For Quick Alerts
ALLOW NOTIFICATIONS  
For Daily Alerts

ಈ ಕೆಟ್ಟ ಹವ್ಯಾಸಗಳಿಗೆ ಇಂದೇ ಗುಡ್ ಬೈ ಹೇಳಿ!

By Super
|

ತಡರಾತ್ರಿಯಲ್ಲಿ ಪಿಜ್ಜಾ ಮತ್ತು ಚಾಕ್ಲೇಟ್ ಕೇಕ್ ಗಳನ್ನು ತಿಂದು ಎಂಜಾಯ್ ಮಾಡಿ ದಿನವನ್ನು ಮುಗಿಸಬೇಕು ಎನಿಸುವುದು ಸಹಜ. ಆದರೆ ನಿಮ್ಮ ದೇಹಕ್ಕೆ ಇವುಗಳು ಸ್ವಲ್ಪವೂ ಉಪಕಾರ ಮಾಡೋದಿಲ್ಲ. ಬಹಳ ದಿನಗಳವರೆಗೆ ಇದೇ ರೀತಿಯ ತಡರಾತ್ರಿಯ ಹವ್ಯಾಸ ಮುಂದುವರೆಸಿದರೆ ಮೈಯ್ಯಿಗೂ ಮನಸ್ಸಿಗೂ ಆರೋಗ್ಯಕ್ಕೂ ಕೆಟ್ಟ ಪರಿಣಾಮ ಬೀರೋದ್ರಲ್ಲಿ ಸಂಶಯವೇ ಇಲ್ಲ.

ಇಂಥ ತಡರಾತ್ರಿಯ ಕೆಟ್ಟ ಹವ್ಯಾಸಗಳಿಗೆ ನೀವು ಕಟ್ಟುಬಿದ್ದಿದ್ದರೆ ಚಿಂತೆ ಮಾಡಬೇಡಿ. ಇವುಗಳಿಗೆ ಗುಡ್ ಬೈ ಹೇಳಿ ಹೊಸ ದಿನಚರಿ ರೂಢಿಸಿಕೊಳ್ಳೋದಕ್ಕೆ ಸಮಯವಂತೂ ಮೀರಿಲ್ಲ. ಕೆಟ್ಟ ಹವ್ಯಾಸಗಳನ್ನು ಇಲ್ಲಿಯೇ ನಿಲ್ಲಿಸಿ ಮತ್ತು ಉತ್ತಮ ಆರೋಗ್ಯವನ್ನು ಆಸ್ವಾದಿಸಿ ಖುಷಿಯಾಗಿರಿ.

1. ಮೂಗು ಮತ್ತು ಬಾಯಲ್ಲಿ ಬೆರಳಾಡಿಸುವುದು

1. ಮೂಗು ಮತ್ತು ಬಾಯಲ್ಲಿ ಬೆರಳಾಡಿಸುವುದು

ಈ ಅಸಹ್ಯ ಎನಿಸುವ ರೂಢಿ ಕೆಟ್ಟ ಹವ್ಯಾಸಗಳಲ್ಲೊಂದು. ಇದು ನಿಮ್ಮ ಾರೋಗ್ಯಕ್ಕೆ ಮಾತ್ರ ಮುಳುವಾದ ಹವ್ಯಾಸವಲ್ಲ. ಜೊತೆಗೆ ಸಾಮಾಜಿಕ ಅಶ್ಲೀಲತೆಯೂ ಹೌದು. ಮೂಗಿನಲ್ಲಿ ಬೆರಳಾಡಿಸುವುದರಿಂದ ಹತ್ತು ಹಲವು ವೈರಸ್ ಗಳು ಹರಡಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತವೆ. ಕೊಳಕು ವಸ್ತುಗಳನ್ನು ಮುಟ್ಟಿ ಅದೇ ಬೆರಳನ್ನು ಮೂಗಿನಲ್ಲಿ ತೂರಿಸುವುದರಿಂದ ನೀವು ರೋಗಗ್ರಸ್ತರಾಗಿ ಡಾಕ್ಟರ್ ಕ್ಲಿನಿಕ್ಕಿಗೆ ಅಲೆಯುವಂತಾಗುತ್ತದೆ.

2. ಬಂಗಿ ಕುಡಿಯುವುದು

2. ಬಂಗಿ ಕುಡಿಯುವುದು

ಬಂಗಿ ಕುಡಿಯುವುದರಿಂದ ಸಾವಿಗೂ ಕರೆ ಕೊಟ್ಟಂತಾಗುತ್ತದೆ. ಜಗತ್ತಿನಾದ್ಯಂತ ಹತ್ತಾರು ಜನ ಈ ಕೆಟ್ಟ ಹವ್ಯಾಸದಿಂದ ಆಸ್ಪತ್ರೆ ಸೇರಿದ್ದಾರೆ. ಬಂಗಿ ಕುಡಿಯುವ ಚಟ ನಿರಂತರವಾಗಿದ್ದರೆ ಲಿವರ್ ಸಮಸ್ಯೆ, ತೂಕ ಹೆಚ್ಚಾಗುವಿಕೆ, ತಲೆ ಸುತ್ತುವಿಕೆ ಮತ್ತಿತರ ತೀವ್ರ ಗಂಭೀರ ಸಮಸ್ಯೆಗಳು ಗ್ಯಾರಂಟಿ. ಇಂಥ ಘಾತಗಳಿಂದ ಮುಕ್ತಿ ಬೇಕೆಂದರೆ ಬಂಗಿ ಕುಡಿಯುವುದನ್ನು ನಿಂಯತ್ರಣಕ್ಕೆ ತರಬೇಕಷ್ಟೆ.

3. ನಿಶಾಚರಿ ಗೂಬೆಗಳಾಗಬೇಡಿ

3. ನಿಶಾಚರಿ ಗೂಬೆಗಳಾಗಬೇಡಿ

ಗಟ್ಟಿಯಾದ 6-8 ತಾಸುಗಳ ಸುಖನಿದ್ರೆಯ ಕೊರತೆಯಾದರೆ ದೇಹದ ರೋಗ ನಿಯಂತ್ರಣ ಶಕ್ತಿ ಕಡಿಮೆಯಾಗುತ್ತದೆ ಜೊತೆಗೆ ಉಳಿದ ದೇಹದ ಜೈವಿಕ ವ್ಯವಸ್ಥೆಗಳು ಏರುಪೇರಾಗುತ್ತವೆ. ನಿದ್ರೆ ಕಡಿಮೆಯಾಗುವುದರಿಂದ ದೇಹದ ರೋಗ ನಿಯಂತ್ರಣ ಶಕ್ತಿ ಕೊರತೆಯಾಗಿ ಜರ್ಮ್ ಫೈಟರ್ಸ್ ಗಳು ಕಡಿಮೆಯಾಗಿ ಅನಾರೋಗ್ಯ ಹೆಚ್ಚಿಸುತ್ತವೆ.

4. ಏಕಾಂಗಿತನ ಒಳ್ಳೆಯದಲ್ಲ:

4. ಏಕಾಂಗಿತನ ಒಳ್ಳೆಯದಲ್ಲ:

ಉತ್ತಮ ಆರೋಗ್ಯದ ಗುಟ್ಟು ಅಡಗಿರುವುದು ಆರೋಗ್ಯಯುತ ಮತ್ತು ಉಲ್ಲಾಸರಿತ ಮನಸ್ಸಿನಲ್ಲಿ. ನಿಮ್ಮ ಮನಸ್ಸಿಗೆ ಅನಾರೋಗ್ಯ ತಟ್ಟಿದರೆ ನಿಮ್ಮ ರೋಗ ನಿಯಂತ್ರಣ ಶಕ್ತಿಯೂ ಕುಂದಿ ಹತ್ತಾರು ರೋಗಗಳ ಅಭದ್ರತೆಗೆ ಕಾರಣವಾಗುತ್ತದೆ. ನಿಮ್ಮ ಬಹಳಷ್ಟು ಸಮಯವನ್ನು ಏಕಾಂಗಿತನದಿಂದ ದೂರವಿರಿಸಿ ಜನರ ಮಧ್ಯೆ ಕಳೆದರೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮಾನಸಿಕವಾಗಿ ಗಟ್ಟಿಯಾಗಿರುತ್ತೀರಿ. ಮನಸ್ಸಿನ ಒತ್ತಡಗಳು ಕಡಿಮೆ ಮಾಡಿಕೊಂಡು ಸುಖವಾಗಿರಿ.

5. ಹೆಡ್ ಫೋನ್ ಗಳನ್ನು ತಾಸುಗಟ್ಟಲೆ ಕಿವಿಗೆ ತೂರಿಸಿಕೊಳ್ಳಬೇಡಿ

5. ಹೆಡ್ ಫೋನ್ ಗಳನ್ನು ತಾಸುಗಟ್ಟಲೆ ಕಿವಿಗೆ ತೂರಿಸಿಕೊಳ್ಳಬೇಡಿ

ಕೆಲವರು ದಿನಗಟ್ಟಲೆ ಹೆಡ್ ಫೋನ್ ಅಥವಾ ಇಯರ್ ಫೋನ್ ಗಳನ್ನು ಕಿವಿಗೆ ಹಾಕಿಕೊಂಡು ಸಂಗೀತ ಕೇಳುತ್ತಾರೆ. ಸಮಯ ಕಳೆಯುವುದಕ್ಕೆ ಸಂಗೀತ ಕೇಳಬೇಕು, ಆದರೆ ಮೂರ್ನಾಲ್ಕು ಗಂಟೆಗಳ ಕಾಲ ಕಿವಿಗೆ ತೂರಿಸಿಕೊಳ್ಳುವ ರೂಢಿಯಿದ್ದರೆ ಇಂದೇ ಪರೀಕ್ಷೆ ಮಾಡಿಕೊಳ್ಳಿ.

6. ಟಿವಿ ಸಮಸ್ಯೆ

6. ಟಿವಿ ಸಮಸ್ಯೆ

ತಾಸುಗಟ್ಟಲೆ ಮೂರ್ಖರ ಪೆಟ್ಟಿಗೆಯ ಮುಂದೆ ಕುಳಿತುಕೊಂಡರೆ ನಿಮ್ಮ ಹೃದಯ ಮತ್ತು ಕಣ್ಣಿಗೆ ತೊಂದರೆ ತಪ್ಪಿದ್ದಲ್ಲ. ಅತಿಯಾಗಿ ಟಿವಿ ನೋಡುವುದರಿಂದ ಹೃದಯದ ಸಮಸ್ಯೆ, ಪಾರ್ಶ್ವವಾಯು ಮತ್ತು ಬೊಜ್ಜುತನಕ್ಕೆ ವೆಲಕಮ್ ಮಾಡಿದಂತೆ.

7. ಹೈಹೀಲ್ಡ್ ಚಪ್ಪಲಿಗಳ ವೈಯ್ಯಾರ

7. ಹೈಹೀಲ್ಡ್ ಚಪ್ಪಲಿಗಳ ವೈಯ್ಯಾರ

ಪ್ರತಿದಿನ ಹೈ ಹೀಲ್ಡ್ ಧರಿಸುವ ಮಹಿಳೆಯರು ಹತ್ತಾರು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೈ ಹೀಲ್ಡ್ ಗಳು ನಿಮ್ಮ ಹಿಮ್ಮಡಿ ಹಾಗೂ ಸಂಧುಗಳಿಗೆ ಮೊಣಕಾಲು, ಬೆನ್ನು ನೋವಿನ ತೊಂದರೆಗಳನ್ನು ತಂದುಬಿಡುತ್ತವೆ.

8. ಅತಿಯಾದ ಭಾರದ ಚೀಲ ಹೊರುವುದು

8. ಅತಿಯಾದ ಭಾರದ ಚೀಲ ಹೊರುವುದು

ಅತಿಯಾದ ಭಾರದ ಚೀಲಗಳನ್ನು ಹೊತ್ತುಕೊಳ್ಳುವ ನಿರಂತರ ಕೆಲಸವಿದ್ದರೆ ಗಂಭೀರವಾದ ಬೆನ್ನು ನೋವು, ಕುತ್ತಿಗೆ ನೋವು ಮತ್ತು ಭುಜದ ಸಮಸ್ಯೆಗಳಿಗೆ ಕಾರಣ. ಹೀಗಾಗಿ ಆದಷ್ಟು ಅತಿಯಾದ ಭಾರದ ಚೀಲಗಳನ್ನು ಹೊತ್ತುಕೊಳ್ಳುವುದನ್ನು ಕಡಿಮೆ ಮಾಡಿ.

9. ಮೇಕಪ್ ಹಚ್ಚಿಕೊಂಡೇ ಮಲಗಿಕೊಳ್ಳುವುದು

9. ಮೇಕಪ್ ಹಚ್ಚಿಕೊಂಡೇ ಮಲಗಿಕೊಳ್ಳುವುದು

ಹಲವು ಹುಡುಗಿಯರು ಮೇಕಪ್ ಹಚ್ಚಿಕೊಂಡೇ ಮಲಗಿಕೊಳ್ಳುವ ಹವ್ಯಾಸ ಹೊಂದಿರುತ್ತಾರೆ. ಸತತವಾಗಿ ಈ ರೀತಿ ಮಲಗಿದರೆ ಚರ್ಮದ ಸೋಂಕು, ಚರ್ಮದ ಕಲೆಗಳು ಸುಕ್ಕುಗಟ್ಟುವಿಕೆ ಬರಬಹುದು. ಕಣ್ಣಿಗೆ ಅಲರ್ಜಿ, ಇರಿಟೇಷನ್ ಅತಿಯಾದರೆ ದೃಷ್ಟಿ ದೋಷವೂ ಕಾಣಿಸಿಕೊಳ್ಳಬಹುದು.

10. ಹಸಿವಿಲ್ಲದಿದ್ದರೂ ತಿನ್ನುವುದು

10. ಹಸಿವಿಲ್ಲದಿದ್ದರೂ ತಿನ್ನುವುದು

ಹೊಟ್ಟೆ ತುಂಬಿದಾಗಲೂ, ಹಸಿವಿನ ಲಕ್ಷಣ ಇಲ್ಲದೇ ಇದ್ದರೂ ತಿನ್ನುತ್ತ ಕೂತರೆ ದೇಹದ ಕ್ಯಾಲೋರಿ ಅಧಿಕಗೊಂಡು ಬೊಜ್ಜು ಹೆಚ್ಚಾಗಿ ದೇಹಾರೋಗ್ಯ ಹಾಳಾಗುತ್ತದೆ. ಮುಂದೆ ಇದೇ ಕೆಟ್ಟ ಹವ್ಯಾಸ ಸಕ್ಕರೆ ಖಾಯಿಲೆ, ಹಾರ್ಟ್ ಸಮಸ್ಯೆ ಮತ್ತು ಅಸಿಡಿಟಿಗೆ ಮುಕ್ತ ಆಹ್ವಾನ ಕೊಟ್ಟಂತೆ.

11. ಸಿಗರೇಟಿಲ್ಲದೇ ಬದುಕೋದಿಲ್ಲ ಅಂತೀರಾ?

11. ಸಿಗರೇಟಿಲ್ಲದೇ ಬದುಕೋದಿಲ್ಲ ಅಂತೀರಾ?

ದಿನಕ್ಕೆ ಒಂದು ಸಿಗರೇಟ್ ಸೇದಿದರೂ ಸಾಕು: ಶ್ವಾಸಕೋಶ ಹಾಗೂ ಕ್ಯಾನ್ಸರ್ ವಕ್ಕರಿಸಿಕೊಳ್ಳುತ್ತದೆ.ರಕ್ತದ ಉತ್ಪಾದನೆ ಕುಸಿಯುತ್ತದೆ.

12. ಸದಾ ಬಿದ್ದುಕೊಂಡಿರುವುದು

12. ಸದಾ ಬಿದ್ದುಕೊಂಡಿರುವುದು

ಸದಾ ಆಲಸ್ಯದಿಂದ ಬಿದ್ದುಕೊಂಡಿದ್ದರೆ ಮಾನಸಿಕ ದೈಹಿಕ ಆರೋಗ್ಯಕ್ಕೆ ಕುತ್ತು ಬರುತ್ತದೆ. ಮನಸ್ಸಿನ ಒತ್ತಡ ಜಾಸ್ತಿಯಾಗುತ್ತದೆ.

13. ಔಷಧಿಗಳ ಮೇಲೇ ಬದುಕುತ್ತಿದ್ದೀರಾ?

13. ಔಷಧಿಗಳ ಮೇಲೇ ಬದುಕುತ್ತಿದ್ದೀರಾ?

ನಿರಂತರವಾಗಿ ಮಾತ್ರೆ ಔಷಧಿಗಳನ್ನು ನುಂಗಿದರೆ ದೀರ್ಘಕಾಲದ ದೈಹಿಕ ತೊಂದರೆ ಕಾಣಿಸಿಕೊಳ್ಳುತ್ತದೆ.

14. ಬೆಳಗಿನ ತಿಂಡಿಗೆ ಗೈರುಹಾಜರಿ

14. ಬೆಳಗಿನ ತಿಂಡಿಗೆ ಗೈರುಹಾಜರಿ

ಬೆಳಗಿನ ತಿಂಡಿ ಇಡೀ ದಿನದ ಶಕ್ತಿಗೆ ಮುಖ್ಯ. ಕೇವಲ ಒಂದು ಕಪ್ ಕಾಫಿ ಅಥವಾ ಚಹಕ್ಕೆ ನಿಮ್ಮ ಬ್ರೇಕ್ ಫಾಸ್ಟ್ ಕೊನೆಗೊಳಿಸುತ್ತಿದ್ದರೆ ನೀವು ಅನಾರೋಗ್ಯಕ್ಕೆ ಹತ್ತಿರವಾದಂತೆ ಅರ್ಥ. ಬೆಳಗಿನ ತಿಂಡಿ ತಿನ್ನದೇ ಇದ್ದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಹೊಡೆತ ಪಕ್ಕಾ. ಜೊತೆಗೆ ನಿಮ್ಮ ದೈಹಿಕ ತಾಕತ್ತಿಗೂ ಪೆಟ್ಟು ಬೀಳುತ್ತದೆ.

15. ಜಂಕ್ ಫುಡ್ ಗಳ ಪ್ರೇಮಿಯೇ?

15. ಜಂಕ್ ಫುಡ್ ಗಳ ಪ್ರೇಮಿಯೇ?

ಜಂಕ್ ಫುಡ್ ಗಳಲ್ಲಿ ಕೊಬ್ಬು, ಸಕ್ಕರೆ, ಸಾಂಬಾರು ಪದಾರ್ಥಗಳು ಮತ್ತು ಕೃತಕ ತಿನಿಸುಗಳು ಹೆಚ್ಚಿರುತ್ತವೆ. ಇವು ನಿಮ್ಮ ಅನವಶ್ಯಕ ತೂಕವನ್ನು ಹೆಚ್ಚಿಸಿ ಅನಾರೋಗ್ಯಕ್ಕೆ ತಂದಿಡುತ್ತವೆ. ಹೃದಯ ಸಮಸ್ಯೆ, ಕೊಲೆಸ್ಟ್ರಾಲ್, ಸಕ್ಕರೆ ಖಾಯಿಲೆಗಳನ್ನು ತರುತ್ತವೆ. ಹೀಗಾಗಿ ಉತ್ತಮ ಆಹಾರಗಳನ್ನು ಸ್ವೀಕರಿಸಿ.

16. ಉಗುರು ಕಚ್ಚುವುದು

16. ಉಗುರು ಕಚ್ಚುವುದು

ಕೈಗಳು ದಿನನಿತ್ಯ ಹಲವಾರು ಕ್ರಿಮಿ ಕೀಟಗಳನ್ನು ತಾಗುತ್ತವೆ. ಜರ್ಮ್ ಸೇರಿಕೊಂಡ ಉಗುರುಗಳನ್ನು ಬಾಯಲ್ಲಿ ಹಾಕುವುದರಿಂದ ವೈರಸ್ ಗಳು ಹರಡಿ ಶೀತ ಜ್ವರ ಧಾಳಿ ಮಾಡುತ್ತವೆ. ಉಗುರು ಕಚ್ಚುವುದನ್ನು ಇಂದೇ ನಿಲ್ಲಿಸಿ.

17. ಕಾಮಕೇಳಿಯನ್ನು ನಿರ್ಲಕ್ಷಿಸುವುದು

17. ಕಾಮಕೇಳಿಯನ್ನು ನಿರ್ಲಕ್ಷಿಸುವುದು

ಕಾರಣಗಳು ಏನೇ ಇರಲಿ- ಅತಿಯಾದ ಒತ್ತಡ, ಕೆಲಸಗಳ ಮಧ್ಯೆ ನಿಮ್ಮ ಲೈಂಗಿಕ ಬಯಕೆಯನ್ನು ಹತ್ತಿಕ್ಕಬೇಡಿ. ಹಲವಾರು ದಿನ ತಿಂಗಳುಗಳ ಕಾಲ ಲೈಂಗಿಕ ಕ್ರಿಯೆಯನ್ನು ತಡೆ ಹಿಡಯುವುದು ಒಳ್ಳೆಯದಲ್ಲ. ಲೈಂಗಿಕ ಕ್ರಿಯೆ ನಿಮ್ಮ ಾರೋಗ್ಯಕ್ಕೆ ಉತ್ತಮ ಮತ್ತು ಅವಶ್ಯಕ. ಇದು ನಿಮ್ಮ ರೋಗನಿಯಂತ್ರಣ ಶಕ್ತಿ ಮತ್ತು ಸಂಬಂಧಗಳನ್ನು ಚೆನ್ನಾಗಿಡುತ್ತವೆ. ನಿಮಗೆ ಕಾಮಕೇಳಿಯಲ್ಲಿ ಮನಸ್ಸಿಲ್ಲದಿದ್ದರೆ ಆಸಕ್ತಿ ಕಡಿಮೆಯಾಗಿದ್ದರೆ ನಿಮ್ಮ ವೈದ್ಯರ ಹತ್ತಿರ ಸಲಹೆ ಹಾಗೂ ಚಿಕಿತ್ಸೆ ಪಡೆದುಕೊಳ್ಳಿ. ಲೈಂಗಿಕ ನಿಶ್ಯಕ್ತಿಗೆ ಥೈರಾಯ್ಡ್ ಹಾಗೂ ಹಾರ್ಮೋನ್ ಮತ್ತು ಒತ್ತಡಗಳೇ ಕಾರಣವಿರಬಹುದು.

18. ಬೇಗ ಬೇಗ ತಿನ್ನುವುದು

18. ಬೇಗ ಬೇಗ ತಿನ್ನುವುದು

ಅತಿಯಾದ ವೇಗದಿಂದ ತಿನ್ನುವುದು ಕೆಲಸದ ಒತ್ತಡಕ್ಕೆ ತಿನ್ನುವ ವೇಗ ಹೆಚ್ಚಿಸುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಪ್ರತಿ ಊಟವನ್ನು ಮುಗಿಸುವುದಕ್ಕೂ ನೀವು ಕನಿಷ್ಟ 20 ನಿಮಿಷ ತೆಗೆದುಕೊಳ್ಳಬೇಕು. ಊಟವನ್ನು ಸರಿಯಾಗಿ ಜಗಿಯದೇ ತಿಂದರೆ ಆಸಿಡಿಟಿ, ಗ್ಯಾಸ್ ತುಂಬಿಕೊಳ್ಳುವುದು ಹೆಚ್ಚುತ್ತದೆ.

19. ಅನಾರೋಗ್ಯಕರ ಸಂಬಂಧ ಇರಿಸಿಕೊಳ್ಳುವುದು:

19. ಅನಾರೋಗ್ಯಕರ ಸಂಬಂಧ ಇರಿಸಿಕೊಳ್ಳುವುದು:

ನಿಮ್ಮ ಸಂತೋಷ ದುಃಖಗಳನ್ನು ಸರಿಯಾಗಿ ಹಂಚಿಕೊಳ್ಳುವುದು ಸಾಧ್ಯವಿಲ್ಲದಿದ್ದರೆ ಅಂಥ ಸಂಬಂಧಗಳಿಗೆ ಮುಕ್ತಿ ನೀಡುವುದು ಒಳ್ಳೆಯದು. ಅನಾರೋಗ್ಯಕರ ಸಂಬಂಧ ಒತ್ತಡ, ರಕ್ತದೊತ್ತಡ ಹೆಚ್ಚಿಸುವುದು, ರೋಗ ನಿಯಂತ್ರಣ ಶಕ್ತಿ ಕುಂದಿಸುತ್ತದೆ.

20. ಚರ್ಮ ಕೆರೆದುಕೊಳ್ಳುವುದು:

20. ಚರ್ಮ ಕೆರೆದುಕೊಳ್ಳುವುದು:

ನಿಮ್ಮ ಮುಖದ ಮೇಲೆ ಮೈಯ ಮೇಲೆ ಗುಳ್ಳೆಗಳಿದ್ದರೆ ಕೆರೆದುಕೊಳ್ಳುಬೇಡಿ. ಪದೇ ಪದೇ ಇಂಥ ಗುಳ್ಳೆ ಮೊಡವೆಗಳನ್ನು ಮುಟ್ಟಿ ಕೆರೆದುಕೊಳ್ಳುವುದರಿಂದ ಸಾಂಕ್ರಾಮಿಕ ಚರ್ಮದ ಸೋಂಕು ಹೆಚ್ಚುತ್ತದೆ. ಚರ್ಮದ ಸೋಂಕು ಕಡಿಮೆ ಮಾಡಿಕೊಳ್ಳಲು ಕರೆದುಕೊಳ್ಳುವುದನ್ನು ನಿಲ್ಲಿಸಿ.

English summary

Bad Habits You Need To Quit Now | Tips For Health | 20 ಕೆಟ್ಟ ಹವ್ಯಾಸಗಳಿಗೆ ಇಂದೇ ಗುಡ್ ಬೈ ಹೇಳಿ! | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Satisfying late night cravings with pizzas and chocolate cake might be a tempting way to end each day, but it's not doing your body any favours. It can impact you and your overall health on a long term basis.
X
Desktop Bottom Promotion