For Quick Alerts
ALLOW NOTIFICATIONS  
For Daily Alerts

ಲೋಳೆಸರದಿಂದ ಡಯಾಬಿಟಿಸ್ ಕಡಿಮೆಯಾಗಬಹುದಾ?

|
Aloe Vera Health Benefits
ಪಾಟ್ ಗಳಲ್ಲೋ, ಮನೆಯ ಮೂಲೆಯಲ್ಲಿ ಇರುವ ಒಂದಿಷ್ಟು ಜಾಗದಲ್ಲೋ ಈ ಸಸ್ಯ ಬೆಳೆದರೆ ಆಯಿತು ನಿಮ್ಮ ಆರೋಗ್ಯಕ್ಕೆ ಅನೇಕ ಉಪಯೋಗವನ್ನು ಪಡೆದುಕೊಳ್ಳಬಹುದು. ಅದು ಯಾವ ಸಸ್ಯ ಅಂತೀರ? ಅದೇ ಲೋಳೆಸರ.

ಲಿಲ್ಲಿ ಸಸ್ಯದ ತಳಿಯಿಂದ ಬಂದಿರುವ ಲೋಳೆಸರ ನಿಮ್ಮ ಮನೆಯಲ್ಲೇ ಇದ್ದರೂ ಅದರ ಉಪಯೋಗ ಮಾತ್ರ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ಲೋಳೆಸರದ ರಸದಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಅದು ಹೇಗೆಂದು ಮುಂದೆ ತಿಳಿದುಕೊಳ್ಳಿ.

ಲೋಳೆಸರದಿಂದ ಯಾವ ಸಮಸ್ಯೆ ನೀಗಿಸಿಕೊಳ್ಳಬಹುದು?

* ಸಂಧಿವಾತ: ಮೂಳೆಗಳಲ್ಲಿರುವ ಸೈವೊನಿಯರ್ ಅಂಶ ಒಣಗಿದಾಗಲೇ ಕೀಲುಗಳಲ್ಲಿ ನೋವುಂಟಾಗಿ ಸಂಧಿವಾತಕ್ಕೆ ಕಾರಣವಾಗುತ್ತದೆ. ಈ ಅಂಶ ಮೂಳೆಗಳು ಒಂದಕ್ಕೊಂದು ತಾಗಿ ಸವೆಯುವುದನ್ನು ತಪ್ಪಿಸುತ್ತದೆ. ಆದರೆ ಈ ಅಂಶ ಒಣಗಿದರೆ ನೋವು, ಉರಿಯುಂಟಾಗುತ್ತದೆ. ಲೋಳೆಸರದಲ್ಲಿನ ಫಂಗಸ್ ವಿರೋಧಿ ಅಂಶ ಮತ್ತು ಉರಿ ನಿವಾರಕ ಅಂಶ ಈ ಸಮಸ್ಯೆಗೆ ಉತ್ತರ ಹೇಳುತ್ತದೆ.

ಸಂಧಿವಾತಕ್ಕೆ ಪರಿಣಾಮಕಾರಿ ಉತ್ತರ ಕಂಡುಕೊಳ್ಳಲು 2 ಚಮಚ ಲೋಳೆಸರವನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕು. ಊಟಕ್ಕೆ ಮುನ್ನ 30 ನಿಮಿಷದ ಮುಂಚೆ ಇದನ್ನು ತೆಗೆದುಕೊಳ್ಳಬೇಕು. ಅಲ್ಲದೆ ಈ ಲೋಳೆಸರವನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಂಡರೆ ನೋವು ಕಡಿಮೆಯಾಗುವುದಲ್ಲದೆ ತಿಂಗಳಿನಲ್ಲಿ ಇದರ ಫಲಿತಾಂಶ ಗೋಿಸುತ್ತದೆ.

* ಮಧುಮೇಹ:
ಬ್ಯಾಂಕಾಕ್ ನ ವಿಶ್ವವಿದ್ಯಾಲಯವೊಂದು ನಡೆಸಿದ ಪ್ರಯೋಗದಿಂದ ಲೋಳೆಸರದಿಂದ ಮಧುಮೇಹವನ್ನು ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ. ಇನ್ಸುಲಿನ್ ತೆಗೆದುಕೊಳ್ಳದ ಸುಮಾರು 72 ರೋಗಿಗಳನ್ನು ಎರಡು ಗುಂಪುಗಳಾಗಿ ಮಾಡಿ ಒಂದು ಗುಂಪಿಗೆ 1 ತಿಂಗಳಿನ ಅವಧಿ ಎರಡು ದಿನಕ್ಕೊಮ್ಮೆ 15 ಮಿಲಿ ಲೋಳೆಸರ ನೀಡಲಾಯಿತು. ಇನ್ನೊಂದು ಗುಂಪು ಔಷಧೋಪಚಾರವನ್ನೇ ಮುಂದುವರೆಸಿತ್ತು.

ಚಿಕಿತ್ಸೆ ನಂತರ ಈ ಎರಡೂ ಗುಂಪುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಲೋಳೆ ಸರ ಸೇವಿಸಿದವರಲ್ಲಿ ಶೇಕಡಾ 43 ರಷ್ಟು ಸಕ್ಕರೆ ಅಂಶ ಕಡಿಮೆಯಾಗಿದ್ದು ಕಂಡುಬಂದಿತ್ತು.

* ರಕ್ತದೊತ್ತಡ: ಹೆಚ್ಚಿನ ರಕ್ತದೊತ್ತಡವನ್ನು ಲೋಳೆಸರ ಕಡಿಮೆ ಮಾಡುತ್ತದೆ. ಲೋಳೆಸರ ಹೊಟ್ಟೆಯಲ್ಲಿ ಮತ್ತು ರಕ್ತದಲ್ಲಿ ಆಸಿಡ್ ಅಂಶವನ್ನು ಕಡಿಮೆ ಮಾಡಿ ಅಲ್ಸರ್ ಸಾಧ್ಯತೆಯನ್ನೂ ತಳ್ಳಿಹಾಕಿ ಪರೋಕ್ಷವಾಗಿ ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ರಕ್ತನಾಳಗಳನ್ನೂ ಈ ಗಿಡಮೂಲಿಕೆ ಸಧೃಢಗೊಳಿಸುತ್ತದೆ.

ಇವುಗಳ ಹೊರತಾಗಿ ಲೋಳೆಸರದಲ್ಲಿ ಇನ್ನೂ ಹಲವು ಪ್ರಯೋಜನವಿದೆ. ನಿರಂತರವಾಗಿ ಲೋಳೆಸರ ಸೇವನೆ ಮಾಡಿದರೆ ರೋಗನಿರೋಧಕ ಶಕ್ತಿ ಜೆಚ್ಚಾಗಿ ಕಾಯಿಲೆ ಖಸಾಲೆಯಾವುದೂ ಹತ್ತಿರ ಸುಳಿಯುವುದಿಲ್ಲ.

English summary

Aloe Vera Health Benefits | Aloe Vera Herb for Health | ಲೋಳೆಸರದ ಆರೋಗ್ಯ ಅಂಶ | ಉತ್ತಮ ಆರೋಗ್ಯಕ್ಕೆ ಲೋಳೆಸರ ಗಿಡಮೂಲಿಕೆ

Aloe vera is a medicinal plant and has several health benefits in it. It has got the blessful properties to cure diabetes, arthitrist and blood pressure. Take a look to know the benefits of aloe vera to health.
Story first published: Monday, December 26, 2011, 15:30 [IST]
X
Desktop Bottom Promotion