For Quick Alerts
ALLOW NOTIFICATIONS  
For Daily Alerts

ಸೊಳ್ಳೆಯ ಸಾಮರ್ಥ್ಯವನ್ನು ನಿರ್ಲಕ್ಷಿಸಿದರೆ ಜೋಕೆ!

|
How To Kill The Mosquitoes
ಇಂದು ವಿಶ್ವ ಸೊಳ್ಳೆ ದಿನಾಚರಣೆ ಎಂದು ಕೇಳಿದಾಗ ಸೊಳ್ಳೆಗಳ ಬಗ್ಗೆಯೂ ಒಂದು ದಿನಾಚರಣೆಯೇ? ಎಂದು ನಮಗೆ ಆಶ್ಚರ್ಯದ ಜೊತೆ ಇದು ವಿನೋದವಾದ ವಿಷಯ ಅನಿಸಿದರೂ ಡೆಂಗ್ಯೂ, ಮಲೇರಿಯಾ ಮುಂತಾದ ಕಾಯಿಲೆಗಳನ್ನು ತಂದು ಮನುಷ್ಯರ ನೆಮ್ಮದಿಯನ್ನು ಹಾಳು ಮಾಡಿ, ಮನದಲ್ಲಿ ಭಯ ಹುಟ್ಟಿಸುವ ತಾಕತ್ತು ಸೊಳ್ಳೆಗಿದೆ ಎಂದ ಮೇಲೆ ಸೊಳ್ಳೆಯ ಸಾಮರ್ಥ್ಯವನ್ನು ನಿರ್ಲಕ್ಷ್ಯ ಮಾಡುವುದು ಸರಿಯೇ?

ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಹಾಡುಗಳನ್ನು ಹಾಡುತ್ತಾ ರೂಮನ್ನು ಪ್ರವೇಶಿಸುತ್ತಿದ್ದ ಹಾಗೇ ನಾವು ಡ್ಯಾನ್ಸ್ ಮಾಡಲೇಬೇಕಾಗುತ್ತದೆ. ಸೊಳ್ಳೆ ಸಹವಾಸದಿಂದ ಕಷ್ಟ ಪಡುವುದಕ್ಕಿಂತ ಅದನ್ನು ನಾಶ ಪಡಿಸುವುದೇ ನಮಗೆ ಉಳಿದಿರುವ ಮಾರ್ಗ. ಸೊಳ್ಳೆಯನ್ನು ನಾಶ ಮಾಡಲು ತುಂಬಾ ಕೆಮಿಕಲ್ ಬಳಸಿದರೆ ಅವುಗಳು ನಮ್ಮ ದೇಹಕ್ಕೆ ಸೇರಿ ನಮಗೆ ಮತ್ತಷ್ಟು ಅಪಾಯ ತರಬಹುದು. ಆದ್ದರಿಂದ ನಮ್ಮ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದಂತೆ ಸೊಳ್ಳೆಯನ್ನು ಕೊಲ್ಲುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ:

1. ಸೊಳ್ಳೆಗೆ ವಾಸಸ್ಥಾನ ಕಲ್ಪಿಸಬೇಡಿ:

ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಕಾಯಿಲೆಗಳು ಹರಡುವಂತೆ ಮಾಡುತ್ತದೆ. ಆದ್ದರಿಂದ ಮನೆ ಸುತ್ತ ಮುತ್ತ ನೀರು ನಿಲ್ಲಲು ಬಿಡಬಾರದು. ಪಾತ್ರೆಯಲ್ಲಿ ತುಂಬಿಟ್ಟ ನೀರನ್ನು 2-3 ದಿನಕ್ಕೊಮ್ಮೆ ಬದಲಾಯಿಸಬೇಕು. ಕಸ, ಗಾಡಿಯ ಟೈರ್ ಇವುಗಳನ್ನು ಮನೆಯ ಸುತ್ತ, ಮುತ್ತ ಬಿಸಾಡಬಾರದು. ಟಾಯ್ಲೆಟ್, ಬಾತ್ ರೂಮ್ ಮತ್ತು ಅಡುಗೆ ಕೋಣೆಯನ್ನು ದಿನ ನಿತ್ಯ ಶುಚಿ ಮಾಡಬೇಕು.

2. ಸೊಳ್ಳೆಗೆ ಹಗಲು ಹೊತ್ತಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಬೇಡಿ!
ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕೊಳೆತ ತರಕಾರಿ ಮತ್ತು ಕಸದ ಬುಟ್ಟಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತವೆ. ಆದ್ದರಿಂದ ಮನೆಯ ಸಮೀಪ ತರಕಾರಿ ತೋಟವಿದ್ದರೆ ಅದರಲ್ಲಿ ಕಳೆಗಳು ಬೆಳೆಯಲು ಬಿಡಬೇಡಿ ಮತ್ತು ಕೊಳೆತ ತರಕಾರಿಗಳನ್ನು ಮನೆಯ ಸಮೀಪ ಬಿಸಾಡಬಾರದು.ಕಸದ ಬುಟ್ಟಿಯನ್ನು ಪ್ರತಿನಿತ್ಯ ಶುಚಿ ಮಾಡಬೇಕು. ಬೇಡದ ಬಟ್ಟೆ, ಪೇಪರ್ , ಪ್ಲಾಸ್ಟಿಕ್ ಕವರ್ ಗಳನ್ನು ಮನೆಯ ಅಕ್ಕ ಪಕ್ಕ ಬಿಸಾಡಬೇಡಿ, ಕಸದ ಬುಟ್ಟಿಗೆ ಹಾಕಿ.

ಅಲ್ಲದೆ ಸೊಳ್ಳೆಗಳು ನಮ್ಮನ್ನು ಕಚ್ಚದಿರಲು DEET, Picaridin, Oil of Lemon Eucalyptus ಮತ್ತು IR3535 ಬಳಸಿದರೆ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲವೆಂದು ಯು.ಎಸ್ ಪರಿಸರ ಸಂರಕ್ಷಣಾ ಘಟಕವು ಹೇಳಿದೆ.

ಆದರೆ ಸೊಳ್ಳೆಗಳ ನಾಶಕ್ಕೆ ಈ ವಸ್ತುಗಳನ್ನು ಬಳಸುವಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಒಳ್ಳೆಯದು.

1. ಈ ವಸ್ತುಗಳನ್ನು ಚರ್ಮಕ್ಕೆ ಅಥವಾ ಬಟ್ಟೆಯ ಒಳಗೆ ಹಾಕದೆ ಬಟ್ಟೆಯ ಮೇಲೆ ಹಾಕಬೇಕು.
2. ಇವುಗಳನ್ನು ಕಣ್ಣು, ಮೂಗು ಮತ್ತು ಬಾಯಿಯ ಹತ್ತಿರ ಸ್ಪ್ರೇ ಮಾಡಬಾರದು.
3. ಗಾಯಗಳಿದ್ದರೆ ಆ ಭಾಗಕ್ಕೆ ಈ ಸೊಳ್ಳೆ ನಾಶಕಗಳನ್ನು ತಾಗಿಸಬೇಡಿ.
4. ಈ ಸೊಳ್ಳೆ ನಾಶಕ ಸ್ಪ್ರೇಗಳನ್ನು ಹೊರಗೆ ಹೋಗುವಾಗ ಬಳಸಿ, ನಂತರ ಮನೆಗೆ ಬಂದ ತಕ್ಷಣ ಸೋಪ್ ಹಾಕಿ ಕೈ ಮತ್ತು ಕಾಲುಗಳನ್ನು ಶುಚಿಗೊಳಿಸಿ.

ಈ ಸ್ಪ್ರೇಗಳಲ್ಲಿ DEET ಅನ್ನು 2 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಹಾಕಬಾರದು. lemon eucalyptus ಅನ್ನು ದೊಡ್ಡವರು ಮಾತ್ರ ಬಳಸಬೇಕು.

English summary

How To Kill The Mosquiteos | Tips For Health | ಸೊಳ್ಳೆಯನ್ನು ಸರ್ವನಾಶ ಮಾಡುವುದು ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Mosquitoes is the main cause for dengue and malaria. So it's better to learn how to kill mosquitoes around your house and to reduce your risk of getting bit.
X
Desktop Bottom Promotion