For Quick Alerts
ALLOW NOTIFICATIONS  
For Daily Alerts

ಎಲ್ಲರೂ ಕಲಿಯಬೇಕಾದ 5 ಕೆಟ್ಟ ಚಟಗಳು

By Shami
|
Five Very Good Bad Habits
ಆರೋಗ್ಯವಂತ, ಬುದ್ಧಿವಂತ, ವಿದ್ಯಾವಂತ, ಭಾಗ್ಯವಂತ ಮತ್ತು ಸೂಕ್ಷಮತಿ ಆಗಬೇಕಾದರೆ ಮಾನವನಾದವನು ಕೆಲವು ಕೆಟ್ಟ ಚಟಗಳನ್ನು ರೂಡಿಸಿಕೊಳ್ಳಬೇಕಾದುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯ. ಒಂದೂ ಕೆಟ್ಟ ಚಟವಿಲ್ಲದೆ ಬದುಕಿದರೆ ಈ ಭೂಮಿ ಮೇಲೆ ನಾವು ಜನ್ಮವೆತ್ತಿ ವ್ಯರ್ಥ.

ಹಾಗಾಗಿ, ನೀವು ಮತ್ತು ನಿಮ್ಮವರು ಗುರುತು ಹಾಕಿಟ್ಟುಕೊಳ್ಳಬೇಕಾದ ಮತ್ತು ಪಾಲಿಸಬೇಕಾಗಿರುವ ಐದು ಕೆಟ್ಟ ಚಟಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ. ಇವತ್ತೇ ಹೊಸ ವರ್ಷದ ಮೊದಲ ದಿನ ಎಂದು ಭಾವಿಸಿ ಐದೂ ರೆಸಲೂಷನ್ನುಗಳನ್ನು ಅಡಾಪ್ಟ್ ಮಾಡಿಕೊಂಡರೆ ಫಸ್ಟ್ ಕ್ಲಾಸ್ ಲೈಫ್ ನಿಮ್ಮದು.

1) ಶತಮಾನಗಳ ಹಿಂದೆ ಯಾರೋ ಒಬ್ಬ ಬುದ್ಧಿವಂತ ಹೇಳಿದ 'ಬೇಗ ಮಲಗು, ಬೇಗ ಏಳು' ಅಭ್ಯಾಸ ನಿಮ್ಮದಾಗಲಿ. ಎದ್ದ ನಂತರ ಸ್ವಲ್ಪ ದೂರವಾದರೂ ವಾಕಿಂಗ್ ಮಾಡಿ ಆಮೇಲೆ ಕಾಪಿ-ಟೀ ಕುಡಿಯಿರಿ. ಮೈ ಮನಸ್ಸು ಹಗುರಾಗಲಿ. ನೈಟ್ ಔಟ್ ಮಾಡುವವರೂ ಇದನ್ನು ಪಾಲಿಸಬೇಕು.

2) ಗೊತ್ತು, ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಆದರೆ, ದೇವರು ಬೆಳಗ್ಗೆ ಎದ್ದು ಬಂದು ನಿಮಗೆ ಅಚ್ಚುಕಟ್ಟಾಗಿ ತಿಂಡಿ ಮಾಡಿಕೊಡುವುದಿಲ್ಲ.
ನಾಳೆ ಬೆಳಗ್ಗೆ ತಿಂಡಿಗೆ ಈ ರಾತ್ರಿ ಸ್ವಲ್ಪ ಹೆಚ್ಚಿಗೆ ತಯಾರಿ ನಡೆಸಿ. ಬೆಳಗಿನ ತಿಂಡಿ ಪರಿಪೂರ್ಣವಾಗಿರತಕ್ಕದ್ದು. ಉದಾ : ಒಂದು ಚಪಾತಿ, ಸ್ವಲ್ಪ ಕಾಳು, 1 ಮೊಟ್ಟೆ, ಬಾಳೆಹಣ್ಣು, ಹಾಲು ಅಥವಾ ಹಣ್ಣಿನ ರಸ. ನಾಲಗೆ ರುಚಿಯ ದೋಸೆ, ಇಡ್ಲಿ ವಡೆ ಚಟ್ನಿಯಿಂದ ಅಷ್ಟೇನೂ ಲಾಭವಿಲ್ಲ.

3) ಮನೆಗೆಲಸವೋ. ಕಚೇರಿ ಕೆಲಸವೋ, ಪ್ರಯಾಣವೋ, ಮದುವೆಯೋ, ತಿಥಿಯೋ..ಹತ್ತು ಹಲವು ಕೆಲಸಗಳ ನಡುವೆ ನಿಮಗಾಗಿ, ಕೇವಲ ನಿಮಗೆ, ನಿಮಗೆ ಮಾತ್ರ ಹೆಲ್ಪ್ ಆಗುವ ತೀರ ವೈಯಕ್ತಿಯ ಕೆಲಸಗಳಿಗೆ ಅರ್ಧ ಗಂಟೆ ಮೀಸಲಿಡಿ. ಆನ್ ಲೈನೋ , ಆಫ್ ಲೈನೋ ಜೀವವಿಮೆಯ ಪ್ರೀಮಿಯಂ ಸಮಯಕ್ಕೆ ಸರಿಯಾಗಿ ಕಟ್ಟಿ. Expire ಆಗಿರುವ, ಆಗಲಿರುವ ಪಾಸ್ ಪೋರ್ಟ್, ಗ್ಯಾಸ್, ಡ್ರೈವಿಂಗ್ ಲೈಸೆನ್ಸ್, ಭೋಗ್ಯದ ಮನೆ ಒಡಂಬಡಿಕೆಯ ನವೀಕರಣಗಳ ಕಡೆ ಗಮನವಿರಲಿ. ಸೆಲೂನಿಗೆ ನಾಳೆಯೂ ಹೋಗಬಹುದು, ಡೆನ್ಟಿಸ್ಟ್ ಅಥವಾ ರೇಡಿಯಾಲಜಿಸ್ಟ್ ಬಳಿಗೆ ಹೋಗಬೇಕಾಗಿರುವುದನ್ನು ಮುಂದೂಡಬೇಡಿ. ಈ ಮಧ್ಯೆ ಪೋಷಕರ ದಿನಾಚರಣೆಯಲ್ಲಿ ಭಾಗವಹಿಸಲು ಶಾಲೆಗೆ ಹೋಗುವುದನ್ನು ಮರೆಯದಿರಿ.

4) ಆಕಸ್ಮಾತ್ ಮದುವೆ ಆಗಿದ್ದರೆ ಸಂಗಾತಿಯನ್ನು 24/7 ಸಂತೃಪ್ತಿಪಡಿಸಲು ಸಾಧ್ಯವಾಗದು ಎಂಬ ಪರಮಸತ್ಯವನ್ನು ನೆನಪಿಸಿಕೊಳ್ಳಿ. ಒಂದಾದರೂ ಸಣ್ಣಪುಟ್ಟ ಕಿರಿಕ್ಕು ಬಂದೇ ಬರತ್ತೆ. ಅದನ್ನು ಅಲ್ಲೇ ಕಟ್ ಮಾಡಿ ಮುಂದಿನ ಕೆಲಸದತ್ತ ಹೊರಳಿಸಲು ಮಾತು ತಿರುಗಿಸಿ.

5) ಸೋಷಿಯಲ್ ಮೀಡಿಯಾ, ಇಮೇಲು, ಎಸ್ ಎಂ ಎಸ್ಸುಗಳ ಮೇಲೆ ವಿಪರೀತ ಅವಲಂಬನೆ ಸಲ್ಲದು. ಆದರೆ, ಆಡಲೇ ಬೇಕಾಗಿರುವ ಮಾತುಗಳನ್ನು ಇವತ್ತೇ, ಈಗಲೇ ಆಡಿಬಿಡಿ. ಫೋನ್ ಕೈಗೆತ್ತಿಕೊಳ್ಳಿ. ನೇರವಾಗಿ ವಿಷಯಕ್ಕೆ ಬನ್ನಿ. ಹೆಚ್ಚು ಹರಟೆ ಕೂಡದು. ಬೆಳಕನೀವ ಸೂರ್ಯ ಚಂದ್ರರದ್ದೇ ಸದ್ದಿಲ್ಲದಿರುವಾಗ ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಎಂದು ನಿಮ್ಮ ಕಿವಿಯಲ್ಲಿ ನೀವೇ ಉಸುರಿಕೊಳ್ಳಿ. ಶುಭದಿನ, ಶುಭಮಸ್ತು.

English summary

Five Very Good Bad Habits | Tips For Well Being | ಎಲ್ಲರಿಗೂ ಸಲ್ಲುವ ಐದು ಕೆಟ್ಟ ಚಟಗಳು | ಆರೋಗ್ಯಕರ ಜೀವನಕ್ಕೆ ಕೆಲ ಸಲಹೆ

Five very good bad habits for all times to come: Early to bed early to raise; what makes a good breakfast?; what It means to really take care of yourself; get out of 
 from social media hangover; trust in 'this too will pass'; believe in yourself that you will get the best out of the argument only when you avoid it. Have a great day.
Story first published: Friday, January 27, 2012, 19:04 [IST]
X
Desktop Bottom Promotion