For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯಲ್ಲಿ ಅಡಗಿರುವ 9 ಅಲರ್ಜಿ ಸ್ಪಾಟ್ಸ್

|

ಸಾಕಷ್ಟು ಜನರು ಅಲರ್ಜಿಯಿಂದ ಬಳಲುತ್ತಾರೆ. ಆದರೆ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಈ ಅಲರ್ಜಿಯ ಕಾರಣಗಳ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇರುವುದಿಲ್ಲ. ಅಲರ್ಜಿಗಳು ಸಾಮಾನ್ಯವಾಗಿ ಹೊರಗಿನ ವಾತಾವರಣ ಹಾಗೂ ಅಲ್ಲಿನ ಕಲುಷಿತ ನೀರು ಅಥವಾ ವಸ್ತುಗಳಿಂದ ಬರಬಹುದೆಂದು ಎಲ್ಲರೂ ಭಾವಿಸುತ್ತಾರೆ. ಆದರೆ ನಿಜಾಂಶ ಬೇರೆನೇ ಇದೆ!

ಹೊರಗಿನಿಂದ ಉಂಟಾಗುವ ಅಲರ್ಜಿಯೂ ಒಂದೆಡೆಯಾದರೆ ಇದಕ್ಕಿಂತ ಹೆಚ್ಚಾಗಿ ನಿಮ್ಮ ಮೇಲೆ ಉಂಟಾಗುವ ಅಲರ್ಜಿ ಮೂಲ ನಿಮ್ಮ ಮನೆಯಲ್ಲಿಯೇ ಇದೆ ಎಂದರೆ ನಂಬುವಿರೆ? ಇಲ್ಲಿ ನಿಮ್ಮ ಮನೆಯಲ್ಲಿ ಅಡಗಿರುವ ಅಲರ್ಜಿ ಉಂಟುಮಾಡುವ ಸ್ಥಳಗಳನ್ನು ಹೇಳಲಾಗಿದೆ. ಇದು ಅಲರ್ಜಿಯ ಬಗ್ಗೆ ಎಚ್ಚೆತ್ತುಕೊಳ್ಳಲು ಸಹಾಯಕವಾಗಬಹುದು.

1. ಬೊಜ್ಜುಬೆಳೆದ / ಧೂಳು ಹಿಡಿದ ಪೀಠೋಪಕರಣಗಳು :

1. ಬೊಜ್ಜುಬೆಳೆದ / ಧೂಳು ಹಿಡಿದ ಪೀಠೋಪಕರಣಗಳು :

ಮನೆಯಲ್ಲಿರುವ ಪೀಠೋಪಕರಣಗಳಲ್ಲಿ ಸ್ವಚ್ಛ ಮಾಡದೇ ಧೂಳಿನ ಕಣಗಳು ಮನೆ ಮಾಡಿರುತ್ತವೆ. ಆದ್ದರಿಂದ ಈ ಪೀಠೋಪಕರಣಗಳು ಮುಚ್ಚಿರಲಿ ಅಥವಾ ತೆಗೆದಿರಲಿ ಅವುಗಳನ್ನು ಆಗಾಗ ಧೂಳು ಕುಳಿತುಕೊಳ್ಳದಂತೆ ಸ್ವಚ್ಛಗೊಳಿಸುತ್ತಲೇ ಇರಬೇಕು. ವ್ಯಾಕ್ಯೂಮ್ ಕ್ಲಿನರ್ ಮೂಲಕ ಧೂಳನ್ನು ಹೋಗಲಾಡಿಸಬೇಕು. ಅಲ್ಲದೇ ನಿಮ್ಮ ಮನೆಯಲ್ಲಿರುವ ಪೀಠೋಪಕರಣಗಳು ತೇವಯುತ ಸ್ಥಳದಲ್ಲಿರದಂತೆ ಎಚ್ಚರವಹಿಸಿ. ಸೋಫಾ ಅಥವಾ ಮಂಚವನ್ನು ಮನೆಗೆ ತಂದರೆ ಅದು ಬಳಸಲು ಸುರಕ್ಷಿತವಾಗಿದೆಯೇ ಎಂದು ಗಮನಿಸಿ ತಕ್ಷಣವೇ ಬಳಸಲು ಪ್ರಾರಂಭಿಸಿ. ಸಾಮಾನ್ಯವಾಗಿ ಇಂತಹ ಪೀಠೋಪಕರಣಗಳು ಬೂಸ್ಟ್ ಬೀಜಕಗಳನ್ನು ಹೊಂದಿರುತ್ತವೆ. ಆದ್ದರಿಂದ ತೇವಾಂಶವಿಲ್ಲದ ಅಥವಾ ಕಡಿಮೆ ತೇಮಾಂಶವಿರುವ ಸ್ಥಳಗಳಲ್ಲಿಯೇ ಈ ಪೀಠೋಪಕರಣಗಳನ್ನು ಇಡಿ. ಚರ್ಮ, ವಿನೈಲ್ ಅಥವಾ ನಯವಾದ ಮೇಲ್ಮೈ ಇರುವ ಪೀಠೋಪಕರಣಗಳನ್ನು ಆರಿಸಿಕೊಳ್ಳಿ. ಅತೀವವಾಗಿ ಬೊಜ್ಜುಬೆಳೆದ (upholstered furniture) ಪೀಠೋಪಕರಣಗಳನ್ನು ಕೊಂಡುಕೊಳ್ಳದಿರುವುದು ಒಳಿತು.

2. ಬೆಡ್ ಶೀಟ್ ಮತ್ತು ಕಂಫರ್ಟ್ಸ್

2. ಬೆಡ್ ಶೀಟ್ ಮತ್ತು ಕಂಫರ್ಟ್ಸ್

ಪ್ರತಿದಿನ ನೀವು ನಿಮ್ಮ ಹಾಸಿಗೆಯಲ್ಲಿ ಎಷ್ಟು ಡೆಡ್ ಸ್ಕಿನ್ ಜೀವಕೋಶಗಳನ್ನು ಹೊಂದುತ್ತೀರೆಂದು ಊಹಿಸಲು ಸಾಧ್ಯವಿಲ್ಲ! ದಿನದಲ್ಲಿ 8 ಗಂಟೆಗಳ ಕಾಲ ಬೆಡ್ ನಲ್ಲಿ ಮಲಗಿರುವುದರಿಂದ ಡೆಡ್ ಸ್ಕಿನ್ ಗಳು ಧೂಳಿನ ಕಣಗಳನ್ನು ಆಕರ್ಷಿಸುತ್ತವೆ. ನೀವು ಚರ್ಮಕ್ಕೆ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಲು ಹಾಸಿಗೆ ಮತ್ತು ದಿಂಬಿನ ಮೇಲೆ ಅಲರ್ಜಿಯನ್ ನಿರೋಧಕ ಹೊರಗವಚಗಳನ್ನು ಹಾಕಬಹುದು. ಪ್ರತಿವಾರ ನಿಮ್ಮ ಬೆಡ್ ಶೀಟ್ (ಮೇಲ್ ಹೊದಿಕೆ) ಮತ್ತು ದಿಂಬಿನ ಕವರ್ ಗಳನ್ನು ತೊಳೆಯಿರಿ. ಕೈನಲ್ಲಿ ಅಥವಾ ವಾಶಿಂಗ್ ಮಶಿನ್ ಗಳಲ್ಲಿ ತೊಳೆಯಬಹುದಾದಂತಹ ಹಾಸಿಗೆ ಬಟ್ಟೆಗಳನ್ನೇ ಕೊಂಡುಕೊಳ್ಳಿ.

3. ಬಾತ್ ರೂಮ್ ಗಳು:

3. ಬಾತ್ ರೂಮ್ ಗಳು:

ನಿಮ್ಮ ಬಾತ್ ರೂಮ್ ಶವರ್ ಅಂಚುಗಳಲ್ಲಿ ಬೆಳೆಯುವ ಶಿಲೀಂದ್ರಗಳನ್ನು ಎಂದಾದರೂ ಗಮನಿಸಿದ್ದೀರಾ? ಇದು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಕಾಣಬಹುದು. ಸಾಮಾನ್ಯವಾಗಿ ಬೂಸ್ಟ್ ಬೀಜಕಗಳು ಬೆಚ್ಚಗಿನ ಮತ್ತು ಒದ್ದೆಯಾದ ಸ್ಥಳದಲ್ಲಿ ಕಂಡುಬರುತ್ತವೆ ಮತ್ತು ನಿಮ್ಮ ಬಾತ್ ರೂಮ್ ಇದರ ಬೆಳವಣಿಗೆಗೆ ಉತ್ತಮ ಸ್ಥಳಾವಕಾಶವನ್ನು ಒದಗಿಸುತ್ತದೆ. ಈ ಕಪ್ಪು ಶಿಲೀಂದ್ರಗಳು ಕಣ್ಣಿಗೆ ಕಾಣದ ಸ್ಥಳಗಳಲ್ಲಿಯೇ ಬೆಳೆಯುತ್ತವೆ. ಇದು ಗೋಡೆಯ ಹಿಂದೆ ಮತ್ತು ನೆಲದ ಅಡಿಯಲ್ಲಿ ಬೆಳೆದು ಆ ಸ್ಥಳಗಳನ್ನು ಅಶುದ್ಧಗೊಳಿಸುತ್ತದೆ.

4. ಮೃದು ಆಟಿಕೆಗಳು

4. ಮೃದು ಆಟಿಕೆಗಳು

ಮೃದು ಆಟಿಕೆಗಳಲ್ಲಿ ಅವುಗಳ ಮುಗ್ಧತೆಯನ್ನಷ್ಟೇ ನೋಡುತ್ತೇವೆ. ಆದರೆ ನೆನಪಿಡಿ ಅವೂ ಕೂಡ ನಿಮ್ಮ ಮಗುವಿಗೆ ಅಲರ್ಜಿ ತರಬಹುದು. ಟೆಡ್ಡಿ ಬೇರ್ ಗಳು ನೋಡಲು ಅತ್ಯಂತ ಸುಂದರವೇ ಆಗಿದ್ದರೂ ಅವುಗಳ ಒಳಗೆ ಧೂಲು ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ ನಿಮ್ಮ ಮಗುವಿನಲ್ಲಿ ಅಲರ್ಜಿ ಅಂಶಗಳು ಕಾಣೀಸಿಕೊಳ್ಳಬಹುದು. ಆದ್ದರಿಂದ ತೇವಯುಕ್ತ ಪ್ರದೇಶದಲ್ಲಿ ಮೃದು ಆಟಿಕೆಗಳನ್ನಿಡದೆ ಅವನ್ನು ಸಂರಕ್ಷಿಸಿ ನಂತರವಷ್ಟೆ ಮಗುವಿಗೆ ಆಡಲು ಕೊಡಿ. ಎಷ್ಟಂದರೂ ಮಕ್ಕಳಿಗೆ ಟೆಡ್ಡಿ ಬೇರ್ ಇಷ್ಟ ತಾನೇ?

5. ಅಡುಗೆ ಮನೆ

5. ಅಡುಗೆ ಮನೆ

ನಿಮ್ಮ ಅಡುಗೆ ಮನೆ ನಿಮ್ಮ ನೆಚ್ಚಿನ ಸ್ಥಳವಾಗಿರಬಹುದು. ಆದರೆ ಅಡುಗೆ ಮನೆಯಲ್ಲಿ ಬೀಳುವ ನೀರು ಚೆಲ್ಲುವ ಆಹಾರ ಬೂಸ್ಟ್ ಗಳನ್ನು ಆಯಸ್ಕಾಂತದಂತೆ ಸೆಳೆಯುತ್ತವೆ. ಆದ್ದರಿಂದ ನಿಮ್ಮ ಅಡುಗೆ ಮನೆಯನ್ನು ಅತ್ಯಂತ ಸ್ವಚ್ಛವಾಗಿಟ್ಟುಕೊಳ್ಳಿ. ನೀರು ಚೆಲ್ಲಿದ ಕೂಡಲೇ ಒರೆಸಿ ಡ್ರೈಯಾಗಿಟ್ಟುಕೊಳ್ಳಿ. ರೆಫ್ರಿಜರೇಟರ್ ನೀರು ತೊಟ್ಟಿಕ್ಕಿವ ಸ್ಥಳದಲ್ಲಿ ಟ್ರೇಯನ್ನಿಟ್ಟು ನೀರು ನೆಲಕ್ಕೆ ಬೀಳದಂತೆ ನೋಡಿಕೊಳ್ಳಿ. ಕೊಳೆತ ಆಹಾರಗಳು ಶಿಲೀಂದ್ರ ಬೆಳೆಯಲು ಕಾರಣವಾಗಬಲ್ಲದು. ಅದ್ದರಿಂದ ಅಂತಹ ತಿನಿಸುಗಳನ್ನಿಡದೇ ಅಡುಗೆ ಮನೆಯನ್ನು ಸ್ವಚ್ಛವಾಗಿಡಿ.

6. ಪಾಟ್ ನಲ್ಲಿ ಬೆಳೆಸುವ ಸಸ್ಯಗಳು

6. ಪಾಟ್ ನಲ್ಲಿ ಬೆಳೆಸುವ ಸಸ್ಯಗಳು

ನೀವು ಮನೆಯಲ್ಲಿ ಮಡಿಕೆಗಳಲ್ಲಿ ಸಸಿಗಳನ್ನು ಬೆಳೆಸುವವರಾಗಿದ್ದರೆ ಅಲರ್ಜಿಯಿಂದ ದೂರವುಳಿಯಲು ಸ್ವಲ್ಪ ಎಚ್ಚರವಹಿಸಬೇಕು! ಶಿಲೀಂದ್ರಗಳು ಈ ಪಾಟ್ ಗಳಲ್ಲಿ ಬೆಳೆಯಬಹುದು. ಮತ್ತು ಇವು ನೆಲದಲ್ಲಿ ಹರಡಬಹುದು. ಆದ್ದರಿಂದ ನಿಯಮಿತವಾಗಿ ಹಾಳಾದ, ಕೊಳೆತ ಎಲೆಗಳನ್ನು ಗಿಡದಿಂದ ಬೇರ್ಪಡಿಸುತ್ತಿರಿ. ಗಿಡ ಬೆಳೆಸಲು ತಳದಲ್ಲಿ ತಟ್ಟೆಗಳನ್ನು ಬಳಸಿ ಮತ್ತು ಗಿಡಕ್ಕೆ ಹೆಚ್ಚು ನೀರುಣಿಸುವುದನ್ನು ತಪ್ಪಿಸಿ.

7. ಸಾಕುಪ್ರಾಣಿಗಳು

7. ಸಾಕುಪ್ರಾಣಿಗಳು

ಸಾಕಷ್ಟು ಜನರು ಅಲರ್ಜಿ ಎಂಬ ಕಾರಣಕ್ಕೆ ಸಾಕು ಪ್ರಾಣಿಗಳನ್ನು ಇಷ್ಟ ಪಡುವುದಿಲ್ಲ. ಅವುಗಳ ತುಪ್ಪಳವೇ ಅಲರ್ಜಿಗೆ ಕಾರಣ ಎನ್ನುವುದು ಅವರ ವಾದ. ಆದರೆ ಸತ್ಯ ಬೇರೆಯೆ! ಸಾಕುಪ್ರಾಣಿಗಳ ಮೂತ್ರ, ಲಾಲಾರಸ ಇವು ಅಲರ್ಜಿಯನ್ನು ಉಂಟು ಮಾಡಬಹುದು. ಅಲ್ಲದೇ ಸಾಕುಪ್ರಾಣಿಗಳ ಡೆಡ್ ಸ್ಕಿನ್ ಹೊಟ್ಟುಗಳು ಉದುರಿ ನಿಮ್ಮ ಹಾಸಿಗೆಯಲ್ಲಿ ಹಾಗೆಯೇ ಉಳಿಯಬಹುದು. ಆದ್ದರಿಂದ ನಿಮ್ಮ ಸಾಕುಪ್ರಾಣಿಗಳನ್ನು ನಿಮ್ಮ ಮಲಗುವ ಕೋಣೆಯಿಂದ ಹೊರಗಿಡಿ.

8. ರಗ್ಗುಗಳು ಮತ್ತು ಮ್ಯಾಟ್ ಗಳು

8. ರಗ್ಗುಗಳು ಮತ್ತು ಮ್ಯಾಟ್ ಗಳು

ಕಾರ್ಪೆಟ್ಸ್ (ರತ್ನಗಂಬಳಿಗಳು) ಮತ್ತು ಮ್ಯಾಟ್ಸ್ ಗಳು ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಧೂಳಿನ ಕಣಗಳೂ ಅವುಗಳಲ್ಲಿ ಶೇಖರಣೆಯಾಗಿರುತ್ತವೆ. ಅವು ಅತ್ಯಂತ ಸೂಕ್ಷ್ಮ ಧೂಳಿನ ಕಣಗಳಾಗಿರಬಹುದು. ಇವು ಅಲರ್ಜಿ ಪ್ರಚೋದಕಗಳು. ನೀಮ್ಮಲ್ಲಿ ಮ್ಯಾಟ್ ಗಳನ್ನು ಸ್ವಚ್ಛಗೊಳಿಸಲು ಅಧಿಕ ಹಣ ಹಾಗೂ ಸಮಯವಿಲ್ಲದಿದ್ದರೆ ಕನಿಷ್ಟ ಅವು ಒದ್ದೆಯಾಗದಂತೆ ನೋಡಿಕೊಳ್ಳಿ.

9. ಪುಸ್ತಕಗಳು

9. ಪುಸ್ತಕಗಳು

ಸಾಮಾನ್ಯವಾಗಿ ಪುಸ್ತಕಗಳು ಮನುಷ್ಯರ ಸ್ನೇಹಿತ. ಹಾಗೆಯೇ ಸೂಕ್ಷ್ಮಾಣು ಜೀವಿಗಳ ಸ್ನೇಹಿತ ಕೂಡ ಆಗಬಹುದು! ನಿಮ್ಮ ಪುಸ್ತಕಗಳ ಕಪಾಟುಗಳನ್ನು ಆಗಾಗ ಸ್ವಚ್ಛಗೊಳಿಸದಿದ್ದರೆ ಸೂಕ್ಷ್ಮಾಣು ಜೀವಿಗಳು, ಬೂಸ್ಟ್ ಬೀಜಕಗಳು ಹುಟ್ಟಿಕೊಳ್ಳಬಹುದು.ಪುಸ್ತಕಗಳನ್ನು ಮುಚ್ಚಿಡಬಹುದಾದ ಸ್ಥಳದಲ್ಲಿ ಸಂಗ್ರಹಿಸಿಡಿ. ಇದು ನಿಮ್ಮ ಮುತುವರ್ಜಿಯನ್ನು ತೋರಿಸುವುದಲ್ಲದೆ ಅಲರ್ಜಿಯಿಂದಲೂ ನಿಮ್ಮನ್ನು ದೂರವಿಡಬಲ್ಲದು.

ಈ ಮೇಲಿನ ಯಾವುದೇ ಮುತುವರ್ಜಿಗಳೂ ಉಪಯೋಗವಾಗದೇ ಇದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಮುಂದಿನ ವಾರಾಂತ್ಯದವರೆಗೂ ಕಾಯದೆ ನಿಮ್ಮ ಅಲರ್ಜಿ ಖಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಿ. ನಿರ್ಲಕ್ಷಿಸದಿರಿ !

English summary

9 Hidden Allergy Hot Spots in Your Home | ನಿಮ್ಮ ಮನೆಯಲ್ಲಿ ಅಡಗಿರುವ 9 ಅಲರ್ಜಿ ಸ್ಪಾಟ್ಸ್

A lot of people suffer from allergy. If you are one of those confused people who can’t understand the reason behind the unusual signs given by your body then this is the right page for you.
Story first published: Tuesday, June 11, 2013, 18:03 [IST]
X