For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ ಬೆಸ್ಟ್ ಮನೆಮದ್ದು ಅರಿಶಿಣ

|

ವಿಶ್ವದಲ್ಲಿಯೇ ಮಧುಮೇಹಿಗಳು ಅಧಿಕವಿರುವ ರಾಷ್ಟ್ರವೆಂದರೆ ಭಾರತ. ಭಾರತೀಯರಿಗೆ ಅನೇಕ ಬಗೆಯ ಮನೆದ್ದುಗಳು ಗೊತ್ತಿದೆ. ಆದರೂ ನಮ್ಮಲ್ಲಿ ಈ ಸಮಸ್ಯೆ ಹೆಚ್ಚಾಗಲು ಕಾರಣ, ನಮಗೆ ನಮ್ಮ ಆರೋಗ್ಯದ ಬಗ್ಗೆ ಇರುವ ಅಸಡ್ಡೆ ಮನೋಭಾವವೆಂದರೆ ತಪ್ಪಾಗಲಾರದು. ನಾವೆಲ್ಲಾ ಕಾಯಿಲೆ ಬರುವ ತನಕ ತಲೆಕೆಡಿಸುವುದಿಲ್ಲ. ಬಂದ ಮೇಲೆ ಕಷ್ಟ ಪಡುತ್ತೇವೆ. ಕೆಲವೊಂದು ಕಾಯಿಲೆಗಳು ಬಂದರೆ ಜೀವನ ಪೂರ್ತಿ ನಮ್ಮ ಜೊತೆ ಇರುತ್ತದೆ, ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ, ಆದರೆ ನಿಯಂತ್ರಣದಲ್ಲಿಡಬಹುದು. ಅಂತಹ ಕಾಯಿಲೆಗಳಲ್ಲೊಂದು ಮಧುಮೇಹ.

ಮಧುಮೇಹವನ್ನು ನಿಯಂತ್ರಣದಲ್ಲಿಟ್ಟರೆ ಇತರರಂತೆ ಸಹಜವಾದ ಬದುಕನ್ನು ನಡೆಸಬಹುದು. ಕೆಲವೊಂದು ಮನೆಮದ್ದುಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಸರಿಯಾದ ರೀತಿ ಇಡುವಲ್ಲಿ ಸಹಾಯ ಮಾಡುತ್ತದೆ. ಅವುಗಳಲ್ಲಿ ಪ್ರಮುಖವಾದವು ಬೆಂಡೆಕಾಯಿ, ಅರಿಶಿಣ. ಇಲ್ಲಿ ನಾವು ಅರಿಶಿಣ ಮಧುಮೇಹಿಗಳ ದೇಹದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂದು ವಿವರಿಸಿದ್ದೇವೆ ನೋಡಿ:

Have Turmeric To Treat Diabetes

ಇನ್ಸುಲಿನ್ ಅನ್ನು ಸಮತೋಲನದಲ್ಲಿಡುತ್ತದೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿಣ ಹಾಕಿದ ಹಾಲನ್ನು ಕುಡಿದರೆ ಇನ್ಸುಲಿನ್ ನ ಮಟ್ಟವನ್ನು ಸಮತೋಲನದಲ್ಲಿಡಬಹುದು. ದೇಹದಲ್ಲಿ ಸಕ್ಕರೆಯಂಶವನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾದ ಮದ್ದು ಇದಾಗಿದೆ.

ಕೊಬ್ಬನ್ನು ಕರಗಿಸುತ್ತದೆ

ಮಧುಮೇಹಿಗಳಲ್ಲಿ ಕಂಡು ಬರುವ ಮತ್ತೊಂದು ಸಮಸ್ಯೆಯೆಂದರೆ ಬೊಜ್ಜು. ಬೊಜ್ಜು ಹೆಚ್ಚಾದಂತೆ ಕಾಯಿಲೆಯೂ ಹೆಚ್ಚಾಗುವುದು. ಇದು ಕೊಬ್ಬನ್ನು ಕರಗಿಸುವಲ್ಲಿ ಸಹಕಾರಿಯಾಗಿದೆ.

ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ

Pathogens ಅನ್ನುವ ವೈರಸ್ ನಿಂದ ಟೈಪ್ 1 ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಅರಿಶಿಣದಲ್ಲಿರುವ ಆಂಟಿಬಯೋಟಿಕ್ ಅಂಶ ಈ ವೈಸರ್ ಅನ್ನು ನಾಶ ಪಡಿಸುತ್ತದೆ.

ಒಟ್ಟು ಮೊತ್ತದ ಆರೋಗ್ಯಕ್ಕೆ

ಇದರಲ್ಲಿರುವ ಆಂಟಿ ಗ್ಲೈಸೆಮಿಕ್ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿ, ರೋಗಾಣುಗಳು ಬರದಂತೆ ತಡೆಯುತ್ತದೆ.

English summary

Have Turmeric To Treat Diabetes

Turmeric is also good for diabetics as it balances blood sugar and triglyceride levels which helps in preventing as well as controlling diabetes.
Story first published: Thursday, October 31, 2013, 13:56 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more