For Quick Alerts
ALLOW NOTIFICATIONS  
For Daily Alerts

60 ಸೆ. ಸಾಕು ಈ ಅಭ್ಯಾಸಗಳನ್ನು ಕಲಿಯಲು!

By Super
|

ನೀವು ಉತ್ತಮ ಅರೋಗ್ಯ ಹೊಂದಲು ಸ್ವಲ್ಪವಾದರೂ ಸಮಯ ಬೇಕಲ್ಲವೇ? ಹಾಗಿದ್ದಲ್ಲಿ ಅಂಥಹ ಒಳ್ಳೆಯ ಆರೋಗ್ಯವನ್ನು ಹೊಂದಲು ಬೇಕಾಗಿರುವ ಆರೋಗ್ಯವಂತ ಅಭ್ಯಾಸಗಳನ್ನು ನೀವು ಕೇವಲ 60 ಸೆಕಂಡುಗಳಲ್ಲಿ ಪಡೆಯಬಹುದು.

ನಿಮ್ಮ ಸೀಟ್‍ಬೆಲ್ಟ್ ಹಾಕಿಕೊಳ್ಳುವುದರಿಂದ ಹಿಡಿದು ನಿಮ್ಮ ಕೈಗಳನ್ನು ತೊಳೆಯುವವರೆಗೆ ಆಗುವ ಸಮಯಕ್ಕಿಂತಾ ಇನ್ನೂ ಕಡಿಮೆ ಸಮಯದಲ್ಲಿ ನೀವು ಹೇಗೆ ಆರೋಗ್ಯವಂತಿರುವುದಕ್ಕೆ ಸಾಧ್ಯ ಎಂದು ನೀವು ಯೋಚಿಸುತ್ತಿರಬಹುದು. ನೀವು ಪ್ರತಿದಿವಸ ಮಾಡುವ ಸಕಾರಾತ್ಮಕ ಮತ್ತು ನಕಾರಾತ್ಮಕ ನಿರ್ಧಾರಗಳು ನಿಮ್ಮ ಆರೋಗ್ಯದಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಅತ್ಯುತ್ತಮ ಆರೋಗ್ಯಪಡೆಯಲು ಇಲ್ಲಿದೆ ನೋಡಿ ಎಂಟು ಅಗತ್ಯ ಸೂಚನೆಗಳು.

1. ನಿಮ್ಮ ಪಾದರಕ್ಷೆಗಳನ್ನು ಬಾಗಿಲ ಹೊರಗೆ ಬಿಡಿ

1. ನಿಮ್ಮ ಪಾದರಕ್ಷೆಗಳನ್ನು ಬಾಗಿಲ ಹೊರಗೆ ಬಿಡಿ

ಮನೆ ಬಾಗಿಲ ಹೊರಗೆ ನೀವು ನಿಮ್ಮ ಪಾದರಕ್ಷೆಗಳನ್ನು ಕಳಚಿಡುವುದರಿಂದ ಪಾದರಕ್ಷೆಗಳಿಗೆ ಅಂಟುಕೊಂಡಿರಬಹುದಾದ ಧೂಳು, ಕಲ್ಲು ಮತ್ತು ಮಣ್ಣು, ಕಾಣದಂತಿರುವ ರಾಸಾಯನಿಕಗಳು ಮತ್ತು ಸಂಭವನೀಯ ಅಲರ್ಜಿಕಾರಕಗಳು ಮನೆಯ ಒಳಗೆ ಬರುವುದನ್ನು ತಡೆಯಬಹುದು. ಈ ಕ್ರಮವು ಹಿಂದಿನಿಂದ ಬಂದಿರುವ ಹಳೆಯ ಸಂಪ್ರದಾಯವನ್ನು ಪಾಲಿಸುವುದರ ಜೊತೆಗೆ, ಹೊರಾಂಗಣ ಮಾಲಿನ್ಯದಿಂದ ದೂರಪಡಿಸಿ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ಒಂದು ವಾಸ್ತವಿಕ ಅಭ್ಯಾಸವೂ ಆಗುತ್ತದೆ.

2. ನಿಮ್ಮ ತೋಳುಗಳೊಳಗೆ ಸೀನು ಮಾಡಿ

2. ನಿಮ್ಮ ತೋಳುಗಳೊಳಗೆ ಸೀನು ಮಾಡಿ

ನಿಮ್ಮ ಬಳಿ ಕರ್ಚೀಫ್ ಅಥವಾ ನ್ಯಾಪ್ಕಿನ್ ಇಲ್ಲದಿದ್ದಲ್ಲಿ ಸೀನು ಬಂದಾಗ ನಿಮ್ಮ ಮುಖ ಮತ್ತು ಮೂಗನ್ನು ತೋಳಿನಿಂದ ಮುಚ್ಚಿಕೊಂಡು ಕೆಮ್ಮು ಅಥವಾ ಸೀನು ಮಾಡಿರಿ. ಹೀಗೆ ಮಾಡಿದಾಗ ನಿಮ್ಮ ಕೈಗಳಿಗೆ ಹರಡಬಹುದಾದ ಸೂಕ್ಷ್ಮ ಕ್ರಿಮಿಗಳನ್ನು ತಡೆಯಬಹುದು. ಹಾಗೆಮಾಡಿದಾಗ ಮೂಗಿನಿಂದ ಸುರಿಯಬಹುದಾದ ಸಣ್ಣ ಹನಿಗಳು ಗಾಳಿಯಲ್ಲಿ ಹರಡುವುದನ್ನು ಮತ್ತು ಸಾಧಾರಣವಾಗಿ ಎಲ್ಲರೂ ಕೈ ಇಡುವ ಇತರ ಭಾಗಗಳ ಮೇಲೆ ಬಿದ್ದು ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಯಬಹುದು.

3. ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ

3. ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ

ಅನೇಕ ಆಫೀಸ್ ಹೋಗುವವರು ಮತ್ತು ವಿದ್ಯಾರ್ಥಿಗಳು ಹಲವಾರು ಗಂಟೆಗಳಕಾಲ ಕಂಪ್ಯೂಟರ್ ಮುಂದೆ ಕುಳಿತಿರುವ ಸಾಧ್ಯತೆಗಳಿವೆ. ಹಾಗೆ ಕೆಲಸ ಮಾಡುವಾಗ ಕಂಪ್ಯೂಟರ್ ಸ್ಕ್ರೀನನ್ನು ದಿಟ್ಟಿಸಿನೋಡುತ್ತಿರುತ್ತಾರೆ ಮತ್ತು ಬೆನ್ನನ್ನು ಕುಗ್ಗಿಸಿ ಕುಳಿತುಕೊಂಡು ಸಾಧಾರಣವಾಗಿ ಮಂದಬೆಳಕಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇಂತಹವರ ಕಣ್ಣಿನ ಮೇಲೆ ಬಹಳಷ್ಟು ಕೆಟ್ಟ ಪರಿಣಾಮವಾಗುತ್ತದೆ ಹಾಗೂ ತಲೆನೋವು ಬರುವುದೂ ಸಹ ಸಹಜವಾಗಿರುತ್ತದೆ. ನಿಮ್ಮ ಕಣ್ಣುಗಳಿಗೆ ರಕ್ಷಣೆ ಬೇಕಾಗಿದ್ದಲ್ಲಿ ನಿರಂತರವಾಗಿ ಕಂಪ್ಯೂಟರ್ ಸ್ಕ್ರೀನನ್ನು ನೋಡುವುದನ್ನು ತಪ್ಪಿಸಿ ಅಗಾಗ್ಗೆ ವಿಶ್ರಾಂತಿ ಕೊಡಿ. ಕಣ್ಣಿನ ಪರಿಣಿತರು "20-20-20 ನಿಯಮ" ಪಾಲಿಸಬೇಕೆಂದು ಶಿಫಾರಸು ಮಾಡಿದ್ದಾರೆ. ಪ್ರತಿ 20 ನಿಮಿಷಗಳ ಕಂಪ್ಯೂಟರ್ ಕೆಲಸದ ನಂತರ 20 ಅಡಿ ದೂರವಿರುವ ವಸ್ತುವಿನಮೇಲೆ 20 ಸೆಕಂಡುಗಳು ಕಾಲ ನಿಮ್ಮ ಗಮನ ಹರಿಸಿ. ಹೀಗೆ ನಿಮ್ಮ ಕಣ್ಣುಗಳಿಗೆ ಸ್ವಲ್ಪ ಸಮಯ ವಿರಾಮ ಕೊಡುತ್ತಿದ್ದರೆ ಬೇರೆ ವಿಚಾರಗಳಿಗೆ ಗಮನಕೊಡಲು ಸಾಧ್ಯವಾಗುತ್ತದೆ. ಹಾಗೆಯೇ, ಕುರ್ಚಿಯಿಂದ ಎದ್ದು ನಿಂತು ನಿಮ್ಮ ಕೈಗಳನ್ನು ಮೇಲಕ್ಕೆ ಎತ್ತಿಹಿಡಿದುಕೊಳ್ಳಿ ಮತ್ತು ಹಾಗೆಯೇ ನಿಮ್ಮ ದೇಹದ ರಕ್ತಸಂಚಲನೆಗೆ ಉತ್ತೇಜನಕೊಡಲು ಸ್ವಲ್ಪ ದೂರ ಹೆಜ್ಜೆಯಿಡಿ.

4.ದಿನಾ ಸನ್ ಸ್ಕ್ರೀನ್ ಬಳಸಿ

4.ದಿನಾ ಸನ್ ಸ್ಕ್ರೀನ್ ಬಳಸಿ

ನಿಯಮಿತವಾಗಿ ಸನ್‍ಸ್ಕ್ರೀನನ್ನು ಹಚ್ಚಿಕೊಂಡರೆ ಚರ್ಮವನ್ನು ಕಂದು ಬಣ್ಣದಿಂದ ರಕ್ಷಿಸುವುದೊಂದೇ ಅಲ್ಲದೆ ವಯಸ್ಸಾದಂತೆ ಕಾಣುವ ಚಿಹ್ನೆಗಳು ಮತ್ತು ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಮಳೆ ಅಥವ ಬಿಸಿಲು ಯಾವುದೇಇದ್ದರೂ ಸಹ ಸನ್‍ಸ್ಕ್ರೀನ್ ಹಚ್ಚುವುದನ್ನು ದಿನಚರಿಯ ಒಂದು ಭಾಗವನ್ನಾಗಿ ಮಾಡಿ.

5. ಚೆನ್ನಾಗಿ ನೀರು ಕುಡಿಯಿರಿ

5. ಚೆನ್ನಾಗಿ ನೀರು ಕುಡಿಯಿರಿ

ಒಂದು ದಿನದಲ್ಲಿ ಎಂಟು ಲೋಟ ನೀರು ಕುಡಿಯುವುದು ಬಹಳ ಅತ್ಯಗತ್ಯ. ಎಷ್ಟು ಲೋಟವೆಂಬುದನ್ನು ಎಣಿಸದೇ ಚೆನ್ನಾಗಿ ನೀರು ಕುಡಿಯಿರಿ. ನಿಮ್ಮ ದೇಹದಲ್ಲಿ ಶೇಕಡ 60ರಷ್ಟು ನೀರಿನಿಂದ ಕೂಡಿದೆ. ಈ ದ್ರವಗಳು ದೇಹದ ಜೀರ್ಣಕ್ರಿಯೆ, ಹೀರಿಕೊಳ್ಳುವಿಕೆ, ನೀರಿನ ಪರಿಚಲನೆ, ಲಾಲಾರಸ ಉತ್ಪಾದನೆ, ದೇಹದೊಳಗೆ ಪೌಷ್ಟಿಕಾಂಶಗಳ ಸಾಗಾಣಿಕೆ ಮತ್ತು ದೇಹದ ತಾಪಮಾನದ ನಿರ್ವಹಣೆಗೆ ಸಹಾಯಮಾಡುತ್ತದೆ. ಸಾಕಷ್ಟು ನೀರಿನಿಂದ ನಿಮ್ಮ ಜಠರ-ಕರುಳು ವ್ಯೂಹದಲ್ಲಿನ ಉದ್ದಕ್ಕೂ ಹರಿಯುವ ವಸ್ತುಗಳಿಗೆ ಸಹಾಯಮಾಡುತ್ತದೆ. ಹೀಗೆ ಮಾಡುವುದರಿಂದ ಮಲಬದ್ಧತೆಯನ್ನು ತಡೆಯುತ್ತದೆ. ನಿಮ್ಮ ದೇಹದೊಳಕ್ಕೆ ಸಾಕಷ್ಟು ದ್ರವಗಳಿಲ್ಲದಿದ್ದರೆ ಕರುಳಿನೊಳಗೆ ಮಲಸಂಚಯನವನ್ನು ನಿಯಂತ್ರಿಸುವದಕ್ಕೆ ಇರುವ ನೀರನ್ನು ಎಳೆದುಕೊಳ್ಳುವುದರಿಂದ ಮಲಬದ್ಧತೆಯುಂಟಾಗುತ್ತದೆ.

6. ಅಡಿಗೆಮನೆಯಲ್ಲಿ ಉಪಯೋಗಿಸುವ ಸ್ಪಾಂಜನ್ನು ಒಣಗಿಸಿ

6. ಅಡಿಗೆಮನೆಯಲ್ಲಿ ಉಪಯೋಗಿಸುವ ಸ್ಪಾಂಜನ್ನು ಒಣಗಿಸಿ

ಟಾಯ್ಲೆಟ್ ಸೀಟಿನಮೇಲೆ ಹೆಚ್ಚಿನ ಸೂಕ್ಷ್ಮಾಣುಗಳು ತುಂಬಿರುತ್ತದೆ. ಆದರೆ ಕೆಲವು ಅಧ್ಯಯನಗಳ ಪ್ರಕಾರ ಅಡಿಗೆಮನೆಯಲ್ಲಿ ಉಪಯೋಗಿಸುವ ಸ್ಪಾಂಜಿನಲ್ಲಿ ಇನ್ನೂ ಎಲ್ಲಕ್ಕಿಂತ ಹೆಚ್ಚು ಸೂಕ್ಷ್ಮಾಣುಗಳಿರುತ್ತವೆ. ಅಡಿಗೆಮನೆಯಲ್ಲಿ ಸ್ಪಾಂಜನ್ನು ಚೆಲ್ಲಿರುವ ದಾಲ್, ಸಾಂಬಾರ್, ಇತ್ಯಾದಿ ವಸ್ತುಗಳನ್ನು ಸ್ವಚ್ಛಗೊಳಿಸಲು ಹೆಚ್ಚಾಗಿ ಬಳಸುತ್ತೇವೆ. ಸ್ಪಾಂಜಿನಲ್ಲಿ ತೇವಾಂಶ ಮತ್ತು ಸಣ್ಣ ಸಣ್ಣ ರಂಧ್ರಗಳಿರುವುದರಿಂದ ಆಹಾರಮೂಲದ ಬ್ಯಾಕ್ಟೀರಿಯ ಮತ್ತು ಫಂಗಸ್ ಬೆಳೆದು ಹರಡುವುದಕ್ಕೆ ಒಂದು ಬ್ರೀಡಿಂಗ್ ಜಾಗವಾಗಿರುತ್ತದೆ. ಆದ್ದರಿಂದ ಸೂಕ್ಷ್ಮಜೀವಿಗಳನ್ನು ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳನ್ನು ತಡೆಯಲು ಅದನ್ನು ಚೆನ್ನಾಗಿ ಒದ್ದೆಮಾಡಿ ಪ್ರತಿ ಸಂಜೆ 45 ಸೆಕಂಡುಗಳಕಾಲ ಮೈಕ್ರೋವೇವ್ ಮಾಡಿ.

7. ನಿಮಗೆ ಕೋಪಬಂದಾಗ ಒಂದರಿಂದ 20 ರ ವರೆಗೆ ಎಣಿಸಿರಿ

7. ನಿಮಗೆ ಕೋಪಬಂದಾಗ ಒಂದರಿಂದ 20 ರ ವರೆಗೆ ಎಣಿಸಿರಿ

ನಿಮಗೆ ಕುದಿಯುತ್ತಿರುವ ಕೋಪಬಂದಾಗ ಒಂದರಿಂದ 20 ರ ವರೆಗೆ ಪ್ರತಿ ಸಂಖ್ಯೆಯ ನಡುವೆ ಒಂದು ನಿಧಾನವಾದ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ ಎಣಿಸಿರಿ. ಈ ಸರಳ ತಂತ್ರ ನಿಮ್ಮ ಉದ್ವೇಗವನ್ನು ಕಡಿಮೆ ಮಾಡುವುದಲ್ಲದೆ ನಿಮ್ಮ ನರಗಳಿಗೆ ಅಗತ್ಯವಿರುವ ಸಾಂತ್ವನ ನೀಡುತ್ತದೆ. ನಿಧಾನದ ಮತ್ತು ಆಳದ ಉಸಿರಾಟವು ತಕ್ಷಣದ ಪ್ರತಿಕ್ರಿಯೆಯಿಂದ ಹೆಚ್ಚು ಶಾಂತ ಭಾವನೆಯ ಕಡೆಗೆ ಹೋಗಲು ಸಹಾಯಮಾಡುತ್ತದೆ.

8. ನಿಮ್ಮ ನಾಲಿಗೆಯನ್ನು ಚೆನ್ನಾಗಿ ಬ್ರಷ್‍ಮಾಡಿ

8. ನಿಮ್ಮ ನಾಲಿಗೆಯನ್ನು ಚೆನ್ನಾಗಿ ಬ್ರಷ್‍ಮಾಡಿ

ದಂತಕ್ಷಯ ಮತ್ತು ಒಸಡಿನ ರೋಗವನ್ನು ತಡೆಯುವುದೇ ದೈನಂದಿನ ಹಲ್ಲುಜ್ಜುವುದರ ಸಾರಾಂಶ. ಹಾಗೆಯೇ ನಾಲಿಗೆಯನ್ನೂ ಸಹ ಸ್ವಚ್ಛಗೊಳಿಸುವುದು ಬಾಯಿಯನ್ನು ಸ್ವಚ್ಛವಾಗಿರಿಸಿಕೊಳ್ಳುವದರ ಒಂದು ಮುಖ್ಯ ಹೆಜ್ಜೆ. ಪರಿದಂತದ (Periodontal) ಕಾಯಿಲೆಯು ಸಂಶೋಧನೆಗಳ ಪ್ರಕಾರ ಬಾಯಿಯ ಆರೋಗ್ಯಕ್ಕೆ ಒಂದು ಅಪಾಯಮಾತ್ರವಲ್ಲದೆ ಕೇವಲ ಬಾಯಿಯಲ್ಲದೆ ದೇಹದೊಳದಲ್ಲೂ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

English summary

Healthy habits you can acquire in 60 secs

If you think good health takes time to build, follow healthy habits that you can acquire in less than 60 seconds.
Story first published: Monday, October 7, 2013, 16:55 [IST]
X
Desktop Bottom Promotion