For Quick Alerts
ALLOW NOTIFICATIONS  
For Daily Alerts

ಆತಂಕ ಪರಿಹಾರಕ್ಕೆ ಸಹಜ ಮಾರ್ಗಗಳು

By Deepak M
|

ಆತಂಕವು ಯಾವುದಕ್ಕಾದರು ಭಯಪಟ್ಟಾಗ ಉಂಟಾಗುತ್ತದೆ. ನಾವು ಯಾವುದಾದರು ವಿಚಾರದಲ್ಲಿ ಗೊಂದಲ ಪಟ್ಟಾಗ, ಭಯಪಟ್ಟಾಗ ಮತ್ತು ಗಲಿಬಿಲಿಗೊಂಡಾಗ ಆತಂಕ ಉಂಟಾಗುತ್ತದೆ. ನಮ್ಮ ದೈನಂದಿನ ಹಣಕಾಸು ಸಮಸ್ಯೆ, ಸ್ನೇಹಿತರು ಮತ್ತು ಕುಟುಂಬದ ಕೆಲವು ಸಮಸ್ಯೆಗಳು ನಮ್ಮಲ್ಲಿ ಆತಂಕವನ್ನುಂಟು ಮಾಡುತ್ತವೆ.

ಆತಂಕವು ಅಲ್ಪ ಪ್ರಮಾಣದ್ದಾಗಿದ್ದರೆ ಪರವಾಗಿಲ್ಲ ನಿಮಗೆ ಯಾವುದೇ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುವುದಿಲ್ಲ. ಒಂದು ವೇಳೆ ಇದು ಅತಿರೇಕಕ್ಕೆ ಹೋದರೆ, ಒತ್ತಡ, ಖಿನ್ನತೆ ಮುಂತಾದ ಮಾನಸಿಕ ಸಮಸ್ಯೆಗಳು ಮೂಡುತ್ತವೆ. ಅದು ತಲೆನೋವು, ಮೈ ಕೈ ನೋವು ಮತ್ತು ಸುಸ್ತು ಮುಂತಾದವನ್ನು ಉಂಟು ಮಾಡುತ್ತದೆ. ಕೆಲವೊಮ್ಮೆ ಆತಂಕಕ್ಕೆ ಔಷಧೋಪಚಾರವನ್ನು ಸಹ ಮಾಡಲಾಗುತ್ತದೆ. ಆದರೆ ಈ ಔಷಧಿಗಳನ್ನು ನಿರಂತರವಾಗಿ ಉಪಯೋಗಿಸುವುದರಿಂದಾಗಿ ನಿಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳುಂಟಾಗುತ್ತವೆ. ಅಲ್ಲದೆ ನೀವು ಈ ಔಷಧಿಗಳನ್ನು ಸೇವಿಸುವ ಚಟಕ್ಕೆ ದಾಸರಾಗಬಹುದು. ಅದಕ್ಕಾಗಿ ನಾವು ಅಂತಹ ಔಷಧಿಗಳಿಗೆ ಬದಲಿಯಾಗಿ ದೊರೆಯುವ ಸ್ವಾಭಾವಿಕ ಪರಿಹಾರಗಳನ್ನು ಇಲ್ಲಿ ಸೂಚಿಸಿದ್ದೇವೆ, ಓದಿ ತಿಳಿದುಕೊಳ್ಳಿ, ಒತ್ತಡವನ್ನು ನಿವಾರಿಸಿಕೊಳ್ಳಿ.

ಆತಂಕವನ್ನು ಕಡಿಮೆ ಮಾಡುವ ಸ್ವಾಭಾವಿಕ ಪರಿಹಾರಗಳನ್ನು ಪಟ್ಟಿ ಮಾಡಿದ್ದೇವೆ ಓದಿ ತಿಳಿದುಕೊಳ್ಳಿ.

1. ಚೆನ್ನಾಗಿ ಊಟ ಮಾಡಿ

1. ಚೆನ್ನಾಗಿ ಊಟ ಮಾಡಿ

ಯಾವಾಗಲಾದರು ಯಾವುದೋ ವಿಚಾರದ ಬಗ್ಗೆ ನೀವು ಆಳವಾಗಿ ಯೋಚಿಸಲು ಆರಂಭಿಸಿದ ಕೂಡಲೇ ಅದರಿಂದ ಬೇಗ ಹೊರಬನ್ನಿ. ಹೊರಬಂದು ಏನಾದರು ತಿನ್ನಿ. ಏಕೆಂದರೆ ಊಟ-ತಿಂಡಿಯು ನಿಮ್ಮ ಮನಸ್ಸನ್ನು ವಿಶ್ರಾಂತ ಸ್ಥಿತಿಗೆ ತಂದು, ಆತಂಕವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಆತಂಕದ ಸಮಸ್ಯೆಯಿಂದ ಬಳಲುವವರು, ತಾವು ಆತಂಕಕ್ಕೆ ಒಳಗಾದಾಗ ಏನಾದರು ತಿಂಡಿಯನ್ನು ತಿನ್ನುವುದು ಉತ್ತಮ. ಅದರಲ್ಲು ಕೆಲವೊಂದು ಸೂಪರ್ ಫುಡ್‍ಗಳು ಆತಂಕವನ್ನು ಕಡಿಮೆ ಮಾಡುವ ಆಹಾರ ಪದಾರ್ಥಗಳಾಗಿ ಗುರುತಿಸಲ್ಪಟ್ಟಿವೆ. ಗ್ರೀನ್ ಟೀ, ಚಕ್ಕೆ ಮತ್ತು ಬಾಸಿಲ್ ಈ ಪಟ್ಟಿಯಲ್ಲಿ ಸೇರಿದವುಗಳಾಗಿವೆ. ಇದರ ಜೊತೆಗೆ ಬೆಳಗಿನ ಉಪಾಹಾರವನ್ನು ನೀವು ಹೆಚ್ಚಾಗಿ ಸೇವಿಸಿದಲ್ಲಿ, ದಿನಪೂರ್ತಿ ಚೈತನ್ಯಯುತವಾಗಿ ಇರಬಹುದು ಮತ್ತು ಒತ್ತಡವನ್ನು ನಿಭಾಯಿಸಬಹುದು.

2. ರಿಲ್ಯಾಕ್ಸೇಶನ್ ತಂತ್ರಗಳು

2. ರಿಲ್ಯಾಕ್ಸೇಶನ್ ತಂತ್ರಗಳು

ನಿಮಗೆ ಆತಂಕವು ಸಮಸ್ಯೆಯಾಗಿ ಕಾಡುತ್ತಿದ್ದರೆ, ಅದನ್ನು ನಿವಾರಿಸಿಕೊಳ್ಳಲು ಆಧುನಿಕ ತಂತ್ರಗಳನ್ನು ಬಳಸಬಹುದು. ಸಂಗೀತ ಕೇಳುತ್ತ, ಸಿನಿಮಾಗಳನ್ನು ನೋಡುತ್ತ, ಧೀರ್ಘ ನಡಿಗೆಯನ್ನು ನಡೆಯುತ್ತಲೊ, ಹಬೆಯಾಡುವ ನೀರನ್ನು ಸ್ನಾನ ಮಾಡುವುದರಿಂದಲೊ, ಹೀಗೆ ಹಲವಾರು ರಿಲ್ಯಾಕ್ಸೇಶನ್ ತಂತ್ರಗಳು ಈಗ ನಿಮ್ಮನ್ನು ಆತಂಕದಿಂದ ಹೊರಬರುವಂತೆ ಮಾಡುತ್ತವೆ. ಇವು ನಿಮ್ಮನ್ನು ಚಿಂತೆಯಿಂದ ದೂರಮಾಡಿ, ಲವಲವಿಕೆಯನ್ನುಂಟು ಮಾಡುತ್ತವೆ.

3. ಯೋಗ - ಪ್ರಾಣಾಯಾಮ

3. ಯೋಗ - ಪ್ರಾಣಾಯಾಮ

ಒಂದು ವೇಳೆ ನೀವು ಆತಂಕದಿಂದ ಬಳಲುತ್ತಿದ್ದರೆ, ನಿಮ್ಮ ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸಿಕೊಳ್ಳಲು ಯೋಗ ಮಾಡಬಹುದು. ಇದರ ಜೊತೆಗೆ ಪ್ರಾಣಾಯಾಮವನ್ನು ಮಾಡಿದರೆ, ನಿಮ್ಮ ಮನಸ್ಸು ಮತ್ತು ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಾಣಾಯಾಮ ಮತ್ತು ಯೋಗವು ಆತಂಕವನ್ನು ನಿಯಂತ್ರಿಸುವ ಅತ್ಯುತ್ತಮ ಸ್ವಾಭಾವಿಕ ಚಟುವಟಿಕೆಗಳಾಗಿವೆ.

4. ವ್ಯಾಯಾಮ

4. ವ್ಯಾಯಾಮ

ಆತಂಕವನ್ನು ನಿಯಂತ್ರಿಸುವ ಅತ್ಯುತ್ತಮ ಪರಿಹಾರವೆಂದರೆ ವ್ಯಾಯಾಮ ಮಾಡುವುದು. ವ್ಯಾಯಾಮವು ಒತ್ತಡ ಮತ್ತು ಆತಂಕವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಒಂದು ಒಳ್ಳೆಯ ವ್ಯಾಯಾಮ ಅಥವಾ ವರ್ಕ್ ಔಟ್‍ನ ನಂತರ ನೀವು ಸ್ವಲ್ಪ ಫ್ರೆಶ್ ಆಗಿ ಕಾಣುವುದರ ಜೊತೆಗೆ ಲವಲವಿಕೆಯನ್ನು ಸಹ ಹೊಂದಿರುತ್ತೀರಿ. ಈ ವ್ಯಾಯಾಮವು ನಿಮ್ಮ ಸಮಸ್ಯೆಯನ್ನು ಹೋಗಲಾಡಿಸುವ ಅಥವಾ ಬಗೆಹರಿಸುವ ಮಾರ್ಗವನ್ನು ಸಹ ಸೂಚಿಸುತ್ತದೆ. ಜಿಮ್, ತೂಕ ಎತ್ತುವುದು, ಟ್ರೇಡ್ ಮಿಲ್, ಓಟ, ಡಾನ್ಸಿಂಗ್ ಇತ್ಯಾದಿ ಚಟುವಟಿಕೆಗಳು ವ್ಯಾಯಾಮದಲ್ಲಿ ಬರುತ್ತವೆ.

5. ಧ್ಯಾನ

5. ಧ್ಯಾನ

ಪ್ರತಿದಿನವು 15 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಬಹಳಷ್ಟು ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಬಹುದು. ಇದು ಆತಂಕವನ್ನು ನಿಭಾಯಿಸುವುದರ ಜೊತೆಗೆ ಹಲವಾರು ಸಮಸ್ಯೆಗಳಿಂದ ವಿಮುಕ್ತಿಯನ್ನು ಕಲ್ಪಿಸುತ್ತದೆ. ಧ್ಯಾನವು ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ವಿಶ್ರಾಂತಿಯನ್ನು ಒದಗಿಸುತ್ತದೆ. ನಮ್ಮ ಇಡೀ ದೇಹವನ್ನು ನಿಯಂತ್ರಿಸುವ ಮೆದುಳು ಮತ್ತು ಮನಸ್ಸು ವಿಶ್ರಾಂತಿಯನ್ನು ಪಡೆದರೆ ಸಾಕಲ್ಲವೆ ನಮಗೆ ನವ ಚೈತನ್ಯ ಮೂಡಲು. ಪ್ರತಿದಿನ ಧ್ಯಾನ ಮಾಡುವುದರಿಂದ ನೀವು ಅಪರಿಮಿತವಾದ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಈ ಸ್ವಾಭಾವಿಕ ಪರಿಹಾರಗಳನ್ನು ಪಾಲಿಸಿ ಆತಂಕದಿಂದ ಹೊರಬನ್ನಿ

ಈ ಸ್ವಾಭಾವಿಕ ಪರಿಹಾರಗಳನ್ನು ಪಾಲಿಸಿ ಆತಂಕದಿಂದ ಹೊರಬನ್ನಿ

ಔಷಧಗಳ ಮೇಲೆ ಅವಲಂಬಿತರಾಗಿ ನಿಮ್ಮ ಜೀವನವನ್ನು ಚಟಕ್ಕೆ ದಾಸರಾಗುವಂತೆ ಮಾಡಬೇಡಿ. ಆತಂಕವು ಆಧುನಿಕ ಜಗತ್ತು ನಮಗೆ ನೀಡಿದ ಬಳುವಳಿ. ಈ ಒತ್ತಡದ ಪರಿಸ್ಥಿತಿಯಲ್ಲಿ ಆತಂಕವು ಅದರ ಜೊತೆಯಾಗಿ ಬರುತ್ತದೆ. ಹಾಗಾಗಿ ಯಾವುದೇ ಭಯ - ಆತಂಕ ಮತ್ತು ಚಿಂತೆಗಳಿಲ್ಲದೆ ಬದುಕುವುದನ್ನು ರೂಢಿಸಿಕೊಳ್ಳಿ.

ವಿಪರೀತವಾದ ಸೋಲು, ಸಂಬಂಧಗಳಲ್ಲಿ ಏರುಪೇರು, ಕುಟುಂಬದ ಸಮಸ್ಯೆಗಳು ಮುಂತಾದವು ಆತಂಕವನ್ನುಂಟು ಮಾಡುತ್ತವೆ. ಅತಿ ನಿರೀಕ್ಷೆಯು ನಿರಾಸೆಯನ್ನುಂಟು ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಆಗ ಆತಂಕವು ತನ್ನಿಂದ ತಾನೇ ಸರಿಹೋಗುತ್ತದೆ.

English summary

Natural remedies for anxiety

Anxiety is a like feeling of fear from something. Anxiety is a result of stress that causes the mind to be confused, scared and feel chaotic over something. Anxiety is experienced by every human being from time to time, due to everyday tensions like money, love, friends and family.
Story first published: Monday, December 2, 2013, 14:10 [IST]
X
Desktop Bottom Promotion