For Quick Alerts
ALLOW NOTIFICATIONS  
For Daily Alerts

ಇತ್ತೀಚಿಗೆ ತುಂಬಾ ಮರೆವು? ಅಲ್ಜೈಮರ್ಸ್ ಇರಬಹುದೇ?

By Super
|

ಅಲ್ಜೈಮರ್ಸ್ ಖಾಯಿಲೆ ನಿಮಗೆ ಬಂದಿರಬಹುದೆಂಬ ಹೆದರಿಕೆಯೇ? ಅಲ್ಜೈಮರ್ಸ್ ಅಂದರೇನು? ಇದೆಂತಹ ಖಾಯಿಲೆ? ಈ ಖಾಯಿಲೆ ಯಾರಿಗೆ, ಯಾಕೆ, ಹೇಗೆ ಬರುತ್ತದೆ? ಇನ್ನೂ ಪ್ರಶ್ನೆಗಳಿವೆಯೇ? ಮುಂದೆ ಓದಿ ನಿಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಿ.

ಸಾಧಾರಣ ನಂಬಿಕೆಯ ಪ್ರಕಾರ, ತುಂಬಾ ವಯಸ್ಸಾಗಿರುವವರಿಗೆ ಅಲ್ಜೈಮರ್ಸ್ ಬರುತ್ತದೆಯೆಂಬ ನಂಬಿಕೆಯಿದೆ. ಜನಪ್ರಿಯ ನಂಬಿಕೆಗೆ ಭಿನ್ನವಾಗಿ, ಅಲ್ಜೈಮರ್ಸ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು. ವಾಸ್ತವವಾಗಿ ವಯಸ್ಸಾದ ಜನಗಳು ಈ ಖಾಯಿಲೆಯು ತಮ್ಮ ಮುಂದಿನ ಜೀವನವನ್ನು ಅಲ್ಲೋಲ-ಕಲ್ಲೋಲ ಮಾಡಿಬಿಡಬಹುದೆಂದು ನಂಬಿರುತ್ತಾರೆ. ಈ ಅಲ್ಜೈಮರ್ಸ್ ಖಾಯಿಲೆಯ 10 ಎಚ್ಚರಿಕೆಯ ಲಕ್ಷಣಗಳನ್ನು ಮತ್ತು ಬರದಂತೆ ತಡೆಯಲು ಮಿದುಳನ್ನು ಹೇಗೆ ಶಾರ್ಪ್ ಮಾಡಬೇಕೆಂದು ತಿಳಿಯಲು ಮುಂದೆ ಓದಿ:

ಜ್ಞಾಪಕಶಕ್ತಿ (Memory) ನಷ್ಟ

ಜ್ಞಾಪಕಶಕ್ತಿ (Memory) ನಷ್ಟ

ಹೆಸರುಗಳನ್ನು ಮರೆಯುವುದು, ಕೆಲವು ಸಾಮಾನುಗಳನ್ನು ಕಳೆದುಕೊಳ್ಳುವುದು, ಭೇಟಿಮಾಡುವುದನ್ನು ಮರೆಯುವುದು, ಕೆಲವು ಪದಗಳನ್ನು ಮರೆಯುವುದು, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದರೂ ಬೇಕಾದಾಗ ಮರೆತುಹೋಗುವುದು, ಇತ್ಯಾದಿ, ಇವುಗಳೆಲ್ಲಾ ಕೆಲವರಿಗೆ ಸಾಮಾನ್ಯವಾಗಿರುತ್ತದೆ. ದೀರ್ಘಕಾಲೀನ ಮತ್ತು ಅಲ್ಪಕಾಲೀನ ಜ್ಞಾಪಕಶಕ್ತಿ ಹೋಗುವುದರಿಂದ ತೀವ್ರ ಬುದ್ಧಿಮಾಂದ್ಯ(Dementia) ಉಂಟಾಗುತ್ತದೆ; ನೀವು ತಮ್ಮ ಆತ್ಮೀಯರು, ಸಂಭಂಧೀಕರು ಅಥವಾ ಸ್ನೇಹಿತರು ಇವರನ್ನೆಲ್ಲ ಗುರುತಿಸಲು ಸಾಧ್ಯವಾಗದಿರಬಹುದು.

2. ಚಿಂತನೆ ಮತ್ತು ತರ್ಕ ಮಾಡುವುದಲ್ಲಿ ಕಷ್ಟವಾಗುವುದು

2. ಚಿಂತನೆ ಮತ್ತು ತರ್ಕ ಮಾಡುವುದಲ್ಲಿ ಕಷ್ಟವಾಗುವುದು

ಕಾಗದ ಪತ್ರಗಳು, ಸಂಖ್ಯೆಗಳು, ಲೆಕ್ಕಾಚಾರ ಮಾಡುವುದರಲ್ಲಿ ಕಷ್ಟವಾಗುವುದು, ವೈಯುಕ್ತಿಕ ಹಣಕಾಸು ನಿರ್ವಹಣೆಯಲ್ಲಿ ತೊಂದರೆಯಾಗುವುದು.

3. ಸಮನ್ವಯತೆ ಮತ್ತು ವಾಹನ ನಿರ್ವಹಣೆಯಲ್ಲಿ ತೊಂದರೆ

3. ಸಮನ್ವಯತೆ ಮತ್ತು ವಾಹನ ನಿರ್ವಹಣೆಯಲ್ಲಿ ತೊಂದರೆ

ನಿಮಗೆ ಸೂಕ್ಷ್ಮಗ್ರಹಿಕೆ ಕಡಿಮೆ ಅಥವ ತೀರಾ ಇಲ್ಲದಿರುವುದು, ಬೀಳುವಂತೆ ಆಗುವಪ್ರವೃತ್ತಿ ಹೊಂದಿರುವುದು, ಸಾಧಾರಣ ಮನೆಕೆಲಸ ಅಂದರೆ ಅಡಿಗೆ, ಡ್ರೈವಿಂಗ್, ಇತರ ಮನೆಕೆಲಸಗಳನ್ನು ಮಾಡುವುದಕ್ಕೆ ಕಷ್ಟವಾಗುವುದು; ಬುದ್ಧಿಮಾಂದ್ಯತೆ ಹೆಚ್ಚಾದರೆ, ನಿಮ್ಮ ದೈನಂದಿನ ಚಟುವಟಿಕೆಗಳಾದ ಸ್ನಾನ, ಡ್ರೆಸ್ ಮಾಡಿಕೊಳ್ಳುವುದು, ಊಟಮಾಡುವುದು, ಶೌಚಾಲಯಕ್ಕೆ ಹೋಗಿಬರುವುದು ಇತ್ಯಾದಿ, ಇಂತಹ ಕೆಲಸಗಳನ್ನು ಬೇರೆಯವರ ಸಹಾಯವಿಲ್ಲದೆ ಮಾಡಲು ಅಸಾಧ್ಯವಾಗಬಹುದು.

4. ಕಳಪೆ ತೀರ್ಮಾನ ಮಾಡುವುದು ಮತ್ತು ನಿರ್ಣಯ ಮಾಡುವುದು

4. ಕಳಪೆ ತೀರ್ಮಾನ ಮಾಡುವುದು ಮತ್ತು ನಿರ್ಣಯ ಮಾಡುವುದು

ನೀವು ಆಲೋಚನೆಮಾಡುವುದಕ್ಕೆ ಅಸಮರ್ಥರಾಗಿರುವುದು, ನಿಮಗೆ ಪರ್ಯಾಯಗಳ ನಡುವೆ ನಿರ್ಧರಿಸಲು ಸಾಧ್ಯವಾಗುವುದಿಲ್ಲದಿರುವುದು, ಉದಾಹರಣೆಗೆ ಬೇಸಿಗೆಯ ಸಮಯದಲ್ಲಿ ಹತ್ತಿ ಬಟ್ಟೆ ಧರಿಸುವ ಬದಲು, ಚಳಿಗಾಲದ ಬಟ್ಟೆಹಾಕಿಕೊಳ್ಳಲು ನಿರ್ಧರಿಸುವುದು.

5. ಸಮಯ, ದಿನಾಂಕ ಮತ್ತು ನೀವಿರುವ ಸ್ಥಳ ಗುರುತಿಸಲಾಗದೇ ಇರುವುದು

5. ಸಮಯ, ದಿನಾಂಕ ಮತ್ತು ನೀವಿರುವ ಸ್ಥಳ ಗುರುತಿಸಲಾಗದೇ ಇರುವುದು

ನೀವು ಪ್ರಸ್ತುತ ಸಮಯ, ದಿನಾಂಕ, ಮತ್ತು ದಿನದ ಬಗ್ಗೆ ಅರಿವಿಲ್ಲದಿರುವುದು ಮತ್ತು ಪರಿಚಯವಿರುವ ಜನರನ್ನು ಮತ್ತು ಸ್ಥಳಗಳನ್ನು ಗುರುತಿಸಲು ಸಾಧ್ಯವಾಗದೇ ಇರುವುದು. ನಿಮ್ಮ ಮನೆಯ ವಿಳಾಸವನ್ನು ಮರೆಯುವುದು, ನೀವು ಎಲ್ಲಿ ವಾಸವಾಗಿರುವಿರಿ ಅಥವಾ ಎಲ್ಲಿ ಕೆಲಸ ಮಾಡುತ್ತಿರುವಿರಿ ಅಥವಾ ನೀವು ಎಲ್ಲಿಗೆ ಹೋಗುತ್ತಿರುವಿರಿ ಎಂಬುದನ್ನೂ ಕೂಡ ಮರೆಯುವುದು.

6. ಸಂವಹನ (Communication) ಸಮಸ್ಯೆಗಳು

6. ಸಂವಹನ (Communication) ಸಮಸ್ಯೆಗಳು

ನೀವು ಭಾಷೆಯನ್ನು ಬಳಸಲು ಸಾಧ್ಯವಾಗದಿರಬಹುದು. ಸರಿಯಾಗಿ ಸೂಕ್ತ ಪದಗಳನ್ನು ಬಳಸಲು ಕಷ್ಟವಾಗಬಹುದು, ಹಾಗೂ ಒಬ್ಬರು ಹೇಳುತ್ತಿರುವುದನ್ನು ಅಥವಾ ಬರೆದಿರುವ ಪದಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗದಿರಬಹುದು.

7. ವ್ಯಕ್ತಿತ್ವ ಬದಲಾವಣೆಗಳು

7. ವ್ಯಕ್ತಿತ್ವ ಬದಲಾವಣೆಗಳು

ನೀವು ಯಾವುದೇ ಕಾರಣವಿಲ್ಲದೆ ಆಕ್ರಮಣಕಾರಿಯಾಗುವುದು, ಆಸಕ್ತಿ ಅಥವಾ ಸಂಶಯ ವ್ಯಕ್ತಪಡಿಸುವುದು. ಸಾಮಾನ್ಯವಾಗಿ ಒಂದು ಸಾಮಾಜಿಕ ವ್ಯಕ್ತಿಯಾಗಿ ಹೊರತಾಗಿಯೂ, ನೀವು ಇತರರ ಜೊತೆ ಸಂಪರ್ಕದಿಂದ ಹಿಂದೆ ಹೋಗುವುದು ಮತ್ತು ಸುಮ್ಮನೆ ಇದ್ದುಬಿಡುವುದು.

8. ನಡವಳಿಕೆಯ ಬದಲಾವಣೆಗಳು

8. ನಡವಳಿಕೆಯ ಬದಲಾವಣೆಗಳು

ನಿಮ್ಮ ನಡವಳಿಕೆ ಬದಲಾಗುತ್ತದೆ, ನಿಮ್ಮ ಮನಸ್ಥಿತಿ ಹೆಚ್ಚು ಕಮ್ಮಿಯಾಗುವುದು, ಏನೂ ಕಾರಣವಿಲ್ಲದೇ ಆಗಾಗ್ಗೆ ಕೋಪಬರುವುದು. ನೀವು ಅನುಚಿತ ವರ್ತನೆಗೆ ತೊಡಗಿ, ಕೆಟ್ಟದಾಗಿ ವರ್ತಿಸುವುದು.

9. ಭ್ರಾಂತಿ ಮತ್ತು ಭ್ರಮೆ

9. ಭ್ರಾಂತಿ ಮತ್ತು ಭ್ರಮೆ

ನಿಮಗೆ ಜನರು, ಪ್ರಾಣಿಗಳು, ಇತ್ಯಾದಿ ಇಲ್ಲದಿದ್ದರೂ ಕಾಣುತ್ತಿರುವ ಹಾಗೆ ಇರುತ್ತದೆ ಅಥವಾ ಧ್ವನಿ ಕೇಳುತ್ತಿರುವಹಾಗಿರುತ್ತದೆ. ಭ್ರಮೆಯು ಭ್ರಾಂತಿಗೆ ಕಾರಣವಾಗಬಹುದು, ಉದಾಹರಣೆಗೆ, ನಿಮ್ಮ ಸತ್ತ ತಂದೆಯವರನ್ನು ನೋಡಿದ ಹಾಗೆ ಹಾಗೆಯೇ ಅವರು ಇನ್ನೂ ಬದುಕಿದ್ದಾರೆ ಎಂಬ ಭ್ರಮೆ ಯಾಗುವುದು.

10. ಮಾನಸಿಕ ಅವ್ಯವಸ್ಥೆಯಿಂದ ಉಂಟಾಗುವ ಭ್ರಮೆ

10. ಮಾನಸಿಕ ಅವ್ಯವಸ್ಥೆಯಿಂದ ಉಂಟಾಗುವ ಭ್ರಮೆ

ನೀವು ಇತರರ ಉದ್ದೇಶಗಳ ಬಗ್ಗೆ ಆಧಾರರಹಿತ ವಿಪರೀತ ಸಂಶಯಕ್ಕೆ ಒಳಪಡಲು ಒಲವು ತೋರಿಸುತ್ತೀರಿ. ತೀವ್ರ ಆತಂಕ ಮತ್ತು ಭಯ ಬೆಳೆಯುವುದರಿಂದ ಮತಿವಿಕಲ್ಪವಾಗುತ್ತದೆ. ಭ್ರಮೆ ಕ್ರಮೇಣ ಕಾಣಿಸಿಕೊಳ್ಳುತ್ತದೆ, ಮತ್ತು ನೀವು, ಭಾವನಾತ್ಮಕ ಸಂಶಯಾಸ್ಪದ, ಸಿಡುಕಿನ, ಅಂತರ್ಮುಖಿಯಾಗಿ, ಖಿನ್ನತೆಗೆ ಒಳಪಟ್ಟು, ಜಗ್ಗದ, ಅಸೂಯೆ, ಸ್ವಾರ್ಥಿ, ಇತ್ಯಾದಿ, ಹೀಗೆ ಕ್ರಮೇಣ ಅನುಭವಿಸುತ್ತೀರಿ.

1. ನಿಮ್ಮ ಮೆದುಳನ್ನು ಉಪಯೋಗಿಸಿಕೊಳ್ಳಿ

1. ನಿಮ್ಮ ಮೆದುಳನ್ನು ಉಪಯೋಗಿಸಿಕೊಳ್ಳಿ

ಶ್ರಮದಾಯಕ ಮಾನಸಿಕ ಚಟುವಟಿಕೆ, ಉತ್ತೇಜಿಸುವ ಭಾಷೆ --- ಎಲ್ಲಾ ನಿಮ್ಮ ಮೆದುಳಿನಲ್ಲಿ "ಜ್ಞಾನಗ್ರಹಣದ ಮೀಸಲು" ರಚಿಸಲು ಸಹಾಯಮಾಡುತ್ತವೆ.

ಕಾರ್ಪರ್ ಅವರು "ಜೀವನದ ಅನುಭವಗಳ ಸಮೃದ್ಧ ಶೇಖರಣೆ" ಇವು ಅರಿವಿನ ಮೀಸಲನ್ನು ಸೃಷ್ಟಿಸಲಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ಆದ್ದರಿಂದ ಶಿಕ್ಷಣ ಮುಂದುವರೆಸಿಕೊಂಡು ಹೋಗಿ! ಕಲಿಯುವುದನ್ನು ಮುಂದುವರಿಸಿ. ಅಲ್ಜೈಮರ್ಸ್‌ಅನ್ನು ತಡೆಯಿರಿ!!

2. ಇಂಟರ್ನೆಟ್ ಹುಡುಕಿ

2. ಇಂಟರ್ನೆಟ್ ಹುಡುಕಿ

ಕಾರ್ಪರ್ ಅವರು ಯುಸಿ‌ಎಲ್‌ಎ ಗ್ಯಾರಿ ಸ್ಮಾಲ್ ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ: ದಿನವೂ ಒಂದುಗಂಟೆಕಾಲ ಇಂಟರ್ನೆಟ್‍ನಲ್ಲಿ ಹುಡುಕುತ್ತಿದ್ದರೆ ನಿಮ್ಮ ವಯಸ್ಸಾಗುತ್ತಿರುವ ಮೆದುಳು ಒಂದು ಪುಸ್ತಕ ಓದುವುದಕ್ಕಿಂತಾ ಹೆಚ್ಚು ಉತ್ತೇಜನ ಕೊಡುತ್ತದೆ.

ನಾನು ಅತ್ಯಾಸಕ್ತಿಯ ಓದುಗ ಮತ್ತು ಗೂಗಲ್‍ನಲ್ಲಿ ಮಾಹಿತಿ ಸಂಗ್ರಹಿಸುವವನು ಆಗಿದ್ದರೂ, ಇದನ್ನು ನಂಬಲು ಕಷ್ಟವೆನಿಸುತ್ತದೆ. ಆದರೂ ಸಹ ಇದನ್ನು ನಾವು ನಂಬಲೇ ಬೇಕು. ನೀವು ಯಾವ ಸರ್ಚ್ ಎಂಜಿನ್ ಉಪಯೊಗಿಸಿದರೂ ಸಹ ನಿಮ್ಮ ಆನ್ಲೈನ್ ಸರ್ಚ್ ಮುಂದುವರಿಸಿ. ಅದು ನಿಮ್ಮ ಮೆದುಳಿಗೆ ಒಳ್ಳೆಯ ವ್ಯಾಯಾಮ ಕೊಡುತ್ತದೆ ಮತ್ತು ಅಲ್ಜೈಮರ್ಸ್‌ಅನ್ನು ದೂರವಿಟ್ಟಿರಲು ಸಹಾಯಮಾಡುತ್ತದೆ.

3. ಮಿದುಳಿನ ಹೊಸ ಜೀವಕೋಶಗಳನ್ನು ಬೆಳೆಸಿ ಮತ್ತು ಅದನ್ನು ಕಾಪಾಡಿ

3. ಮಿದುಳಿನ ಹೊಸ ಜೀವಕೋಶಗಳನ್ನು ಬೆಳೆಸಿ ಮತ್ತು ಅದನ್ನು ಕಾಪಾಡಿ

ಇದುನಿಜವಾಗಿಯೂ ಸಾವಿರಾರು ಹೊಸ ಮಿದುಳಿನ ಜೀವಕೋಶಗಳು ಬೆಳೆಯಲು ಸಾಧ್ಯವೆಂದು ಕಾರ್ಪರ್ ಅವರು ಹೇಳುತ್ತಾರೆ. ಅವರ ನೂರು ಸರಳ ರೀತಿಯ ವ್ಯಾಯಾಮಗಳ ಪೈಕಿ ನಿಮ್ಮ ದೇಹ ಮತ್ತು ಮಿದುಳಿಗೆ ವ್ಯಾಯಾಮ ಮಾಡುವುದರಿಂದ ಅಲ್ಜೈಮರ್ಸ್‌ಅನ್ನು ದೂರವಿಟ್ಟಿರಲು ಸಾಧ್ಯ.

4. ಧ್ಯಾನ ಮಾಡಿ

4. ಧ್ಯಾನ ಮಾಡಿ

ಧ್ಯಾನ ಮಾಡುವುದು ಜೀವನದಲ್ಲಿ ಮಹಾನ್ ರಹಸ್ಯಗಳಲ್ಲಿ ಒಂದಾಗಿದೆ. ನೀವು ಈಗ ಧ್ಯಾನ ಮಾಡುತ್ತಿಲ್ಲದಿದ್ದರೆ ಇದೊಂದು ಉಡುಗರೆಯೆಂದು ತಿಳಿದು ಧ್ಯಾನ ಮಾಡುವುದನ್ನು ಕಲಿಯಿರಿ. ನಿಮ್ಮ ಒತ್ತಡವು ಶಮನವಾಗುವುದು, ನೀವು ಚೆನ್ನಾಗಿ ಓದಬಹುದು, ಹಾಗೂ ಇಷ್ಟು ದಿವಸ ಇದನ್ನು ಹೇಗೆ ಬಿಟ್ಟಿದ್ದೆನೋ ಎನ್ನುವ ಹಾಗೆ ಮಾಡುತ್ತದೆ.

5. ಕಾಫಿ ಕುಡಿಯಿರಿ

5. ಕಾಫಿ ಕುಡಿಯಿರಿ

ಅಧ್ಯಯನದ ಪ್ರಕಾರ ದಿನಕ್ಕೆ ಮೂರರಿಂದ ಐದು ಕಪ್ ಕಾಫೀ ಕುಡಿದರೆ, ನಿಮ್ಮ ಉಳಿದ ಜೀವನದಲ್ಲಿ 65% ರಷ್ಟು ಅಲ್ಜೈಮರ್ಸ್ ಅಪಾಯವನ್ನು ಕಡಿಮೆಮಾಡಬಹುದು.

ಯಾರು ಏನಾದರೂ ಹೇಳಲಿ, ಕಾಫಿ ಮಾತ್ರ ಮಿದುಳಿಗೆ ಒಳ್ಳೆಯದು, ಅಲ್ಲವೆ?

6. ಆಪಲ್ ಜ್ಯೂಸ್ ಕುಡಿಯಿರಿ

6. ಆಪಲ್ ಜ್ಯೂಸ್ ಕುಡಿಯಿರಿ

ನಿಮಗೆ ಕಾಫಿ ಹಿಡಿಸದಿದ್ದರೆ, ಆಪಲ್ ಜ್ಯೂಸ್ ಕುಡಿಯಿರಿ. ಆಪಲ್ ಜ್ಯೂಸ್ ಕುಡಿಯುವುದರಿಂದ "ಮೆಮೋರಿ ಕೆಮಿಕಲ್" ಅಸೆಟೈಕೋಲಿನ್ ಉತ್ಪಾದನೆ ಹೆಚ್ಚುತ್ತದೆ. ಆದ್ದರಿಂದ ಅಲ್ಜೈಮರ್ಸ್ ಔಷಧ ಅರಿಸೆಪ್ಟ್ ಅದೇ ರೀತಿಯಲ್ಲಿ ಕೆಲಸ ಮಾಡುತ್ತದೆ.

7. ನಿಮ್ಮ ತಲೆಯನ್ನು ರಕ್ಷಿಸಿ!

7. ನಿಮ್ಮ ತಲೆಯನ್ನು ರಕ್ಷಿಸಿ!

ವಯಸ್ಸಾದವರು ಚಿಕ್ಕವರಾಗಿದ್ದಾಗ ತಲೆಗೆ ಗಾಯವಾಗಿದ್ದಲ್ಲಿ, ಅಲ್ಜೈಮರ್ಸ್ ಖಾಯಿಲೆಯು ಕಾಣಿಸಿಕೊಳ್ಳುವುದು ನಾಲ್ಕು ಪಟ್ಟು ಸಾಮಾನ್ಯ. ವಯಸ್ಸಾದ ಮೇಲೆ ತಲೆಗೆ ಪೆಟ್ಟು ಬಿದ್ದರೆ ಇನ್ನೈದು ವರ್ಷದಲ್ಲಿ ಅಲ್ಜೈಮರ್ಸ್ ಕಾಣಿಸಿಕೊಳ್ಳಬಹುದು. ಇದು ಸಾಕಷ್ಟು ದಿಗ್ಭ್ರಮೆಯುಂಟುಮಾಡುತ್ತದೆ.

ಇನ್ನೂ ಹೆಚ್ಚು ಬೆರಗುಗೊಳಿಸುವುದೇನೆಂದರೆ ಫುಟ್ಬಾಲ್ ಆಟಗಾರರರಿಗೆ ವಿಶಿಷ್ಟ ಮೆಮೊರಿ ಸಂಬಂಧಿತ ರೋಗಗಳು 19 ಪಟ್ಟು ಹೆಚ್ಚಾಗಿರಲು ಸಾಧ್ಯತೆ ಇದೆ.

8. ಸೋಂಕು ತಪ್ಪಿಸಿ

8. ಸೋಂಕು ತಪ್ಪಿಸಿ

ನೆಗಡಿ ಮತ್ತು ಅದಕ್ಕೆ ಸಂಭಂದ ಪಟ್ಟ ರೋಗ, ಜಠರದ ಹುಣ್ಣುಗಳು, ದ್ರವ ಸುರಿಯುತ್ತಿರುವ ಹುಣ್ಣು, ನ್ಯುಮೋನಿಯ ಮತ್ತು ಪ್ಲೂ ಇವುಗಳು ಅಲ್ಜೈಮರ್ಸ್ ಖಾಯಿಲೆಗೆ ಕಾರಣವಾಗಬಹುದು.

ಅಂಟು ರೋಗದಿಂದ ಮಿದುಳಿಗೆ ಹಾನಿಕಾರಕ ಬ್ಯಾಕ್ಟೀರಿಯ ತಲಪುತ್ತದೆ. ಆದ್ದರಿಂದ ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಯಾವ ರೀತಿಯ ಸೋಂಕುಗಳು ಬರುವುದನ್ನು ತಡೆಯಿರಿ, ಹಾಗೂ ಅದು ಬಂದರೆ ಆದಷ್ಟು ಬೇಗ ನಿಯಂತ್ರಣ ಮಾಡಿ.

9. ವಿಟಮಿನ್ ಡಿ ತೆಗೆದುಕೊಳ್ಳಿ

9. ವಿಟಮಿನ್ ಡಿ ತೆಗೆದುಕೊಳ್ಳಿ

ವಿಟಮಿನ್ ಡಿ "ತೀವ್ರಕೊರತೆ"ಯಿಂದ ದಿಗ್ಭ್ರಮೆಯುಂಟುಮಾಡುವ ಅರಿವಿನ ಕೊರತೆಯ ಅಪಾಯವನ್ನು 394% ರಷ್ಟು ಹೆಚ್ಚಾಗುತ್ತದೆ.

ವಿಟಮಿನ್ ಡಿ ನೈಸರ್ಗಿಕವಾಗಿ ಕೆಲವು ಮೀನುಗಳಲ್ಲಿ - ಹೆರ್ರಿಂಗ್, ಮ್ಯಾಕೆರೆಲ್, ಸಾಲ್ಮನ್ ಮತ್ತು ಸಾರ್ಡೀನ್ಸ್ ಇವುಗಳಲ್ಲಿ ಇರುತ್ತದೆ. ಹಾಲಿನಲ್ಲು ಸಹ ವಿಟಮಿನ್ ಡಿ ಇರುತ್ತದೆ. ಕೆಲವು ರಸ ಉತ್ಪನ್ನಗಳು, ಉಪಹಾರ ಧಾನ್ಯಗಳು, ಮತ್ತು ಇತರ ಆಹಾರಗಳ ಜೊತೆ ಸೇರಿಸಿರುತ್ತಾರೆ.

ಹೇಗಿದ್ದರೂ ಸರಿ. ಸಹಜವಾಗಿ ಆಹಾರ ಪೂರಕಗಳಿಂದ ಅಲ್ಜೈಮರ್ಸ್‌ಅನ್ನು ದೂರವಿರಿಸಬಹುದು.

English summary

Signs Of Alzheimer's To Watch Out For

Unlike popular belief, Alzheimer's could strike you at any age. A phenomenon common amongst the older lot of people, it is a disease which can turn your life upside down.Read on to know the 10 warning signs of Alzheimer's disease
X
Desktop Bottom Promotion