For Quick Alerts
ALLOW NOTIFICATIONS  
For Daily Alerts

ಬೊಜ್ಜುರಹಿತ ಹೊಟ್ಟೆಗಾಗಿ ಈ ಆಹಾರಗಳು

|
Food For Clean Stomach
ಹೊಟ್ಟೆ ಸರಿಯಾಗಿ ತನ್ನ ಕರ್ತವ್ಯ ಮಾಡದಿದ್ದರೆ ದೇಹದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ತ್ವಚೆ ಕಾಂತಿ ಕೂಡ ಕಡಿಮೆಯಾಗುವುದು. ದೇಹ ಮತ್ತು ತ್ವಚೆ ಸೌಂದರ್ಯ ಆರೋಗ್ಯಕರವಾಗಿ ಇರಲು ಜೀರ್ಣಕ್ರಿಯೆ ಸರಾಗವಾಗಿ ನಡೆಯಬೇಕು. ಹೊಟ್ಟೆಯಲ್ಲಿ ಬೊಜ್ಜು ಶೇಖರವಾಗಿದ್ದರೆ ದೇಹ ಮತ್ತಷ್ಟು ದಪ್ಪವಾಗಿ ಕಾಣುವುದು. ಚಪ್ಪಟೆಯಾದ ಹೊಟ್ಟೆ ಮತ್ತು ಉತ್ತಮ ರೀತಿಯ ಜೀರ್ಣಕ್ರಿಯೆಗೆ ಈ ಕೆಳಗಿನ ಆಹಾರಗಳು ಸಹಕಾರಿಯಾಗಿದೆ.

ತರಕಾರಿಗಳು: ತರಕಾರಿಗಳಲ್ಲಿ ಪಾಲಾಕ್, ಸೆಲರಿ, ಬ್ರೊಕೋಲಿ, ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ ಸೇವಿಸಿದರೆ ಹೊಟ್ಟೆ ಶುಚಿಯಾಗಿ ಇರುವುದು.

ಹಣ್ಣುಗಳು: ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿ, ಸ್ಟ್ರಾಬರಿ, ಬಾಳೆಹಣ್ಣು ಇವುಗಳನ್ನು ಸೇವಿಸಿದರೆ ಮಲಬದ್ಧತೆಯ ಸಮಸ್ಯೆ ಉಂಟಾಗುವುದಿಲ್ಲ. ಆದ್ದರಿಂದ ಹೊಟ್ಟೆ ಶುದ್ಧವಾಗುತ್ತದೆ. ದಿನಕ್ಕೆ ಎರಡು ಬಾಳೆಹಣ್ಣಿಗಿಂತ ಅಧಿಕ ಸೇವಿಸಿದರೆ ದೇಹದ ತೂಕ ಹೆಚ್ಚಾಗುವುದು.

ದವಸ ಧಾನ್ಯಗಳು: ಗೋಧಿ ಬ್ರೆಡ್ ಮತ್ತು ಪ್ರೊಟೀನ್ ಅಧಿಕವಿರುವ ದವಸ ಧಾನ್ಯಗಳನ್ನು ಸೇವನೆ ಒಳ್ಳೆಯದು.

ನೀರಿನಂಶ: ನೀರು, ಜ್ಯೂಸ್, ಹಾಲು ಇವುಗಳನ್ನು ಕುಡಿಯಬೇಕು. ದಿನಕ್ಕೆ 10-12 ಗ್ಲಾಸ್ ನೀರು ತಪ್ಪದೆ ಕುಡಿಯಬೇಕು.

ವ್ಯಾಯಾಮದ ಜೊತೆ ಈ ಮೇಲಿನ ಆಹಾರವನ್ನು ತಿನ್ನುವುದರಿಂದ ಬೇಗನೆ ಚಪ್ಪಟೆಯಾದ ಹೊಟ್ಟೆಯನ್ನು ಪಡೆಯಬಹುದು.

English summary

Food For Clean Stomach | Tips For Health | ಹೊಟ್ಟೆಯನ್ನು ಆರೋಗ್ಯವಾಗಿಡುವ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆ

If the stomach is not clean, the tummy starts popping out thus making you look fat! Include the right food if you want to clean your stomach and have flat stomach.
Story first published: Tuesday, February 28, 2012, 10:11 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X