For Quick Alerts
ALLOW NOTIFICATIONS  
For Daily Alerts

ಈ ಕೆಟ್ಟ ಅಭ್ಯಾಸಗಳನ್ನು ಈಗಲೇ ಬಿಟ್ಟು ಬಿಡಿ!

|

ನಾವೆಲ್ಲರೂ ಹಲವು ಕೆಟ್ಟ ಅಭ್ಯಾಸಗಳಿಗೆ ದಾಸರಾಗಿರುತ್ತೇವೆ. ನಾವಿಲ್ಲಿ ಕೇವಲ ಧೂಮಪಾನ ಅಥವ ಮದ್ಯಪಾನದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಇವುಗಳನ್ನು ಹೊರತುಪಡಿಸಿ ನಮ್ಮ ಆರೋಗ್ಯಕ್ಕೆ ಹಾನಿಮಾಡಬಲ್ಲ ಹಲವು ಅಭ್ಯಾಸಗಳಿವೆ. ಇವು ಕೆಲವು ಸಂದರ್ಭಗಳಲ್ಲಿ ಮುಜುಗರಕ್ಕೆ ಕೂಡ ಉಂಟುಮಾಡಬಹುದು. ಉದಾಹರಣೆಗೆ ಮೂಗಿನ ಗಲೀಜು ತೆಗೆಯುತ್ತಿರುವುದು. ಇದು ಸಾಮಾಜಿಕ ಸನ್ನಿವೇಶಗಳಲ್ಲಿ ಮುಜುಗುರವುಂಟುಮಾಡುತ್ತದೆ. ಈ ಅಭ್ಯಾಸದಿಂದಾಗಿ ವೈರಸ್ ಗಳು ಹರಡಿ ಮ್ಯೂಕಸ್ ನ ಮೂಲಕ ಕೋಲ್ಡ್ ಮತ್ತು ಫ್ಲೂ ಹರಡುತ್ತದೆ.

ಇದರೊಂದಿಗೆ ಧೂಮಪಾನ ಮತ್ತು ಮದ್ಯಪಾನವು ಆರೋಗ್ಯಕ್ಕೆ ಹಾನಿಕಾರಿ. ಧೂಮಪಾನ ಕ್ಯಾನ್ಸರ್ ಗೆ ಕಾರಣವಾದರೆ ಮದ್ಯಪಾನವು ನಿಮ್ಮ ಕರುಳನ್ನು ನಾಶಮಾಡುತ್ತದೆ. ಇನ್ನೂ ಹಲವು ಮಂದಿ ರಾತ್ರಿ ತಡವಾಗಿ ನಿದ್ದೆ ಮಾಡುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಇವರು ಆಫೀಸಿನಲ್ಲಿ ತಡರಾತ್ರಿಯವರೆಗೆ ಕೆಲಸ ಮಾಡುತ್ತಾರೆ ಇಲ್ಲವೆ ನಿದ್ರೆ ಮಾಡುವುದನ್ನು ಬಿಟ್ಟು ಸಿನೆಮಾ ನೋಡುತ್ತಿರುತ್ತಾರೆ. ಆದರೆ ದೇಹಕ್ಕೆ ಸೂಕ್ತವಾದ ವಿಶ್ರಾಂತಿ ನೀಡುವುದು ಅತ್ಯಗತ್ಯ.

ಅದೇ ರೀತಿ ಹಲವು ಮಹಿಳೆಯರು ಮೇಕಪ್ ತೆಗೆಯದೆ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ನಿಮ್ಮ ಚರ್ಮವನ್ನು ಹಾಳುಮಾಡುತ್ತದೆ. ಮತ್ತೊಂದು ಸಾಮಾನ್ಯವಾದ ದುರಭ್ಯಾಸವೆಂದರೆ ಹಲವು ಮಂದಿ ಸೋಂಬೆರಿಗಳು ರಾತ್ರಿ ಹಲ್ಲುಜ್ಜದೆ ಮಲಗುವುದು. ಇದು ನಿಮ್ಮ ಹಲ್ಲುಗಳನ್ನು ಹಾಳುಮಾಡುತ್ತದೆ. ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದರಿಂದ ಹಲ್ಲು ಮತ್ತು ಒಸಡಿನ ತೊಂದರೆಗಳನ್ನು ತಪ್ಪಿಸಬಹುದು ಮತ್ತು ದುರ್ವಾಸನೆ ಬರುವುದು ಕೂಡ ತಪ್ಪುತ್ತದೆ.

ಬಿಡಲೇ ಬೇಕಾದ ಕೆಟ್ಟ ಅಭ್ಯಾಸಗಳು:

ಹೊಟ್ಟೆ ತುಂಬಿರುವಾಗಲು ಸ್ನಾಕ್ಸ್ ತಿನ್ನುವ ಅಭ್ಯಾಸ

ಹೊಟ್ಟೆ ತುಂಬಿರುವಾಗಲು ಸ್ನಾಕ್ಸ್ ತಿನ್ನುವ ಅಭ್ಯಾಸ

ಹೊಟ್ಟೆ ತುಂಬಿರುವಾಗಲೂ ನೀವು ಸ್ನಾಕ್ಸ್ ತಿನ್ನುವಿರಾ? ಇದು ದುರಭ್ಯಾಸ. ಇದು ನಿಮ್ಮ ಆಹಾರಭ್ಯಾಸದ ಕ್ರಮವನ್ನು ದಿಕ್ಕು ತಪ್ಪಿಸುತ್ತದೆ. ಏಕೆಂದರೆ ನಿಮ್ಮ ಮೆದುಳು ಹಸಿವಾದಾಗ ಕಳಿಸಬೇಕಾದ ಸಂಕೇತಗಳನ್ನು ಕಳಿಸುವುದನ್ನೇ ನಿಲ್ಲಿಸಿಬಿಡುತ್ತದೆ. ಇದರಿಂದ ನೀವು ಮತ್ತಷ್ಟು ಕ್ಯಾಲೊರಿಗಳನ್ನು ನಿಮ್ಮ ದೇಹಕ್ಕೆ ಸೇರಿಸುತ್ತಾ ಹೋಗುವಿರಿ.

ಬೇಗ ಬೇಗ ತಿನ್ನುವುದು

ಬೇಗ ಬೇಗ ತಿನ್ನುವುದು

ಬಹಳ ಮಂದಿ ಊಟ ಮಾಡುವಾಗ ಮಾಡುವ ಸಾಮಾನ್ಯವಾದ ತಪ್ಪು. ಊಟದ ಅವಧಿ ಮುಗಿಯುತ್ತಿದ್ದಂತೆ ನೀವು ಮೀಟಿಂಗಿಗೆ ಹೋಗಬೇಕಿರಬಹುದು ಅಥವ ನಿಮ್ಮ ಮುಖ್ಯಸ್ಥರ ತರಗತಿ ಇರಬಹುದು ಅದೇನೆ ಇರಲಿ ನಿಧಾನವಾಗಿ ತಿನ್ನಿ. ಬೇಗ ಬೇಗ ಅಗಿಯುವುದರಿಂದ ಅಸಿಡಿಟಿಯುಂಟಾಗುತ್ತದೆ. ಇದರಿಂದ ತೂಕ ಕೂಡ ಹೆಚ್ಚಾಗುತ್ತದೆ.

ಹೆಚ್ಚು ಹೊತ್ತು ಎದ್ದಿರುವುದು

ಹೆಚ್ಚು ಹೊತ್ತು ಎದ್ದಿರುವುದು

ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಮತ್ತೊಂದು ಕೆಟ್ಟ ಅಭ್ಯಾಸ. ನಿದ್ದೆ ದೇಹಕ್ಕೆ ವಿಶ್ರಾಂತಿ ಒದಗಿಸುತ್ತದೆ. ಇದು ದೇಹಕ್ಕೆ ಅತ್ಯಗತ್ಯ. ಸರಿಯಾಗಿ ನಿದ್ರಿಸದೆ ಹೋದರೆ ಬೆಳಗ್ಗೆ ಎದ್ದಾಗ ನಿಮನ್ನು ಆಯಾಸ ಕಾಡಬಹುದು, ಕಣ್ಣುಗಳು ಊದಿರಬಹುದು ಮತ್ತು ಮೈಕೈನೋವು ಕಾಣಿಸಿಕೊಳ್ಳಬಹುದು.

ಮೂಗಿನೊಳಗಿಂದ ಗಲೀಜು ತೆಗೆಯುತ್ತಿರುವುದು

ಮೂಗಿನೊಳಗಿಂದ ಗಲೀಜು ತೆಗೆಯುತ್ತಿರುವುದು

ಇದು ಮತ್ತೊಂದು ಕೆಟ್ಟ ಅಭ್ಯಾಸ. ಸಾಮಾಜಿಕವಾಗಿ ಮತ್ತು ದೈಹಿಕವಾಗಿ ಕೂಡ ಇದು ಕೆಟ್ಟದ್ದು. ಇದು ಮ್ಯೂಕಸ್ ಮುಖಾಂತರ ವೈರಸ್ ಗಳನ್ನು ಪಸರಿಸಿ ಕೋಲ್ಡ್ ಮತ್ತು ಫ್ಲೂಗಳನ್ನು ಹರಡುತ್ತದೆ.

ಹೈ ಹೀಲ್ಸ್ ಧರಿಸುವುದು

ಹೈ ಹೀಲ್ಸ್ ಧರಿಸುವುದು

ಹೈ ಹೀಲ್ಸ್ ಧರಿಸುವುದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚು ಸ್ಟೈಲಿಶ್ ಲುಕ್ ನೀಡಬಹುದು. ಆದರೆ ಇದನ್ನು ಹೆಚ್ಚು ಹೊತ್ತು ಧರಿಸುವುದರಿಂದ ಕಾಲು, ಬೆನ್ನು ಮತ್ತು ಮಣಿಗಂಟಿನಲ್ಲಿ ನೋವುಂಟಾಗಬಹುದು. ಇದರ ಜೊತೆ ಅನಾವಶ್ಯಕವಾಗಿ ನೋವು ಮತ್ತು ಫ್ರಾಕ್ಚರ್ ಗಳಾಗಬಹುದು.

ಮೇಕಪ್ ತೆಗೆಯದೆ ಮಲಗುವುದು

ಮೇಕಪ್ ತೆಗೆಯದೆ ಮಲಗುವುದು

ಚರ್ಮದ ಮೇಲೆ ಸುಕ್ಕುಗಳು, ಮೊಡವೆಗಳು, ಕಪ್ಪು ಕಲೆಗಳು ಇವು ಮೇಕಪ್ ತೆಗೆಯದೆ ಮಲಗುವುದರಿಂದ ಕಾಣಿಸಿಕೊಳ್ಳುವ ಕೆಲವು ಚರ್ಮದ ಸಮಸ್ಯೆಗಳು. ಆದ್ದರಿಂದ ಮಲಗುವ ಮುನ್ನ ಮರೆಯದೆ ಮೇಕಪ್ ತೆಗೆದುಬಿಡಿ.

ತುಂಬ ಭಾರವಾದ ಚೀಲಗಳನ್ನು ತೆಗೆದುಕೊಂಡು ಹೋಗುವುದು

ತುಂಬ ಭಾರವಾದ ಚೀಲಗಳನ್ನು ತೆಗೆದುಕೊಂಡು ಹೋಗುವುದು

ನಾವು ಸಾಮನ್ಯವಾಗಿ ಏನೆಲ್ಲ ಸಾಧ್ಯವಿಲ್ಲವೋ ಅದೆಲ್ಲವನ್ನೂ ನಮ್ಮ ಬ್ಯಾಗಿನೊಳಗೆ ತುಂಬಿಕೊಳ್ಳಲು ಇಷ್ಟಪಡುತ್ತೇವೆ. ಸಾಮಾನ್ಯವಾಗಿ ಶಾಲೆಗೆ ಹೋಗುವ ಮಕ್ಕಳು ತಮ್ಮ ಭಾರವಾದ ಚೀಲಗಳನ್ನು ಹೊತ್ತು ಹೊತ್ತು ಬೆನ್ನು ನೋವು ಎನ್ನುವುದನ್ನು ಕೇಳಿರುತ್ತೇವೆ. ಇದೊಂದು ಕೆಟ್ಟ ಅಭ್ಯಾಸವಾಗಿದ್ದು ದೀರ್ಘಕಾಲದ ನಂತರ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ. ನಿಮ್ಮ ಚೀಲದಲ್ಲಿ ಹೆಚ್ಚು ಭಾರವಿದ್ದರೆ ಅದನ್ನು ಭುಜದ ಮೇಲೆ ಹೊರಬೇಡಿ ಬದಲಿಗೆ ಕೈಯಲ್ಲಿ ಹಿಡಿದು ಹೋಗುವುದು ಒಳ್ಳೆಯದು.

ಉಗುರು ಕಚ್ಚುವುದು

ಉಗುರು ಕಚ್ಚುವುದು

ಕೀಟಾಣುಗಳಿರುವ ಬೆರಳುಗಳ ಉಗುರುಗಳನ್ನು ಕಚ್ಚುವುದು ಒಂದು ಕೆಟ್ಟ ಅಭ್ಯಾಸ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಮಾನ್ಯವಾಗಿ ಜನ ಒತ್ತಡದಲ್ಲಿದ್ದಾಗ ಅಥವ ಸಮಯ ಕಳೆಯಲು ಉಗುರುಗಳನ್ನು ಕಚ್ಚುತ್ತಾರೆ. ಆದರಿದು ಕೆಟ್ಟ ಅಭ್ಯಾಸ.

ಊಟ ತಪ್ಪಿಸುವುದು

ಊಟ ತಪ್ಪಿಸುವುದು

ಊಟವನ್ನು ತಪ್ಪಿಸುವುದರಿಂದ ನಿಮ್ಮ ಜೀರ್ಣಾಂಗಗಳ ಮೇಲೆ ದೀರ್ಘಕಾಲಿಕವಾದ ಪರಿಣಾಮ ಬೀರುತ್ತದೆ. ರಾತ್ರಿಯೂಟದ ನಂತರದ 8-9 ಗಂಟೆಗಳ ದೀರ್ಘವಾದ ಅವಧಿಯ ನಂತರ ತಿನ್ನುವ ಬೆಳಗಿನ ಉಪಹಾರ ಬಹಳ ಮುಖ್ಯವಾದುದು ಎಂಬುದನ್ನು ಮರೆಯಬೇಡಿ.

English summary

Bad Habits To Quit Now!

There are many bad habits which we all are addicted to. We are not just talking about smoking or binge drinking. There are several other bad habits which are harmful for the health and can even leave you embarrassed at situations.
Story first published: Monday, December 9, 2013, 9:56 [IST]
X
Desktop Bottom Promotion