For Quick Alerts
ALLOW NOTIFICATIONS  
For Daily Alerts

ಈ ಆಹಾರಗಳು ರೋಗನಿರೋಧಕತೆ ಹೆಚ್ಚಿಸುತ್ತವೆ

By Hemanth Amin
|

ಚಳಿಗಾಲ ಬರುತ್ತಿರುವಂತೆ ಹಲವಾರು ರೀತಿಯ ಕಾಯಿಲೆಗಳನ್ನು ಅದು ಒದ್ದುಕೊಂಡು ಬರುತ್ತದೆ. ಇದನ್ನು ಎದುರಿಸಲು ನಮ್ಮ ದೇಹದಲ್ಲಿ ಬಲವಾದ ರೋಗನಿರೋಧಕ ವ್ಯವಸ್ಥೆ ಇರುವುದು ತುಂಬಾ ಮುಖ್ಯ. ಚಳಿಗಾಲದಲ್ಲಿ ಶೀತ ಮತ್ತು ಜ್ವರ ನೀವು ಸಾಮಾನ್ಯವಾಗಿ ಎದುರಿಸಬಹುದಾದ ಕಾಯಿಲೆ. ವೇಗವರ್ಧಕದಂತೆ ಕೆಲಸ ಮಾಡುವ ಶೀತ ವಾತಾವರಣದಿಂದಾಗಿ ಚಳಿಗಾಲದ ತಿಂಗಳುಗಳಲ್ಲಿ ಇದು ಮೀತಿ ಮೀರಿ, ಹೆಚ್ಚು ಸಕ್ರಿಯವಾಗಿರುತ್ತದೆ. ಕಾಯಿಲೆಗಳನ್ನು ಉಂಟುಮಾಡುವ ಇಂತಹ ಅಂಶಗಳ ವಿರುದ್ಧ ಕೆಲಸ ಮಾಡಲು ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆ ಬಲಿಷ್ಠವಾಗಿರಬೇಕು.

ಚಳಿಗಾಲದಲ್ಲಿ ಬರುವ ಜ್ವರ ಮತ್ತು ಇತರ ಸಾಮಾನ್ಯ ಶೀತಜ್ವರದ ವಿರುದ್ಧ ಹೋರಾಡಲು ಚಳಿಗಾಲದಲ್ಲಿ ನೀವು ತುಂಬಾ ಬೆಚ್ಚಗೆ, ತುಂಬಾ ನೀರು ಸೇವಿಸಿ ಮತ್ತು ಆರೋಗ್ಯಕರವಾಗಿರಬೇಕು. ಸರಿಯಾದ ನಿದ್ದೆ ಮತ್ತು ಆರೋಗ್ಯಕರ ಆಹಾರ ಕ್ರಮದಿಂದ ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಸುಸ್ಥಿಯಲ್ಲಿಟ್ಟು, ದೇಹವನ್ನು ಅನಾರೋಗ್ಯಗೊಳಿಸಲು ಬರುವ ಅಂಶಗಳನ್ನು ಹಿಮ್ಮೆಟ್ಟಿಸಲು ತಯಾರುಗೊಳಿಸಬೇಕು. ಚಳಿಗಾಲದಲ್ಲಿ ಜ್ವರದ ವಿರುದ್ಧ ಹೋರಾಡಲು ಹಲವಾರು ಬಗೆಯ ಆಹಾರಗಳಿವೆ. ರೋಗ ನಿರೋಧಕ ವ್ಯವಸ್ಥೆ ಬಲಪಡಿಸಲು ನೀವು ನಿಯಮಿತ ವ್ಯಾಯಾಮದಿಂದ ಫಿಟ್ ಮತ್ತು ಆರೋಗ್ಯವಾಗಿರಬೇಕು.

ವಿಟಮಿನ್ ಎ, ಇ ಮತ್ತು ಸಿ ಇರುವ ಆಹಾರಗಳು, ಸತುವಿನಂತಹ ಖನಿಜಾಂಶಗಳು ನಿಮ್ಮ ರೋಗನಿರೋಧಕ ವ್ಯವಸ್ಥೆ ಬಲಪಡಿಸಲು ನೆರವಾಗುತ್ತದೆ. ಸಿಹಿ ಬಟಾಟೆ, ಟರ್ನಿಪ್ ಗೆಡ್ಡೆಗಳು, ಪೇರಳೆ, ದ್ರಾಕ್ಷಿ, ಕಿತ್ತಳೆ, ಎಲೆಕೋಸು, ಮೆಣಸು, ಆವಕಾಡೊ, ಸೇಬು ಮತ್ತು ಬಾಳೆಹಣ್ಣುಗಳಂತಹ ಹಣ್ಣು ಮತ್ತು ತರಕಾರಿಗಳು ರೋಗ ನಿರೋಧಕ ವ್ಯವಸ್ಥೆ ಬಲಪಡಿಸಲು ನೆರವಾಗುತ್ತದೆ. ರೋಗ ನಿರೋಧಕ ವ್ಯವಸ್ಥೆ ಬಲಗೊಳಿಸಲು ನಿಮ್ಮ ಆಹಾರ ಕ್ರಮದಲ್ಲಿ ಈ ಹಣ್ಣು ಮತ್ತು ತರಕಾರಿಗಳಿರುವುದನ್ನು ಖಚಿತಪಡಿಸಿಕೊಳ್ಳಿ.

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೊಂದಿರುವ ಕೆಲವೊಂದು ಆಹಾರಗಳು

1. ಬ್ರೊಕೊಲಿ

1. ಬ್ರೊಕೊಲಿ

ಬ್ರೊಕೊಲಿಯಲ್ಲಿ ವಿಟಮಿನ್ `ಎ' ಮತ್ತು `ಸಿ'ಯೊಂದಿಗೆ ಪೋಷಕಾಂಶಗಳಾದ ಫಾಲಿಕ್ ಆಮ್ಲಾ, ಕ್ಯಾಲ್ಸಿಯಂ ಮತ್ತು ನಾರಿನಾಂಶವಿದೆ. ಇದು ಒಳ್ಳೆಯ ಉತ್ಕರ್ಷಣ ನಿರೋಧಕ ಮತ್ತು ಇತರ ಕೆಲವೊಂದು ರಕ್ಷಣಾ ಅಂಶಗಳು ಚಳಿಗಾಲದಲ್ಲಿ ನಿಮ್ಮ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.

2. ಕ್ಯಾರೆಟ್

2. ಕ್ಯಾರೆಟ್

ವಿಟಮಿನ್ `ಎ'ಯಿಂದ ಸಮೃದ್ಧವಾಗಿರುವ ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೋಟಿನ್ ಉತ್ಕರ್ಷಣ ನಿರೋಧಕವಿದೆ. ವಿಟಮಿನ್ `ಎ' ಯಕೃತ್ತು ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗಿ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಸೋಂಕು ಮತ್ತು ಇತರ ಅಂಶಗಳ ವಿರುದ್ಧ ಹೋರಾಡುವುದಕ್ಕೆ ಇದು ಪ್ರಸಿದ್ಧಿ.

3. ಸೇಬು

3. ಸೇಬು

ಸೇಬು ಹಣ್ಣಿನಲ್ಲಿರುವ ಹೆಚ್ಚಿನ ಪೋಷಕಾಂಶಗಳ ಲಾಭವನ್ನು ಚಳಿಗಾಲದಲ್ಲಿ ಪಡೆಯಬಹುದು. ಇದು ತುಂಬಾ ಆರೋಗ್ಯಕರ, ಚಳಿಗಾಲದಲ್ಲಿ ಬರುವ ಸಾಮಾನ್ಯ ಜ್ವರ ಮತ್ತು ಶೀತದ ವಿರುದ್ಧ ಹೋರಾಡಲು ಮತ್ತು ಆರೋಗ್ಯಕರವಾಗಿಡಲು ಇದು ಹೆಚ್ಚಿನ ನಾರಿನಾಂಶ ಮತ್ತು ಉತ್ಕರ್ಷಣ ನಿರೋಧಕವನ್ನು ಒದಗಿಸುತ್ತದೆ.

4. ಕಿವಿ ಹಣ್ಣು

4. ಕಿವಿ ಹಣ್ಣು

ಕಿವಿ ಹಣ್ಣಿನಲ್ಲಿ ವಿಟಮಿನ್ `ಸಿ' ಹೇರಳವಾಗಿದೆ. ವಯಸ್ಕರಿಗೆ ದಿನವೊಂದಕ್ಕೆ ಬೇಕಾಗುವ ವಿಟಮಿನ್ `ಸಿ' ಯನ್ನು ಕಿವಿ ಹಣ್ಣು ಒದಗಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ. ವಿಶೇಷವಾಗಿ ಚಳಿಗಾಲದಲ್ಲಿ ಕಿವಿ ಹಣ್ಣು ತಿನ್ನುವುದರಿಂದ ರೋಗ ನಿರೋಧಕ ವ್ಯವಸ್ಥೆ ಬಲಪಡಿಸಬಹುದು.

5. ಗ್ರೀನ್ ಟೀ

5. ಗ್ರೀನ್ ಟೀ

ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿರುವ ಗ್ರೀನ್ ಟೀ ಸಂಜೀವಿನಿ ಇದ್ದ ಹಾಗೆ. ಇದು ನಿಮ್ಮ ದೇಹದಲ್ಲಿರುವ ವಿಷಕಾರಗಳನ್ನು ಸ್ವಚಗೊಳಿಸುತ್ತದೆ ಮತ್ತು ರೋಗನಿರೋಧಕ ವ್ಯವಸ್ಥೆ ಸರಿಪಡಿಸುತ್ತದೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.

6. ರೆಡ್ ಮೀಟ್

6. ರೆಡ್ ಮೀಟ್

ಹೆಚ್ಚಿನ ಸತು ಸೇವಿಸಲು ದೈನಂದಿನ ಆಹಾರ ಕ್ರಮದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾಂಸ ಸೇವಿಸಬೇಕು. ವಯಸ್ಕರಿಗೆ ದಿನಕ್ಕೆ 12 ಮಿ. ಗ್ರಾಂ.ನಷ್ಟು ಸತು ಬೇಕಾಗುತ್ತದೆ. ಇದರ ಅರ್ಧದಷ್ಟು ಸತು ಒಂದು ತುಂಡು ಬೀಫ್ ಅಥವಾ ಕೋಳಿ ಮಾಂಸದಲ್ಲಿರುತ್ತದೆ.

7. ಸಿಂಪಿ

7. ಸಿಂಪಿ

ಸಿಂಪಿ ಸತುವಿನ ಮನೆ. ಒಂದು ಸಿಂಪಿ ವಯಸ್ಕರಿಗೆ ದಿನದ ಅಗತ್ಯಕ್ಕೆ ಬೇಕಾಗಿರುವ ಸತುವನ್ನು ಒದಗಿಸುತ್ತದೆ. ಸೋಂಕುವಿನ ವಿರುದ್ಧ ಹೋರಾಡುವ ಬಿಳಿ ರಕ್ತಕಣಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಯಲ್ಲಿ ಸತು ಪ್ರಮುಖ ಪಾತ್ರ ವಹಿಸುತ್ತದೆ.

8. ತೆಂಗಿನ ಎಣ್ಣೆ

8. ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯು ಲೌರಿಕ ಆಮ್ಲದಿಂದ ಸಮೃದ್ಧವಾಗಿದೆ. ಇದು ಸೋಂಕನ್ನು ಹರಡುವ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಇದು ವೈವಿಧ್ಯ ತೈಲವಾಗಿರುವ ಕಾರಣ ದೈನಂದಿನ ಸೇವನೆಗೆ ಇದನ್ನು ಅಡುಗೆಯಲ್ಲಿ ಬಳಸಬಹುದು.

9.ಬ್ಲೂ ಬೆರ್ರಿ

9.ಬ್ಲೂ ಬೆರ್ರಿ

ಬ್ಲೂ ಬೆರ್ರಿ, ರಾಸ್ ಬೆರ್ರಿ, ಗೊಜಿ ಹಣ್ಣುಗಳು ಮತ್ತು ಆಕೈ ಬೆರ್ರಿಗಳು ಒರಾಕ್ ಅಂಶಗಳಿಂದ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಅನಾರೋಗ್ಯ ಬರದಂತೆ ಕಾಪಾಡುತ್ತದೆ. ಬೆರ್ರಿಗಳಲ್ಲಿರುವ ವಿಟಮಿನ್, ಪೋಷಕಾಂಶ ಮತ್ತು ನಾರಿನಾಂಶಗಳು ದೇಹವನ್ನು ವಿಷಕಾರಗಳಿಂದ ದೂರವಿಟ್ಟು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.

10. ಅಣಬೆ

10. ಅಣಬೆ

ಅಣಬೆ ರೋಗನಿರೋಧಕ ವ್ಯವಸ್ಥೆಗೆ ಬೆಂಬಲ ನೀಡುತ್ತದೆ. ಮೈಟಕೆ, ರೈಶಿ, ಕೊರಿಲೌಸ್, ಅಗಾರಿಕಸ್ ಮತ್ತು ಶೀಟಾಕೆಯಂತಹ ವಿವಿಧ ಬಗೆಯ ಅಣಬೆಗಳಲ್ಲಿ ಉನ್ನತ ಮಟ್ಟದ ಔಷಧಿಯ ಗುಣಗಳಿವೆ. ಈ ಅಣಬೆಗಳು ಬೆಟಾ ಗ್ಲುಕನ್ಸ್ ಗಳೆಂಬ ಪ್ರಬಲ ಸಂಯುಕ್ತಗಳನ್ನು ಒಳಗೊಂಡಿರುತ್ತವೆ ಮತ್ತು ಇದು ರೋಗನಿರೋಧಕ ವ್ಯವಸ್ಥೆಯನ್ನು ಕ್ರಿಯಾಶೀಲವಾಗಿರುತ್ತದೆ.

English summary

Immunity Boosting Foods For Men During Winter

Arrival of winter brings with it a lot of ailments and sickness that need to be countered by a strong immune system in our body. Cold and flu are two of the most troublesome ailments you may have to counter during winters.
Story first published: Friday, November 29, 2013, 15:49 [IST]
X
Desktop Bottom Promotion