For Quick Alerts
ALLOW NOTIFICATIONS  
For Daily Alerts

ಮೂಲವ್ಯಾಧಿಗೆ 10 ಸೂಪರ್ ಮನೆಮದ್ದು

|

ಪೈಲ್ಸ್ ಅಥವಾ ಮೂಲವ್ಯಾಧಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಅದರಲ್ಲೂ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತಿದೆ.

ಮಲವಿಸರ್ಜನೆಗೆ ಹೋದಾಗ ತುಂಬಾ ನೋವಾಗುವುದು, ರಕ್ತ ಸುರಿಯುವಿಕೆ, ಉರಿ ಇವೆಲ್ಲಾ ಮೂಲವ್ಯಾಧಿ ಸಮಸ್ಯೆಯ ಲಕ್ಷಣವಾಗಿದೆ. ಇದಕ್ಕೆ ಅನೇಕ ಚಿಕಿತ್ಸೆಗಳಿವೆ. ಈ ಕಾಯಿಲೆ ಪ್ರಭಾವದ ಮೇಲೆ ಇದಕ್ಕೆ ಚಿಕಿತ್ಸೆಯನ್ನು ಮಾಡಲಾಗುವುದು. ಈ ಕಾಯಿಲೆ ಅಧಿಕವಾಗಿದ್ದರೆ ಆಪರೇಷನ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಔಷಧಿಯಿಂದ ಗುಣಪಡಿಸಬಹುದು.

ಮೂಲವ್ಯಾಧಿ ಕಾಯಿಲೆಯನ್ನು ಬರದಂತೆ ತಡೆಯುವ ಬಂದ ಕಾಯಿಲೆಯನ್ನು ಗುಣಪಡಿಸುವ ಸಾಮರ್ಥ್ಯ ಕೆಲವೊಂದು ಆಹಾರಗಳಿಗಿವೆ. ಆ ಆಹಾರಗಳು ಯಾವುವು ಎಂದು ನೋಡೋಣ ಬನ್ನಿ.

ಮೂಲಂಗಿ

ಮೂಲಂಗಿ

ಮೂಲಂಗಿ ಮೂಲವ್ಯಾಧಿಗೆ ಅತ್ಯುತ್ತಮವಾದ ಔಷಧಿಯಾಗಿದೆ. ಇದರ ಜ್ಯೂಸ್ ಕುಡಿದರೆ ಮೂಲವ್ಯಾಧಿ ಕಾಯಿಲೆ ಗುಣಮುಖವಾಗುವುದು. ಮೊದಮೊದಲು 1/3 ಕಪ್ ಮೂಲಂಗಿ ರಸ ಕುಡಿಯಿರಿ. ನಂತರ ಅರ್ಧ ಕಪ್ ನಷ್ಟು ಪ್ರತಿದಿನ ಕುಡಿಯುತ್ತಾ ಬನ್ನಿ. ಹೀಗೆ ಮಾಡಿದರೆ ಪೈಲ್ಸ್ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಇದರಿಂದ ಚಟ್ನಿ, ಪಲ್ಯ ಮಾಡಿ ತಿನ್ನಿ. ಇದರ ಸೊಪ್ಪು ಕೂಡ ತುಂಬಾ ಒಳ್ಳೆಯದು.

 ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಬೇಯಿಸಿ. ನಂತರ ಸೋಸಿ ಆ ನೀರನ್ನು ದಿನದಲ್ಲಿ ಎರಡು ಬಾರಿ ಕುಡಿಯಿರಿ. ಈ ರೀತಿ ಮಾಡುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ಗುಣಮುಖವಾಗುವುದು.

ಶುಂಠಿ ಹಾಕಿದ ನಿಂಬೆ ಪಾನಕ

ಶುಂಠಿ ಹಾಕಿದ ನಿಂಬೆ ಪಾನಕ

ನಿರ್ಜಲೀಕರಣದಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಅದಕ್ಕೆ ಶುಂಠಿ ರಸವನ್ನು ನಿಂಬೆ ಹಣ್ಣಿನ ಪಾನಕಕ್ಕೆ ಹಾಕಿ ಕುಡಿಯುವುದು ಒಳ್ಳೆಯದು.

ಅಂಜೂರ

ಅಂಜೂರ

ಒಣ ಅಂಜೂರವನ್ನು ರಾತ್ರಿಯಲ್ಲಿ ನೆನೆ ಹಾಕಿ ಬೆಳಗ್ಗೆ ಅರ್ಧ ನೀರನ್ನು ಕುಡಿದು, ಉಳಿದ ಅರ್ಧ ನೀರನ್ನು ಸಂಜೆ ಕುಡಿಯಿರಿ.

ಹಸಿ ಈರುಳ್ಳಿ

ಹಸಿ ಈರುಳ್ಳಿ

ಹಸಿ ಈರುಳ್ಳಿ ಮೂಲವ್ಯಾಧಿಗೆ ಉತ್ತಮವಾದ ಮನೆ ಮದ್ದಾಗಿದೆ. ಪೈಲ್ಸ್ ನಿಂದಾಗಿ ರಕ್ತ ಬರುತ್ತಿದ್ದರೆ, ಹಸಿ ಈರುಳ್ಳಿ ತಿಂದರೆ ಸಾಕು ರಕ್ತ ಸೊರುವುದು ನಿಲ್ಲುವುದು.

 ಟಾಯ್ಲೆಟ್

ಟಾಯ್ಲೆಟ್

ಮಲ ವಿಸರ್ಜನೆಗ ಹೋದಾಗ ಸರಿಯಾಗಿ ಹೋಗದಿದ್ದರೆ ಒತ್ತಡ ಹಾಕಬೇಡಿ. ಕೂರುವ ರೀತಿ ಕೂಡ ಸರಿಯಾಗಿರಲಿ. ಮಲವನ್ನು ಒತ್ತಡ ಹಾಕಿ ಮಾಡಿದರೆ ಮೂಲವ್ಯಾಧಿ ಹೆಚ್ಚಾಗುವುದು.

ವ್ಯಾಯಾಮ

ವ್ಯಾಯಾಮ

ಮಲಬದ್ಧತೆ ತಡೆಯಲು ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ನಡೆಯುವ ವ್ಯಾಯಾಮ ಮಾಡಿ. ಆದರೆ ಭಾರ ಎತ್ತುವಂತಹ ಕಷ್ಟದ ವ್ಯಾಯಾಮವನ್ನು ಮೂಲವ್ಯಾಧಿ ಇರುವವರು ಮಾಡಬಾರದು.

ಅರಿಶಿಣ

ಅರಿಶಿಣ

ಅರಿಶಿಣವನ್ನು (ಗಡ್ಡೆ) ನೀರಿನಲ್ಲಿ ಬೇಯಿಸಿ ಆ ನೀರು ಕುಡಿಯುವುದರಿಂದಲೂ ಮೂಲವ್ಯಾಧಿಯನ್ನು ಗುಣ ಪಡಿಸಬಹುದು.

 ಬಾಳೆ ಹಣ್ಣು

ಬಾಳೆ ಹಣ್ಣು

ಮೂಲವ್ಯಾಧಿ ಇರುವವರು ಪ್ರತಿದಿನ ರಾತ್ರಿ 1 ಬಾಳೆ ಹಣ್ಣು ತಿನ್ನುವುದು ಒಳ್ಳೆಯದು. ಇದರಿಂದ ಮಲ ಮಾಡಲು ಹೋಗುವಾಗ ಕಷ್ಟವಾಗುವುದಿಲ್ಲ.

ಬೀನ್ಸ್

ಬೀನ್ಸ್

ಕಿಡ್ನಿ ಬೀನ್ಸ್, ಬ್ಲ್ಯಾಕ್ ಬೀನ್ಸ್ ಈ ರೀತಿಯ ಬೀನ್ಸ್ ಆಹಾರಗಳನ್ನು ತಿನ್ನಬೇಕು. ಈ ರೀತಿ ಮಾಡಿದರೆ ಪೈಲ್ಸ್ ನೈಸರ್ಗಿಕವಾಗಿ ಗುಣಮುಖವಾಗುವುದು.

English summary

10 Home Remedies To Cure Piles | Tips For Health | ಮೂಲವ್ಯಾಧಿಗೆ 10 ಮನೆಮದ್ದು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

There are many ways to treat piles or haemorrhoids, it depends on the severity of the health problem. You can consult a doctor and follow the medication. However, you can also try some home remedies to cure piles naturally.
X
Desktop Bottom Promotion