ವೈದ್ಯಕೀಯ ಜಗತ್ತಿಗೆ ಸವಾಲಾಗಿರುವ 10 ಕಾಯಿಲೆಗಳು

Posted By:
Subscribe to Boldsky

ಅನೇಕ ರೀತಿಯ ಕಾಯಿಲೆಗಳಿವೆ. ಅವುಗಳಲ್ಲಿ ಕೆಲವು ಸಾಮಾನ್ಯ ಕಾಯಿಲೆ ಮತ್ತೆ ಕೆಲವು ಪ್ರಾಣಕ್ಕೆ ಅಪಾಯ ತರುವಂತಹ ಕಾಯಿಲೆಗಳಾಗಿವೆ. ವಿಜ್ಞಾನ ಸಾಕಷ್ಟು ಮುಂದುವರೆದಿದೆ ಅನೇಕ ಮಾರಕ ಕಾಯಿಲೆಗಳಿಗೆ ಔಷಧಿ ಕಂಡು ಹಿಡಿಯಲಾಗಿದೆ. ಆದರೆ ಏಡ್ಸ್ ನಂತಹ ಕೆಲವೊಂದು ಕಾಯಿಲೆಗಳು ವಿಜ್ಞಾನಕ್ಕೆ ಸವಾಲಾಗಿದೆ.

ಮತ್ತೆ ಕೆಲವು ಕಾಯಿಲೆಗಳು ಉದಾಹರಣೆಗೆ ಶೀತ  ಬಂದರೆ ತಾತ್ಕಾಲಿಕವಾಗಿ ಗುಣಪಡಿಸಬಹುದು. ಆದರೆ ಈ ಕಾಯಿಲೆ ನಮ್ಮ ಜೀವಿತ ಕಾಲದಲ್ಲಿ ಸಾಕಷ್ಟು ಭಾರಿ ಕಾಣಿಸಿಕೊಳ್ಳುತ್ತದೆ. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಯಾವ ಔಷಧಿಗೂ ಇದುವರೆಗೆ ಸಾಧ್ಯವಾಗಲಿಲ್ಲ.

ವಿಜ್ಞಾನಕ್ಕೆ ಗುಣಪಡಿಸಲಾಗದ 10 ಕಾಯಿಲೆಗಳ ಬಗ್ಗೆ ಚಿತ್ರ ಮಾಹಿತಿಯನ್ನು ನೀಡಲಾಗಿದೆ ನೋಡಿ:

 ಏಡ್ಸ್

ಏಡ್ಸ್

ಏಡ್ಸ್ ಕಾಯಿಲೆ ಬಂತೆಂದರೆ ಅದನ್ನು ಗುಣಪಡಿಸಲು ಸಾಧ್ಯವಿಲ್ಲ. ಏಡ್ಸ್ ಕಾಯಿಲೆ ಗಾಳಿಯಲ್ಲಿ , ನೀರಿನಲ್ಲಿ ಹರಡುವುದಿಲ್ಲವಾದ್ದರಿಂದ ಇದನ್ನು ಜಾಗೃತೆವಹಿಸಿದರೆ ಬರದಂತೆ ತಡೆಯಬಹುದು.

ಕ್ಯಾನ್ಸರ್

ಕ್ಯಾನ್ಸರ್

ಕ್ಯಾನ್ಸರ್ ಬಂದರೆ ರೇಡಿಯೋ ಥೆರಪಿಯಿಂದ ಕ್ಯಾನ್ಸರ್ ರೋಗಿಯ ಆಯಸ್ಸನ್ನು ಸ್ವಲ್ಪ ದಿನ ಹೆಚ್ಚು ಹೆಚ್ಚಿಸಬಹುದೇ ಹೊರತು, ಈ ಕಾಯಿಲೆಯನ್ನು ಬುಡದಿಂದಲೇ ಹೋಗಲಾಡಿಸಲು ಸಾಧ್ಯವಾಗಲಿಲ್ಲ.

ಫೋಲಿಯೋ

ಫೋಲಿಯೋ

ಫೋಲಿಯೋ ಬರದಂತೆ ತಡೆಯಲು ಚಿಕ್ಕ ಮಕ್ಕಳಿಗೆ ಫೋಲಿಯೋ ಡ್ರಾಪ್ಸ್ ಹಾಕಿಸಬೇಕು. ಏಕೆಂದರೆ ಒಮ್ಮೆ ಫೋಲಿಯೋ ಬಂತೆಂದರೆ ನಂತರ ಆ ಕಾಯಿಲೆ ಸಾಯುವವರೆಗೆ ಇರುತ್ತದೆ, ಕಾಲು ತನ್ನ ಶಕ್ತಿಯನ್ನು ಕಳೆದುಕೊಂಡು, ನಡೆದಾಡಲು ಕಷ್ಟವಾಗುವುದು.

ಮೈ ಕೈ ನೋವು

ಮೈ ಕೈ ನೋವು

ಮೈ ಕೈ ನೋವು, ಸಂಧಿ ನೋವು ಈ ರೀತಿ ಕಾಣಿಸಿಕೊಂಡರೆ ಮಾತ್ರೆ, ಮುಲಾಮುಗಳಿಂದ ಕಡಿಮೆ ಮಾಡಬಹುದು. ಆದರೆ ಒಮ್ಮೆ ಔಷಧಿ ತೆಗೆದುಕೊಂಡರೆ ಬರುವುದೇ ಇಲ್ಲ ಅಂತ ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಂತಹ ಕಾಯಿಲೆಗಳು ಮರುಕಳಿಸುತ್ತಲೇ ಇರುತ್ತವೆ.

ಶೀತ

ಶೀತ

ನಮ್ಮ ಗೆಳೆಯ ಹತ್ತಿರ "ನನಗೆ ಶೀತ' ಎಂದು ಹೇಳಿದರೆ "ಮೂಗು ಇದ್ದಷ್ಟು ಕಾಲ ಶೀತ ಇದ್ದೇ ಇರುತ್ತದೆ ಅದಕ್ಕೆ ಏಕೆ ಚಿಂತೆ ಮಾಡ್ತೀಯಾ ಮಾರಾಯ" ಎಂದು ತಮಾಷೆ ಮಾಡುವುದನ್ನು ಕೇಳಿರಬಹುದು. ಶೀತವನ್ನು ನಮ್ಮ ಜೀವಿತ ಕಾಲದಲ್ಲಿ ಬರದಂತೆ ತಡೆಯುವ ಯಾವುದೇ ಔಷಧಿಯನ್ನು ಇದುವರೆಗೆ ಕಂಡುಹಿಡಿಯಲಿಲ್ಲ.

 ಫ್ಲೂ

ಫ್ಲೂ

ಇದು ಅಪಾಯಕಾರಿಯಾದ ಕಾಯಿಲೆಯಾಗಿದೆ. ಇದು ಕಾಣಿಸಿಕೊಂಡರೆ ಶ್ವಾಸಕೋಶದಲ್ಲಿ ನೀರು ತುಂಬುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಈ ರೋಗಾಣು ವೇಗವಾಗಿ ಹರಡುತ್ತದೆ. ಸ್ವೈನ್ ಫ್ಲೂ , ಹಕ್ಕಿ ಜ್ವರ ಇವೆಲ್ಲಾ ಅಪಾಯಕಾರಿಯಾದ ಕಾಯಿಲೆಯಾಗಿದೆ.

ಅಸ್ತಮಾ

ಅಸ್ತಮಾ

ಅಸ್ತಮಾದಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಆರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮದಿಂದ ಅಸ್ತಮಾವನ್ನು ನಿಯಂತ್ರಣದಲ್ಲಿಡಬಹುದು.

ಮಧುಮೇಹ

ಮಧುಮೇಹ

ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದೇ ಹೊರತು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ.

ಎಬೋಲ

ಎಬೋಲ

ಎಬೋಲ ಅನ್ನುವುದು ಒಂದು ರೀತಿಯ ಜ್ವರ. ಮೊದಲು ಇದು ಆಫ್ರಿಕಾದಲ್ಲಿ ಕಂಡು ಬಂತು. ಈ ಕಾಯಿಲೆ ಬಂದ ರೋಗಿಗಳನ್ನು ಇದುವರೆಗೆ ಗುಣ ಪಡಿಸಲು ಸಾಧ್ಯವಾಗಲಿಲ್ಲ.

Creutzfeldt-Jakob ಕಾಯಿಲೆ

Creutzfeldt-Jakob ಕಾಯಿಲೆ

ಇದು ಅಪಾಯಕಾರಿಯಾದ ಕಾಯಿಲೆಯಾಗಿದೆ. ಇದು ಕಾಣಿಸಿಕೊಂಡರೆ ಮೆದುಳಿನ ಮಧ್ಯಭಾಗದ ನರಕ್ಕೆ ಹಾನಿಯಾಗುತ್ತದೆ. ಇದನ್ನು ಗುಣ ಪಡಿಸಲು ಇದುವರೆಗೆ ವೈದ್ಯಕೀಯ ಜಗತ್ತಿಗೆ ಸಾಧ್ಯವಾಗಲಿಲ್ಲ.

English summary

10 Diseases That Are Still Incurable | Tips For Health | ವೈದ್ಯಕೀಯ ಜಗತ್ತಿಗೆ ಸವಾಲಾಗಿರುವ 10 ಕಾಯಿಲೆಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

A disease is called incurable when there are no medications to get rid of it completely.So, here is a list of 10 diseases that are incurable despite of all the advancements in science and technology.
Subscribe Newsletter