For Quick Alerts
ALLOW NOTIFICATIONS  
For Daily Alerts

ಕಫದಿಂದ ಮುಕ್ತಿ ಹೊಂದಲು ಇಲ್ಲಿದೆ ಟಿಪ್ಸ್

By Super
|

ಮಳೆಗಾಲದಲ್ಲಿ ಕಫ ಕಟ್ಟುವ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಕಫ ಕಟ್ಟುವ ಸಮಸ್ಯೆಯನ್ನು ಗಮನಿಸದಿದ್ದರೆ ಅದು ಅಸ್ತಮಾವಾಗಿ ಪರಿವರ್ತನೆಯಾಗುವುದು. ಕಫದಿಂದ ಗಂಟಲು ಕಟ್ಟಿದಂತಾಗಿ ಉಸಿರಾಡಲು ಕಷ್ಟವಾಗುವ ಅನುಭವ ಎಲ್ಲರಿಗೂ ಆಗಿರುತ್ತದೆ. ಗಂಟಲಿನ ಕಫ ಕಿರಿಕಿರಿ ಉಂಟುಮಾಡುವುದಲ್ಲದೆ ಉಸಿರಿನ ದುರ್ಗಂಧ ಹಾಗೂ ಇತರ ಕೆಲವು ಸಮಸ್ಯೆಗೂ ಕಾರಣವಾದೀತು.

ಧೂಮಪಾನ ಮಾಡುವುದರಿಂದ ಕಫದ ಸಮಸ್ಯೆ ಜಾಸ್ತಿ ಆಗುವುದೆಂದು ನೀವು ಬಲ್ಲಿರಾ? ಧೂಮಪಾನ ಕೂಡ ಶ್ವಾಸಕೋಶದ ಕಾರ್ಯವೈಖರಿಯನ್ನು ಕಮ್ಮಿ ಮಾಡಿ ಕಫ ಕಟ್ಟುವಂತೆ ಮಾಡುತ್ತದೆ. ಕಫ ಕಟ್ಟುವ ಸಮಸ್ಯೆಯನ್ನು ಕೆಲ ನೈಸರ್ಗಿಕವಾದ ವಿಧಾನಗಳನ್ನು ಬಳಸಿ ಹೋಗಲಾಡಿಸಬಹುದು. ಅದರ ಬಗ್ಗೆ ಒಂದಿಷ್ಟು ಮಾಹಿತಿ ನೋಡಿ ಇಲ್ಲಿದೆ.

ಆವಿ ತೆಗೆದುಕೊಳ್ಳುವುದು

ಆವಿ ತೆಗೆದುಕೊಳ್ಳುವುದು

ಕುದಿಯುವ ನೀರಿನಿಂದ ಅಥವಾ ಬಿಸಿ 'ಶವರ್'ನಿಂದ ಆವಿ ತೆಗೆದುಕೊಳ್ಳುವುದರಿಂದ ಕಫ ಮತ್ತು ಗಂಟಲು ಕಟ್ಟುವುದು ಸ್ವಲ್ಪ ಕಡಿಮೆಯಾಗುವುದು.

ನೀರು ಕುಡಿಯುವುದರಿಂದ

ನೀರು ಕುಡಿಯುವುದರಿಂದ

ಪ್ರತಿದಿನ ಕಡಿಮೆ ಪಕ್ಷ 8 ಗ್ಲಾಸ್ ನೀರು ಕುಡಿಯುವುದರಿಂದ ಕಫ ಕಡಿಮೆ ಆಗುತ್ತದೆ ಮತ್ತು ಕಫ ತೆಳ್ಳಗೆ ಕೂಡ ಆಗುತ್ತದೆ - ಅಲ್ಲದೆ ಇದು ಆರೋಗ್ಯಕ್ಕೂ ಒಳ್ಳೆಯದು.

ಶೀತ ತೆಗೆಯಿರಿ

ಶೀತ ತೆಗೆಯಿರಿ

ಆಗಾಗ ಮೂಗಿನಿಂದ ಶೀತವನ್ನು ತೆಗೆಯುವುದರಿಂದ ಗಂಟಲಿನಲ್ಲಿ ಕಫ ಗಟ್ಟಿಯಾಗುವುದನ್ನು ತಡೆಗಟ್ಟಬಹುದು.

ಬಾಯಿ ಮುಕ್ಕಳಿಸಿ

ಬಾಯಿ ಮುಕ್ಕಳಿಸಿ

4. ಬಿಸಿನೀರಿಗೆ ಉಪ್ಪು ಬೆರೆಸಿ ಆಗಾಗ ಬಾಯಿಮುಕ್ಕುಳಿಸಿ.

 ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ಆವಿ ತಗೊಳುವಾಗ 'ವೆಪೋರೈಜ್ಹೆರ್'ಗೆ ಕೆಲ ಬಿಂದು ನೀಲಗಿರಿ ಎಣ್ಣೆಯನ್ನು ಹಾಕುವುದರಿಂದ ಗಂಟಲು ಕಟ್ಟುವುದು ಕಡಿಮೆಯಾಗುವುದು.

ಕಫ ಹೆಚ್ಚು ಮಾಡುವ ಆಹಾರಗಳು

ಕಫ ಹೆಚ್ಚು ಮಾಡುವ ಆಹಾರಗಳು

ಹಾಲಿನ ಉತ್ಪನ್ನ, ಕರಿದ ಪದಾರ್ಥ, ಮಾಂಸ ಇತ್ಯಾದಿಗಳು ಕಫವನ್ನು ಹೆಚ್ಚು ಮಾಡಬಹುದು. ಆದುದರಿಂದ ಇವುಗಳನ್ನು ದೂರವಿಡಿ.

ಹರ್ಬಲ್ ಟೀ

ಹರ್ಬಲ್ ಟೀ

ಹರ್ಬಲ್ ಚಹಾ ಮತ್ತೆ 'ಚಿಕನ್ ಬ್ರೋಥ್' ಮುಂತಾದ ಬಿಸಿ ಪಾನೀಯಗಳನ್ನು ಸೇವಿಸುವುದರಿಂದ ಕಫ ತುಂಡಾಗುವುದಲ್ಲದೆ ಶ್ವಾಸನಾಳಗಳಲ್ಲಿ ತೇವಾಂಶ ಉಳಿದುಕೊಳ್ಳುವುದು.

ಅರಿಶಿಣ ಹಾಕಿದ ಹಾಲು

ಅರಿಶಿಣ ಹಾಕಿದ ಹಾಲು

ಅರ್ಧ ಗ್ಲಾಸ್ ಹಾಲಿಗೆ ಒಂದು ಟೀಸ್ಪೂನ್ ಅರಶಿಣ ಹುಡಿ ಬೆರೆಸಿ ಕುಡಿಯಿರಿ - ಅರಶಿಣದಲ್ಲಿ ಇರುವ 'ಆಂಟಿಸೆಪ್ಟಿಕ್' ಗುಣ 'ಇನ್ಫೆಕ್ಷನ್'ನ್ನು ತಡೆಗಟ್ಟುತ್ತದೆ.

ಜೇನು ಮತ್ತು ನಿಂಬೆರಸ

ಜೇನು ಮತ್ತು ನಿಂಬೆರಸ

2 ಟೀ ಸ್ಪೂನ್ ಲಿಂಬೆ ರಸ ಹಾಗೂ 1 ಟೇಬಲ್ ಸ್ಪೂನ್ ಜೇನನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ಕುಡಿಯಿರಿ. ಈ ಮಿಶ್ರಣವನ್ನು ಕುಡಿಯುವುದರಿಂದ ನಿಮ್ಮ ಗಂಟಲು ತಿಳಿಯಾಗುವುದು. ಇದರಲ್ಲಿರುವ ನಿಂಬೆ ರಸ ಕಫವನ್ನು ಭೇದಿಸುವುದಲ್ಲದೆ ಜೇನು ಗಂಟಲಿನ ಕಿರಿಕಿರಿಯನ್ನು ಕಡಿಮೆಗೊಳಿಸುವುದು.

ಮನೆ ಶುಚಿತ್ವ

ಮನೆ ಶುಚಿತ್ವ

ಸಿಗರೇಟಿನ ಹೊಗೆ, ಪೇಯಿಂಟ್, ಮನೆಯ ಶುಚಿತ್ವಕ್ಕೆ ಬಳಸುವ ರಾಸಾಯನಿಕ ಪದಾರ್ಥ ಮುಂತಾದುವುಗಳಿಂದ ಸಾಧ್ಯವಾದಷ್ಟು ದೂರವಿರಿ.

ಸಿಗರೇಟ್ ನ ಹೊಗೆ

ಸಿಗರೇಟ್ ನ ಹೊಗೆ

ಧೂಮಪಾನ ಮಾಡುವುದರಿಂದ ಗಂಟಲಿನ ಕಿರಿಕಿರಿ ಮತ್ತು ಉಸಿರಾಟದ ತೊಂದರೆಗಳು ಜಾಸ್ತಿಯಾಗಬಹುದಾದುದರಿಂದ ಇದನ್ನು ದೂರವಿಡಿ.

ಕಾಳು ಮೆಣಸು

ಕಾಳು ಮೆಣಸು

12. ಮೂಲಂಗಿ, ಕಾಳುಮೆಣಸು ಮುಂತಾದ ಖಾರದ ಪದಾರ್ಥಗಳನ್ನು ಸೇವಿಸುವುದರಿಂದ ಕಫ ತಿಳಿಗೊಳ್ಳುವುದು.

English summary

Tips to get rid of mucus or phlegm naturally

There are several ways to get rid of throat mucus or phlegm. You are probably familiar with that disturbing feeling of having mucus in your throat, which can make breathing extremely difficult. Mucus or phlegm in the throat can be uncomfortable and cause bad breath or other health problems.
X
Desktop Bottom Promotion