For Quick Alerts
ALLOW NOTIFICATIONS  
For Daily Alerts

ತಲೆನೋವಿಗೂ ಜ್ಯೋತಿಷ್ಯಕ್ಕೂ ಎಲ್ಲಿಂದೆಲ್ಲಿಯ ಸಂಬಂಧ?

By Super
|
Astrological Solution to Headache
ನಿಮಗೆ ಆಗಾಗ್ಗೆ ಪಿತ್ತ, ಹಸಿವಿಲ್ಲದಿರುವುದು ಮತ್ತು ಹೊಟ್ಟೆಯಲ್ಲಿ ಸಂಕಟದ ಅನುಭವ ಆಗುತ್ತಿದೆಯಾ? ಹಾಗಾದರೆ ಇದು ತಲೆ ನೋವಿನ ಸೂಚನೆ. ತಲೆ ನೋವಿನಲ್ಲೂ ಮೂರು ತರಹವಿದೆ. ಸ್ವಲ್ಪ, ಅಧಿಕ ಮತ್ತು ಗಂಭೀರ ತಲೆನೋವು.

ತಲೆ ಮಧ್ಯದಲ್ಲಿ, ಕಣ್ಣುಗಳ ಮೇಲೆ ಮತ್ತು ಕಿವಿಗಳ ಪಕ್ಕ ಹಾಗೂ ತಲೆಯ ಹಿಂದೆ ಮತ್ತು ಕತ್ತಿನ ಭಾಗದಲ್ಲಿ ಸೂಕ್ಷ್ಮ ನೋವು ಕಾಣಿಸಿಕೊಳ್ಳುತ್ತದೆ.

ಎಚ್ಚರಿಕೆ ಅತ್ಯಗತ್ಯ:
ನಿಮಗೆ ಇದ್ದಕ್ಕಿದ್ದಂತೆ ತಲೆನೋವು ಕಾಣಿಸಿಕೊಂಡರೆ, ಶಬ್ಧದಿಂದ ತಲೆ ನೋವು ಉಂಟಾದರೆ, ಗಂಟಲಿನಲ್ಲಿ ತೊಂದರೆ ಕಾಣಿಸಿಕೊಂಡರೆ, ಜ್ವರ ಮತ್ತು ಏಕಾಗ್ರತೆ ಕಳೆದುಕೊಂಡಿದ್ದರೆ ಕಿವಿ, ಕಣ್ಣಿನಲ್ಲಿ ನೋವಿದ್ದರೆ ಇದು ಗಂಭೀರ ಸಮಸ್ಯೆ ಎಂದು ಪರಿಗಣಿಸಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು.

ಜ್ಯೋತಿಷ್ಯ ತಲೆ ನೋವನ್ನು ಹೇಗೆ ಪರಿಹರಿಸುತ್ತೆ?
ಪರಿಣಿತ ಜ್ಯೋತಿಷ್ಯ ವಿಶ್ಲೇಷಕರು ಒಬ್ಬ ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಮತ್ತು ವ್ಯಕ್ತಿ ಯಾವ ರೀತಿಯ ಪ್ರತ್ಯೇಕ ಆರೋಗ್ಯ ಸಮಸ್ಯೆ ಅನುಭವಿಸುತ್ತಾನೆ ಎಂಬುದನ್ನು ಮುನ್ನವೇ ತಿಳಿಸುತ್ತಾರೆ. ಹಿಂದಿನ ಕಾಲದಲ್ಲಿ ಪ್ರಸಿದ್ಧ ವೈದ್ಯ ಹಿಪೊಕ್ರೇಟಿಸ್ ಕೂಡ ಮೊದಲು ಮನುಷ್ಯನ ಜಾತಕ ನೋಡಿ ನಂತರ ಚಿಕಿತ್ಸೆ ನೀಡುತ್ತಿದ್ದರಂತೆ.

ವ್ಯಕ್ತಿಯ ರೋಗಗಳು ಆತನ ಭಾವ ಅಥವಾ ರಾಶಿಯ ಮೇಲೆ ಅವಲಂಬಿತವಾಗಿರುತ್ತದೆ. ಜನ್ಮ ಕುಂಡಲಿಯಲ್ಲಿ ಅಶುಭ ತರುವ ಕೆಲವು ಗ್ರಹಗಳೊಂದಿಗೆ ರಾಶಿ ಸೇರಿ ಈ ರೀತಿ ಸಮಸ್ಯೆಗಳು ಉದ್ಭವವಾಗುತ್ತದೆ. ಯಾಕೆಂದರೆ ಒಂದೊಂದು ರಾಶಿಗಳೂ ಕೂಡ ಒಂದೊಂದು ದೇಹದ ಭಾಗಕ್ಕೆ ಸಂಬಂಧ ಹೊಂದಿರುತ್ತದೆ.

ಒಂದೊಂದು ಗ್ರಹಗಳೂ ವಾಯು, ಅಗ್ನಿ, ನೀರು ಮತ್ತು ಪ್ರಕೃತಿ ಮೇಲೆ ಅವಲಂಬಿತವಾಗಿದೆ. ಆಯುರ್ವೇದದಲ್ಲಿ ಇದನ್ನು ವಾತ, ಪಿತ್ತ ಮತ್ತು ಕಫ ಎಂದು ಕರೆಯುತ್ತಾರೆ. ವ್ಯಕ್ತಿಯ ಜಾತಕ ಕುಂಡಲಿಯಲ್ಲಿ ಯಾವ ಗ್ರಹ ಹೆಚ್ಚು ಪ್ರಭಾವ ಹೊಂದಿದೆ ಎಂಬುದರ ಮೇಲೆ ಆತನ ಆರೋಗ್ಯ ಸ್ಥಿತಿಯೂ ಅವಲಂಬಿತವಾಗಿರುತ್ತದೆ.

ಮೇಷ ರಾಶಿ ತಲೆ, ಮೆದುಳು, ಕಣ್ಣು, ಅದರಲ್ಲೂ ತಲೆಯ ಮುಂಭಾಗ, ಕಣ್ಣಿನ ಕೆಳಭಾಗ ಮತ್ತು ತಲೆಯ ಹಿಂಭಾಗದಿಂದ ಬುರುಡೆಯ ತಳಭಾಗವನ್ನು ನಿಯಂತ್ರಿಸುತ್ತದೆ. ಇದು ಮಂಗಳ ಗ್ರಹವನ್ನು ಪ್ರತಿಫಲಿಸುವುದರಿಂದ ತಲೆಯಲ್ಲಿ ಅಗ್ನಿ ಶಕ್ತಿ ಇರುತ್ತದೆ. ಆದ್ದರಿಂದ ಮೇಷ ರಾಶಿ ವ್ಯಕ್ತಿಯ ಜಾತಕ ಕುಂಡಲಿಯಲ್ಲಿ ಸೂರ್ಯ, ಚಂದ್ರ ಮತ್ತು ಇನ್ನಿತರ ಗ್ರಹಗಳು ಸೇರಿಕೊಂಡರೆ ಮೇಷ ರಾಶಿಯವರು ತಲೆನೋವಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಸೂರ್ಯನು ಜಾತಕ ಕುಂಡಲಿಯ 1, 2 ಅಥವಾ 12 ನೇ ಮನೆಯಲ್ಲಿದ್ದರೆ ಅಥವಾ ಮಂಗಳ ಗ್ರಹ ತುಂಬಾ ವಕ್ರನಾಗಿದ್ದರೆ ಅಥವಾ ಮಂಗಳ ಗ್ರಹ ಚಂದ್ರನೊಂದಿಗೆ ಸೇರಿಕೊಂಡಿದ್ದರೆ ಇಂತಹ ಜನರು ಮೈಗ್ರೇನ್ ತಲೆನೋವಿನಿಂದ ಬಳಲುವ ಸಾಧ್ಯತೆ ತುಂಬಾ ಹೆಚ್ಚು. ಸೂರ್ಯನು ಜಾತಕದಲ್ಲಿ ಪೀಡಕನಾಗಿದ್ದರೆ ಅಥವಾ 6ನೇ ಮನೆಯಲ್ಲಿ ಮಂಗಳ ಇದ್ದರೆ (6-ಜಾತಕ ಕುಂಡಲಿಯಲ್ಲಿ ರೋಗದ ಬಗ್ಗೆ ಮಾಹಿತಿ ನೀಡುವ ಕುಂಡಲಿ) ತಲೆನೋವಿಗೆ ಒಳಗಾಗುತ್ತಾನೆ.

ರಾಶಿಯ ಅಧಿಪತಿ ದುರ್ಬಲವಾಗಿದ್ದರೆ ಸುಸ್ತು, ತಲೆನೋವು ಉಂಟಾಗುತ್ತದೆ. ಚೈತನ್ಯ ಮತ್ತು ಶಕ್ತಿಯ ಸಂಕೇತವಾಗಿರುವ ಸೂರ್ಯ ಮತ್ತು ಮಂಗಳ ಕುಂಡಲಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದ್ದರೆ ಈ ರೀತಿಯ ತೊಂದರೆಯಿಂದ ರಕ್ತಣೆ ಪಡೆಯಬಹುದು.

ವೇದದ ಸಲಹೆ:
ಆರೋಗ್ಯ ಸಮಸ್ಯೆಗೆ ಸುಲಭ ಮತ್ತು ಪರಿಣಾಮಕಾರಿ ಪರಿಹಾರವೆಂದರೆ ಸೂರ್ಯ ನಮಸ್ಕಾರ ಅಥವಾ ಗಾಯತ್ರಿ ಮಂತ್ರ ಪಠಣ ಅಥವಾ ಓಂ ಆದಿತ್ಯಾಯ ನಮಃ ಅಥವಾ ಓಂ ಸೂರ್ಯಾಯ ನಮಃ ಎಂಬ ಮಂತ್ರ. 42 ದಿನ ಬೆಳಗ್ಗಿನ ಜಾವ ಸೂರ್ಯನನ್ನು ನೋಡುತ್ತಾ 3, 11,21, 51, 108 ಬಾರಿ ಜಪಿಸಬೇಕು.

ಧನ್ವಂತರಿ ಹೋಮ ಮತ್ತು ಮಂಗಳ ಹೋಮವನ್ನು ಮಾಡಿದರೆ ಅಶುಭ ಗ್ರಹಗಳನ್ನು ಪ್ರಭಾವವನ್ನು ತಡೆದು ತಲೆನೋವಿನಿಂದ ನಿಮ್ಮನ್ನುದೂರವಿಡುತ್ತದೆ.

English summary

Headache | Astrological Solution to Headache | ತಲೆ ನೋವು | ಜ್ಯೋತಿಷ್ಯ ಪರಿಹಾರ

Are you suffering from any of these symptoms - Nausea, Loss of appetite, Feeling of uneasiness, etc? Chances are that, you are experiencing symptoms of a headache! An expert horoscope analysis can reveal one’s health status and diseases one is prone to suffer and it will also suggests some remedies for headache.
X
Desktop Bottom Promotion