For Quick Alerts
ALLOW NOTIFICATIONS  
For Daily Alerts

ಜಾತಕದಿಂದ ರೋಗನಿರೋಧಕ ಶಕ್ತಿ ತಿಳಿಯಬಹುದು

By Super
|
Immune system and Horoscope
ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ಕಾಯಿಲೆ ಬಂದೇ ಬರುತ್ತೆ. ಆದರೆ ಕಾಯಿಲೆ ಬರುವ ರೀತಿ ಮಾತ್ರ ಕೆಲವೊಬ್ಬರಲ್ಲಿ ವ್ಯತ್ಯಾಸವಾಗಿರುತ್ತೆ. ಅನೇಕ ಜನರು ಹಲವು ಸೋಂಕುಗಳಿಗೆ ಒಳಗಾಗುತ್ತಾರೆ. ಆದರೆ ಕೆಲವರಿಗೆ ಏನೂ ಆರೋಗ್ಯ ಸಮಸ್ಯೆಯೇ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೆಲ್ಲಾ ಕಾರಣ ಏನಿರಬಹುದು?

ವ್ಯಕ್ತಿಯ ದೇಹದಲ್ಲಿನ ರೋಗನಿರೋಧಕ ಶಕ್ತಿಯ ಮಟ್ಟವೇ ಇದಕ್ಕೆಲ್ಲಾ ಕಾರಣ ಎಂಬುದು ಸೂಕ್ತ ಉತ್ತರ. ಆದರೆ ನಿಮ್ಮ ರೋಗನಿರೋಧಕ ಶಕ್ತಿ ಎಷ್ಟಿದೆ ಎಂಬುದನ್ನು ನಿಮ್ಮ ಜಾತಕದಿಂದ ತಿಳಿದುಕೊಳ್ಳಬಹುದು ಎಂಬುದೇ ಇಲ್ಲಿನ ಆಸಕ್ತಿದಾಯಕ ವಿಷಯ.

ಜಾತಕದಲ್ಲಿದೆ ನಿಮ್ಮ ರೋಗ ನಿರೋಧಕ ಶಕ್ತಿಯ ಗುಟ್ಟು

ವ್ಯಕ್ತಿಯ ರೋಗ ನಿರೋಧಕ ಶಕ್ತಿ ಮತ್ತು ಆತನಿಗೆ ಬರಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾತಕ ನಿಖರ ಮಾಹಿತಿ ನೀಡುತ್ತದೆ. ಜಾತಕದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ಸೂಚಿಸುವುದು, ವ್ಯಕ್ತಿ ಬೇಗನೆ ಯಾವುದೇ ಆರೋಗ್ಯ ಸಮಸ್ಯೆಗೆ ಒಳಗಾಗುವುದಿಲ್ಲ. ಆದರೆ ಆತನ ದಶಾಭುಕ್ತಿಯ ಪ್ರಕಾರ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ನಿರಂತರವಾಗಿ ಆರೋಗ್ಯ ಸಮಸ್ಯೆಗೆ ತುತ್ತಾಗುವ ವ್ಯಕ್ತಿಯ ಜಾತಕ ಆತನ ಆರೋಗ್ಯ ಸ್ಥಿತಿ ಗತಿ ಮತ್ತು ಏರಿಳಿತವನ್ನು ತಿಳಿಸಿಕೊಡುತ್ತದೆ.

ಉತ್ತಮ ಆರೋಗ್ಯಕ್ಕೆ ಜ್ಯೋತಿಷ್ಯ ನೀಡುವ ಸುರಕ್ಷತಾ ಕ್ರಮ
ಎಲ್ಲಾ ಜನ್ಮ ಕುಂಡಲಿಯೂ ಕೇವಲ ಧನಾತ್ಮಕ ಅಂಶವನ್ನು ಸೂಚಿಸುವುದಿಲ್ಲ. ಅದರಲ್ಲಿ ಆರೋಗ್ಯಕ್ಕೆ ಮಾರಕ ಮತ್ತು ಪೂರಕವಾಗುವ ಎಲ್ಲಾ ಅಂಶಗಳನ್ನೂ ಹೊಂದಿರುತ್ತದೆ. ಜಾತಕದಲ್ಲಿ ಧನಾತ್ಮಕ ಅಂಶ ಹೆಚ್ಚು ಕಂಡುಬಂದಷ್ಟು ನಿಮ್ಮ ಆರೋಗ್ಯವೂ ಸುಭದ್ರವಾಗಿರುತ್ತದೆ ಎಂದರ್ಥ.

ಉತ್ತಮ ಆರೋಗ್ಯ ಸೂಚಿಸುವುದು ಯಾವುದು?
* ಆರೋಗ್ಯವನ್ನು ಸೂಚಿಸಲು ಜಾತಕದಲ್ಲಿ ಲಗ್ನ ಅಥವಾ ಲಗ್ನಾಧಿಪತಿ ಪ್ರಬಲವಾಗಿರಬೇಕು.
* ಕೇಂದ್ರ (1, 4, 7 ಮತ್ತು 10 ನೇ ಮನೆ) ಜಾತಕದ ಆಧಾರ ಸ್ಥಂಭವಿದ್ದಂತೆ. ಈ ಕೇಂದ್ರಗಳಲ್ಲಿ ಕೆಲವು ಶುಭ ಸೂಚನೆಯ ಗ್ರಹಗಳು ಇದ್ದರೆ ನಿಮ್ಮ ಆರೋಗ್ಯ ಸುಭದ್ರವಾಗಿರುತ್ತದೆ ಎಂದರ್ಥ.
* ಅಶುಭ ಗ್ರಹಗಳು ಯಾವಾಗಲೂ ಕೆಟ್ಟದ್ದನ್ನೇ ಉಂಟುಮಾಡುವುದಿಲ್ಲ. ಈ ಅಶುಭ ಗ್ರಹಗಳು 3, 6 ಮತ್ತು 11 ನೇ ಮನೆಯಲ್ಲಿದ್ದರೆ ನಿಮ್ಮ ದೇಹದ ಪ್ರತಿರೋಧಕ ಶಕ್ತಿ ಇನ್ನೂ ಹೆಚ್ಚುತ್ತದೆ.
* ಲಗ್ನ ಮತ್ತು ಲಗ್ನಾಧಿಪತಿ ಅಥವಾ ಎರಡೂ ಕೂಡ ಶುಭ ಗ್ರಹಗಳಿಂದ ಆವರಿಸಿರಬೇಕು.
* ಜಾತಕದಲ್ಲಿ ಚಂದ್ರ ಭಾದಿತ ಸ್ಥಾನದಲ್ಲಿರಬಾರದು.
* ಜಾತಕದ 6 ಅಥವಾ 8ನೇ ಮನೆಯಲ್ಲಿ ಲಗ್ನಾಧಿಪತಿ ಪೀಡಕನಾಗಿರಬಾರದು.

ಉತ್ತಮ ಆರೋಗ್ಯ ತರುವ ಈ ಅಂಶಗಳು ನಿಮ್ಮ ಜಾತಕದಲ್ಲಿ ವಿರುದ್ಧವಾಗಿದ್ದರೆ ಅದು ಅನಾರೋಗ್ಯದ ಸೂಚನೆ. ಗ್ರಹಗಳ ಚಲನವಲನ ಪರಿಶೀಲಿಸಿ ಅನಾರೋಗ್ಯದ ಕಾರಣವನ್ನು ತಿಳಿಯಬಹುದು.

* ಲಗ್ನದಲ್ಲಿ ಎಂಟನೇ ಮನೆಯ ಅಧಿಪತಿ ಇದ್ದರೆ ಅವರದು ಸದಾ ಕಾಯಿಲೆಯ ದೇಹವಾಗಿರುತ್ತದೆ.
* ಲಗ್ನಾಧಿಪತಿ 8 ನೇ ಮನೆಯಲ್ಲಿ ಬಾಧಿತ ಸ್ಥಾನದಲ್ಲಿದ್ದರೆ ಅನಾರೋಗ್ಯ, ವಾಸಿಯಾಗದ ಮತ್ತು ಕೊನೆಯಿಲ್ಲದ ಖಾಯಿಲೆಯನ್ನು ತರುತ್ತದೆ. ಇದು ಆಗಾಗ್ಗೆ ಆರೋಗ್ಯದಲ್ಲಿನ ಏರುಪೇರಿನ ಸೂಚನೆಯೂ ಆಗಿದೆ.

ಜಾತಕ ಒಬ್ಬ ವ್ಯಕ್ತಿಯ ಜೀವನ ನಿರ್ಧರಿಸಲು ಸಹಕಾರಿ. ಇದರಲ್ಲಿರುವ ದಶಾಭುಕ್ತಿ ಜೀವನದ ಮಜಲನ್ನು ತಿಳಿಸುವಲ್ಲಿ ಇನ್ನೂ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಜಾತಕ ಪರಿಶೀಲಿಸುವ ಜ್ಯೋತಿಷಿಗಳು ನಿಮ್ಮ ಜೀವನ ಚೈತನ್ಯದ ಅವಧಿಯನ್ನೂ ತಿಳಿಸುತ್ತಾರೆ.

2012ರ ವರ್ಷದಲ್ಲಿ ತಿಂಗಳ ತಿಂಗಳ ಆರೋಗ್ಯ ಕುರಿತ ವಿಚಾರವನ್ನೂ ನೀವು ತಿಳಿದುಕೊಳ್ಳಬಹುದು. ಇದರಿಂದ ನಿಮಗೆ ಮನಶಾಂತಿ ದೊರೆತು ಮುಂದೆ ಒದಗಲಿರುವ ಆರೋಗ್ಯ ಸಮಸ್ಯೆಯನ್ನೂ ನಿವಾರಿಸಿಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ 2012ರ ಆರೋಗ್ಯ ಮತ್ತು ಯೋಗಕ್ಷೇಮದ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಪಡೆಯುವ ಮಂತ್ರ, ಯಂತ್ರ ಮತ್ತು ಪರಿಣಾಮಕಾರಿ ಪರಿಹಾರಗಳು ನಿಮಗೆ ಸಿಗಲಿವೆ.

English summary

Horoscope Indicator | Health and Horoscope | Immune System | ಜಾತಕ ಸೂಚಕ | ಆರೋಗ್ಯ ಮತ್ತು ಜಾತಕ | ರೋಗ ನಿರೋಧಕ ಶಕ್ತಿ

he horoscope is an indicator of one’s strong or weak immune system and the vulnerability levels. The horoscope with inherent resistance against disease indicates that the individual would not ordinarily be inflicted by disease unless the period as indicated by his dasha, etc., is exceptionally adverse. The horoscope of a chronically or frequently ill individual will surely show the easy proneness to disease.
X
Desktop Bottom Promotion