For Quick Alerts
ALLOW NOTIFICATIONS  
For Daily Alerts

ಶುಂಠಿ ಸೇವನೆ ಅಳತೆಯಲ್ಲಿ ಮಾಡಬೇಕು!

|
Health Benefit Of Ginger
ಶುಂಠಿಯನ್ನು ಒಂದು ಸಂಬಾರ ಪದಾರ್ಥವಾಗಿ ಉಪಯೋಗಿಸುತ್ತೇವೆ. ಈ ಶುಂಠಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ಆರೋಗ್ಯಕರ ಗುಣವನ್ನು ಹೊಂದಿದೆ. ಹೆಚ್ಚಿನ ಮನೆ ಮದ್ದಿನಲ್ಲಿ ಶುಂಠಿಯನ್ನು ಬಳಕೆ ಮಾಡಿರುತ್ತದೆ. ಶುಂಠಿ ರೋಗ ನಿರೋಧಕ ಸಾಮರ್ಥ್ಯವನ್ನು ಹೊಂದಿದೆ. ವಾತ, ಪಿತ್ತ, ಕಫ, ಶೀತ, ಹೊಟ್ಟೆ ತೊಳೆಸುವುದು ಇತ್ಯಾದಿ ಬಾಧೆಗಳನ್ನು ಗುಣಪಡಿಸುವ ಸಾಮರ್ಥ್ಯ ಶುಂಠಿಗಿದೆ. ಶುಂಠಿಯನ್ನು ಆರೋಗ್ಯ ಸಂರಕ್ಷಣೆಯಲ್ಲಿ ಯಾವ ರೀತಿ ಬಳಸಬಹುದೆಂದು ತಿಳಿಯಲು ಮುಂದೆ ಓದಿ.

1. ಜೀರ್ಣಕ್ರಿಯೆ: ಶುಂಠಿ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ದೇಹದಲ್ಲಿ ದೇಹದಲ್ಲಿ ಜೀರ್ಣಶಕ್ತಿ ಕುಂದಿದಾಗ, ಉಂಟಾಗುದ ಅಮದೋಷದಿಂದ ವಾಯುನೋವು ಉಂಟಾಗುವುದು. ಇದನ್ನು ಹೋಗಲಾಡಿಸಲು ಶುಂಠಿ ತಿಂದರೆ ಪಚನಕ್ರಿಯೆ ಸರಿಯಾಗಿ ಆಗುವುದರಿಂದ ನೋವು ನಿವಾರಣೆಯಾಗುವುದು.

ಔಷಧಿಯನ್ನು ಈ ರೀತಿ ತಯಾರಿಸಬಹುದು:

* ಹಸಿ ಶುಂಠಿಯನ್ನು ತೆಗೆದುಕೊಂಡು ಕುಟ್ಟಿ ರಸವನ್ನು ತೆಗೆದು ಒಂದು ಚಮಚ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಜೀರ್ಣಕ್ರಿಯೆ ಹೆಚ್ಚಾಗಿ ಅಮದೋಷ ನಿವಾರಣೆಯಾಗಿ ಕೀಲು ನೋವು ಅಂದರೆ ವಾಯುನೋವು ಕಡಿಮೆಯಾಗುವುದು.

* ಶುಂಠಿ ರಸ ಮತ್ತು ಜೇನುತಪ್ಪಗಳನ್ನು ತೆಗೆದುಕೊಳ್ಳುವುದರಿಂದ ಶೀತ ನೆಗಡಿ ಅಜೀರ್ಣಗಳು ದೂರಾಗುತ್ತವೆ. ಸಕ್ಕರೆ ರೋಗವುಳ್ಳವರು ಜೇನುತುಪ್ಪಕ್ಕೆ ಬದಲಾಗಿ ಸೈಂಧವ ಲವಣವನ್ನು ಉಪಯೋಗಿಸುವುದು ಒಳ್ಳೆಯದು.

* ಒಣಶುಂಠಿ ಚೂರ್ಣವನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಿದರೆ ಅಮವಾತ ಕಡಿಮೆಯಾಗುವುದು. .

ಅಜೀರ್ಣ ಮತ್ತು ಬೇಧಿ: ಅಜೀರ್ಣ ಮತ್ತು ಬೇಧಿ ಉಂಟಾದರೆ 250 ರಿಂದ 300 ಮಿ. ಗ್ರಾಂ. ಒಣ ಶುಂಟಿ ಚೂರ್ಣವನ್ನು ಸಕ್ಕರೆ ಮತ್ತು ತುಪ್ಪ ಬೆರೆಸಿ ತೆಗೆದುಕೊಂಡರೆ ಬೇಧಿ ಗುಣವಾಗುವುದು.

ಜೀರ್ಣಶಕ್ತಿ ಹೆಚ್ಚಲು ಈ ರೀತಿ ಮಾಡಿ: ಒಂದು ಲೋಟ ನೀರು ಮತ್ತು ಒಂದು ಲೋಟ ಹಾಲು ಮಿಶ್ರ ಮಾಡಿ ಅದಕ್ಕೆ ಒಂದು ಚಮಚ ಒಣಶುಂಠಿ ಪುಡಿ ಹಾಕಿ ಚೆನ್ನಾಗಿ ಕಾಯಿಸಬೇಕು. ಆ ದ್ರಾವಣ ಒಂದು ಲೋಟ ಆಗುವವರೆಗೆ ಕುದಿಸಬೇಕು. ನಂತರ ಅದನ್ನು ಸ್ವಲ್ಪ ತಣ್ಣಗೆ ಮಾಡಿ ಜೇನುತುಪ್ಪ ಸೇರಿಸಿ ತಿಂದರೆ ಪಚನಕ್ರಿಯೆ ಚೆನ್ನಾಗಿ ಆಗುತ್ತದೆ. ಕೆಲವರಿಗೆ ಹಾಲು ಇಷ್ಟವಾಗುವುದಿಲ್ಲ. ಅಂತಹವರು ಬರೀ ನೀರು ಹಾಕಿ ಮೇಲೆ ಹೇಳಿದ ವಿಧಾನದಂತೆ ಮಾಡಿ ಕುಡಿಯಬಹುದು.

ಮಕ್ಕಳ ಶೀತಕ್ಕೆ: ಮಕ್ಕಳಿಗೆ ನೆಗಡಿ ಶೀತವಾಗಿ ಜ್ವರ ಬಂದರೆ 2 ಹನಿ ಹಸಿ ಶುಂಠಿ ರಸಕ್ಕೆ, ಒಂದು ಚಮಚ ಜೇನುತಪ್ಪ ಮತ್ತು 3 ಹನಿ ತುಳಸಿ ರಸ ಮಿಶ್ರ ಮಾಡಿ ಕೊಟ್ಟರೆ ಕಾಯಿಲೆ ಗುಣವಾಗುವುದು.

ಸೂಚನೆ: 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶುಂಠಿ ಕೊಡಬೇಡಿ.

* ಮುಟ್ಟಿನ ನೋವು: ಒಂದು ಸಣ್ಣ ತುಂಡು ಹಸಿ ಶುಂಠಿಯನ್ನು ಒಂದು ಬಟ್ಟಲು ನೀರಿನಲ್ಲಿ 15 ನಿಮಿಷ ಕುದಿಸಿ, ಸ್ವಲ್ಪ ಸಕ್ಕರೆ ಹಾಕಿ ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡಿದರೆ ಮುಟ್ಟಿನ ಸಮಯದಲ್ಲಿ ಕಂಡುಬರುವ ನೋವು ನಿವಾರಣೆಯಾಗುತ್ತದೆ.

*ಗಂಟಲು ಕೆರತ: ಒಂದು ತುಂಡು ಶುಂಠಿ, ಒಂದು ಲವಂಗ, ಇಂದು ಹರಳು ಉಪ್ಪು ಇವುಗಳನ್ನು ಬಾಯಿಯಲ್ಲಿಟ್ಟು ಚಪ್ಪರಿಸುವುದರಿಂದ ಕೆಮ್ಮು, ಗಂಟಲು ಕೆರೆತಗಳನ್ನು ಹೋಗಲಾಡಿಸಬಹುದು.

* ತಲೆನೋವು: ಶುಂಠಿಯನ್ನು ನೀರಿನಲ್ಲಿ ಅರೆದು ಬರುವ ಗಂಧವನ್ನು ಹಣೆಗೆ ಲೇಪ ಮಾಡಿ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

* ದೇಹದ ತೂಕ ಕಡಿಮೆ ಮಾಡಲು: ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ದೇಹದ ತೂಕ ಕಡಿಮೆಯಾಗುವುದು.

* ಕ್ಯಾನ್ಸರ್: ಶುಂಠಿ ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ.

* ತಲೆಸುತ್ತು: ಗರ್ಭಿಣಿಯರಿಗೆ ಬೆಳಗ್ಗಿನ ಹೊತ್ತು ಕಂಡುಬರುವ ತಲೆಸುತ್ತು ಬರುವುದನ್ನು ತಡೆಯುವಲ್ಲಿ ಶುಂಠಿ ಪರಿಣಾಮಕಾರಿಯಾಗಿದೆ. 250 ಮಿಗ್ರಾಂ ಶುಂಠಿಯನ್ನು ದಿನದಲ್ಲಿ 4 ಬಾರಿ ತಿನ್ನಬೇಕು. ಈ ರೀತಿ 4 ದಿನ ತಿಂದರೆ ಗುಣಮುಖವಾಗುವುದು. ಗರ್ಭಿಣಿಯರು ಶುಂಠಿ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಸಲಹೆ:
* ದಿನದಲ್ಲಿ 4 ಗ್ರಾಂಕ್ಕಿಂತ ಅಧಿಕ ಶುಂಠಿ ತಿನ್ನಬಾರು.
* ಗರ್ಭೀಣಿಯರು 1 ಗ್ರಾಂಕ್ಕಿಂತ ಅಧಿಕ ಶುಂಠಿ ತಿನ್ನಬಾರದು.

English summary

Health Benefit Of Ginger | Tips For Health | ಶುಂಠಿಯ ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Ginger have lots of health benefit. You can so many diseases from ginger. It helps ti digestion, cough, cold... so on. Here are few home remedies and also there instruction how to use ginger as a home remedies.
Story first published: Monday, July 2, 2012, 10:56 [IST]
X
Desktop Bottom Promotion