ಸ್ಟ್ರಾಬೆರಿಯಲ್ಲಿದೆ ಟಾಪ್ 10 ಆರೋಗ್ಯಕರ ಗುಣಗಳು

Posted By:
Subscribe to Boldsky

ಸ್ಟ್ರಾಬೆರಿ ಎಲ್ಲಾ ಸಮಯದಲ್ಲಿ ದೊರೆಯುವುದಾದರೂ ಫೆಬ್ರವರಿ- ಮಾರ್ಚ್ ಸ್ಟ್ರಾಬೆರಿ ಸೀಸನ್. ಸ್ಟ್ರಾಬೆರಿ ಹಣ್ಣು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಆದ್ದರಿಂದ ನಿಮಗೆ ಸ್ಟ್ರಾಬೆರಿ ಇಷ್ಟವಿರಲಿ, ಇಲ್ಲದಿರಲಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು. ಇದನ್ನು ತಿಂದರೆ ನೀವು ಪಡೆಯುವ ಲಾಭ ಮಾತ್ರ ಹತ್ತಾರು.

ಇದರಲ್ಲಿ ವಿಟಮಿನ್ ಸಿ, antioxidants, ವಿಟಮಿನ್ ಸಿ ಹೇರಳವಾಗಿದೆ. ಇಲ್ಲಿ ನಾವು ಸ್ಟ್ರಾಬೆರಿ ತಿಂದರೆ ದೊರೆಯುವ ಪ್ರಮುಖ 10 ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ

ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಒಂದು ವಿಟಮಿನ್ ಸಿ ತಿಂದರೆ 51.5mg ವಿಟಮಿನ್ ಸಿ ದೇಹಕ್ಕೆ ದೊರೆಯುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಒಮ್ಮೆ ಸ್ಟ್ರಾಬೆರಿ ತಿಂದರೆ ಅದರ ಪ್ರಯೋಜನ ರಕ್ತದಲ್ಲಿ ಒಂದು ವಾರದವರೆಗೆ ಇರುತ್ತದೆ.

ಕಣ್ಣಿಗೆ ಒಳ್ಳೆಯದು

ಕಣ್ಣಿಗೆ ಒಳ್ಳೆಯದು

ವಿಟಮಿನ್ ಸಿ ಇರುವ ಆಹಾರಗಳು ಕಣ್ಣಿಗೆ ಒಳ್ಳೆಯದು. ಸ್ಟ್ರಾಬೆರಿ ಕಣ್ಣಿನ ಅಕ್ಷಿ ಪಟಲವನ್ನು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಮಾಡುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಇದರಲ್ಲಿರುವ Ellagic ಆಸಿಡ್ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮರ್ಥ್ಯ ದೇಹಕ್ಕೆ ದೊರೆಯುತ್ತದೆ.

ನೆರಿಗೆಯ ಭಯವಿಲ್ಲ

ನೆರಿಗೆಯ ಭಯವಿಲ್ಲ

ಸೌಂದರ್ಯ ರಕ್ಷಣೆಯಲ್ಲಿ ಸ್ಟ್ರಾಬೆರಿ ಮಹತ್ವದ ಪಾತ್ರವನ್ನು ವಹಿಸುತ್ತದೆ, ಬಿಸಿಲಿಗೆ ಹೋದಾಗ ತ್ವಚೆ ರಕ್ಷಣೆಯನ್ನು ಮಾಡುತ್ತದೆ, ಸ್ಟ್ರಾಬೆರಿ ತಿನ್ನುವವರಿಗೆ ಯಾವ Anti aging ಕ್ರೀಮ್ ನ ಅವಶ್ಯಕತೆ ಬೀಳುವುದಿಲ್ಲ.

 ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗುತ್ತಾ ಹೋದರೆ ಹೃದಯದ ಆರೋಗ್ಯ ಕಡಿಮೆಯಾಗಿ ಹೃದಯಾಘಾತ ಉಂಟಾಗುವುದು. ಸ್ಟ್ರಾಬೆರಿಯೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಶೇಖರವಾಗಲು ಬಿಡುವುದಿಲ್ಲ.

ಉರಿಯೂತವನ್ನು ಕಡಿಮೆ ಮಾಡುತ್ತದೆ

ಉರಿಯೂತವನ್ನು ಕಡಿಮೆ ಮಾಡುತ್ತದೆ

ಇದರಲ್ಲಿ antioxidants ಅಧಿಕವಿರುವುದರಿಂದ ಇದನ್ನು ತಿಂದರೆ ಹೊಟ್ಟೆ ಉರಿ , ಸಂದುಗಳಲ್ಲಿ ಉರಿಯಾತ ಇವುಗಳು ಕಡಿಮೆಯಾಗುವುದು.

ನಾರಿನಂಶ ಅಧಿಕವಿದೆ

ನಾರಿನಂಶ ಅಧಿಕವಿದೆ

ನಾರಿನಂಶವಿರುವ ಆಹಾರಗಳನ್ನು ತಿಂದರೆ ಟೈಪ್ 2 ಡಯಾಬಿಟಿಸ್ ಬರದಂತೆ ತಡೆಯಬಹುದು. ಮಧುಮೇಹಿಗಳು ಈ ಹಣ್ಣನ್ನು ಮಿತಿಯಲ್ಲಿ ತಿಂದರೆ ಒಳ್ಳೆಯದು.

ದೇಹದ ತೂಕ ಕಮ್ಮಿ ಮಾಡುತ್ತದೆ

ದೇಹದ ತೂಕ ಕಮ್ಮಿ ಮಾಡುತ್ತದೆ

ಸ್ಟ್ರಾಬೆರಿ ತಿಂದರೆ ನಾವು ಅಧಿಕ ದಪ್ಪ ಆಗದಂತೆ ತಡೆಯುತ್ತದೆ. ದಪ್ಪವಿದ್ದವರು ತೆಳ್ಳಗಾಗಲು ಬಯಸಿದರೆ ಪ್ರತಿದಿನ ಒಂದು ಲೋಟ ಸ್ಟ್ರಾಬೆರಿ ಜ್ಯೂಸ್ ಕುಡಿಯುವುದು ಒಳ್ಳೆಯದು.

ಗರ್ಭಿಣಿಯರಿಗೆ ಒಳ್ಳೆಯದು

ಗರ್ಭಿಣಿಯರಿಗೆ ಒಳ್ಳೆಯದು

ಗರ್ಭಿಣಿಯರಿಗೆ ಅವಶ್ಯಕವಾದ ಫೋಲೆಟ್ ಹಾಗೂ ವಿಟಮಿನ್ ಬಿ ಸ್ಟ್ರಾಬೆರಿಯಲ್ಲಿ ದೊರೆಯುತ್ತದೆ. ಇದನ್ನು ತಿಂದರೆ ಫಾಲಿಕ್ ಆಸಿಡ್ ದೊರೆಯುತ್ತದೆ.

ಮೈಕೈ ನೋವು

ಮೈಕೈ ನೋವು

ಮೈಕೈ ನೋವು ಕಾಣಿಸಿದರೆ ಸ್ಟ್ರಾಬೆರಿ ತಿಂದರೆ ನೋವು ಕಡಿಮೆಯಾಗುತ್ತದೆ. ಮಧ್ಯವಯಸ್ಸು ದಾಟಿದವರು ಸ್ಟ್ರಾಬೆರಿಯನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಮೈಕೈ ನೋವು ಕಂಡು ಬರುವುದಿಲ್ಲ.

English summary

Top 10 Health Benefit Of Strawberry | Tips For Health |ಸ್ಟ್ರಾಬೆರಿಯಲ್ಲಿರುವ ಟಾಪ್ 10 ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

If you’re not already a fan of strawberries, you should be. Not only are they juicy, summery and delicious, they’re a bona fide superfood, too. Nutrient-rich and packed with antioxidants (like vitamin C), strawberries offer a wide range of health benefits, some of which may surprise you.
Subscribe Newsletter