನ್ನು ಎಲ್ಲ ಭಾಗಗಳಲ್ಲಿನ ಎಲ್ಲ ವಯೋಮಾನದವರಲ್ಲೂ ಕಾಣಬಹುದು. ಹಾಗಿದ್ದರೆ ಈ ವಿಟಮಿನ್ ಡಿಯ ಪ್ರಾಮುಖ್ಯತೆ ಏನು ಅನ್ನೋ ಪ್ರಶ್ನೆ ನಿಮ್ಮನ್ನು ಕಾಡಲು ಶುರುಮಾಡಿತೆ? ವಿಟಮಿನ್ ಡಿ ಯ ಪ್ರಾಮುಖ್ಯತೆಯನ್ನ ನಾವು ನಿಮಗೆ ತಿಳಿಸುತ್ತೇವೆ. ಓದಿ ನೋಡಿ.

ಕಳೆದ ಕೆಲ ದಶಕಗಳಲ್ಲಿ ನಡೆಸಿರುವ ಸಂಶೋಧನೆಗಳ ಪ್ರಕಾರ ರೋಗನಿರೋಧಕ ಅಥವ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ವಿಟಮಿನ್ ಡಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೊದಲು ಈ ವಿಷಯ ತಿಳಿದಿತ್ತಾದರೂ ಇದರ ಮಹತ್ವ ಅರಿವಾದದ್ದು ಇತ್ತೀಚಿನ ದಿನಗಳಲ್ಲಿ. ನಿಮ್ಮಲ್ಲಿ ವಿಟಮಿನ್ ಡಿ ಕೊರತೆಯುಂಟಾದರೆ ನೀವು ಬಹಳ ಬೇಗ ದೀರ್ಘಕಾಲಿಕ ಖಾಯಿಲೆಗಳು ಮತ್ತು ಸೋಂಕುಗಳಿಗೆ ತುತ್ತಾಗುವಿರಿ. ಇದರ ಬಗ್ಗೆ ಹೆಚ್ಚಿನ ವಿವರಕ್ಕೆ ಮುಂದೆ ಓದಿ:

What Is The Importance Of Vitamin D

ವಿಟಮಿನ್ ಡಿ ಎಂದರೇನು?

ವಿಟಮಿನ್ ಡಿ ಕೊಬ್ಬಿನಂಶ ಕರಗಿಸುವ ವಿಟಮಿನ್ ಗಳ ಗುಂಪಿಗೆ ಸೇರುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಅಂಶವನ್ನು ಹೆಚ್ಚಿಸುತ್ತದೆ. ಮನುಷ್ಯರಲ್ಲಿ ಈ ಗುಂಪಿಗೆ ಸೇರಿದ ಮುಖ್ಯ ವಿಟಮಿನ್ಗಳು ವಿಟಮಿನ್ ಡಿ3 ಮತ್ತು ವಿಟಮಿನ್ ಡಿ2. ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಸೂರ್ಯನ ನೆರವಿನಿಂದ ಅಂದರೆ ಬಿಸಿಲಿನ್ನು ಚರ್ಮದ ಮೂಲಕ ಹೀರಿಕೊಳ್ಳುವ ಮೂಲಕ ವಿಟಮಿನ್ ಡಿಯಾಗಿ ಪರಿವರ್ತಿಸುತ್ತದೆ. ಆದ್ದರಿಂದ ಇದನ್ನು ‘ಬಿಸಿಲು/ ಸೂರ್ಯರಶ್ಮಿ ವಿಟಮಿನ್' ಎಂದು ಕೂಡ ಕರೆಯುತ್ತಾರೆ.

ದಿನವೂ ನಾವು ಎಷ್ಟು ವಿಟಮಿನ್ ಡಿ ಪಡೆಯಬೇಕು

ದಿ ಇಂಡಿಯನ್ ಡಯೆಟಿಕ್ ಅಸೋಸಿಯೇಷನ್ ನವರ 2010ರ ಪರಿಷ್ಕರಿಸಿದ ಮಾಹಿತಿಯ ಪ್ರಕಾರ 400 IU(10 ಗ್ರಾಂ) ಪ್ರತಿದಿನಕ್ಕೆ ವಿಟಮಿನ್ ಡಿಯನ್ನು ಪಡೆಯಬೇಕು. ಇದರೊಂದಿಗೆ ಸೂರ್ಯನಿಗೆ ನಿಮ್ಮನ್ನು ಒಡ್ಡಿಕೊಳ್ಳುವುದು ಕೂಡ ಅವಶ್ಯ.

ವಿಟಮಿನ್ ಡಿಯ ಲಾಭಗಳು

ರೋಗನಿರೋಧಕತೆ

ದೇಹದಲ್ಲಿ ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿದ್ದರೆ ಕ್ಯಾನ್ಸರ್, ರಿಕೆಟ್ಸ್,ಸಂಧಿವಾತ, ಹೃದಯಸಂಬಂಧಿ ಖಾಯಿಲೆಗಳು, ಮೂತ್ರಪಿಂಡದ ಖಾಯಿಲೆಗಳು, ಕ್ಷಯ, ಸೋಂಕು, ಬೊಜ್ಜು, ಕೂದಲುದುರುವಿಕೆ ಮತ್ತು ಖಿನ್ನತೆಯಂತಹ ಖಾಯಿಲೆಗಳನ್ನು ತಡೆಗಟ್ಟುತ್ತದೆ.

ವಿಟಮಿನ್ ಡಿ ಫ್ಲೂವನ್ನು ತಡೆಗಟ್ಟುತ್ತದೆ

ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ, ಫ್ಲೂ ಮತ್ತು ನ್ಯುಮೊನಿಯಾದಂತಹ ರೋಗಗಳಿಂದ ರಕ್ಷಿಸುತ್ತದೆ.

ಗರ್ಭಿಣಿಯರಿಗೆ ವಿಟಮಿನ್ ಡಿಯ ಅವಶ್ಯಕತೆ

ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಡಿ ಅತ್ಯವಶ್ಯಕ. ಇದು ಅವಧಿಗೆ ಮುನ್ನ ಹೆರಿಗೆಯಾಗುವ ಅಪಾಯದ ಪ್ರಮಾಣವನ್ನು ಕೂಡ ತಗ್ಗಿಸುತ್ತದೆ.

ವಿಟಮಿನ್ ಡಿಯ ಸೇವನೆಯಿಂದ ಬಿದ್ದಾಗ ಉಂಟಾಗುವ ಮೂಳೆಮುರಿತದಂತಹ ಸಮಸ್ಯೆಗಳು, ರಕ್ತದೊತ್ತಡ ಮತ್ತು ಮಧುಮೇಹದಂತಹ ಖಾಯಿಲೆಗಳುಂಟು ಮಾಡುವ ಅಪಾಯದ ಪ್ರಮಾಣವನ್ನು ಕೂಡ ಕಡಿಮೆಮಾಡಬಹುದು.

ವಿಟಮಿನ್ ಡಿ ಗಾಯವನ್ನು ಶೀಘ್ರವಾಗಿ ಒಣಗಿಸುತ್ತದೆ/ಮಾಗುವಂತೆ ಮಾಡುತ್ತದೆ.

ವಿಟಮಿನ್ ಡಿ ಕೊರತೆಯಿದ್ದರೆ ಕಂಡುಬರುವ ಲಕ್ಷಣಗಳು

ಖಿನ್ನತೆ, ಬೆನ್ನುನೋವು, ಬೊಜ್ಜು, ಸಂಧಿವಾತ, ಸ್ಕಲೆರೊಸಿಸ್, ಒಸಡಿನ ರೋಗಗಳು, ಋತು ಚಕ್ರಸಂಬಂಧಿ ಸಮಸ್ಯೆಗಳು, ಅಸ್ತಮಾ, ಶ್ವಾಸನಾಳಗಳಲ್ಲಿನ ಉರಿಯುರಿತದ ತೊಂದರೆಗಳು, ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳು ವಿಟಮಿನ್ ಡಿ ಕೊರತೆಯ ಲಕ್ಷಣಗಳು.

ವಿಟಮಿನ್ ಡಿ ಮೂಲ ಯಾವುದು?

ವಿಟಮಿನ್ ಡಿ ಹೆಚ್ಚಾಗಿ ಪ್ರಾಣಿಜನ್ಯವಾದದ್ದು. ಅಂದರೆ ಹಾಲು, ಹಾಲಿನ ಉತ್ಪನ್ನಗಳು, ಧಾನ್ಯಗಳಲ್ಲಿ ಇದನ್ನು ಕಾಣಬಹುದಾಗಿದೆ. ಹಾಗಾಗಿ ಇವುಗಳ ಬಳಕೆಯನ್ನು ಹೆಚ್ಚು ಮಾಡುವುದು ಒಳ್ಳೆಯದು. ಅದೇ ರೀತಿ ವಿವಿಧ ಜಾತಿಯ ಮೀನುಗಳಾದ ತುನ, ಮತ್ತಿ ಮೀನು ಮತ್ತು ಸಾಲಮೊನ್ ಗಳಲ್ಲಿ ವಿಟಮಿನ್ ಡಿ ಹೆಚ್ಚಿರುತ್ತದೆ. ಒಂದು ಮೀನು (100 ಗ್ರಾಂ) ದಿನವೂ ನಾವು ತೆಗೆದುಕೊಳ್ಳಬೇಕಾದ ವಿಟಮಿನ್ ಡಿಯ ಒಟ್ಟು ಪ್ರಮಾಣದಲ್ಲಿ 80% ದೇಹಕ್ಕೆ ಒದಗಿಸುತ್ತದೆ. ವಿಟಮಿನ್ ಡಿ ಮೊಟ್ಟೆಯ ಹಳದಿ ಭಾಗ, ಗೋಮಾಂಸದ ಯಕೃತ್ತಿನಲ್ಲಿ ಮತ್ತು ಸ್ವಿಸ್ ಚೀಸ್ ನಲ್ಲಿ ಸ್ವಲ್ಪ ಮಟ್ಟಿಗಿರುತ್ತದೆ.

English summary

What Is The Importance Of Vitamin D

Vitamin D is both a nutrient we eat and a hormone that our body makes. Worldwide an estimated 1 billion people have low levels of vitamin D in their blood, and this deficiency can be found in all ethnicities and age group. We explain the importance of Vitamin D.
X
Desktop Bottom Promotion