For Quick Alerts
ALLOW NOTIFICATIONS  
For Daily Alerts

ಏಡ್ಸ್ ರೋಗಿಗಳನ್ನು ಹೀಗೆ ನೋಡುವುದು ಸರಿಯೇ?

|

ಡಿಸೆಂಬರ್ 1. ವಿಶ್ವ ಏಡ್ಸ್ ದಿನ. ವಿಶ್ವ ಆರೋಗ್ಯ ಸಂಸ್ಥೆಯು 1988 ರಲ್ಲಿ ಡೆಸೆಂಬರ್ 1 ವಿಶ್ವ ಏಡ್ಸ್ ದಿನವೆಂದು ಘೋಷಿಸಿತು. ಏಡ್ಸ್ ಎಂಬ ಮಾರಕ ರೋಗವನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುವುದು.

ಏಡ್ಸ್ ರೋಗ ಬಂದವರನ್ನು ಸಮಾಜ ಸಂಶಯ ದೃಷ್ಟಿಯಿಂದ ನೋಡುವುದು ಹೆಚ್ಚು. ಕೆಲವೊಮ್ಮೆ ತಮ್ಮದಲ್ಲದ ತಪ್ಪಿನಿಂದ ಕೂಡ ಈ ರೋಗ ಬರಬಹುದು. ಗಂಡನಿಗೆ ರೋಗವಿದ್ದರೆ ಹೆಂಡತಿಗೆ ಬರಬಹುದು, ಗರ್ಭಿಣಿ ಹೆಂಗಸಿನಿಂದ ಮಗುವಿಗೆ ಬರಬಹುದು, ಇಂಜೆಕ್ಷನ್ ನಿಂದ ಬರಬಹುದು. ಆದ್ದರಿಂದ ಏಡ್ಸ್ ರೋಗಿಗಳನ್ನು ಸಮಾಜ ಸಂಶಯ ದೃಷ್ಟಿಯಿಂದ ನೋಡಿ ದೂರವಿಡುವುದನ್ನು ಮಾಡಬಾರದು.

Tips To Prevent AIDS

ಕೆಲವರು ಏಡ್ಸ್ ರೋಗಿಗಳನ್ನು ಮುಟ್ಟಲು, ಮಾತನಾಡಿಸಲು ಭಯಪಡುತ್ತಾರೆ. ಆದರೆ ಏಡ್ಸ್ ರೋಗಿಗಳು ಮಟ್ಟಿದ ಅಥವಾ ಧರಿಸಿದ ಬಟ್ಟೆಗಳನ್ನು ಧರಿಸುವುದರಿಂದ, ಅವರನ್ನು ಮುಟ್ಟುವುದರಿಂದ, ಅವರಿಗೆ ಕಚ್ಚಿದ ಸೊಳ್ಳೆ ನಿಮಗೆ ಕಚ್ಚುವುದರಿಂದ. ಕೈ ಕುಲುಕುವುದರಿಂದ , ಅವರ ಜೊತೆ ತಿನ್ನುವುದರಿಂದ ಏಡ್ಸ್ ರೋಗ ಹರಡುವುದಿಲ್ಲ. ಏಡ್ಸ್ ಬರಲು ಕಾರಣವಾಗುವ ಅಂಶಗಳು ಹಾಗೂ ಏಡ್ಸ್ ತಡೆಗಟ್ಟುವುದು ಹೇಗೆ ಎಂದು ಇಲ್ಲಿ ಹೇಳಲಾಗಿದೆ ನೋಡಿ:

ಲೈಂಗಿಕ ಕ್ರಿಯೆ: ಅಸುರಕ್ಷತೆ ಲೈಂಗಿಕ ಕ್ರಿಯೆಯಿಂದ ಏಡ್ಸ್ ರೋಗ ಹರಡುತ್ತದೆ. ಹೆಣ್ಣಿಗೆ ಒಬ್ಬನೇ ಗಂಡಿ- ಗಂಡಿಗೆ ಒಬ್ಬಳೇ ಹೆಣ್ಣು ಎಂಬ ನಿಯಮವನ್ನು ಪಾಲಿಸಿದರೆ ಈ ಏಡ್ಸ್ ಕಾಯಿಲೆಯ ಭಯವಿಲ್ಲದೆ ಜೀವಿಸಬಹುದು. ಅನ್ಯ ಪುರುಷ ಹಾಗೂ ಅನ್ಯ ಮಹಿಳೆಯ ಜೊತೆ ಲೈಂಗಿಕ ಸಂಪರ್ಕ ಮಾಡಬಾರದು.

ಕಾಂಡೋಮ್ ಗಳ ಬಳಕೆ: ಲೈಂಗಿಕ ಕ್ರಿಯೆಯನ್ನು ಕಾಂಡೋಮ್ ಬಳಸಿ ಮಾಡಿದರೆ ಏಡ್ಸ್ ಬರದಂತೆ ತಡೆಯಬಹುದು.

ಸೂಜಿಗಳ ಮರುಬಳಿಕೆ: ಒಬ್ಬರಿಗೆ ಚುಚ್ಚಿದ ಸೂಜಿಯಿಂದ ಮತ್ತೊಬ್ಬರಿಗೆ ಚುಚ್ಚಬಾರದು. ಏಡ್ಸ್ ಇರುವ ವ್ಯಕ್ತಿಗೆ ಚುಚ್ಚಿದ ಸೂಜಿಯನ್ನು ಆರೋಗ್ಯವಂತರಿಗೆ ಚುಚ್ಚಿದರೆ ಏಡ್ಸ್ ಬರುತ್ತದೆ. ಸಲೂನ್ ಗಳಲ್ಲಿ ಶೇವಿಂಗ್ ಮಾಡಿಸುವಾಗ ಹೊಸ ಬ್ಲೇಡ್ ಉಪಯೋಗಿಸುತ್ತಿದ್ದಾರೆಯೇ ಎಂದು ಗಮನಿಸಿ. ಒಬ್ಬರಿಗೆ ಬಳಸಿದ ಬ್ಲೇಡ್ ಮತ್ತೊಬ್ಬರಿಗೆ ಬಳಸಿದರೆ ಏಡ್ಸ್ ಬರುವ ಸಾಧ್ಯತೆ ಹೆಚ್ಚು.

ಎದೆ ಹಾಲು: ಏಡ್ಸ್ ಇರುವ ತಾಯಿ ತನ್ನ ಮಗುವಿಗೆ ಎದೆ ಹಾಲು ಕೊಟ್ಟರೆ ಮಗುವಿಗೂ ಏಡ್ಸ್ ಬರುತ್ತದೆ.

ಗುಣಮಟ್ಟದ ಕಾಂಡೋಮ್: ಹರಿದು ಹೋಗದಂತಹ ಗುಣ ಮಟ್ಟದ ಕಾಂಡೋಮ್ ಬಳಸಿ. ಈ ರೀತಿ ಮಾಡಿದರೆ ಏಡ್ಸ್ ತಡೆಗಟ್ಟಬಹುದು.

ಸಲಹೆ: ಏಡ್ಸ್ ಬಂದವರು ನಿರಾಶೆರಾಗಬೇಕಾಗಿಲ್ಲ. ಉತ್ತಮವಾದ ಆಹಾರಕ್ರಮ ಹಾಗೂ ವ್ಯಾಯಾಮ ಮಾಡಿ ರೋಗಗಳನ್ನು ದೂರವಿಟ್ಟು ಜನಸಾಮಾನ್ಯರಂತೆ ಬದುಕಬಹುದು.

English summary

World AIDS Day: Tips To Prevent AIDS | Tips For Health | ಏಡ್ಸ್ ತಡೆಗಟ್ಟುವ ವಿಧಾನಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

World AIDS Day is commonly recognised with a red ribbon. Every year, 1st December is observed as World AIDS Day. You might have read, seen or heard people (including celebrities) spreading awareness about AIDS and HIV. Well, there are few simple tips to prevent this disease.
X
Desktop Bottom Promotion