For Quick Alerts
ALLOW NOTIFICATIONS  
For Daily Alerts

ಸಂಧಿವಾತಕ್ಕೆ ಕೆಲ ಪ್ರಮುಖ ಕಾರಣಗಳು

By Super
|

ಮನುಷ್ಯನ ದೇಹದಲ್ಲಿ ಹಲವಾರು ಕಾರಣಗಳಿಂದಾಗಿ ಹಲವಾರು ವಿಧದಲ್ಲಿ ಸಂಧಿವಾತ ಕಾಣಿಸಿಕೊಳ್ಳುತ್ತದೆ. ಒಮ್ಮೆ ಸಂಧಿವಾತ ಕಾಣಿಸಿಕೊಂಡರೆ ಅದರಿಂದ ಹೊರಬರುವುದು ತುಸು ಕಷ್ಟದ ಕೆಲಸವೇ ಸರಿ. ಕೆಲ ಔಷಧಗಳು, ವೈದ್ಯಕೀಯ ಚಿಕಿತ್ಸೆಗಳು, ವಂಶ ಪಾರಂಪರ್ಯ, ಜೀವನ ಶೈಲಿ ಇವೆಲ್ಲಾ ಸಂಧಿವಾತಕ್ಕೆ ಪ್ರಮುಖ ಕಾರಣಗಳು.

ಆಹಾರೇತರ ವಸ್ತುಗಳು ಗೌಟ್ ಅಥವಾ ಸಂಧಿವಾತಕ್ಕೆ ನೇರ ಕಾರಣಗಳಾಗಿವೆ. ಆ ಕಾರಣಗಳನ್ನು ತಿಳಿದುಕೊಂಡರ ಈ ಸಂಧಿವಾತ ಬರದಂತೆ 90% ತಡೆಯಬಹುದು. ಇಲ್ಲಿ ನಿಮ್ಮ ಸಂಧಿವಾತಕ್ಕೆ ಕಾರಣವಾದ ಕೆಲವು ವಿಷಯಗಳನ್ನು ಹೇಳಲಾಗಿದೆ:

ಆಸ್ಪಿರಿನ್

ಆಸ್ಪಿರಿನ್

ಆಸ್ಪಿರಿನ್ ನಲ್ಲಿ ಯೂರಿಕ್ ಆಮ್ಲ ಅಧಿಕವಾಗಿರುತ್ತದೆ. ಅತಿ ಹೆಚ್ಚಿನ ಮಟ್ಟದ ಯೂರಿಕ್ ಆಮ್ಲ ಕೀಲುಗಳಲ್ಲಿ (ವಿಶೇಷವಾಗಿ ಹೆಬ್ಬೆರಳು ಮತ್ತು ಬೆರಳುಗಳು) ನೋವನ್ನು ಉಂಟುಮಾಡುತ್ತವೆ.

ಡೈಯುರೆಟಿಕ್ಸ್ (ಮೂತ್ರವರ್ಧಕಗಳು)

ಡೈಯುರೆಟಿಕ್ಸ್ (ಮೂತ್ರವರ್ಧಕಗಳು)

ಡೈಯುರೆಟಿಕ್ಸ್ ದೇಹದಿಂದ ನೀರು ಮತ್ತು ಉಪ್ಪು ಸ್ವಚ್ಛಗೊಳಿಸಲು ಮೂಲಕ ರಕ್ತದೊತ್ತಡವನ್ನು ಕಡಿಮೆ ಸಹಾಯ ಮಾಡುತ್ತದೆ. ಆದರೆ ಅದೇ ಸಮಯದಲ್ಲಿ ಸಂಧಿವಾತಕ್ಕೆ ಕಾರಣವಾದ ಯೂರಿಕ್ ಆಮ್ಲವನ್ನು ಮೂತ್ರಪಿಂಡಗಳಿಂದ ಹೊರಹೋಗದಂತೆ ತಡೆಹಿಡಿಯುತ್ತದೆ.

ಆದರೆ ಕೆಲವು ಔಷಧಗಳು ಈ ವಿಷಯದಲ್ಲಿ ಸಹಾಯಕವಾಗಬಲ್ಲದು. ಮೂತ್ರವರ್ಧಕಗಳು ,ಅಲೊಪ್ಯುರಿನೊಲ್ ( allopurinol (Lopurin) or febuxostat (Uloric)) ಔಷಧಗಳೊಂದಿಗೆ ಸೇರಿ ರಕ್ತದಲ್ಲಿ ಯೂರಿಕ್ ಆಮ್ಲದ ಉತ್ಪಾದನೆಯನ್ನು ನಿಧಾನಗೊಳಿಸಬಲ್ಲದು.

ನೀರಿನಂಶ ಕಡಿಮೆಯಾಗುವುದು

ನೀರಿನಂಶ ಕಡಿಮೆಯಾಗುವುದು

ಡೀಹೈಡ್ರೇಶನ್ ಆರೋಗ್ಯದ ಮೇಲೆ ಅಪಾರ ಪರಿಣಾಮ ಬೀರಬಲ್ಲದು ಅದರಲ್ಲಿ ಸಂಧಿವಾತ ಕೂಡ ಒಂದಾಗಿದೆ. ಆದ್ದರಿಂದ ದಿನದಲ್ಲಿ ಕನಿಷ್ಠ ಎಂಟು ಲೋಟ ನೀರನ್ನು ಕುಡಿಯಲೇಬೇಕು.

ಅಧಿಕ ತೂಕ

ಅಧಿಕ ತೂಕ

ಸಂಶೋಧನೆಗಳ ಪ್ರಕಾರ, ಹೆಚ್ಚು ಯೂರಿಕ್ ಆಮ್ಲವನ್ನುದೇಹದಲ್ಲಿ ಉತ್ತೇಜಿಸುವ ಮತ್ತು ಯೂರಿಕ್ ಆಮ್ಲದ ವಿಸರ್ಜನೆಯನ್ನು ತಡೆಯುವ ಸ್ಥೂಲಕಾಯತೆಯು ಸಂಧಿವಾತದ ಅಪಾಯವನ್ನು ಸೂಚಿಸುತ್ತದೆ.

ಉಪವಾಸ

ಉಪವಾಸ

ನೀವು ಆರೋಗ್ಯಕರ ವ್ಯಾಪ್ತಿಯಲ್ಲಿ ನಿಮ್ಮ ತೂಕ ಮತ್ತು ಯೂರಿಕ್ ಆಮ್ಲ ಮಟ್ಟ ಎರಡನ್ನು ಕಡಿಮೆ ಮಾಡಲು ಬಯಸಿದರೆ ಉಪವಾಸ ಮಾಡುವ ಪ್ರಕ್ರಿಯೆಯನ್ನು ಬಿಟ್ಟುಬಿಡಿ.

ರಜೋನಿವೃತ್ತಿ

ರಜೋನಿವೃತ್ತಿ

ಋತುಬಂಧದ ಸಮಯದಲ್ಲಿ ಇಷ್ಟವಿಲ್ಲದಿದ್ದರೂ ಆಗಮಿಸುವ ಅತಿಥಿ ಈ ಸಂಧಿವಾತ! ಮೂತ್ರಪಿಂಡದ ಮೂಲಕ ಯೂರಿಕ್ ಆಮ್ಲವನ್ನು ಹೊರಕಳಿಸಲು ಸಹಾಯಕವಾದ ಈಸ್ಟೋಜನ್ (estrogen) ರಜೋನಿವೃತ್ತಿಯ ಮೊದಲು ಮತ್ತು ನಂತರ ಕಡಿಮೆಯಾಗುತ್ತದೆ.

ರಜೋನಿವೃತ್ತಿಯ ನಂತರ ಸಂಧಿವಾತದ ಇತರ ತೊಂದರೆಗಳಿಂದ ಬಹಳ ಎಚ್ಚರಿಕೆಯಿಂದಿರಬೇಕು. ಕೆಲವು ಸಂಶೋಧನೆಗಳು ಹೇಳುವಂತೆ ನೀವು ಸಂಧಿವಾತ ನೋವಿನಿಂದ ಹೊರಗುಳಿಯಲು, ಕಾಫಿ, ಚೆರೀಸ್, ವಿಟಮಿನ್ ಸಿ ಅಂಶದ ಪದಾರ್ಥಗಳನ್ನು ಸೇವಿಸದಿರುವುದು ಉತ್ತಮ.

ಗಾಯ

ಗಾಯ

ಕೆಲವೊಮ್ಮೆ ಚಿಕ್ಕ ಗಾಯಗಳೂ ಕೂಡ ಬಹಳಷ್ಟು ನೋವನ್ನು ಉಂಟುಮಾಡುತ್ತದೆ. ಹೀಗೆ ಕೀಲುಗಳಲ್ಲಿ ಉಂಟಾದ ಗಾಯ ಯೂರಿಕ್ ಆಮ್ಲ ಶೇಖರಣೆಗೆ ಕಾರಣವಾಗುತ್ತದೆ. ಮತ್ತು ಇದರಿಂದ ಸಂಧಿ ನೋವುಗಳು ಉಂಟಾಗುವುದು ಖಚಿತ!

ಆರಾಮದಾಯಕವಲ್ಲದ ಶೂಗಳು

ಆರಾಮದಾಯಕವಲ್ಲದ ಶೂಗಳು

ಆರಾಮದಾಯಕವಲ್ಲದ ಶೂ ಅಥವಾ ಪಾದರಕ್ಷೆಗಳು ಸಂಧಿವಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಹೆಚ್ಚಾಗಿ ಕಡಿಮೆ ಹೀಲ್ ಇರುವ ಪಾದರಕ್ಷೆಗಳನ್ನು ಬಳಸುವುದು ಅತ್ಯಂತ ಸೂಕ್ತ.

ಆನುವಂಶೀಯ

ಆನುವಂಶೀಯ

ದುರಾದೃಷ್ಟವಶಾತ್ ಕೆಲವು ಸಂಧಿವಾತಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ಸುಮಾರು 20% ಜನರಲ್ಲಿ ಅವರ ಕುಟುಂಬವರ್ಗದವರಿಂದಲೇ ಈ ನೋವು ಪ್ರಾಪ್ತವಾಗಿರುತ್ತದೆ!

ಇಂತಹ ಸಮಸ್ಯೆಯನ್ನು ನೀವೂ ಹೊಂದಿದ್ದರೆ ವಿಶೇಷವಾಗಿ ಯುವಕರು ಈ ಬಗ್ಗೆ ಹೆಚ್ಚು ಎಚ್ಚರವಹಿಸಬೇಕು. ಇಂತಹ ನೋವು ನಿವಾರಕ ಆಹಾರಗಳನ್ನು ಸೇವಿಸಿ. ಮತ್ತು ಮೇಲೆ ಹೇಳಿದ, ಸಂಧಿವಾತಕ್ಕೆ ಕಾರಣವಾದ ವಸ್ತುಗಳಿಂದ ದೂರವಿರಿ!

English summary

How to fight gout pain

Gout is an excruciatingly painful form of arthritis that often affects the feet.Non-food items are the major risk factors for developing gout. Here are nine such triggers, which could be causing your gout pain.
X
Desktop Bottom Promotion