For Quick Alerts
ALLOW NOTIFICATIONS  
For Daily Alerts

ಅಲರ್ಜಿ ಉಂಟಾಗಲು ಕಾರಣಗಳು ಮತ್ತು ಅದರ ಲಕ್ಷಣಗಳು

By Super
|

ಅಲರ್ಜಿ ಆಹಾರ, ಔಷಧಿಗಳು, ಕೀಟಗಳ ಕಡಿತ, ಸಾಕುಪ್ರಾಣಿಗಳಿಂದುಟಾಂಗುವ ಸೋಂಕು ಮತ್ತಿತ್ತರ ಕಾರಣಗಳಿಂದಾಗಿ ಉಂಟಾಗುತ್ತದೆ. ಅಲರ್ಜಿಯಾದಾಗ ಬಿಡುಗಡೆಯಾಗುವ ಹಿಸ್ಟಮೈನ್ ರಕ್ತದಲ್ಲಿ ಸೇರಿ ಕಣ್ಣು, ಮೂಗು, ಚರ್ಮ, ಗಂಟಲು ಮತ್ತು ಜೀರ್ಣಾಂಗಗಳ ಮೇಲೆ ಪರಿಣಾಮ ಬೀರುತ್ತದೆ.

ಅಲರ್ಜಿಯಾದಾಗ ಕಂಡುಬರುವ ಸಾಮಾನ್ಯ ಲಕ್ಷಣಗಳೆಂದರೆ ಕರುಳು, ಗಂಟಲುಗಳಲ್ಲಿ ಉರಿಯೂತ, ಮೈಮೇಲೆ ಗುಳ್ಳೆಗಳೇಳುವುದು, ಸೋರುವ ಮೂಗು, ಉಬ್ಬಸ, ಸೀನುವಿಕೆ ಮತ್ತು ಕಣ್ಣಿನಲ್ಲಿ ನವೆಯುಂಟಾಗುವುದು. ಅಲರ್ಜಿಗಳನ್ನು ಸೂಕ್ತ ರೀತಿಯಲ್ಲಿ ವಾಸಿಮಾಡಿಕೊಳ್ಳಬೇಕು. ಇಲ್ಲವಾದರೆ ಅದು ಅನಾಫಿಲ್ಯಾಕ್ಸಿಸ್ ಎನ್ನುವ ಗಂಭೀರ ಸ್ಥಿತಿಗೆ ತಿರುಗಬಹುದು. ಈ ಸ್ಥಿತಿಯನ್ನು ತಲುಪಿದವರು ಆಹಾರ ನುಂಗಲು ತೊಂದರೆ, ಉಸಿರಾಟದಲ್ಲಿ ತೊಂದರೆ,ತಲೆತಿರುಗುವುದು, ತುಟಿ, ಗಂಟಲು, ನಾಲಿಗೆ ಒಣಗುವಿಕೆ ಮತ್ತು ಜೀರ್ಣಾಂಗಗಳಲ್ಲಿ ತೊಂದರೆಗಳನ್ನು ಅನುಭವಿಸುತ್ತಾರೆ.

ಅಲರ್ಜಿಗೆ ನೈಸರ್ಗಿಕ ಪರಿಹಾರ

ಅಲರ್ಜಿಗಳ ಚಿಕಿತ್ಸೆಗೆ ಆ್ಯಂಟಿ- ಹಿಸ್ಟಮೈನ್, ಸ್ಟೆರಾಯ್ಡ್ಗಳು ಮತ್ತಿತರ ವಿಧಾನಗಳು ಲಭ್ಯವಿದೆ. ಇದರೊಂದಿಗೆ ನೈಸರ್ಗಿಕ ಪರಿಹಾರಗಳು ಕೂಡ ಲಭ್ಯವಿದೆ. ಅಲರ್ಜಿಗೆ ಚಿಕಿತ್ಸೆ ನೀಡುವ ಮುನ್ನ ಅದರ ಕಾರಣವನ್ನು ಮೊದಲಿಗೆ ಸರಿಯಾಗಿ ಕಂಡುಹಿಡಿದರೆ ಮುಂದೆ ಅದರಿಂದಾಗುವ ತೊಂದರೆಗಳನ್ನು ತಡೆಗಟ್ಟಬಹುದು. ಉದಾಹರಣೆಗೆ ಕಡಲೆಕಾಯಿಂದ ಅಲರ್ಜಿ ಇರುವವರು ಅದನ್ನು ಆಹಾರದಲ್ಲಿ ಬಳಸದಿದ್ದರೆ ಅಲರ್ಜಿಯಿಂದ ದೂರ ಉಳಿಯಬಹುದು.

ಅಲರ್ಜಿಗಳಿಂದ ಮುಕ್ತರಾಗಲು ಇಲ್ಲಿವೆ ಕೆಲವು ಸಾಂಪ್ರದಾಯಿಕ ಔಷಧಿಗಳು:

1. ಜೇನುತುಪ್ಪ

1. ಜೇನುತುಪ್ಪ

ಜೇನುತುಪ್ಪ ಅಲರ್ಜಿಗೆ ಪರಿಣಾಮಕಾರಿಯಾದ ಪರಿಹಾರ.ಜೇನುತುಪ್ಪದಲ್ಲಿರುವ ಪರಾಗ ಮತ್ತಿತರ ವಸ್ತುಗಳು ಅಲರ್ಜಿಗೆ ಬಹಳ ಪರಿಣಾಮಕಾರಿಯಾದ ಔಷಧ. ನೈಸರ್ಗಿಕವಾಗಿ ಸಿಗುವ ಜೇನುತುಪ್ಪದಲ್ಲಿರುವ ಈ ಅಂಶಗಳು ಅಲರ್ಜಿಯ ವಿರುದ್ಧ ಹೋರಾಡಲು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.

2. ಕ್ವೆರ್ಸಟೀನ್

2. ಕ್ವೆರ್ಸಟೀನ್

ಇದು ಸೇಬು, ಬೆರ್ರಿ, ಈರುಳ್ಳಿ ಮತ್ತು ಬ್ಲಾಕ್ ಟೀಯಲ್ಲಿ ಕಂಡುಬರುವ ಆ್ಯಂಟಿಆಕ್ಸಿಡೆಂಟ್. ಇದು ಹಿಸ್ಟಮೈನ್ನ ಸಂಶ್ಲೇಷಣೆಯನ್ನು ತಡೆಯುವುದರಿಂದ ಅಲರ್ಜಿಯ ಲಕ್ಷಣಗಳನ್ನು ಕಡಿಮೆಮಾಡುತ್ತದೆ.

3. ನೈಸರ್ಗಿಕ ಆ್ಯಂಟಿ ಹಿಸ್ಟಮೈನ್

3. ನೈಸರ್ಗಿಕ ಆ್ಯಂಟಿ ಹಿಸ್ಟಮೈನ್

ವಿಟಮಿನ್ ಸಿ ನೈಸರ್ಗಿಕ ಆ್ಯಂಟಿ ಹಿಸ್ಟಮೈನ್. ವಿಟಮಿನ್ ಸಿ ಇರುವ ಆಹಾರ ಸೇವನೆ ಅಲರ್ಜಿಗಳ ಚಿಕಿತ್ಸೆಗೆ ಸಹಕಾರಿ. ಆ್ಯಂಟಿ ಹಿಸ್ಟಮೈನ್ ಔಷಧಿಗಳನ್ನು ಈ ಆಹಾರದೊಂದಿಗೆ ಬಳಸುವುದು ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ.

4. ನೈಸರ್ಗಿಕ ಆ್ಯಂಟಿ ಆಕ್ಸಿಡೆಂಟ್ಸ್

4. ನೈಸರ್ಗಿಕ ಆ್ಯಂಟಿ ಆಕ್ಸಿಡೆಂಟ್ಸ್

ಹಣ್ಣು ಮತ್ತು ತರಕಾರಿಗಳಲ್ಲಿ ಇವುಗಳನ್ನು ಕಾಣಬಹುದು. ದ್ರಾಕ್ಷಿ ಬೀಜದ ಸಾರ, ಬಾಳೇಹಣ್ಣು, ಸೇಬು, ಟೊಮೊಟೊ, ಕ್ಯಾರೆಟ್ ಮತ್ತು ಈರುಳ್ಳಿಗಳನ್ನು ಅಲರ್ಜಿಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ.

5. ಉಪ್ಪುನೀರು ಮುಕ್ಕಳಿಸುವಿಕೆ

5. ಉಪ್ಪುನೀರು ಮುಕ್ಕಳಿಸುವಿಕೆ

ಗಂಟಲು ನೋವಿಗೆ ಇದು ಪರಿಣಾಮಕಾರಿ ಔಷಧಿ. ಇದರೊಂದಿಗೆ ಮೂಗಿಗೆ ಬಳಸುವ ಸ್ಪ್ರೇ ಮೂಗಿನಲ್ಲಿ ಇರುವ ಅಲರ್ಜಿಗೆ ಕಾರಣವಾದ ಕಣಗಳನ್ನು ತೆಗೆದುಹಾಕಿ ಅಲರ್ಜಿಯ ಪರಿಣಾಮಗಳನ್ನು ತಗ್ಗಿಸುತ್ತದೆ.

6. ಒಮೆಗಾ- 3 ಫ್ಯಾಟಿ ಆಸಿಡ್

6. ಒಮೆಗಾ- 3 ಫ್ಯಾಟಿ ಆಸಿಡ್

ಕೆಮಿಕಲ್ ಅಲರ್ಜಿಯಿಂದ ಉಂಟಾದ ತೊಂದರೆಗಳನ್ನು ತಗ್ಗಿಸಲು ಇದು ಸಹಕಾರಿ. ವಾಲ್ನಟ್, ಅಗಸೆ ಬೀಜದೆಣ್ಣೆ, ಮೀನೆಣ್ಣೆಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಇರುತ್ತದೆ.

7. ಗ್ರೀನ್ ಟೀ

7. ಗ್ರೀನ್ ಟೀ

ಗ್ರೀನ್ ಟೀಯಲ್ಲಿ ನೈಸರ್ಗಿಕ ಆ್ಯಂಟಿಹಿಸ್ಟಮೈನ್ ಇರುತ್ತದೆ. ಇದು ಅಲರ್ಜಿಯನ್ನು ವಾಸಿಮಾಡಲು ಸಹಕಾರಿ. ದಿನವೂ 1-2 ಕಪ್ ಟೀ ಕುಡಿಯುವುದರಿಂದ ಅಲರ್ಜಿಯನ್ನು ತಡೆಗಟ್ಟಬಹುದು.

8. ಸೇಬಿನ ಹುಳಿ ರಸ(ಆಪಲ್ ಸೈಡರ್ ವಿನೆಗರ್)

8. ಸೇಬಿನ ಹುಳಿ ರಸ(ಆಪಲ್ ಸೈಡರ್ ವಿನೆಗರ್)

ಸೇಬಿನ ಹುಳಿರಸದಲ್ಲಿ ಅಲರ್ಜಿಯಿಂದ ಉಂಟಾಗುವ ತುರಿಕೆಯನ್ನು ವಾಸಿಮಾಡುವ ಗುಣಗಳಿರುತ್ತವೆ. ಇದನ್ನು ಪಥ್ಯವಾಗಿ ಸೇವಿಸಬಹುದು ಅಥವ ನೀರಿನೊಂದಿಗೆ ಬೆರೆಸಿ ಅಲರ್ಜಿ ಉಂಟಾದ ಜಾಗಗಳಿಗೆ ಲೇಪಿಸಬಹುದು. ಇದು ಬ್ಯಾಕ್ಟೀರಿಯ ಮತ್ತು ಕೀಟಾಣುಗಳನ್ನು ದೂರವಿಡಲು ಕೂಡ ಸಹಕಾರಿ.

9. ಶುಂಠಿ

9. ಶುಂಠಿ

ಜೇನುತುಪ್ಪದಷ್ಟೇ ಶುಂಠಿ ಕೂಡ ಅಲರ್ಜಿಯನ್ನು ತಡೆಗಟ್ಟಲು ಪರಿಣಾಮಕಾರಿ. ಶುಂಠಿ ನೈಸರ್ಗಿಕವಾದ ಆ್ಯಂಟಿಹಿಸ್ಟಮೈನ್ ಮತ್ತು ಡಿಕಂಜೆಸ್ಟಂಟ್. ½ ಹೋಳು ಶುಂಠಿಯನ್ನು ಟೀ ಜೊತೆ ಬೆರೆಸಿ ಕುಡಿಯಬಹುದು ಅಥವ ಜೇನುತುಪ್ಪದೊಂದಿಗೆ ತಿನ್ನಬಹುದು. ಇದರಿಂದ ಅಲರ್ಜಿಯನ್ನು ತಡೆಗಟ್ಟಬಹುದು.

10. ಬೆಳ್ಳುಳ್ಳಿ

10. ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಆ್ಯಂಟಿ ವೈರಲ್ ಗುಣಗಳು ಹೆಚ್ಚಿರುವುದರಿಂದ ಅದನ್ನು ಅಲರ್ಜಿಯ ಚಿಕಿತ್ಸೆ ಪರಿಣಾಮಕಾರಿ ಔಷಧ ಎಂದು ಹೇಳಲಾಗುತ್ತದೆ. ಹಸಿ ಬೆಳ್ಳುಳ್ಳಿ ಬೇಯಿಸಿದ ಬೆಳ್ಳುಳ್ಳಿಗಿಂತ ಹೆಚ್ಚು ಪರಿಣಾಮಕಾರಿ. ದಿನವೂ 3-4 ಬೆಳ್ಳುಳ್ಳಿ ಎಸಳನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಅಲರ್ಜಿಯನ್ನು ತಡೆಗಟ್ಟಬಹುದು.

11. ಪುದೀನಾ

11. ಪುದೀನಾ

ಪುದೀನಾದಲ್ಲಿ ನೈಸರ್ಗಿಕ ಡಿಕಂಜೆಸ್ಟಂಟ್ ಇರುವುದರಿಂದ ಇದು ವೈರಸ್ನಿಂದ ಉಂಟಾದ ಸೋಂಕು ಮತ್ತು ಅಲರ್ಜಿಗಳನ್ನು ತಡೆಗಟ್ಟುತ್ತದೆ. ಪುದೀನ ಟೀ ಸೈನಸ್ ತೊಂದರೆಗಳು ಮತ್ತು ಕೆಮ್ಮಿಗೆ ಪರಿಣಾಮಕಾರಿ ಔಷಧ.

English summary

Causes and Symptoms of Allergies

Allergies are caused by many factors such as food, drugs, insect bites, pet dander, and other allergens. During an allergic reaction, the major biochemical change is the release of histamine in the blood stream that affect the eyes, nose, skin, throat, and gastrointestinal tract (GI).
X
Desktop Bottom Promotion