For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ ಜ್ವರ ಬಂದಾಗ ತಿನ್ನಬೇಕಾದ ಆಹಾರಗಳು

|

ಈ ಸಮಯದಲ್ಲಿ ಮೆಲ್ಲನೆ ಚಳಿ ಜ್ವರ ಬಂದರೆ ಸಾಕು, ಡೆಂಗ್ಯೂ ಇರಬಹುದೇ ಎಂದು ಭಯಬೀಳುತ್ತೇವೆ. ಡೆಂಗ್ಯೂ ಕಾಯಿಲೆ ಈ ಸಮಯದಲ್ಲಿ ಸ್ವಲ್ಪ ಹೆಚ್ಚಾಗಿಯೇ ಭಯ ಬೀಳಿಸುತ್ತಿದೆ ಎನ್ನಬಹುದು.

ಡೆಂಗ್ಯೂ ಜ್ವರ ಬಂದರೆ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಭಯವಿಲ್ಲ, ವಿಳಂಬ ಮಾಡಿದರೆ ಮಾತ್ರ ಕಷ್ಟ. ಡೆಂಗ್ಯೂ ಜ್ವರ ಒಮ್ಮೆ ಬಂತೆಂದರೆ ಚೇತರಿಸಿಕೊಳ್ಳಲು ವಾರಗಟ್ಟಲೆ ಸಮಯ ಬೇಕು. ಈ ಸಮಯದಲ್ಲಿ ಚಿಕಿತ್ಸೆ ಮಾತ್ರವಲ್ಲ, ನಿಮ್ಮ ಆಹಾರಕ್ರಮ ಕೂಡ ಸರಿಯಾಗಿದ್ದರೆ ಡೆಂಗ್ಯೂ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಬಹುದು.

ಡೆಂಗ್ಯೂ ಜ್ವರವನ್ನು ಕಡಿಮೆ ಮಾಡುವಲ್ಲಿ ಈ ಕೆಳಗಿನ ಆಹಾರಗಳು ತುಂಬಾ ಪರಿಣಾಮಕಾರಿಯಾಗಿದೆ.

ಕಿತ್ತಳೆ

ಕಿತ್ತಳೆ

ಡೆಂಗ್ಯೂ ಬಂದವರು ತಿನ್ನಬೇಕಾದ ಮುಖ್ಯವಾದ ಹಣ್ಣೆಂದರೆ ಕಿತ್ತಳೆ. ಇದರಲ್ಲಿ ಪೋಷಕಾಂಶ ಮತ್ತು ವಿಟಮಿನ್ಸ್ ಇದ್ದು, ಜೀರ್ಣಕ್ರಿಯೆಗೆ ಸಹಾಯ, ಮೂತ್ರ ವಿಸರ್ಜನೆಗೆ ಆಗಾಗ ಹೋಗುವಂತೆ ಮಾಡುವುದು. ಇದರಿಂದ ಡೆಂಗ್ಯೂ ಬ್ಯಾಕ್ಟೀರಿಯಾಗಳು ಹೊರ ಹೋಗುವುದು.

 ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿನಲ್ಲಿ ಡೆಂಗ್ಯೂ ಜ್ವರ ಕಮ್ಮಿ ಮಾಡುವ ಔಷಧೀಯ ಗುಣವಿದೆ. ಪ್ರತಿನಿತ್ಯ ಪಪ್ಪಾಯಿ ಎಲೆಯ ರಸವನ್ನು 1 ಚಮಚದಷ್ಟು ತೆಗೆದುಕೊಂಡರೆ ಬೇಗನೆ ಕಡಿಮೆಮಾಡುವುದು. ಪಪ್ಪಾಯಿ ಹಣ್ಣನ್ನೂ ತಿನ್ನಿ.

 ಗಂಜಿ

ಗಂಜಿ

ಜ್ವರ ಬಂದಾಗ ಗಂಜಿ ಕುಡಿದರೆ ಬೇಗನೆ ಜ್ವರದಿಂದ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಬಾಯಿ ರುಚಿಗೆ ಡ್ರೈ ಫ್ರೂಟ್ಸ್ ಜೊತೆ ತಿನ್ನಬಹುದು.

ಹರ್ಬಲ್ ಟೀ

ಹರ್ಬಲ್ ಟೀ

ಡೆಂಗ್ಯೂ ಜ್ವರ ಕಮ್ಮಿ ಮಾಡಲು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು. ಅದರಲ್ಲೂ ಏಲಕ್ಕಿ ಹಾಕಿದ ಹರ್ಬಲ್ ಟೀ ತುಂಬಾ ಒಳ್ಳೆಯದು.

 ಎಳನೀರು

ಎಳನೀರು

ದಿನದಲ್ಲಿ 2-3 ಎಳನೀರು ಕುಡಿಯಿರಿ, ದೇಹಕ್ಕೆ ಶಕ್ತಿ ಬರುತ್ತದೆ.

ಹಣ್ಣಿನ ಜ್ಯೂಸ್

ಹಣ್ಣಿನ ಜ್ಯೂಸ್

ಡೆಂಗ್ಯೂ ಜ್ವರದಿಂದ ಬೇಗನೆ ಚೇರಿಸಿಕೊಳ್ಳಬೇಕೆಂದರೆ ಹಣ್ಣಿನ ಜ್ಯೂಸ್ ಕುಡಿಯಲು ಮರೆಯಬೇಡಿ.

ತರಕಾರಿ ಜ್ಯೂಸ್

ತರಕಾರಿ ಜ್ಯೂಸ್

ತರಕಾರಿ ಜ್ಯೂಸ್ ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಆದ್ದರಿಂದ ಸೂಪ್, ಜ್ಯೂಸ್ ಮಾಡಿ ಕುಡಿಯಿರಿ.

ಪ್ರೊಟೀನ್ ಅಧಿಕವಿರುವ ಆಹಾರಗಳು

ಪ್ರೊಟೀನ್ ಅಧಿಕವಿರುವ ಆಹಾರಗಳು

ಡೆಂಗ್ಯೂ ಜ್ವರ ಬಂದರೆ ಪ್ರೊಟೀನ್ ಅಧಿಕವಿರುವ ಆಹಾರಗಳತ್ತ ಗಮನ ಕೊಡುವುದು ಒಳ್ಳೆಯದು. ಮೀನು ಮತ್ತು ಚಿಕನ್ ತಿನ್ನುವುದು ಒಳ್ಳೆಯದು.

ಸೂಪ್

ಸೂಪ್

ಚಿಕನ್ ಸೂಪ್ ಸುಸ್ತನ್ನು ಬೇಗನೆ ಕಮ್ಮಿ ಮಾಡುತ್ತದೆ. ತರಕಾರಿ ಜ್ಯೂಸ್ ಕೂಡ ಒಳ್ಳೆಯದೇ. ದ್ರವ ರೀತಿಯ ಈ ಪದಾರ್ಥಗಳು ನಿಮ್ಮ ಹೊಟ್ಟೆಯನ್ನು ಸೇರುವುದರಿಂದ ಸುಸ್ತು ಕಡಿಮೆಯಾಗುವುದು.

ನಿಂಬೆ ಪಾನೀಯ

ನಿಂಬೆ ಪಾನೀಯ

ನಿಂಬೆ ಜ್ಯೂಸ್ ನಿಮ್ಮಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆ ಮಾಡುವುದು ಹಾಗೂ ಡೆಂಗ್ಯೂ ವೈರಸ್ ಅನ್ನು ನಾಶ ಪಡಿಸಲು ಸಹಕಾರಿ.

ಇಲ್ಲಿ ಹೇಳಿದ ಆಹಾರಗಳತ್ತ ಗಮನ ಕೊಡಿ, ಬೇಗನೆ ಗುಣಮುಖವಾಗುವಿರಿ.

English summary

Foods For Dengue Fever

It is very important that a dengue patient follows a good diet in order to battle the virus which affects the entire body. Your diet plays an important role for your speedy recovery.
 
X
Desktop Bottom Promotion