For Quick Alerts
ALLOW NOTIFICATIONS  
For Daily Alerts

ಫ್ಲೈಟ್ ಆ್ಯಂಕ್ಸೈಟಿಯಿಂದ ಹೀಗೆ ಮುಕ್ತರಾಗಿ

|

ಸೂರ್ಯ ಚುಂಬನದ ಸಮುದ್ರತೀರಗಳು ಅಥವ ದಟ್ಟ ಹಸಿರಿನ ತಾಣಗಳ ಬಗ್ಗೆ ಕೇಳಿದಾಗ ರೋಮಾಂಚನವಾಗುತ್ತದೆ. ಆದರೆ ಅಲ್ಲಿಗೆ ಹೋಗಲು ವಿಮಾನವೇರುವುದು ಎಲ್ಲರಿಗೂ ಖುಷಿಯವಿಷಯವಾಗಿರುವುದಿಲ್ಲ. ಫ್ಲೈಟ್ ಆ್ಯಂಕ್ಸೈಟಿಯನ್ನು ಕಡಿಮೆ ಮಾಡಿಕೊಳ್ಳಲು ಹಲವು ದಾರಿಗಳಿವೆ. ಹುಫ್ಫಿಂಗ್ಟೊನ್ಪೊಸ್ಟ್.ಕಾಮ್ ನ ಪ್ರಕಾರ ನೀವು ಈ ಸಮಸ್ಯೆಯಿಂದ ಹೊರಬರಬೇಕಾದಲ್ಲಿ ನಿಮ್ಮ ಭಯವನ್ನು ಮೊದಲು ಎದುರಿಸಿ. ಮೊದಲಿಗೆ ನಿಮ್ಮ ಭಯದ ಕಾರಣಗಳನ್ನು ಹುಡುಕಿಕೊಳ್ಳಿ. ಪ್ರತಿಯೊಬ್ಬರ ಭಯದ ಕಾರಣಗಳು ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ ಒಬ್ಬರಿಗೆ ವಿಮಾನ ಟೀಕ್ ಆಫ್ ತೆಗೆದುಕೊಳ್ಳುವ ಸಮಯದಲ್ಲಿ ಉಂಟಾಗುವ ಕುಲುಕಾಟ ಮತ್ತು ಸದ್ದು ಭಯಕ್ಕೆ ಕಾರಣವಾಗಿರಬಹುದು. ಆದ್ದರಿಂದ ವಿಮಾನ ಹಾರಾಟಕ್ಕೆ ಮುನ್ನ ಮತ್ತು ನಂತರ ಯಾವ ರೀತಿಯ ಸದ್ದು ಮಾಡುತ್ತದೆ ಎಂದು ತಿಳಿದುಕೊಂಡಿರುವುದು ಒಳ್ಳೆಯದು. ನಿಮಗೆ ಇವುಗಳ ಅರಿವಿದ್ದರೆ 'ಒಂದು ವೇಳೆ ಹೀಗಾಗಿಬಿಟ್ಟರೆ' ಎಂಬ ಯೋಚನೆಗಳು ತಪ್ಪುತ್ತವೆ.

ಇನ್ನೊಂದು ಈ ಆತಂಕವನ್ನು ಗೆಲ್ಲಲು ಇರುವ ಸರಳ ಉಪಾಯವೆಂದರೆ ನೀವು ಹೋಗಲಿರುವ ಜಾಗದ ಫೋಟೋ ನಿಮ್ಮೊಂದಿಗೆ ಕೊಂಡೊಯ್ಯುವುದು. ನಿಮ್ಮ ರಜೆಯನ್ನು ಅಲ್ಲಿ ಹೇಗೆ ಕಳೆಯಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದು ಒತ್ತಡ ನಿವಾರಿಸಿಕೊಳ್ಳಲು ನೆರವು ನೀಡುತ್ತದೆ. ವಿಮಾನದಲ್ಲಿದ್ದಾಗ ಕಾಫಿ ಮತ್ತು ಆಲ್ಕೊಹಾಲ್ ಸೇವನೆಯಿಂದ ದೂರವಿರಿ. ನೀರು ಮತ್ತು ಮಿತ ಆಹಾರ ಒಳ್ಳೆಯದು ಅಥವ ಕ್ಯಾರೆಟ್ , ಸೇಬು ಅಥವ ಕಾಳುಗಳನ್ನು ಕೊಂಡೊಯ್ಯಿರಿ.

ಫ್ಲೈಟ್ ಆ್ಯಂಕ್ಸೈಟಿಯಿಂದ ಪಾರಾಗಲು ಕೆಲ ಸಲಹೆಗಳು:

ದೀರ್ಘವಾದ ಉಸಿರಾಟ

ದೀರ್ಘವಾದ ಉಸಿರಾಟ

ವಿಮಾನ ಹಾರಾಟದ ಭಯವನ್ನು ಎದುರಿಸುವ ಪರಿಣಾಮಕಾರಿ ವಿಧಾನವೆಂದರೆ ಉಸಿರಾಟ. ನಿಧಾನವಾಗಿ ಉಸಿರನ್ನು ಒಳತೆಗೆದುಕೊಳ್ಳಿ ಮತ್ತು ಹೊರಬಿಡಿ. ಇದು ನಿಮಗೆ ವಿಶ್ರಾಂತಿ ನೀಡುತ್ತದೆ ಮತ್ತು ಪ್ರಯಾಣಕ್ಕೆ ಸಜ್ಜುಗೊಳಿಸುತ್ತದೆ. ಮನಸ್ಸನ್ನು ಕೂಡ ಪ್ರಶಾಂತಗೊಳಿಸುತ್ತದೆ.

ಯೋಗ

ಯೋಗ

ವಿಮಾನದೊಳಗೆ ಹೋಗುವ ಮುನ್ನ ಯೋಗ ಮಾಡಿದರೆ ನಿಮ್ಮ ದೇಹ ಮತ್ತು ಮನಸ್ಸು ಎರಡೂ ಪ್ರಶಾಂತವಾಗಿರುತ್ತದೆಯಂತೆ.

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯಿರಿ

ನಿಮಗೆ ಹಾರಾಟದ ಭಯವಿದ್ದರೆ ಹೆಚ್ಚು ನೀರನ್ನು ಕುಡಿಯಿರಿ. ಇದರಿಂದ ದೇಹದಲ್ಲಿ ನಿರ್ಜಲೀಕರಣವಾಗುವುದಿಲ್ಲ ಮತ್ತು ಫ್ಲೈಟ್ ಆ್ಯಂಕ್ಸೈಟಿ ತಪ್ಪುತ್ತದೆ.

ಮಿತವಾಗಿ ತಿನ್ನಿ

ಮಿತವಾಗಿ ತಿನ್ನಿ

ನಿಮಗೆ ಹಾರಾಟದ ಭಯವಿದ್ದಾಗ ಮಿತವಾಗಿ ತಿನ್ನುವುದು ಒಳ್ಳೆಯದು. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ವಾಂತಿಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.

ಸ್ನೇಹಿತರೊಂದಿಗೆ ಪಯಣಿಸಿ

ಸ್ನೇಹಿತರೊಂದಿಗೆ ಪಯಣಿಸಿ

ಪರಿಣತರು ಹೇಳುವ ಪ್ರಕಾರ ನಿಮಗೆ ಹಾರಾಟದ ಭಯವಿದ್ದಾಗ ವಿಮಾನದಲ್ಲಿ ಓಡಾಡಿ ಅಭ್ಯಾಸವಿರುವವರೊಂದಿಗೆ ಪ್ರಯಾಣ ಮಾಡುವುದು ಉತ್ತಮ. ಇದು ನಿಮಗೆ ಆತ್ಮವಿಶ್ವಾಸ ತಂದು ಕೊಡುತ್ತದೆ ಮತ್ತು ನಿರ್ಭೀತರಾಗಿ ಪಯಣಿಸಬಹುದು.

ಹರ್ಬಲ್ ಟೀ

ಹರ್ಬಲ್ ಟೀ

ಸದಾ ಪ್ರಶಾಂತವಾಗಿರಲು ಹರ್ಬಲ್ ಟೀ ಬಳಸಿ. ಇದರಲ್ಲಿನ ಆ್ಯಂಟಿಆ್ಯಕ್ಸಿಡೆಂಟ್ಗಳು ನಿಮ್ಮನ್ನು ಪ್ರಶಾಂತವಾಗಿರಿಸುತ್ತದೆ ಮತ್ತು ಹೊಟ್ಟೆ ಕೂಡ ನಿರಾಳವಾಗಿರುತ್ತದೆ.

ಸಕಾರಾತ್ಮಕವಾಗಿರಿ

ಸಕಾರಾತ್ಮಕವಾಗಿರಿ

ಸಕಾರಾತ್ಮಕ ಮನೋಭಾವ ಬಹಳ ಮುಖ್ಯ ಇದು ನಿಮ್ಮ ಹಾರಾಟದ ಭಯವನ್ನು ಎದುರಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸಹಪ್ರಯಾಣಿಕರೊಂದಿಗೆ ಮಾತಾಡಿ ಹಗುರಾಗಿ.

ಸಂಗೀತ

ಸಂಗೀತ

ಸಂಗೀತ ಕೂಡ ನಿಮ್ಮ ಮನಸ್ಸಿನ ಪ್ರಶಾಂತತೆಯನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತದೆ. ನಿಮ್ಮ ಮನಸ್ಸಿನ ಆತಂಕವನ್ನು ಕಡಿಮೆಗೊಳಿಸುತ್ತದೆ.

ಗಮನವನ್ನು ಬೇರೆಡೆಗೆ ಬದಲಿಸಿ

ಗಮನವನ್ನು ಬೇರೆಡೆಗೆ ಬದಲಿಸಿ

ನಿಮ್ಮ ಮನಸ್ಸಿನ ಗಮನವನ್ನು ಬೇರೆ ವಿಷಯಗಳತ್ತ ಹರಿಯಬಿಡುವುದರಿಂದ ನಿಮ್ಮ ಆತಂಕವನ್ನು ಗೆಲ್ಲಬಹುದು. ನಿಮ್ಮ ಗಮನವನ್ನು ಹಾಗೆ ಸೆಳೆಯುವಂತಹ ಬೇಕಾದಷ್ಟು ವಿಷಯಗಳಿರುತ್ತವೆ. ಹುಡುಕಿಕೊಳ್ಳಿ.

ಗೆಳೆಯರೊಂದಿಗೆ ಆಟವಾಡಿ

ಗೆಳೆಯರೊಂದಿಗೆ ಆಟವಾಡಿ

ಸುಡುಕೊ, ಹಾವು ಏಣಿ ಆಟ, ಚೆಸ್, ಚೌಕಾಭಾರ ಇತ್ಯಾದಿ ಆಟಗಳು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಆತಂಕ ಕೂಡ ಕಡಿಮೆಯಾಗುತ್ತದೆ.

ಓದು

ಓದು

ಓದುವುದು ಆತಂಕದಿಂದ ಹೊರಬರಲು ಇರುವ ಮತ್ತೊಂದು ಪರಿಣಾಮಕಾರಿ ವಿಧಾನ. ನೀವು ಹೆಚ್ಚು ಓದಿದಷ್ಟು ನಿಮ್ಮ ಮನಸ್ಸು ಭಯದಿಂದ ಹೆಚ್ಚು ಮುಕ್ತವಾಗುತ್ತದೆ.

ಮೂವಿ ಟೈಂ

ಮೂವಿ ಟೈಂ

ವಿಮಾನವು ನಿಮ್ಮ ಪ್ರಯಾಣಕ್ಕೆ ಹಲವನ್ನು ಒದಗಿಸುತ್ತದೆ. ನಿಮ್ಮ ಪ್ರಯಾಣವನ್ನು ಒಂದೊಳ್ಳೆ ಸಿನೆಮಾದೊಂದಿಗೆ ಕಳೆಯಿರಿ.

ಧ್ಯಾನ

ಧ್ಯಾನ

ವಿಮಾನದಲ್ಲಿ ಧ್ಯಾನ ಮಾಡುವುದು ಆತಂಕ ಕಳೆದುಕೊಳ್ಳಲು ಒಂದು ಉತ್ತಮ ಮಾರ್ಗ. ಧ್ಯಾನ ಅಥವ ಪ್ರಾರ್ಥನೆ ನಿಮ್ಮ ಆತಂಕಗೊಂಡ ಮನಸ್ಸಿಗೆ ಸಮಾಧಾನ ನೀಡುತ್ತದೆ.

ಸಂತೋಷದ ಸಂಗತಿಗಳನ್ನು ಯೋಚಿಸಿ

ಸಂತೋಷದ ಸಂಗತಿಗಳನ್ನು ಯೋಚಿಸಿ

ನಿಮ್ಮ ವಿಮಾನದ ಪ್ರಯಾಣವನ್ನು ಸಂತೋಷವಾಗಿರಿಸಿಕೊಳ್ಳುವ ಒಂದು ದಾರಿಯೆಂದರೆ ಸಂತೋಷವಾಗುವಂತಹ ವಿಷಯಗಳನ್ನು ಯೋಚಿಸುವುದು. ಇದು ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.

ಸೆಡಟೀವ್ಸ್

ಸೆಡಟೀವ್ಸ್

ಇದು ನಿಮ್ಮ ಕಟ್ಟಕಡೆಯ ಆಯ್ಕೆಯಾಗಿರಲಿ. ಕಡಲೆಕಾಯಿ ಮತ್ತು ಹಾಲಿನ ಉತ್ಪನ್ನಗಳು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ.

English summary

Get Rid Of Flight Anxiety The Healthy Way

Relaxing on sun-kissed beaches or at lush green destinations may sound exciting, but taking a flight to get there may not be so thrilling. You need not fret as there are ways to get over flight anxiety. According to Huffingtonpost.com, all you need to do to get over your flight anxiety is to figure out your fear.
Story first published: Wednesday, December 4, 2013, 9:25 [IST]
X
Desktop Bottom Promotion