For Quick Alerts
ALLOW NOTIFICATIONS  
For Daily Alerts

ತಲೆನೋವು ತರುವ 10 ಅಭ್ಯಾಸಗಳು!

|

ಬೆಳಗ್ಗೆ ಎದ್ದಾಗ ಆರಾಮವಾಗಿಯೇ ಇರುತ್ತೇವೆ. ಆದರೆ ಸ್ವಲ್ಪ ಹೊತ್ತಿಗೆ ಇದ್ದಕ್ಕಿದ್ದಂತೆ ತಲೆನೋವು ಬಂದು ನಮ್ಮ ಮೂಡ್ ಹಾಳು ಮಾಡುತ್ತದೆ. ಈ ರೀತಿ ತಲೆನೋವು ಕಾಣಿಸಿದರೆ ಒಂದೋ ಮಾತ್ರೆ ನುಂಗುತ್ತೇವೆ, ಇಲ್ಲದಿದ್ದರೆ ಬಾಮ್ ಹಚ್ಚುವುದು, ತಲೆಗೆ ಬಟ್ಟೆಯನ್ನು ಬಿಗಿದು ಕಟ್ಟುವುದು, ಸ್ಟ್ರಾಂಗ್ ಆಗಿ ಟೀ ಕುಡಿಯುವುದು ಈ ರೀತಿ ಮಾಡುತ್ತೇವೆ.

ತಲೆನೋವು ಬಂದರೆ ಮಾತ್ರೆ ನುಂಗುವುದು ಒಳ್ಳೆಯದಲ್ಲ. ತಲೆನೋವಿನ ಹಿಂದೆ ಒಂದು ಕಾರಣ ಇರುತ್ತದೆ. ಮಾನಸಿಕ ಒತ್ತಡ ಹೆಚ್ಚಾದಾಗ ಅಥವಾ ತಲೆಯಲ್ಲಿ ಏನಾದರೂ ಕಾಯಿಲೆ ಇದ್ದರೆ ತಲೆನೋವು ಬರುತ್ತಾ ಇರುತ್ತದೆ. ಪದೇ-ಪದೇ ತಲೆನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ತೋರಿಸುವುದು ಒಳ್ಳೆಯದು.

ಕೆಲವೊಮ್ಮೆ ತಲೆನೋವು ಯಾವುದೇ ಕಾರಣವಿಲ್ಲದೆ ಬರುತ್ತದೆ. ನಾವು ಮಾಡಿದಂತಹ ಕೆಲಸ ಅಥವಾ ನಮ್ಮ ಅಭ್ಯಾಸದಿಂದಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. ಆದರೆ ಅವುಗಳಿಂದ ನಮಗೆ ತಲೆನೋವು ಬರಬಹುದೆಂಬ ಕಲ್ಪನೆಯೂ ಇರುವುದಿಲ್ಲ. ನಮ್ಮ ಯಾವೆಲ್ಲಾ ಅಭ್ಯಾಸಗಳು ತಲೆನೋವು ತರುತ್ತದೆ ಎಂದು ನೋಡೋಣ ಬನ್ನಿ:

1.ಕೂದಲನ್ನು ಸರಿಯಾಗಿ ಒರೆಸದೆ ಇರುವುದು

1.ಕೂದಲನ್ನು ಸರಿಯಾಗಿ ಒರೆಸದೆ ಇರುವುದು

ತಲೆಸ್ನಾನ ಮಾಡಿ ಕೂದಲನ್ನು ಸರಿಯಾಗಿ ಒಣಗಿಸದೆ ಇದ್ದರೆ ತಲೆನೋವು ಉಂಟಾಗುತ್ತದೆ.ಆದ್ದರಿಂದ ತಲೆಸ್ನಾನ ಮಾಡಿದರೆ ಬಾಚುವ ಮೊದಲು ಕೂದಲನ್ನು ಸರಿಯಾಗಿ ಒಣಗಿಸಿ.

2. ಬಿಸಿಲಿನಲ್ಲಿ ತಿರುಗಾಡುವುದು

2. ಬಿಸಿಲಿನಲ್ಲಿ ತಿರುಗಾಡುವುದು

ಬಿಸಿಲಿನಲ್ಲಿ ತಿರುಗಾಡುವಾಗ ಕೊಡೆ ಅಥವಾ ಟೋಪಿ ಧರಿಸದಿದ್ದರೆ ಸ್ವಲ್ಪ ಹೊತ್ತಿನ ಬಳಿಕ ತಲೆನೋವು ಕಾಣಿಸಿಕೊಳ್ಳುವುದು. ಆದ್ದರಿಂದ ತುಂಬಾ ಬಿಸಿಲಿಗೆ ಹೋಗುವಾಗ ಬಿಸಿಲು ನೇರವಾಗಿ ನಿಮ್ಮ ಮೇಲೆ ಬೀಳದಿರಲು ಕೊಡೆ ಹಿಡಿಯಿರಿ.

3. ಸುಗಂಧದ್ರವ್ಯ

3. ಸುಗಂಧದ್ರವ್ಯ

ಸುಗಂಧ ದ್ರವ್ಯದ ವಾಸನೆ ಇಷ್ಟವಾಯಿತೆಂದು ತುಂಬಾ ಹಚ್ಚಿದರೆ ಸ್ವಲ್ಪ ಹೊತ್ತಿನ ಬಳಿಕ ತಲೆನೋವು ಕಾಣಿಸಿಕೊಳ್ಳುವುದು. ಆದ್ದರಿಂದ ಸುಗಂಧ ದ್ರವ್ಯವನ್ನು ಮಿತಿಯಲ್ಲಿ ಹಾಕಿಕೊಳ್ಳಿ. ಕೆಲವರಿಗೆ ಸೆಂಟ್ ಸ್ವಲ್ಪವೂ ಆಗಿ ಬರುವುದಿಲ್ಲ. ಅಂತಹವರು ಅದನ್ನು ಹಚ್ಚಲು ಹೋಗಬಾರದು.

4. ದೂರದರ್ಶನ ವೀಕ್ಷಣೆ

4. ದೂರದರ್ಶನ ವೀಕ್ಷಣೆ

ತುಂಬಾ ಜನರಿಗೆ ಸಮೀಪದಿಂದ ಟಿವಿ ನೋಡುವ ಅಭ್ಯಾಸವಿರುತ್ತದೆ. ಈ ರೀತಿ ಸಮೀಪದಿಂದ ಟಿವಿ ವೀಕ್ಷಣೆ ಮಾಡಿದರೆ ಕಣ್ಣಿಗೆ ಒಳ್ಳೆಯದಲ್ಲ ಮತ್ತು ತಲೆನೋವು ಉಂಟಾಗುವುದು. ಆದ್ದರಿಂದ ಟಿವಿಯನ್ನು ದೂರದಿಂದ ವೀಕ್ಷಣೆ ಮಾಡುವುದು ಒಳ್ಳೆಯದು.

5. ಲ್ಯಾಪ್ ಟಾಪ್

5. ಲ್ಯಾಪ್ ಟಾಪ್

ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಪರದೆಯನ್ನು ಕಣ್ಣು ಮಿಟುಕಿಸದೆ ನೋಡುವುದು ಸರಿಯಲ್ಲ. ಈ ರೀತಿ ಮಾಡಿದರೆ ತಲೆನೋವು ಬರುತ್ತದೆ. ಒಂದು ಗಂಟೆಗೊಮ್ಮೆಯಾದರೂ ಕಣ್ಣಿಗೆ 2 ನಿಮಿಷ ವಿಶ್ರಾಂತಿ ಕೊಡಬೇಕು. ಇಲ್ಲದಿದ್ದರೆ ಕಣ್ಣಿಗೂ ಹಾಳು, ಆರೋಗ್ಯ ಕೂಡ ಹಾಳಾಗುವುದು.

6.ಮಲಗಿಕೊಂಡು ಓದುವುದು

6.ಮಲಗಿಕೊಂಡು ಓದುವುದು

ಬೆಡ್ ನಲ್ಲಿ ಕುಳಿತು ಓದುವುದು ಒಳ್ಳೆಯ ಅಭ್ಯಾಸವಲ್ಲ. ಈ ರೀತಿ ಓದಿದರೆ ಕಣ್ಣಿನ ಮೇಲೆ ಹಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ತಲೆನೋವು ಉಂಟಾಗುವುದು. ಆದ್ದರಿಂದ ಬುಕ್ ಓದುವಾಗ ಕೂತುಕೊಂಡು ಓದಬೇಕು.

7. ತಣ್ಣನೆಯ ಪಾನೀಯಾ

7. ತಣ್ಣನೆಯ ಪಾನೀಯಾ

ತಣ್ಣನೆಯ ಪಾನೀಯಾ ಕುಡಿಯಲು ತುಂಬಾ ಖುಷಿಯಾಗುತ್ತದೆ. ಆದರೆ ಅಷ್ಟು ತಂಪನ್ನು ಸಹಿಸಿಕೊಳ್ಳಲು ಮೆದುಳಿಗೆ ಸಾಧ್ಯವಾಗುವುದಿಲ್ಲ. ಇದರಿಂದ ತಲೆನೋವು ಉಂಟಾಗುತ್ತದೆ.

8. ಮದ್ಯ:

8. ಮದ್ಯ:

ವಿಪರೀತ ಮದ್ಯ ಕುಡಿದರೆ ಆ ಕ್ಷಣ ಗೊತ್ತಾಗದೆ ಇದ್ದರೂ ಮದ್ಯದ ನಿಷೆ ಇಳಿದ ಮೇಲೆ ತಲೆನೋವು ಕಂಡು ಬರುತ್ತದೆ.

9. ತುಂಬಾ ನಿದ್ದೆ ಮಾಡುವುದು

9. ತುಂಬಾ ನಿದ್ದೆ ಮಾಡುವುದು

ತುಂಬಾ ಹೊತ್ತು ನಿದ್ದೆ ಮಾಡಿದರೆ ತಲೆನೋವು ಕಾಣಿಸಿಕೊಳ್ಳುತ್ತದೆ. ಅತೀಯಾದ ನಿದ್ದೆ ಕೂಡ ಒಳ್ಳೆಯದಲ್ಲ. 7-8 ಗಂಟೆ ನಿದ್ದೆ ಆರೋಗ್ಯಕ್ಕೆ ಒಳ್ಳೆಯದು.

10. ತುಂಬಾ ದೂರ ಪ್ರಮಾಣ ಮಾಡಿದರೆ

10. ತುಂಬಾ ದೂರ ಪ್ರಮಾಣ ಮಾಡಿದರೆ

ಲಾಂಗ್ ಡ್ರೈ, ದೂರದ ವಾರಗಳಿಗೆ ಹೋಗುವುದು ಇಷ್ಟವಾಗುತ್ತದೆ. ಆದರೆ ಇದರಿಂದಾಗಿ ತಲೆನೋವು ಕಾಣಿಸಿಕೊಳ್ಳುವುದು. ಆದ್ದರಿಂದ ದೂರ ಪ್ರಯಾಣ ಮಾಡುವಾಗ ಕಿವಿಗೆ ಹತ್ತಿ ಹಾಕಿ ಸ್ಕಾರ್ಪ್ ಧರಿಸಿ. ಬೈಕ್ ನಲ್ಲಿ ಹೋಗುವುದಾದರೆ ಸ್ಕಾರ್ಪ್ ಧರಿಸಿ, ಹೆಲ್ಮೆಟ್ ಹಾಕಿ. ಈ ರೀತಿ ಮಾಡಿದರೆ ತಲೆನೋವಿನಿಂದ ತಪ್ಪಿಸಿಕೊಳ್ಳಬಹುದು.

English summary

10 Habits That Causes Headache | Tips For Health | ತಲೆನೋವು ತರುವ 8 ಅಭ್ಯಾಸಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Headaches have a way of springing upon us and taking us by surprise. We’re having a perfectly good day and suddenly this annoying headache strikes and ruins it for us. Our Habits also may cause headache.
X
Desktop Bottom Promotion