For Quick Alerts
ALLOW NOTIFICATIONS  
For Daily Alerts

ಯೋಗ ಚಿಕಿತ್ಸಿಕ ಡಾ. ವಿವೇಕ್ ಉಡುಪ ಸಂದರ್ಶನ

By * ವೆಂಕಟ್, ಸಿಂಗಪುರ
|
Yoga expert Dr Vivek Udupa interview
ಡಿವೈನ್ ಸ್ಪಾರ್ಕ್(ಸಿಂಗಪುರ)ದ ವತಿಯಿಂದ ಸಿಂಗಪುರದಲ್ಲಿ ಖ್ಯಾತ ಯೋಗ ಚಿಕಿತ್ಸಕ, ಸ್ವಾಸ್ಥ್ಯ ಹೆಲ್ತ್‌ಕೇರ್ ಮತ್ತು ರಿಸರ್ಚ್‌ನ ಸಂಸ್ಥಾಪಕರು, ನಿರ್ದೇಶಕರು ಮತ್ತು ಮುಖ್ಯ ವೈದ್ಯಾಧಿಕಾರಿಗಳು ಹಾಗು "ಭಾರತದಲ್ಲಿ ಯೋಗ ಮತ್ತು ಪುನರ್‌ಸ್ಥಾಪನೆ" ವಿಷಯದಲ್ಲಿ MD ಪಡೆದವರಲ್ಲಿ ಮೊದಲಿಗರಾದ ಡಾ. ವಿವೇಕ ಉಡುಪರವರಿಂದ "ಯೋಗ ಶ್ರೀ ರಕ್ಷ"ವೆಂಬ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು.

ಇಂದಿನ ಪೈಪೋಟಿ, ಒತ್ತಡ ಮತ್ತು ಪರಿಶ್ರಮದ ಜೀವನದಲ್ಲಿ ಸರಳ ಯೋಗದ ಪ್ರಾಮುಖ್ಯತೆ ಮತ್ತು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಯೋಗದ ಬಗೆಗಿನ ಜಾಗೃತಿಯ ಬಗ್ಗೆ ಬೆಳಕು ಚೆಲ್ಲಿದರಲ್ಲದೆ, ಶಿಬಿರದಲ್ಲಿ ಭಾಗವಹಿಸಿದ ಅನೇಕರಿಗೆ ಉತ್ತಮ ಸಲಹೆ ಮತ್ತು ಸೂಚನೆಗಳನ್ನು ಕೊಡುವುದರಲ್ಲಿ ಈ ಶಿಬಿರ ಉಪಯುಕ್ತವಾಯಿತು.

ಡಾ.ವಿವೇಕ ಉಡುಪ ಅವರು ಕರ್ನಾಟಕದ ಮಹಾನಗರಗಳಲ್ಲದೆ ಪ್ರತಿಗ್ರಾಮದಲ್ಲೂ ಸಹ ಯೋಗ ಚಿಕಿತ್ಸೆ ಮತ್ತು ಪ್ರಕೃತಿ ಚಿಕಿತ್ಸಾ ತರಬೇತಿ ಶಿಬಿರಗಳನ್ನು ಆಯೋಜಿಸಿ ಸುಮಾರು 12,000ಕ್ಕೂ ಅಧಿಕ ರೋಗಿಗಳಿಗೆ ಉಚಿತವಾಗಿ ತಪಾಸಣೆ ನಡೆಸಿದ್ದಾರೆಂಬುದು ಶ್ಲಾಘನೀಯ. ಇವರು ನಡೆಸಿದ ಯೋಗ ಅಧ್ಯಯನ ಮತ್ತು ಸಂಶೋಧನೆಗಳಿಂದ ಜನರ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಸುಧಾರಣೆಗೆ ಬೇಕಾದಂತಹ ಸರಳಕ್ರಮಗಳನ್ನು ತಿಳಿಸುತ್ತಾ ಬಂದಿದ್ದಾರೆ.

ಇವರನ್ನು ಸಂದರ್ಶಿಸಿದಾಗ ಅನೇಕ ಉಪಯುಕ್ತವಾದ ಮತ್ತು ಆರೋಗ್ಯಕರವಾದ ಜೀವನವನ್ನು ನಡೆಸಲು ಅನೇಕ ಸಲಹೆ ಮತ್ತು ಸೂಚನೆಗಳು ನಮಗೆ ದೊರೆತವು, ಅವುಗಳನ್ನು ಓದುಗರಲ್ಲಿ ಹಂಚಿಕೊಂಡು ಅದರ ಸದುಪಯೋಗವನ್ನು ಪಡೆಯಬೇಕೆಂಬುದು ನಮ್ಮಯ ಆಶಯ.

ಪ್ರಶ್ನೆ :
ಯೋಗ ವಿದ್ಯೆ ಎಂಬುದು ಪ್ರಪಂಚಕ್ಕೆ ಭಾರತೀಯರ ಕೊಡುಗೆ, ಭಾರತದಲ್ಲೀಗ ಅನಾರೋಗ್ಯ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನಿರಬಹುದು, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಮ್ಮಲ್ಲಿ ವ್ಯಾಯಮ ಮತ್ತು ಆರೋಗ್ಯದೆಡೆಗಿನ ಕಾಳಜಿ ಕಡಿಮೆಯೆ?

ಡಾ.ವಿವೇಕ : ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ಯೋಗಶಾಸ್ತ್ರವನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟಂತಹ ದೇಶ ನಮ್ಮದು. ಯೋಗದ ಬಗ್ಗೆ ಜ್ಞಾನ ಅರಿವು ನಮಗೆ ಮೊದಲಿಂದಲೂ ಕಡಿಮೆ. ಇಂದಿನ ಅಧುನಿಕ ಯುಗದಲ್ಲಿ ಜಾಗತೀಕರಣದಿಂದಾಗಿ ಕೃಷಿಯ ವಾತಾವರಣ ಹೋಗಿ ಎಲ್ಲ ಕಡೆ ದೊಡ್ದ ಕಟ್ಟಡಗಳು ಬೆಳೆದು, ಸರಳವಾದ ಜೀವನದಿಂದ ದೂರವಾಗಿ, ಸರಿಯಾದ ಆಹಾರ ಕ್ರಮಗಳಿಲ್ಲದೆ, ವಿಶ್ರಾಂತಿಯ ಕೊರತೆಗಳಿಂದ ಜೀವನಶೈಲಿ ಹದಗೆಟ್ಟು ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.

ಎಲ್ಲ ಕ್ಷೇತ್ರಗಳಲ್ಲಿಯೂ ಪೈಪೋಟಿಯ ಜೀವನ, ಒತ್ತಡದಿಂದ ಕೂಡಿರುವಂತಹ ಕೆಲಸಗಳು, ಆಹಾರದಲ್ಲಿನ ಏರು-ಪೇರು, ನಿದ್ದೆಯ ಕೊರತೆ, ದುಶ್ಚಟಗಳು, ಸರಿಯಾದ ವೇಳೆಯಲ್ಲಿ ಆಹಾರ ತೆಗೆದುಕೊಳ್ಳದಿರುವಂತಹುದು, ಅತಿಯಾದ ಕೋಪ, ಆತಂಕ, ದುಗುಡ, ತಳಮಳಗಳು ಪ್ರತಿಯೊಬ್ಬರಲ್ಲಿ ಹೆಚ್ಚಾಗುತ್ತಿದ್ದು ಅವರಲ್ಲಿ ಅವರಿಗೆ ನಂಬಿಕೆ ಕಳೆದುಕೊಂಡು ಜೀವನ ಸಿಗಬೇಕಾದಂತಹ ಪ್ರೀತಿ ವಿಶ್ವಾಸಗಳ ಕೊರತೆಯಿಂದಾಗಿ ಖಾಯಿಲೆಗಳು ಹೆಚ್ಚಾಗುತ್ತಿವೆ. ಯೋಗ ಸಂಶೋಧನೆಯ ಪ್ರಕಾರ ಮಹಾನಗರ ಪ್ರದೇಶಗಳಲ್ಲಿ ಮನೊರೋಗ ಮತ್ತು ಜೀವನಶೈಲಿಗೆ ಸಂಬಂಧಪಟ್ಟಂತಹ ರೋಗಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಮುಖ್ಯವಾಗಿ ಮನಸ್ಸಿನಿಂದ ಪ್ರಾರಂಭಗೊಂಡ ಸಮಸ್ಯೆಗಳು ದೇಹದ ಮೇಲೆ ತಮ್ಮ ದುಷ್ಪರಿಣಾಮ ಬೀರಿ, ಉಸಿರಾಟದಲ್ಲಿ ಏರಿಳಿತಗಳನ್ನುಂಟು ಮಾಡಿ ಆರೋಗ್ಯವನ್ನು ಕೆಡಿಸುತ್ತಿವೆ.

English summary

Yoga expert Dr Vivek Udupa interview | Yoga Sri Raksha | Yoga for good health | ಯೋಗ ಚಿಕಿತ್ಸಿಕ ಡಾ. ವಿವೇಕ್ ಉಡುಪ ಸಂದರ್ಶನ

Yoga expert Dr Vivek Udupa interview by Venkat from Singapore. Dr Vivek was in Singapore to conduct 'Yoga Sri Raksha' workshop. He speaks about importance of yoga in day-to-day life, to stay away from ailments and to lead healthy lifestyle.
Story first published: Saturday, March 17, 2012, 16:29 [IST]
X
Desktop Bottom Promotion