For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಮತ್ತು ಆರೋಗ್ಯಕ್ಕೆ ಅರಿಶಿನದ ಹಾಲು

By Poornima Hegde
|

ನಮ್ಮ ಸೌಂದರ್ಯವನ್ನು ಹೆಚ್ಚಿಸುವಂತೆ ಹಾಗೂ ನಮ್ಮ ತ್ವಚೆಯನ್ನು ಸದಾ ಕಂಗೊಳಿಸುವಂತೆ ಮಾಡುವುದಕ್ಕಾಗಿ ನಾವು ಹಲವಾರು ಕ್ರೀಮ್ ಮತ್ತಿತರ ಸೌಂದರ್ಯವರ್ಧಕಗಳನ್ನು ಬಳಸುತ್ತೇವೆ. ಆದರೆ ಇವೆಲ್ಲವೂ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗದು. ಇವುಗಳಲ್ಲಿ ಹಲವು ತ್ವಚೆಯಲ್ಲಿ ಹಲವು ತೊಂದರೆಗಳನ್ನೂ ಉಂಟುಮಾಡಬಹುದು. ಆದರೆ ಇಂಥ ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ತ್ವಚೆಯನ್ನು ಸುಂದರವಾಗಿಸುವ ಉಪಾಯ ನಿಮ್ಮ ಮನೆಯಲ್ಲಿಯೇ ಇದೆ!

ಅಡುಗೆ ಮನೆಯಲ್ಲಿರುವ ಅರಿಶಿನ ಮತ್ತು ಹಾಲು ಸೂಕ್ಷ್ಮ ಜೀವ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ನಿಮ್ಮ ನಿತ್ಯದ ಇತರ ಆಹಾರಗಳೊಂದಿಗೆ ಈ ಎರಡು ವಸ್ತುಗಳನ್ನು ಬಳಸುವುದರಿಂದ ನೀವು ಸಾಮಾನ್ಯವಾಗಿ ಕಂಡುಬರುವ ಹಲವು ಅನಾರೋಗ್ಯ ತೊಂದರೆಗಳಿಂದ ದೂರವಿರಬಹುದು. ಅರಿಶಿನಕ್ಕೆ ಹಾಲನ್ನು ಸೇರಿಸಿ ಬಳಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕುತ್ತದೆ. ಇವು ಪರಿಸರದ ಅಪಾಯಕಾರಿ ಜೀವಾಣುಗಳ ವಿರುದ್ಧ ಹೋರಾಡಲು ಅತ್ಯಂತ ಸಹಕಾರಿ.

ಅರಿಶಿನ ಮತ್ತು ಹಾಲಿನ ರೆಸಿಪಿ / ಉಪಯೋಗ

ಒಂದು ಇಂಚಿನ ಅರಿಶಿನ ಬೇರು/ಅರಿಶಿನ ಕೊಂಬನ್ನು ತೆಗೆದುಕೊಳ್ಳಿ. ಇದನ್ನು ಹಾಲಿನಲ್ಲಿ 15 ನಿಮಿಷಗಳ ಕಾಲ ಕುದಿಸಿ. ನಂತರ ಅರಿಶಿನ ತುಂಡನ್ನು ತೆಗೆದು ಹಾಲನ್ನು ತಣಿಸಿ ಕುಡಿಯಿರಿ.

ಈ ಅದ್ಭುತ ನೈಸರ್ಗಿಕ ಕೊಡುಗೆಯಿಂದ ಉಂಟಾಗುವ 15 ಕ್ಕೂ ಹೆಚ್ಚಿನ ಉಪಯೋಗಗಳನ್ನು ನೋಡೋಣ

ಅರಿಶಿನ ಹಾಲಿನ ಉಪಯೋಗಗಳು

1. ಶ್ವಾಸೋಚ್ಛ್ವಾಸದ ಅಸ್ವಸ್ಥತೆ:

1. ಶ್ವಾಸೋಚ್ಛ್ವಾಸದ ಅಸ್ವಸ್ಥತೆ:

ಅರಿಶಿನ ಹಾಲು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ವೈರಸ್ ಸೋಂಕುಗಳು ಆಕ್ರಮಿಸುವುದನ್ನು ವಿರೋಧಿಸುತ್ತದೆ. ಇದು ಉಸಿರಾಟದ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ದೇಹಕ್ಕೆ ಉಷ್ಣವಾಗಿದ್ದರೆ ಮತ್ತು ಉಸಿರಾಟ ಹಾಗೂ ಸೈನೆನ್ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಅಲ್ಲದೇ ಅಸ್ತಮಾ ಹಾಗೂ ಗಂಟಲೂತದಿಂದ ಕೂಡ ನಿವಾರಣೆ ಹೊಂದಬಹುದು.

2. ಕ್ಯಾನ್ಸರ್:

2. ಕ್ಯಾನ್ಸರ್:

ಈ ಅರಿಶಿನ ಹಾಲು, ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಸ್ತನ, ಚರ್ಮ, ಶ್ವಾಸಕೋಶ, ಪ್ರಾಸ್ಟೇಟ್ ಮತ್ತು ಗುದನಾಳದ ಕ್ಯಾನ್ಸರ್ ನಂತಹ ಬೆಳವಣಿಗೆಯನ್ನು ತಡೆಯುತ್ತದೆ. ಇದು ಹಾನಿಕಾರಕ ಡಿಎನ್ಎಯ ಕ್ಯಾನ್ಸರ್ ಜೀವಕೋಶಗಳನ್ನು ತಡೆಯುತ್ತದೆ ಮತ್ತು ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

3. ನಿದ್ರಾಹೀನತೆ:

3. ನಿದ್ರಾಹೀನತೆ:

ಬಿಸಿ ಅರಿಶಿನ ಹಾಲು ಅಮೈನೊ ಆಮ್ಲ, ಟ್ರಿಪ್ಟೊಫಾನ್ ನ್ನು ಉತ್ಪಾದಿಸುತ್ತದೆ ಇದು ಶಾಂತಿಯುತ ಮತ್ತು ಪರಮಸುಖದ ನಿದ್ರೆಗೆ ಕಾರಣವಾಗುತ್ತದೆ.

4. ಶೀತ ಮತ್ತು ಕೆಮ್ಮು:

4. ಶೀತ ಮತ್ತು ಕೆಮ್ಮು:

ಅರಿಶಿನ ಹಾಲು ವೈರಸ್ ವಿರೋದಿ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ, ಕೆಮ್ಮು ಮತ್ತು ಶೀತಕ್ಕೆ ಒಂದು ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಇದು ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತಕ್ಕೆ ತ್ವರಿತ ಪರಿಹಾರ ನೀಡುತ್ತದೆ.

5. ಸಂಧಿವಾತ:

5. ಸಂಧಿವಾತ:

ಅರಿಶಿನ ಹಾಲು, ಸಂಧಿವಾತವನ್ನು ಹೋಗಲಾಡಿಸಲು ಮತ್ತು ಸಂಧಿವಾತಕ್ಕೆ ಕಾರಣವಾದ ಊತವನ್ನು ನಿವಾರಿಸಲು ಸಹಾಯಮಾಡುತ್ತದೆ. ಕೀಲು ಮತ್ತು ಸ್ನಾಯುಗಳಲ್ಲಿನ ನೋವುಗಳನ್ನೂ ಸಹ ನಿವಾರಿಸುವಲ್ಲಿ ಸಹಕಾರಿಯಾಗಿದೆ.

6. ನೋವು ಮತ್ತು ವೇದನೆ:

6. ನೋವು ಮತ್ತು ವೇದನೆ:

ಅರಿಶಿನ ಹಾಲಿನಲ್ಲಿ ಸಕಲ ನೋವುಗಳನ್ನು ನಿವಾರಿಸಬಲ್ಲ ಶಕ್ತಿಯಿದೆ. ಇದು ದೇಹದಲ್ಲಿ ಬೆನ್ನುಮೂಳೆ ಮತ್ತು ಕೀಲುಗಳನ್ನು ಬಲಪಡಿಸುತ್ತದೆ .

7 . ಉತ್ಕರ್ಷಣ ನಿರೋಧಕ :

7 . ಉತ್ಕರ್ಷಣ ನಿರೋಧಕ :

ಅರಿಶಿನ ಹಾಲು ಸ್ವತಂತ್ರ ರಾಡಿಕಲ್ ಗೆ ಹೋರಾಡುವ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು.

8. ರಕ್ತ ಶುದ್ಧೀಕರಣ:

8. ರಕ್ತ ಶುದ್ಧೀಕರಣ:

ಅರಿಶಿನ ಹಾಲು, ಆಯುರ್ವೇದ ಸಂಪ್ರದಾಯದಲ್ಲಿ ಅತ್ಯುತ್ತಮ ರಕ್ತ ಶುದ್ದೀಕರಣ/ ಕ್ಲಿನ್ಸರ್ ಎಂದು ಪರಿಗಣಿಸಲಾಗುತ್ತದೆ . ಇದು ದೇಹದಲ್ಲಿ ರಕ್ತ ಪರಿಚಲನೆಯ ಪುನಶ್ಚೇತನಗೊಳಿಸಲು ಮತ್ತು ವರ್ಧಿಸಲು ಸಹಾಯ ಮಾಡಬಹುದು. ಇದು ದುಗ್ಧನಾಳ ವ್ಯವಸ್ಥೆ ಮತ್ತು ಎಲ್ಲಾ ರಕ್ತನಾಳಗಳನ್ನು ಶುದ್ಧೀಕರಿಸಲು ಕೂಡ ಅತ್ಯವಶ್ಯಕ.

9. ಲಿವರ್ ಕ್ರಿಯೆಗೆ ಸಹಾಯ:

9. ಲಿವರ್ ಕ್ರಿಯೆಗೆ ಸಹಾಯ:

ಅರಿಶಿನ ಹಾಲು ಪಿತ್ತಜನಕಾಂಗದ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಶುದ್ದೀಕರಣ ಮಾಡುವ ಲಿವರ್ ನ್ನು ಬೆಂಬಲಿಸುತ್ತದೆ ಮತ್ತು ದುಗ್ಧನಾಳ ವ್ಯವಸ್ಥೆ ಶುದ್ಧೀಕರಿಸುತ್ತದೆ.

10. ಮೂಳೆಗಳ ಆರೋಗ್ಯ:

10. ಮೂಳೆಗಳ ಆರೋಗ್ಯ:

ಅರಿಶಿನ ಹಾಲು, ಮೂಳೆಗಳನ್ನು ಆರೋಗ್ಯವಾಗಿ ಮತ್ತು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಒಂದು ಉತ್ತಮ ಮೂಲವಾಗಿದೆ. ಭಾರತದ ಕ್ರಿಕೆಟ್ ದಂತಕಥೆಯಾದ ಸಚಿನ್ ತೆಂಡೂಲ್ಕರ್, ಉತ್ತಮ ಮೂಳೆ ಆರೋಗ್ಯಕ್ಕೆ ಅರಿಶಿನ ಹಾಲನ್ನೇ ದಿನವೂ ಕುಡಿಯುತ್ತಾನೆ. ಅರಿಶಿನ ಹಾಲು ಮೂಳೆ ಸವೆತ ಮತ್ತು ಆಸ್ಟಿಯೊಪೊರೋಸಿಸ್ ಕಡಿಮೆ ಮಾಡುತ್ತದೆ.

11. ಜೀರ್ಣಕ್ರಿಯೆ:

11. ಜೀರ್ಣಕ್ರಿಯೆ:

ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೊಟ್ಟೆಯ ಹುಣ್ಣುಗಳು ಮತ್ತು ಕೊಲೈಟಿಸ್ ನ್ನು ಕಡಿಮೆಗೊಳಿಸುತ್ತದೆ. ಇದು ಒಂದು ಪ್ರಬಲ ನಂಜುನಿರೋಧಕವೂ ಆಗಿದೆ . ಇದು ಉತ್ತಮ ಜೀರ್ಣಕಾರಿ ಶಕ್ತಿ ಹೊಂದಿದ್ದು, ಹುಣ್ಣುಗಳು, ಅತಿಸಾರ ಮತ್ತು ಅಜೀರ್ಣವನ್ನು ತಡೆಯುತ್ತದೆ.

12. ಮುಟ್ಟಿನ ಸೆಳೆತ

12. ಮುಟ್ಟಿನ ಸೆಳೆತ

ಮುಟ್ಟಿನ ಸೆಳೆತ ಮತ್ತು ನೋವು ಸರಾಗಗೊಳಿಸುವ ಆಂಟಿಸ್ಪಾಸ್ಮೊಡಿಕ್ ನ್ನು ಹೊಂದಿರುವ ಅರಿಶಿನ ಹಾಲು ಅದ್ಭುತ ಶಕ್ತಿಯನ್ನು ಹೊಂದಿದೆ. ಗರ್ಭಿಣಿ ಮಹಿಳೆಯರ ಸುಲಭ ಹೆರಿಗೆಗೆ ಅರಿಶಿನ ಹಾಲು ಸೇವಿಸುವುದು ಅತ್ಯಂತ ಒಳ್ಳೆಯದು. ಅಂಡಾಶಯದ ವೇಗವಾದ ಸಂಕೋಚನಕ್ಕೆ ಅರಿಶಿನ ಹಾಲು ನೆರವಾಗುತ್ತದೆ.

13. ಗುಳ್ಳೆಗಳು ಮತ್ತು ಚರ್ಮ ಕೆಂಪಾಗುವುದು:

13. ಗುಳ್ಳೆಗಳು ಮತ್ತು ಚರ್ಮ ಕೆಂಪಾಗುವುದು:

ಕ್ಲಿಯೋಪಾತ್ರ, ಮೃದು ಮತ್ತು ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲಿನ ಸ್ನಾನವನ್ನೇ ಮಾಡುತ್ತಿದ್ದರು ಎನ್ನಲಾಗುತ್ತದೆ. ಹಾಗೆಯೇ , ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲನ್ನು ಕುಡಿಯುವುದು ಒಳಿತು. ಹತ್ತಿಯನ್ನು ಅರಿಶಿನ ಹಾಲಿನಲ್ಲಿ ನೆನೆಸಿ ಚರ್ಮ ಕೆಂಪಾಗಿರುವ ಜಾಗದಲ್ಲಿ ಒತ್ತಿ 15 ನಿಮಿಷಗಳ ಕಾಲ ಬಿಟ್ಟರೆ ಪೀಡಿತ ಪ್ರದೇಶವು ಬಹಳ ಬೇಗ ಗುಣವಾಗುತ್ತದೆ. ಇದು ಮೊದಲಿಗಿಂತ, ಚರ್ಮ ಹೆಚ್ಚು ಹೊಳೆಯುವಂತೆ ಮಾಡುತ್ತದೆ.

14. ತೂಕ ನಷ್ಟ (ತೂಕ ಕಡಿಮೆಯಾಗುವುದು):

14. ತೂಕ ನಷ್ಟ (ತೂಕ ಕಡಿಮೆಯಾಗುವುದು):

ಅರಿಶಿನ ಹಾಲು ಆಹಾರದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆಮಾಡುತ್ತದೆ. ಈ ತೂಕವನ್ನು ನಿಯಂತ್ರಿಸಲು ಉಪಯೋಗಕಾರಿಯಾಗಿದೆ.

15 . ಎಸ್ಜಿಮಾ :

15 . ಎಸ್ಜಿಮಾ :

ಎಸ್ಜಿಮಾ ಚಿಕಿತ್ಸೆಗೆ ದಿನವು ಅರಿಶಿನ ಹಾಲನ್ನು ಕುಡಿಯುವುದು ಉತ್ತಮ.

English summary

15 Amazing Benefits Of Turmeric Milk For Beauty And Health

Turmeric and milk have natural antibiotic properties. Including these two natural ingredients in your everyday diet can prevent diseases and infections.
Story first published: Friday, December 6, 2013, 11:03 [IST]
X
Desktop Bottom Promotion