For Quick Alerts
ALLOW NOTIFICATIONS  
For Daily Alerts

ತೆಳ್ಳಗಾಗಬೇಕೆಂದು ಈ ತಪ್ಪುಗಳನ್ನು ಮಾಡದಿರಿ

By Super
|

ಮೈ ತೂಕ ಕಮ್ಮಿ ಮಾಡಬೇಕೆಂದು ಕೆಲವರು ತುಂಬಾ ಅನಾರೋಗ್ಯಕರವಾದ ವಿಧಾನವನ್ನು ಅನುಸರಿಸುತ್ತಾರೆ. ತೂಕವನ್ನು ಯಾವ ರೀತಿಯಲ್ಲಿ ಕಮ್ಮಿ ಮಾಡಿದರೆ ಆರೋಗ್ಯಕರ ಎಂಬ ತಿಳಿವಳಿಕೆಯಿಲ್ಲದೆ, ತಪ್ಪಾದ ಡಯಟ್ ಕ್ರಮ ಮತ್ತು ವ್ಯಾಯಾಮವನ್ನು ಬಹಳ ಕಟ್ಟು ನಿಟ್ಟಾಗಿ ಮಾಡುತ್ತಾರೆ, ಆದರೆ ಪರಿಣಾಮ ಮಾತ್ರ ಶೂನ್ಯ!

ಆದರೆ ನಾವೆಲ್ಲಾ ನಾವು ಮಾಡುತ್ತಿರುವ ತಪ್ಪೇನು ಎಂದು ಯೋಚಿಸುವುದಿಲ್ಲ! ನಾನು ತುಂಬಾ ಪ್ರಯತ್ನ ಪಟ್ಟೆ, ಆದರೂ ತೂಕ ಕಮ್ಮಿಯಾಗಿಲ್ಲ ಎಂದು ಬೇಜಾರು ಪಟ್ಟುಕೊಳ್ಳುತ್ತಾರೆ. ನೀವು ನಿಮ್ಮ ಮೈ ತೂಕ ಕಮ್ಮಿಯಾಗಬೇಕು, ಆದರೆ ಅದು ಆರೋಗ್ಯಕರವಾಗಿರಬೇಕು ಎಂದು ಬಯಸುವುದಾದರೆ ಈ ತಪ್ಪುಗಳನ್ನು ಮಾಡಿದಿರಿ.

1. ಬೆಳಗಿನ ಉಪಹಾರ ತಪ್ಪಿಸುವುದು

1. ಬೆಳಗಿನ ಉಪಹಾರ ತಪ್ಪಿಸುವುದು

ಬೆಳಗಿನ ಉಪಹಾರ ತುಂಬಾ ಮುಖ್ಯವಾದದ್ದು. ನೀವು ರಾತ್ರಿಯ ದೀರ್ಘ ಉಪವಾಸದ ನಂತರ ತೆಗೆದುಕೊಳ್ಳುವ ಈ ಆಹಾರ ಬಹಳ ಮುಖ್ಯವಾದದ್ದು. ಎಲ್ಲದಕ್ಕಿಂತ ಹೆಚ್ಚಾಗಿ ಈ ಉಪಹಾರ ದಿನದ ಚಟುವಟಿಕೆಗಳನ್ನು ನಿರ್ವಹಿಸಲು ಶಕ್ತಿ ನೀಡುತ್ತದೆ. ಮತ್ತು ಇದು ಮೆಟಬಾಲಿಸಂ ಸರಾಗವಾಗಿ ಕಾರ್ಯನಿರ್ವಹಿಸಲು ನೆರವು ನೀಡುತ್ತದೆ.

ಕ್ಲಿಕ್ ಮಾಡಿ

2. ಸರಿಯಾದ ಹೊತ್ತಿಗೆ ಊಟ ಮಾಡದಿರುವುದು

2. ಸರಿಯಾದ ಹೊತ್ತಿಗೆ ಊಟ ಮಾಡದಿರುವುದು

ಸ್ವಲ್ಪ ಸ್ವಲ್ಪ ಆಹಾರವನ್ನು ಆಗಾಗ ತಿನ್ನುವುದು ತುಂಬಾ ಹೊತ್ತಿನವರೆಗೆ ಏನೂ ತಿನ್ನದಿರುವುದಕ್ಕಿಂತ ಒಳ್ಳೆಯದು. ಅದೂ ಅಲ್ಲದೆ ಹೀಗೆ ತುಂಬಾ ಹೊತ್ತಿನವರೆಗೆ ಏನೂ ತಿನ್ನದಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮೆಟಬಾಲಿಸಂನನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಏರುಪೇರುಗೊಳಿಸುತ್ತದೆ.

3. ತಪ್ಪಾದ ಜೀವನಶೈಲಿ

3. ತಪ್ಪಾದ ಜೀವನಶೈಲಿ

ಅನಿಯಮಿತ ಕೆಲಸದ ಅವಧಿ, ನಿಗದಿತ ಸಮಯದಲ್ಲಿ ಊಟ ಮಾಡದಿರುವುದು ಮತ್ತು ದಿನನಿತ್ಯದ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮಾಡದೆ ಮನಸ್ಸಿಗೆ ಬಂದಾಗ ಮಾಡುವುದು ಇವೆಲ್ಲವೂ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದು ಮೆಟಬಾಲಿಸಂನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ಆಹಾರದ ಜೀರ್ಣಕ್ರಿಯೆ ಮತ್ತು ಕ್ಯಾಲೋರಿಗಳನ್ನು ಉರಿಸುವ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ.

4. ಅನಾರೋಗ್ಯಕರವಾದ ಆಹಾರವನ್ನು ಯಾವಾಗಲೂ ತಿನ್ನುವುದು

4. ಅನಾರೋಗ್ಯಕರವಾದ ಆಹಾರವನ್ನು ಯಾವಾಗಲೂ ತಿನ್ನುವುದು

ಕರಿದ ತಿಂಡಿಗಳನ್ನು ಹೆಚ್ಚಾಗಿ ತಿನ್ನುವುದರಿಂದ ನೀವು ತೂಕವನ್ನು ಇಳಿಸಲು ಸಾಧ್ಯವಿಲ್ಲ! ಎಣ್ಣೆಯ ಪದಾರ್ಥಗಳು ಮತ್ತು ಕೊಬ್ಬಿನಂಶ ಹೆಚ್ಚಿರುವ ತಿಂಡಿಗಳು ಮೆಟಬಾಲಿಸಂನ ಮೇಲೆ ಪರಿಣಾಮ ಬೀರಿ ಕ್ಯಾಲೋರಿಗಳ ಶೇಖರಣೆ ಹೆಚ್ಚಿಸುತ್ತದೆ.

5. ಜಲರೂಪದಲ್ಲಿದ್ದರೆ ಕ್ಯಾಲೋರಿಗಳಿರುವುದಿಲ್ಲ ಎಂದುಕೊಳ್ಳಬೇಡಿ!

5. ಜಲರೂಪದಲ್ಲಿದ್ದರೆ ಕ್ಯಾಲೋರಿಗಳಿರುವುದಿಲ್ಲ ಎಂದುಕೊಳ್ಳಬೇಡಿ!

ನಿರ್ಜಲೀಕರಣವನ್ನು ಕಡಿಮೆಮಾಡಲು ಕುಡಿಯಬಹುದು. ಆದರೆ ಹೆಚ್ಚಾಗಿ ಕುಡಿದರೆ ತೂಕ ಹೆಚ್ಚುತ್ತದೆ! ಕುಡಿಯುವುದು ಎಂದರೆ ಅತಿಯಾದ ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕರ. ಇದು ನಿಮ್ಮ ಮೆಟಬಾಲಿಸಂ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ವ್ಯಾಯಾಮದ ಪರಿಣಾಮ ದೇಹದ ಮೇಲೆ ಉಂಟಾಗದಂತೆ ತಡೆಯುತ್ತದೆ.

6. ಒಂದೇ ಬಾರಿ ಹೆಚ್ಚು ಆಹಾರ ತಿನ್ನುವುದು

6. ಒಂದೇ ಬಾರಿ ಹೆಚ್ಚು ಆಹಾರ ತಿನ್ನುವುದು

ನೀವು ದೀರ್ಘಾವದಿಯ ಅಂತರದ ನಡುವೆ ಆಹಾರ ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದುಕೊಂಡಿದ್ದರೆ ಮತ್ತೊಮ್ಮೆ ಯೋಚಿಸಿ! ಇದು ಸರಿಯಾದ ಕ್ರಮವಲ್ಲ. ಆದ್ದರಿಂದ ಊಟ ಅಥವಾ ತಿಂಡಿಯ ನಡುವೆ ಹೆಚ್ಚಿನ ಅವಧಿಯ ಅಂತರವಿರದಂತೆ ನೋಡಿಕೊಳ್ಳಿ.

7. ಯಾವುದೋ ಒಂದು ಆಹಾರವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು

7. ಯಾವುದೋ ಒಂದು ಆಹಾರವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು

ಕೆಲವು ಬಗೆಯ ಆಹಾರಗಳನ್ನು ಹೆಚ್ಚಾಗಿ ತಿನ್ನಬೇಡಿ ಎಂದು ಹೇಳಲಾಗುತ್ತದೆಯೇ ಹೊರತು ಅವುಗಳನ್ನು ತಿನ್ನಲೇ ಬೇಡಿ ಎಂದಲ್ಲ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಅದೇ ಮಿತವಾಗಿದ್ದರೆ ಎಲ್ಲವೂ ಹಿತವಾಗಿರುತ್ತದೆ.

ಆದ್ದರಿಂದಲೇ ಹೇಳಿದ್ದು ತೂಕ ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು ಎಂದು ತಿಳಿದುಕೊಳ್ಳುವುದರ ಜೊತೆಯಲ್ಲೇ ಏನೇನು ಮಾಡಬಾರದು ಎಂದು ಕೂಡ ತಿಳಿದುಕೊಳ್ಳುವುದು ಉತ್ತಮ. ನಿಮಗೆ ಅನುಮಾನಗಳಿದ್ದರೆ ವೃತ್ತಿಪರ ಡಯಟೀಷಿಯನ್ಗಳ ಸಲಹೆ ತೆಗೆದುಕೊಳ್ಳಿ. ತಪ್ಪಾದ ಕ್ರಮ ಅನುಸರಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.

English summary

7 Things You Should Never Do To Lose Weight

The attempt to lose weight may lead you to adopt various methods – including diets and exercise regimes – that you may spend days over, without really achieving any results.So, where have you been going wrong? Confused? Then read on for the possibilities and for what NOT to do.
 
X
Desktop Bottom Promotion