ಅಬ್ಬಬ್ಬಾ! ಇಷ್ಟೊಂದು ಆರೋಗ್ಯಕರ ಗುಣ ಕಬ್ಬಿನಲ್ಲಿದೆಯೇ?

Posted By: Staff
Subscribe to Boldsky

ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್ ನೋಡುವಾಗಲೇ ಅದನ್ನು ಕುಡಿಯಬೇಕೆನಿಸುತ್ತದೆ. ಕಬ್ಬಿನ ಜ್ಯೂಸ್ ಗೆ ಸ್ವಲ್ಪ ನಿಂಬೆ ರಸ ಮತ್ತು ಐಸ್  ಹಾಕಿ ಕುಡಿದರೆ ಆಹಾ... ಎಷ್ಟೊಂದು ರುಚಿ. ಈ ಕಬ್ಬು ಸಂಕ್ರಾಂತಿ/ಪೊಂಗಲ್ ಹಬ್ಬದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಸಂಕ್ರಾಂತಿ ಹಬ್ಬದಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ತಯಾರಿಸುವಾಗ ಕಬ್ಬನ್ನು ಬಳಸಿಯೇ ಬಳಸುತ್ತಾರೆ. ಪೊಂಗಲ್ ಹಬ್ಬದಲ್ಲಿ ಕಬ್ಬಿನ ತೋರಣವನ್ನು ಕಟ್ಟಲಾಗುವುದು. ಕಬ್ಬು ಸಮೃದ್ಧಿಯ ಸಂಕೇತವೆಂದು ಭಾವಿಸಲಾಗಿದೆ. ಸಂಕ್ರಾಂತಿ ಹಬ್ಬದಲ್ಲಿ ಕಬ್ಬು ಬಳಸಿದರೆ ಆರ್ಥಿಕ ಸಮೃದ್ಧಿ ದೊರೆಯುತ್ತದೆ ಅನ್ನುವುದು ನಮ್ಮ ನಂಬಿಕೆ.

ಆದರೆ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ಸಮೃದ್ಧಿಯನ್ನು ಪಡೆಯಬಹುದೆಂದು ನಾನು ನಿಖರವಾಗಿ ಹೇಳಬಲ್ಲೆ. ಕಬ್ಬಿನ ಜ್ಯೂಸ್ ಕುಡಿದರೆ  ಪ್ರಮುಖವಾಗಿ ಈ ಕೆಳಗಿನ ಆರೋಗ್ಯಕರ ಪ್ರಯೋಜನವನ್ನು ಪಡೆಯುಬಹುದು.

ಕಾಮಲೆಯನ್ನು ಗುಣಪಡಿಸುತ್ತದೆ

ಕಾಮಲೆಯನ್ನು ಗುಣಪಡಿಸುತ್ತದೆ

ಕಬ್ಬಿನ ಕಾಲು ಕಾಮಲೆ ಇರುವವರೆಗೆ ನೈಸರ್ಗಿಕವಾದ ಔಷಧಿಯಾಗಿದೆ. ಲಿವರ್ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಈ ಕಾಯಿಲೆ ಬರುತ್ತದೆ. ಕಾಮಲೆ ಬಂದವರು ದಿನಕ್ಕೆ ಎರಡು ಗ್ಲಾಸ್ ಕಬ್ಬಿನ ಜ್ಯೂಸ್ ಕುಡಿದರೆ ಬೇಗನೆ ಗುಣಮುಖವಾಗುವಿರಿ.

ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ

ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ

ಮೂತ್ರ ಉರಿ, ಗುಪ್ತ ಕಾಯಿಲೆಗಳು, ಎದೆ ಉರಿ, ಹೊಟ್ಟೆ ಉರಿ ಈ ರೀತಿಯ ಸಮಸ್ಯೆಗಳ ವಿರುದ್ಧ ಹೋರಾಡಿ ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಈ ಜ್ಯೂಸ್ ಸಹಕಾರಿಯಾಗಿದೆ.

ಕಿಡ್ನಿಯಲ್ಲಿ ಕಲ್ಲನ್ನು ಹೋಗಲಾಡಿಸುತ್ತದೆ

ಕಿಡ್ನಿಯಲ್ಲಿ ಕಲ್ಲನ್ನು ಹೋಗಲಾಡಿಸುತ್ತದೆ

ಕಬ್ಬಿನ ಹಾಲಿನ ಅತ್ಯಂತ ಪ್ರಯೋಜನಕಾರಿಯಾದ ಗುಣವೆಂದರೆ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುತ್ತದೆ. ಕಿಡ್ನಿಯಲ್ಲಿ ಕಲ್ಲಿದ್ದವರು ಇದನ್ನು ಪ್ರತಿದಿನ ಕುಡಿದರೆ ಆ ಸಮಸ್ಯೆಯಿಂದ ಗುಣಮುಖವಾಗಲು ಸಹಕಾರಿಯಾಗುತ್ತದೆ.

 ಮಧುಮೇಹಿಗಳಿಗೆ ಒಳ್ಳೆಯದು

ಮಧುಮೇಹಿಗಳಿಗೆ ಒಳ್ಳೆಯದು

ಮಧುಮೇಹಿಗಳು ಕಬ್ಬಿನ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಸಮತೋಲನದಲ್ಲಿಡಬಹುದು. ಕೃತಕ ಸಿಹಿ ತಿಂದು ಆರೋಗ್ಯ ಕೆಡಿಸುವ ಬದಲು ಈ ಜ್ಯೂಸ್ ಬೆಸ್ಟ್.

ಪೋಷಕಾಂಶಗಳು

ಪೋಷಕಾಂಶಗಳು

ಕಬ್ಬಿನ ಹಾಲಿನಲ್ಲಿ ಕಬ್ಬಿಣದಂಶ, ಪೊಟಾಷ್ಯಿಯಂ, ಮ್ಯಾಗ್ನಿಷಿಯಂ ಅಂಶವಿದ್ದು ಇದು ವಿಟಮಿನ್ ಗಳ ಕೊರತೆಯನ್ನು ನೀಗಿಸುತ್ತದೆ.

ಶೀತ, ಗಂಟಲು ನೋವಿಗೆ ಉತ್ತಮ ಔಷಧಿ

ಶೀತ, ಗಂಟಲು ನೋವಿಗೆ ಉತ್ತಮ ಔಷಧಿ

ಶೀತ, ಗಂಟಲು ಕೆರತ, ಗಂಟಲು ನೋವು ಈ ರೀತಿ ಸಮಸ್ಯೆ ಕಂಡು ಬಂದರೆ ಕಬ್ಬಿನ ಜ್ಯೂಸ್ ಕುಡಿದರೆ ಗುಣಮುಖವಾಗುವುದು.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕಬ್ಬಿನ ಜ್ಯೂಸ್ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಈ ರೀತಿಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ನಿರ್ಜಲೀಕರಣವನ್ನು ತಡೆಯುತ್ತದೆ

ನಿರ್ಜಲೀಕರಣವನ್ನು ತಡೆಯುತ್ತದೆ

ನಿರ್ಜಲೀಕರಣ ಉಂಟಾದರೆ ಸುಸ್ತು ಕಂಡು ಬರುತ್ತದೆ. ಇದು ನಿರ್ಜಲೀಕರಣವನ್ನು ಹೋಗಲಾಡಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

English summary

Benefits Of Drinking Sugarcane Juice

We find many stalls that sell sugarcane juice. You might be amazed to know that the juicy extract of sugarcane sticks has many health benefits. As the harvest festival is upon us, sugarcane will be commonly found in each and every household.
Please Wait while comments are loading...
Subscribe Newsletter