For Quick Alerts
ALLOW NOTIFICATIONS  
For Daily Alerts

ಬುದ್ಧಿಶಕ್ತಿಯನ್ನು ಹರಿತಗೊಳಿಸುವ ಲೈಫ್ ಸ್ಟೈಲ್

|

ನಮ್ಮಲ್ಲಿ ಕಂಡು ಬರುತ್ತಿರುವ ಅನೇಕ ಸಮಸ್ಯೆಗಳಿಗೆ ನಾವು ನಮ್ಮ ಲೈಫ್ ಸ್ಟೈಲ್ ಅನ್ನು blame ಮಾಡುತ್ತೇವೆ ಅಲ್ವಾ? ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಸಮಸ್ಯೆಯೆಂದರೆ ಮರೆವು. ಮರೆವು 60ರ ಹರೆಯದಲ್ಲಿ ಅಲ್ಲ, 20ರ ಪ್ರಾಯದಲ್ಲಿಯೇ ಕಂಡು ಬರುತ್ತಿದೆ, ಅದಕ್ಕೆ ಕಾರಣ ವೈಜ್ಞಾನಿಕ ವಸ್ತುಗಳ ಅತೀಯಾದ ಅವಲಂಬನೆ, ಜೀವನ ಶೈಲಿ!

ಯಾವುದಾದರೂ ಮಾಹಿತಿಯನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬೇಕೆಂದರೆ ತಲೆ ಬದಲು, ಕಂಪ್ಯೂಟರ್ ಬಳಸುತ್ತೇವೆ. ಚಿಕ್ಕ ಪುಟ್ಟ ಲೆಕ್ಕಚಾರಕ್ಕೂ ಕ್ಯಾಲ್ಕುಲೇಟರ್ ಬಳಸುತ್ತೇವೆ. ನಮ್ಮ ಮಿದುಳಿಗೆ ಕೆಲಸ ಕೊಡದೆ ಅದರ ಸಾಮರ್ಥ್ಯಯೂ ಕುಗ್ಗುತ್ತಿದೆ. ಆದ್ದರಿಂದಲೇ ಚಿಕ್ಕ ಪ್ರಾಯದಲ್ಲಿಯೇ ಮರೆವಿನ ಸಮಸ್ಯೆ ಕಂಡು ಬರುತ್ತಿದೆ.

ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವುದರಿಂದ ಅಲ್ಜೈಮರ್ಸ್ ಎಂಬ ಕಾಯಿಲೆ ಬರಬಹುದು ಜಾಗ್ರ! ನಿಮ್ಮ ಬುದ್ಧಿ ಶಕ್ತಿ ಕುಗ್ಗಬಾರದೆಂದು ಬಯಸುವುದಾದರೆ ಇಲ್ಲಿ ನಾವು ನಿಮ್ಮ ಬುದ್ಧಿಶಕ್ತಿಯನ್ನು ಮತ್ತಷ್ಟು ಹರಿತಗೊಳಿಸುವ ಕೆಲ ಲೈಫ್ ಸ್ಟೈಲ್ ಬಗ್ಗೆ ಹೇಳಿದ್ದೇವೆ ನೋಡಿ:

ಬ್ರೇಕ್ ಫಾಸ್ಟ್ ಗೆ ಪೌಷ್ಟಿಕ ಆಹಾರ

ಬ್ರೇಕ್ ಫಾಸ್ಟ್ ಗೆ ಪೌಷ್ಟಿಕ ಆಹಾರ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿರುವುದು ಮಿದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಪೌಷ್ಟಿಕ ಅಂಶವಿರುವ ಆಹಾರವನ್ನು ಬೆಳಗ್ಗೆ ತಿಂದರೆ ದಿನಾಪೂರ್ತಿ ದೇಹಕ್ಕೆ ಶಕ್ತಿ ದೊರೆಯುತ್ತದೆ. ಮಿದುಳಿಗೆ ಬೆಳಗ್ಗೆ ಗ್ಲೂಕೋಸ್ ಅತ್ಯವಶ್ಯಕ. ಆದ್ದರಿಂದ ಬ್ರೇಕ್ ಫಾಸ್ಟ್ ಮಾಡದೆ ಇರಬೇಡಿ.

ವ್ಯಾಯಾಮ

ವ್ಯಾಯಾಮ

ವ್ಯಾಯಾಮ ಮಾಡಿದಾಗ ದೇಹಕ್ಕೆ ಆಮ್ಲಜನಕದ ಪೂರೈಕೆ ಸರಿಯಾಗಿ ಆಗುತ್ತದೆ. ಆಮ್ಲಜನಕದ ಪೂರೈಕೆಯಾದಾಗ ಬುದ್ಧಿಶಕ್ತಿಯೂ ಚುರುಕಾಗುವುದು.

ನಿದ್ದೆಗೆ ಮೋಸ ಬೇಡ

ನಿದ್ದೆಗೆ ಮೋಸ ಬೇಡ

ನಿದ್ದೆ ತುಂಬಾ ಪ್ರಮುಖವಾದ ಅಂಶ. ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ನಿದ್ದೆಕೆಟ್ಟು ಓದುತ್ತಾರೆ. ಈ ರೀತಿ ಓದುವುದರಿಂದ ಅಪಾಯವೇ ಹೆಚ್ಚು. ನಿದ್ದೆ ಕೆಟ್ಟ ಕಾರಣ ಮಾರನೇಯ ದಿನ ಪರೀಕ್ಷೆ ಪೇಪರ್ ನೋಡುವಾಗ ಉತ್ತರ ಮರೆತು ಹೋಗುವ ಅಪಾಯ ಹೆಚ್ಚು. ಆದ್ದರಿಂದ ರಾತ್ರಿ ಹೊತ್ತು ನಿದ್ದೆ ಕೆಡದಿರುವುದು ಒಳ್ಳೆಯದು. ಇನ್ನು ವಿಶ್ರಾಂತಿ ಇಲ್ಲದೆ ನೈಟ್ ಶಿಫ್ಟ್ ಮಾಡುವವರಿಗೆ ಮರೆವಿನ ಸಮಸ್ಯೆ ಬೇಗ ಬರುವುದು

ಸಕ್ಕರೆಯಂಶವನ್ನು ಕಮ್ಮಿ ಮಾಡಿ

ಸಕ್ಕರೆಯಂಶವನ್ನು ಕಮ್ಮಿ ಮಾಡಿ

ಸಕ್ಕರೆಯನ್ನು ಬಳಸುವ ಬದಲು ಜೇನನ್ನು ಬಳಸುವುದು ಒಳ್ಳೆಯದು.

ಪುಸ್ತಕ ಓದಿ

ಪುಸ್ತಕ ಓದಿ

ಓದುವ ಅಭ್ಯಾಸ ಜ್ಞಾಪಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಮತ್ತು ಏಕಾಗ್ರತೆಯನ್ನೂ ಬೆಳೆಸುತ್ತದೆ.

Antioxidants ಅಧಿಕವಿರುವ ಆಹಾರ ತಿನ್ನಿ

Antioxidants ಅಧಿಕವಿರುವ ಆಹಾರ ತಿನ್ನಿ

Antioxidants ಮಿದುಳಿನ ಆರೋಗ್ಯಕ್ಕೆ ಅತ್ಯವಶ್ಯಕ. ಆದ್ದರಿಂದ ಈ ಅಂಶವಿರುವ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ಮಿದುಳಿನ ಆರೋಗ್ಯಕ್ಕೆ ಹೃದಯದ ಆರೋಗ್ಯ ಕೂಡ ಮುಖ್ಯ

ಮಿದುಳಿನ ಆರೋಗ್ಯಕ್ಕೆ ಹೃದಯದ ಆರೋಗ್ಯ ಕೂಡ ಮುಖ್ಯ

ಮಿದುಳಿಗೆ ರಕ್ತ ಸಂಚಾರ ಸರಿಯಾಗಿ ಆಗದಿದ್ದರೆ ಮಿದುಳಿನ ಸಾಮರ್ಥ್ಯ ಕಡಿಮೆಯಾಗುವುದು. ಆದ್ದರಿಂದ ಹೃದಯ ಆರೋಗ್ಯದ ಕಡೆಯೂ ಗಮನ ಕೊಡಿ.

ಬುದ್ಧಿ ಶಕ್ತಿಯನ್ನು ಹರಿತಗೊಳಿಸುವ ಆಟಗಳು

ಬುದ್ಧಿ ಶಕ್ತಿಯನ್ನು ಹರಿತಗೊಳಿಸುವ ಆಟಗಳು

ಕೆಲವೊಂದು ಆಟಗಳು ನಮ್ಮ ಬುದ್ಧಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಚುಟುಕು, ಚೆಸ್ ಈ ರೀತಿಯ ಆಟಗಳನ್ನು ಆಡುತ್ತಿದ್ದರೆ 60ರ ಬಳಿಕ 'ಅರಳು ಮರಳು' ಉಂಟಾಗುವುದಿಲ್ಲ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.

 ರಿಲ್ಯಾಕ್ಸ್

ರಿಲ್ಯಾಕ್ಸ್

ದಿನಾ ಕೆಲಸ ಅಂತಾ ಒದ್ದಾಡುವ ಬದಲು ಕೆಲವೊಮ್ಮೆ ಚಿಕ್ಕ ಬ್ರೇಕ್ ತೆಗೆದುಕೊಂಡು ಸುಂದರ ತಾಣಗಳನ್ನು ನೋಡಲು ತೆರಳಿ. ಇದರಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ ನೆಮ್ಮದಿ ದೊರೆಯುವುದು.

 ಪ್ರಾಣಯಾಮ

ಪ್ರಾಣಯಾಮ

ಪ್ರಾಣಯಾಮ ಮಾಡುವವರಿಗೆ ಮರೆವಿನ ಕಾಯಿಲೆ ಬರುವುದಿಲ್ಲ ಅಲ್ಲದೆ ಈ ರೀತಿ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

 ಅನಾರೋಗ್ಯಕರ ಆಹಾರಕ್ರಮದಿಂದ ದೂರವಿರಿ

ಅನಾರೋಗ್ಯಕರ ಆಹಾರಕ್ರಮದಿಂದ ದೂರವಿರಿ

ಅನಾರೋಗ್ಯಕರ ಆಹಾರಕ್ರಮ ನಿಮ್ಮ ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ಮಿದುಳಿನ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ಆರೋಗ್ಯಕರ ಡಯಟ್ ಪಾಲಿಸಿ.

English summary

A-Z Of A Lifestyle To Increase Intelligence

A proper lifestyle to increase intelligence includes good habits like sleeping enough, eating right and doing some exercise.
X
Desktop Bottom Promotion