For Quick Alerts
ALLOW NOTIFICATIONS  
For Daily Alerts

ಮದುವೆ ಮುರಿದರೆ ಚಿಂತಿಸಬೇಡಿ, ಇನ್ಸುರೆನ್ಸ್ ಇದೆ

|
Wedding Insurance
ಮದುವೆ ಜೀವನದ ಮಧುರವಾದ ಕ್ಷಣ. ಈ ಮಧುರ ಕ್ಷಣದ ನೆನಪು ಜೀವನದುದ್ದಕ್ಕೂ ಮೆಲುಕು ಹಾಕುವಂತಿರಬೇಕು ಎಂದು ಬಯಸುವವರೂ ತುಂಬಾ ಮಂದಿ ಇದ್ದಾರೆ. ಇದೇ ಕಾರಣಕ್ಕೆ ಮದುವೆ ಸಂಭ್ರಮಕ್ಕೆ ಲಕ್ಷಾಂತರ ಹಣ ಖರ್ಚು ಮಾಡ್ತಾರೆ.

ಆದರೆ ಯಾವುದೋ ಕಾರಣಕ್ಕೆ ನಿಶ್ಚಯಿಸಿದ ಮದುವೆ ಮುರಿಯಿತು ಎಂದಿಟ್ಟುಕೊಳ್ಳಿ, ಆಗ ಏನು ಮಾಡ್ತೀರಾ? ಮದುವೆ ಸಿದ್ಧತೆಗೆಂದು ಸುರಿದ ಹಣವೆಲ್ಲಾ ನೀರಿನಲ್ಲಿ ಹೋಮ ಮಾಡಿದ ಹಾಗಾಯ್ತಲ್ಲಾ ಎಂದು ಚಿಂತಿಸುತ್ತೀರಾ? ಅದರ ಅಗತ್ಯ ಇಲ್ಲ.

ಇಷ್ಟು ದಿನ ವಿದೇಶಗಳಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ವಿವಾಹದ ಇನ್ಸೂರೆನ್ಸ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಭಾರತದ ಎರಡು ವಿಮಾ ಕಂಪನಿಗಳಾದ ಐಸಿಐಸಿಐ ಲೊಂಬಾರ್ಡ್ ಮತ್ತು ಬಜಾಜ್ ಅಲೈಯನ್ಸ್ ಭಾರತೀಯ ಕುಟುಂಬಗಳಿಗೆ ಹೊಸ ವಿವಾಹದ ವಿಮೆಯನ್ನು ಪರಿಚಯಿಸಿದೆ.

ಇದೇನಪ್ಪಾ, ಮದುವೆಗೂ ಇನ್ಸುರೆನ್ಸ್ ಇದೆಯಾ ಎಂದುಕೊಳ್ಳುತ್ತಿದ್ದೀರಾ? ಹೌದು. ಈ ಮದುವೆ ಇನ್ಸೂರೆನ್ಸ್ ನ ಅವಧಿ ವಿವಾಹ ನಡೆಯುವ ಕೆಲ ದಿನಗಳ ಹಿಂದೆ ಪ್ರಾರಂಭಗೊಂಡು ವಿವಾಹದ ನಂತರ ಕೊನೆಗೊಳ್ಳುತ್ತದೆ.

ಆದರೆ ಸ್ವಲ್ಪ ತಡೀರಿ! ಈ ವಿಮೆಯಲ್ಲಿ ಕೆಲವು ನಿಯಮವಿದೆ. ಆ ನಿಯಮದ ಅನುಸಾರವಿದ್ದರೆ ವಿಮೆ ಅನ್ವಯವಾಗುತ್ತೆ ಅಷ್ಟೆ. ಮದುವೆಗೆ ಮುನ್ನ ವಧು ವರ ಎರಡೂ ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿ ಮದುವೆ ಮುರಿದುಬಿದ್ದರೆ ಇನ್ಸುರೆನ್ಸ್ ಅನ್ವಯಿಸುವುದಿಲ್ಲ.

ಏನಾದರೂ ನೈಸರ್ಗಿಕ ವಿಕೋಪ, ಅಪಘಾತ, ಅಗ್ನಿ ಆಕಸ್ಮಿಕ, ಭೂಕಂಪ ಅಥವಾ ಹೆಚ್ಚು ಸುರಕ್ಷತೆ ನಡುವೆಯೂ ಚಿನ್ನ ಅಥವಾ ಇನ್ನಿತರ ಅಮೂಲ್ಯ ವಸ್ತುಗಳ ದರೋಡೆಯಾದರೆ ಮಾತ್ರ ಇನ್ಸುರೆನ್ಸ್ ಲಭಿಸುತ್ತೆ.

ಭಾರತದಲ್ಲಿ ಮದುವೆ ಎಂಬ ಸಂಪ್ರದಾಯಕ್ಕೆ ಭಾರಿ ಮನ್ನಣೆಯಿರುವುದರಿಂದ ಈ ವಿಮೆಯನ್ನು ಪರಿಚಯಿಸಲಾಗಿದ್ದು, ಭಾರತದ ಮಧ್ಯಮ ವರ್ಗದ ಜನರಿಗೆ ಮದುವೆ ಮುರಿದು ಬಿದ್ದರೆ ಸಂಭವಿಸುವ ಅನಿರೀಕ್ಷಿತ ಹಾನಿಯನ್ನು ತುಂಬಿಕೊಡಲು ಈ ಇನ್ಸುರೆನ್ಸ್ ಸಹಾಯ ಮಾಡಲಿದೆ.

ಬಜಾಜ್ ಅಲೈಯನ್ಸ್ ನಾಲ್ಕು ಇನ್ಸುರೆನ್ಸ್ ಆಯ್ಕೆಗಳನ್ನು ನೀಡುತ್ತದೆ. ಅದರಲ್ಲಿ 2 ಲಕ್ಷ, 4 ಲಕ್ಷ, 6 ಲಕ್ಷ ಮತ್ತು 8 ಲಕ್ಷದ ಇನ್ಸುರೆನ್ಸ್ ಇದೆ. 4000 ದಿಂದ 15,000 ದವೆರೆಗಿನ ವಿಮೆಯ ಕಂತು ಲಭ್ಯವಿದೆ.

ಒಂದ್ನಿಮಿಷ ಇರಿ, ಇನ್ನೂ ಮುಗಿದಿಲ್ಲ, ಈ ವಿಮೆ ಅನ್ವಯವಾಗುವುದು ಮದುವೆ ನಿಶ್ಚಯವಾದ ಏಳು ದಿನಗಳ ಹಿಂದೆ ಮದುವೆ ಮುರಿದುಬಿದ್ದರೆ ಮಾತ್ರ ಎಂಬುದನ್ನು ನೆನಪಿಟ್ಟುಕೊಳ್ಳಿ.

English summary

Wedding Insurance | Insure Your Marriage | ಮದುವೆ ಇನ್ಸೂರೆನ್ಸ್ | ವಿವಾಹದ ಜೀವವಿಮೆ

Wedding Insurance – the concept which is quite famous abroad has entered in India as well. Looking at the business opportunity, two insurance houses in India – ICICI Lombard and Bajaj Allianz has come out with wedding insurance products to cater Indian families.
Story first published: Saturday, December 31, 2011, 16:54 [IST]
X
Desktop Bottom Promotion