For Quick Alerts
ALLOW NOTIFICATIONS  
For Daily Alerts

ವಸಡಿನ ರಕ್ತಸ್ರಾವ ನಿವಾರಣೆಗೆ ಮನೆಮದ್ದು

By Super
|

ವಸಡುಗಳಲ್ಲಿ ರಕ್ತ ಬರುತ್ತಿದ್ದರೆ ಯಾರಿಗೆ ತಾನೇ ಸಮಾಧಾನವಾಗುತ್ತದೆ. ಆದರೆ ಇದಕ್ಕೆ ಮನೆಯಲ್ಲೇ ಚಿಕಿತ್ಸೆ ಇದ್ದರೆ, ತಕ್ಷಣ ಮಾಡಿಕೊಂಡು ವಸಡಿನ ರಕ್ತಸ್ರಾವದಿಂದ ಪಾರಾಗಬಹುದಲ್ಲವೇ ? ಹಾಗಿದ್ದರೆ ಕೇಳಿ, ವಸಡಿನ ರಕ್ತಸ್ರಾವದಿಂದ ಮುಕ್ತಿ ಪಡೆಯುವ ಮನೆ-ಔಷಧಿ ಇಲ್ಲಿದೆ. ಸಿಟ್ರಸ್ ಹಣ್ಣುಗಳು, ಹಾಲು, ಹಸಿತರಕಾರಿಗಳು,ಅಡಿಗೆ ಸೋಡಾ, ಲವಂಗ, ಲವಂಗದೆಣ್ಣೆ, ಸೇಜ್,ಪುದೀನಾ ಎಣ್ಣೆ, ಚೆಂಡು ಹೂ ಎಲೆ ಚಹಾ, ಕ್ಯಮೊಮೈಲ್ ಚಹಾ, ಉಪ್ಪು, ಹದವಾಗಿ ವಸಡುಗಳ ಮೇಲೆ ಬೆರಳಾಡಿಸುವುದು ಹಾಗೂ ಧೂಮಪಾನ ಮತ್ತು ಕೊಬ್ಬಿನ ಆಹಾರ ಸೇವನೆಯಿಂದ ದೂರವಿರುವುದು...... ಇವೆಲ್ಲವನ್ನು ಒಳಗೊಂಡಿದೆ ನಮ್ಮ ಮನೆಯ ಚಿಕಿತ್ಸೆ.

ಹಲ್ಲುಜ್ಜುವಾಗ ಅಥವಾ ಒರಟು ಆಹಾರ ತಿನ್ನುವಾಗ ವಸಡುಗಳಲ್ಲಿ ಉಂಟಾಗುವ ರಕ್ತಸ್ರಾವ ಮತ್ತು ವಸಡು ಊದುವಿಕೆಗಳು (ಬಾಯುವಿಕೆ) ವೈದ್ಯಕೀಯ ಚಿಕಿತ್ಸೆ ಪಡೆದು ಕೊಳ್ಳುವಷ್ಟು ಗಂಭೀರ ಸ್ವರೂಪದ್ದಾಗಿರುತ್ತವೆ. ಸಾಮಾನ್ಯವಾಗಿ ವಸಡಿನ ತೊಂದರೆಗಳು, ಬಾಯಿಯ ನೈರ್ಮಲ್ಯವನ್ನು ನಿರ್ಲಕ್ಷಿಸುವುದರಿಂದ ಉಂಟಾಗಿರುತ್ತವೆ. ಆದರೂ ಇತರ ಆರೋಗ್ಯ ಪರಿಸ್ಥಿತಿಗಳಾದ ಗರ್ಭಧಾರಣೆ, ಜೀವಸತ್ವಗಳ ಕೊರತೆ, ಸ್ಕರ್ವಿ ರೋಗಬಾಧೆ, ಲ್ಯುಕೇಮಿಯಾ ಅಥವಾ ಮತ್ತಾವುದೇ ಸೋಂಕಿನ ಕಾರಣದಿಂದಲೂ ವಸಡಿನಲ್ಲಿ ರಕ್ತ ಕಾಣಿಸಿಕೊಳ್ಳಬಹುದು. ಗಾಬರಿಯಾಗುವ ಪ್ರಮೇಯವಿಲ್ಲ. ವಸಡಿನ ರಕ್ತಸ್ರಾವವನ್ನು ಮನೆಮದ್ದುಗಳ ಮೂಲಕ ತ್ವರಿತವಾಗಿ ಹೋಗಲಾಡಿಸಬಹುದು. ಮನೆಮದ್ದುಗಳು ಬಳಸಲೂ ಸುಲಭ ಹಾಗು ಒಂದೇ ವಾರದಲ್ಲಿ ಪರಿಣಾಮ ಕಂಡುಕೊಳ್ಳಬಹುದು.

ವಸಡುಗಳ ರಕ್ತಸ್ರಾವವೆಂದರೆ, ಪ್ರತಿದಿನ ಉಂಟಾಗುವ ರಕ್ತಸ್ರಾವ. ಇದು ಸಾಮಾನ್ಯವಾಗಿ ಪ್ಲೇಟ್ಲೆಟ್ ಗಳ ಅಸ್ವಸ್ಥತೆ ಅಥವಾ ರಕ್ತದ ಕ್ಯಾನ್ಸರ್ ಗಳಂತಹ ಕೆಲವು ಗಂಭೀರ ಕಾಯಿಲೆಗಳ ಲಕ್ಷಣವನ್ನು ತೋರಿಸುತ್ತದೆ. ಸರಿಯಾಗಿ ಕಾಲದಲ್ಲಿ ವ್ಯವಸ್ಥಿತವಾಗಿ ಕಾಳಜಿ ಮಾಡಿಕೊಳ್ಳದಿದ್ದರೆ ವಸಡುಗಳಲ್ಲಿ ಉರಿಯೂತ ಕಂಡುಬರಬಹುದು. ಇದು ಮತ್ತೆ ಮರಳುವಂತಹದ್ದಾಗಿದ್ದು ಸುಲಭ ಮನೆ ಔಷಧಿಗಳ ಮೂಲಕ ಹಾಗು ಬಾಯಿಯ ನೈರ್ಮಲ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವದರಿಂದ ಇದನ್ನು ತಡೆಗಟ್ಟಬಹುದಾಗಿದೆ.

ಕೆಳಗೆ ಹೇಳಲಾದ ಲಕ್ಷಣಗಳಿಂದ ವಸಡಿನ ರಕ್ತಸ್ರಾವವನ್ನು ಗುರುತಿಸಬಹುದು.-

ಹಲ್ಲುಜ್ಜುವ ಸಮಯದಲ್ಲಿ ರಕ್ತಸ್ರಾವ ಉಂಟಾಗುವದು ಅಥವಾ ಉಗುಳುವಾಗ ಜೊಲ್ಲಿನಲ್ಲಿ ರಕ್ತ ಕಾಣುವುದು.

ನಾರಿನಂಶವಿರುವ ಆಹಾರ ಅಥವಾ ಒರಟಾದ ಆಹಾರವನ್ನು ಸೇವಿಸುವಾಗ ವಸಡುಗಳಲ್ಲಿ ರಕ್ತ ಬರುವುದು.

ಇಂತಹ ರಕ್ತಸ್ರಾವವನ್ನು ತಡೆಗಟ್ಟಲು ಅನೇಕ ಮನೆಮದ್ದುಗಳಿವೆ. ಇವುಗಳು ಸುಲಭವಾಗಿ ಕೈಗೆಟಗುವುದಲ್ಲದೆ ಸರಳವಾಗಿ ದೈನಂದಿನ ಜೀವನದಲ್ಲಿ ರೂಡಿಸಿಕೊಳ್ಳಬಹುದು.ಇದರಿಂದ ವಸಡು ಸಂಬಂಧಿ ಖಾಯಿಲೆಗಳು ಗುಣಮುಖವಾಗುವದಲ್ಲದೇ ಮತ್ತೆ ಬರದಂತೆ ನೋಡಿಕೊಳ್ಳಬಹುದು.

ವಸಡು ರಕ್ತಸ್ರಾವಕ್ಕೆ ಮನೆಯ ಮದ್ದುಗಳು -

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ವಸಡಿನ ರಕ್ತಸ್ರಾವಕ್ಕೆ ಪ್ರಮುಖ ಕಾರಣ ಸಿ ಜೀವಸತ್ವದ ಕೊರತೆ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ, ವಿಶೇಷವಾಗಿ ಹಸಿರು ತರಕಾರಿಗಳಾದ ಕೋಸುಗಡ್ಡೆ ಮತ್ತು ಎಲೆಕೋಸುಗಳಲ್ಲಿ ಸಾಕಷ್ಟು ಸಿ ಜೀವಸತ್ವ ಇರುವುದರಿಂದ ಇವುಗಳ ಸೇವನೆಯಿಂದ ವಸಡಿನ ರಕ್ತಸ್ರಾವವನ್ನು ಹೋಗಲಾಡಿಸಬಹುದು.

ಹಾಲು

ಹಾಲು

ಹಾಲಿನಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇದ್ದು, ನಿರಂತರವಾಗಿ ಹಾಲಿನ ಬಳಕೆಯು ನಿಮ್ಮ ವಸಡುಗಳ ಬಲವರ್ಧನೆಗೆ ಸಹಕಾರಿ. ಆದ್ದರಿಂದ ವಸಡುಗಳ ಆರೋಗ್ಯಕ್ಕೆ ಪ್ರತಿದಿನ ಹಾಲು ಬಳಸುವುದು ಮುಖ್ಯ.

ಕಚ್ಚಾ ತರಕಾರಿಗಳು

ಕಚ್ಚಾ ತರಕಾರಿಗಳು

ಹಸಿ ತರಕಾರಿಗಳನ್ನು ಅಗಿಯುವುದರಿಂದ ಹಲ್ಲುಗಳು ಸ್ವಚ್ಚವಾಗುವುದಲ್ಲದೇ, ವಸಡುಗಳಲ್ಲಿ ರಕ್ತ ಪರಿಚಲನೆ ಸುಗಮವಾಗುವುದು. ಆದ್ದರಿಂದ ದಿನವೂ ಹಸಿ ತರಕಾರಿಗಳನ್ನು ಅಗಿಯುವುದು ಒಳ್ಳೆಯದು.

ಕ್ರ್ಯಾನ್ಬೆರಿ ಮತ್ತು ಗೋಧಿ ಹುಲ್ಲಿನ ರಸ :

ಕ್ರ್ಯಾನ್ಬೆರಿ ಮತ್ತು ಗೋಧಿ ಹುಲ್ಲಿನ ರಸ :

ಕ್ರ್ಯಾನ್ಬೆರಿ ಅಥವಾ ಗೋಧಿ ಹುಲ್ಲಿನ ರಸ ಈ ಎರಡರಲ್ಲಿ ಒಂದನ್ನು ಬಳಸಿದರೂ ವಸಡಿನ ರಕ್ತಸ್ರಾವಕ್ಕೆ ಪರಿಹಾರ ನೀಡಬಲ್ಲದು. ಇವೆರಡರಲ್ಲಿರುವ ಅಂಟಿಬ್ಯಾಕ್ಟೀರಿಯಾ ಗುಣವು ವಸಡುಗಳಲ್ಲಿನ ಬ್ಯಾಕ್ಟೀರಿಯಾಗಳನ್ನು ತೊಡೆದುಹಾಕಿ ವಸಡಿನ ರಕ್ತಸ್ರಾವವನ್ನು ನಿವಾರಿಸುವುದು.

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆ ಸೋಡಾವು ಬಾಯಿಯ ವಾತಾವರಣವನ್ನು ಆಮ್ಲೀಯವಾಗಿಸುವ ಮೂಲಕ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಇದನ್ನು ಬೆರಳುಗಳ ಸಹಾಯದಿಂದ ವಸಡುಗಳ ಮೇಲೆ ಲೇಪಿಸಿಕೊಳ್ಳಬಹುದು.

ಲವಂಗ

ಲವಂಗ

ಲವಂಗವನ್ನು ಬಾಯಿಯಲ್ಲಿ ಇಟ್ಟುಕೊಳಾಬಹುದು ಅಥವಾ ನಿಧಾನವಾಗಿ ಅಗಿಯುತ್ತಿರಬಹುದು ಅಥವಾ ಲವಂಗದೆಣ್ಣೆಯನ್ನು ವಸಡುಗಳ ಮೇಲೆ ಉಜ್ಜಿಕೊಳ್ಳಲೂಬಹುದು. ಇದು ದಂತಬಾಧೆಗಳಿಂದ ಮುಕ್ತಿಪಡೆಯಲು ಬಳಸುತ್ತಿದ್ದ ಅತಿ ಪುರಾತನ ಹಾಗೂ ಸರಳ ಮನೆಮದ್ದು.

ಸೇಜ್, ಪುದೀನಾ ಎಣ್ಣೆ

ಸೇಜ್, ಪುದೀನಾ ಎಣ್ಣೆ

ಸೇಜ್, ಪುದೀನಾ ಎಣ್ಣೆಗಳಿಂದ ಹಲ್ಲುಜ್ಜುವುದರಿಂದ ಬಾಯಿ ಸ್ವಚ್ಚವಾಗುವುದಲ್ಲದೇ ಉಸಿರಿಗೆ ತಾಜಾತನ ದೊರೆಯುವುದು. ರಕ್ತಸ್ರಾವವೂ ನಿಯಂತ್ರಣಕ್ಕೆ ಬರುವುದು.

ಚೆಂಡು ಹೂ ಎಲೆ ಮತ್ತು ಕ್ಯಮೊಮೈಲ್ ಟೀ

ಚೆಂಡು ಹೂ ಎಲೆ ಮತ್ತು ಕ್ಯಮೊಮೈಲ್ ಟೀ

ಚೆಂಡು ಹೂ ಮತ್ತು ಕ್ಯಮೊಮೈಲ್ ಎಲೆಗಳಿಂದ ತಯಾರಿಸಲಾದ ಚಹಾ ಸೇವನೆಯಿಂದ ವಸಡುಗಳ ರಕ್ತಸ್ರಾವದಿಂದ ಮುಕ್ತಿ ಪಡೆಯಬಹುದು.

ಲವಣಾಂಶ(ಉಪ್ಪು)

ಲವಣಾಂಶ(ಉಪ್ಪು)

ಹಲ್ಲುಜ್ಜಿದ ನಂತರ, ಸ್ವಲ್ಪ ಉಗುರು ಬೆಚ್ಚನೆಯ ನೀರಿನಲ್ಲಿ ಒಂದು ಚಿಟಿಕೆ ಉಪ್ಪನ್ನು ಹಾಕಿ ಮುಕ್ಕಳಿಸುವುದು ವಸಡಿನ ರಕ್ತಸ್ರಾವಕ್ಕೆ ಉತ್ತಮ ಚಿಕಿತ್ಸೆಯಾಗಬಲ್ಲದು.

ಮಸಾಜ್

ಮಸಾಜ್

ಹಲ್ಲುಜ್ಜಿದ ನಂತರ ನಿಧಾನವಾಗಿ ಬೆರಳುಗಳಿಂದ ವಸಡುಗಳನ್ನು ತಿಕ್ಕುವುದರಿಂದ (ಮಸಾಜ) ವಸಡಿನಲ್ಲಿ ಉತ್ತಮ ರಕ್ತಸಂಚಾರವಾಗುವುದು. ಪರಿಣಾಮ ವಸಡುಗಳು ಗಟ್ಟಿಯಾಗಿ ರಕ್ತಸ್ರಾವವನ್ನು ಉಂಟಾಗದಂತೆ ತಡೆಯುತ್ತದೆ.

ಕೊಬ್ಬಿನಂಶ ಇರುವ ಆಹಾರವನ್ನು ತ್ಯಜಿಸಿ

ಕೊಬ್ಬಿನಂಶ ಇರುವ ಆಹಾರವನ್ನು ತ್ಯಜಿಸಿ

ಹೆಚ್ಚು ಕೊಬ್ಬಿನಂಶ, ಮಸಾಲೆ ಮತ್ತು ಮಾಂಸಾಹಾರದಂತಹ ಭಾರಿ ಬೋಜನಗಳಲ್ಲಿ ಆಹಾರದ ಕಣಗಳು ಹಲ್ಲುಗಳಲ್ಲಿ ಸೇರಿ ದಂತಕುಳಿಗಳನ್ನು ಉಂಟುಮಾಡುತ್ತವೆ. ಇಲ್ಲಿನ ಕೀಟಾಣುಗಳು ಮುಂದೆ ವಸಡಿನ ರಕ್ತಸ್ರಾವಕ್ಕೆ ನಾಂದಿಹಾಡುತ್ತವೆ. ಆದ್ದರಿಂದ ಇಂತಹ ಆಹಾರ ಸೇವಿಸುವಾಗ ಎಚ್ಚರವಿರಲಿ. ಸೇವಿಸಲೇ ಬಾರದು ಎಂದಲ್ಲ, ಆಹಾರ ಸೇವನೆಯ ನಂತರ ಹಲ್ಲುಜ್ಜುವುದು, ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸುವುದು ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು.

ಧೂಮಪಾನ ತ್ಯಜಿಸಿ

ಧೂಮಪಾನ ತ್ಯಜಿಸಿ

ಧೂಮಪಾನದಿಂದ ಬಾಯಿಯಲ್ಲಿ ದುರ್ವಾಸನೆ ಬೀರುವಂತಹ ಕೆಲವು ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಆದ್ದರಿಂದ ನಿಮ್ಮ ಬಾಯನ್ನು ಬ್ಯಾಕ್ಟೀರಿಯಾ ರಹಿತವಾಗಿ, ಸ್ವಸ್ಥವಾಗಿರಿಸಿಕೊಳ್ಳಬೇಕಾದಲ್ಲಿ ಧೂಮಪಾನವನ್ನು ತ್ಯಜಿಸಲೇಬೇಕು.

ನೆನಪಿಡಿ ನಿಮ್ಮ ಬಾಯಿಯ ಆರೋಗ್ಯ, ನೀವು ಅದನ್ನು ಇಟ್ಟುಕೊಳ್ಳುವ ಸ್ವಚ್ಛತೆಯನ್ನು ಅವಲಂಬಿಸಿದೆ.

English summary

Home remedies for bleeding gums

Bleeding of gums can be prevented by easily available home remedies which are easy to follow and show improved dental conditions within weeks.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more