For Quick Alerts
ALLOW NOTIFICATIONS  
For Daily Alerts

ಪ್ರಯಾಣದಿಂದ ಆರೋಗ್ಯ ಕೆಡದಿರಲು 6 ಸಲಹೆಗಳು

|
Tips To Solve Health Problem From Traveling
ವಿಮಾನ ಹಾರಾಡುವುದನ್ನು ನೋಡಲು ಚೆಂದ. ಅದೇ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭ ಬಂದಾಗ ಕೆಲವರಿಗೆ ಭಯ, ತಲೆನೋವು, ಮಲವಿಸರ್ಜನೆಗೆ ಹೋಗಬೇಕೆನಿಸುವುದು, ಕಿವಿನೋವು ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ಆದರೆ ವಿದೇಶಕ್ಕೆ ಹೋಗುವುದಾದರೆ ವಿಮಾನವೆ ಸೂಕ್ತ. ವಿಮಾನದಲ್ಲಿ ಪ್ರಯಾಣ ಮಾಡಿದಾಗ ಈ ಮೇಲಿನ ಸಮಸ್ಯೆಗಳು ಕಂಡು ಬರುವವರು ಈ ಕೆಳಗಿನ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಕಡಿಮೆ ತಿನ್ನಬೇಕು: ಪ್ರಯಾಣಿಸುವಾಗ ಸ್ವಲ್ಪ ಆಹಾರ ತಿನ್ನಬೇಕು. ಇದರಿಂದ ಆಗಾಗ ಮಲವಿಸರ್ಜನೆ ಉಂಟಾಗುವುದಿಲ್ಲ.

ತಿನ್ನುವುದು: ಬಾಯಿಯಲ್ಲಿ ಏನಾದರೂ ಹಾಕಿ ಅಗೆಯುತ್ತಾ ಇದ್ದರೆ ಬಾಯಲ್ಲಿ ನೀರು ಬರುವ ಸಮಸ್ಯೆ ಉಂಟಾಗುವುದಿಲ್ಲ. ಆದ್ದರಿಂದ ಮಿಂಟ್ ತಿನ್ನುವುದು ಒಳ್ಳೆಯದು. ನಿಂಬೆ ಹಣ್ಣು ಜೊತೆಯಲ್ಲಿಟ್ಟುಕೊಂಡು ಆಗಾಗ ಮೂಗಿಗೆ ಹಿಡಿದರೆ ವಾಂತಿ ಬರುವುದಿಲ್ಲ.

ದೇಹದ ಚಲನೆ: ಪ್ರಯಾಣ ಮಾಡುವಾಗ ಇಷ್ಟದ ಹಾಡುಗಳನ್ನು ಕೇಳುತ್ತಾ ಇದ್ದರೆ ಗಮನವೆಲ್ಲಾ ಹಾಡಿನ ಮೇಲೆ ಇರುವುದರಿಂದ ಇತರ ಸಮಸ್ಯೆಗಳು ಮರೆತು ಹೋಗುವುದು.

ಯೋಚನೆ: ಪ್ರಯಾಣ ಮಾಡಿದರೆ ನನಗೆ ಕಿವಿ ನೋವು ಬರುತ್ತೆ, ವಾಂತಿ ಬರುತ್ತೆ ಅಂತ ಅದರ ಬಗ್ಗೆ ಯೋಚಿಸುತ್ತಾ ಇದ್ದರೆ ಅದೇ ರೀತಿ ಉಂಟಾಗುವುದು. ಆದ್ದರಿಂದ ಆ ರೀತಿ ಯೋಚಿಸಲು ಹೋಗಬಾರದು. ಆಲೋಚನೆಗಳನ್ನು ಬೇರೆ ಕಡೆ ಹರಿಯಬಿಡಬೇಕು. ಒಳ್ಳೆಯ ಸಂಗೀತಗಳು ನಿಮ್ಮ ಭಯವನ್ನು ಹೋಗಲಾಡಿಸಿ ಪ್ರಯಾಣ ಸುಖಕರವಾಗಿಸುವಲ್ಲಿ ಸಹಕಾರಿಯಾಗಿದೆ.

ಹತ್ತಿ: ವಿಮಾನ ಹೊರಡುವಾಗ ಉಂಟಾಗುವ ಶಬ್ದ ಕೇಳುವಾಗ ಹೆಚ್ಚಿನವರಿಗೆ ಭಯವಾಗುತ್ತದೆ. ಆ ಶಬ್ದ ಹೆಚ್ಚಾಗಿ ಕೇಳಿಸದಿರಲು ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳುವುದು ಒಳ್ಳೆಯದು. ಈ ರೀತಿ ಹತ್ತಿ ಇಟ್ಟುಕೊಳ್ಳುವುದರಿಂದ ಪ್ರಯಾಣಿಸುವಾಗ ಕಿವಿಯಲ್ಲಿ ಗಾಳಿ ತುಂಬಿ ಕಿವಿನೋವು ಉಂಟಾಗುವುದನ್ನು ತಡೆಯಬಹುದು.

ನೀರು: ಪ್ರಯಾಣಿಸುವ ಮುನ್ನ ಭಯವಾಗುತ್ತಿದ್ದರೆ ತಣ್ಣೀರನ್ನು ಕುಡಿಯುವುದು ಒಳ್ಳೆಯದು. ಜ್ಯೂಸ್ ಕುಡಿಯುವುದರಿಂದ ಮನಸ್ಸಿಗೆ ಸ್ವಲ್ಪ ಸಮಧಾನ ಆದಂತೆ ಅನಿಸುತ್ತದೆ. ಒಟ್ಟಿನಲ್ಲಿ ವಿಮಾನಯಾನದಲ್ಲಿ ಉಂಟಾಗುವ ಆರೋಗ್ಯದ ಸಮಸ್ಯೆಯನ್ನು ನಿವಾರಿಸಲು ನಿಮ್ಮ ಗಮನವನ್ನು ಬೇರೆ ಕಡೆ ಹರಿಸಿದರೆ ಸಾಕು, ಪ್ರಯಾಣ ಸುಖಕರವಾಗುವುದು.

English summary

Tips To Solve Health Problem From Traveling | Tips For Health | ಪ್ರಯಾಣದಿಂದ ಆರೋಗ್ಯ ಕೆಡದಿರಲು ಸಲಹೆಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Many travelers face health problems while traveling in airplanes. This is why, sometimes, people dread to get into a flight. These remedies can help prevent air sickness to a great extent.
Story first published: Friday, April 27, 2012, 10:31 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more