For Quick Alerts
ALLOW NOTIFICATIONS  
For Daily Alerts

ಟೆನ್ಶನ್ ಕಡಿಮೆಯಾಗಲು ಈ ಆಹಾರ ಸೇವಿಸಿ

|
7 Foods to maintain Emotional Healt
ಯಾವಾಗಲೂ ಬೇಜಾರಾಗಿ ಎಲ್ಲರ ಮೇಲೆ ಕೋಪ ಮಾಡಿಕೊಳ್ಳುತ್ತೀರಾ? ಅಥವಾ ಒತ್ತಡ ನಿಮ್ಮನ್ನು ಈ ರೀತಿ ವರ್ತಿಸುವಂತೆ ಮಾಡುತ್ತಿದೆಯಾ? ಹಾಗಿದ್ದರೆ ಕೆಲವು ಆಹಾರಗಳಿಂದ ಒತ್ತಡ ನಿವಾರಣೆ ಸಾಧ್ಯವಿದೆ. ನಿಮ್ಮ ದಿನನಿತ್ಯದ ಆಹಾರದೊಂದಿಗೆ ಇವನ್ನೂ ಸೇರಿಸಿಕೊಂಡರೆ ಮಾನಸಿಕ ಸ್ಥಿಮಿತದೊಂದಿಗೆ ದಿನವಿಡೀ ಚೈತನ್ಯದಿಂದಿರಲು ಸಾಧ್ಯವಾಗುತ್ತೆ.

ನಿಮ್ಮ ಮನಸ್ಥಿತಿ ಬದಲಾಯಿಸುವ 7 ಬಗೆಯ ಆಹಾರ:

1. ದ್ರಾಕ್ಷಿ ಅಥವಾ ಬೆರಿ: ದ್ರಾಕ್ಷಿ, ಸ್ಟ್ರಾಬೆರಿ, ಬ್ಲೂಬೆರಿ, ರಾಸ್ಪ್ ಬೆರಿ ಮುಂತಾದ ಹಣ್ಣುಗಳ ಸೇವನೆ ಭಾವನಾತ್ಮಕ ಶಕ್ತಿ ಹೆಚ್ಚಿಸುತ್ತವೆ. ಇವುಗಳಲ್ಲಿ ಆಂಟಿಯಾಕ್ಸಿಡಂಟ್ ಹೇರಳವಾಗಿರುವುದರಿಂದ ಒತ್ತಡ ಕಡಿಮೆ ಮಾಡುವುದರೊಂದಿಗೆ ಕ್ಯಾನ್ಸರ್ ಸಾಧ್ಯತೆಯನ್ನೂ ನಿವಾರಿಸುತ್ತದೆ.

2. ಚೆರ್ರಿ: ಸಾಮಾನ್ಯವಾಗಿ ಕೇಕ್ ಗಳ ಮೇಲಿಟ್ಟಿರುವ ಚೆರಿ ಹಣ್ಣು ನಿಜಕ್ಕೂ ಒಳ್ಳೆ ನಿದ್ದೆ ಕೊಡುವುದರೊಂದಿಗೆ ನಿಮ್ಮ ಚೈತನ್ಯವನ್ನೂ ಹೆಚ್ಚಿಸುತ್ತೆ. ಚೆರಿಯಲ್ಲಿರುವ ಮೆಲಟೊನಿನ್ ರಾತ್ರಿ ಒಳ್ಳೆ ನಿದ್ದೆ ನೀಡಲು ಸಹಕಾರಿ. ರಾತ್ರಿ ಇದನ್ನು ಸೇವಿಸಿದರೆ ಬೆಳಗ್ಗೆ ಸಂತಸವಾಗಿ ಏಳಲು ಸಹಾಯ ಮಾಡುತ್ತೆ. ಒಳ್ಳೆ ನಿದ್ದೆ ಇದ್ದರೆ ಮಾನಸಿಕ ಒತ್ತಡವೂ ಕಡಿಮೆಯಾಗುತ್ತೆ.

3. ಕಿತ್ತಳೆ ಮತ್ತು ನಿಂಬೆ: ಸಿಟ್ರಸ್ ಇರುವ ಹಣ್ಣುಗಳ ಸೇವನೆ ಚಳಿಗಾಲದ ಸೋಮಾರಿತನವನ್ನು ಹೊಡೆದೋಡಿಸುತ್ತೆ. ದೇಹಕ್ಕೆ ಮತ್ತು ಮನಸ್ಸಿಗೆ ತಕ್ಷಣವೇ ಶಕ್ತಿ ನೀಡಿ ನಿಮ್ಮನ್ನು ಕೆಲಸದಲ್ಲಿ ಉತ್ಸಾಹದಿಂದ ತೊಡಗಿಕೊಳ್ಳುವಂತೆ ಮಾಡುತ್ತೆ.

4. ಹಸಿರು ಸೊಪ್ಪು: ಪಾಲಾಕ್, ದಂಟು ಇಂತಹ ಸೊಪ್ಪು ಮತ್ತು ತರಕಾರಿಗಳ ಸೇವನೆ ದೈಹಿಕ ಸ್ವಾಸ್ಥ್ಯಮಾತ್ರವಲ್ಲ ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ.

ಇದು ಮೆದುಳಿನ ಜೀವಕಣಗಳನ್ನು ಸಮತೋಲನದಲ್ಲಿ ನಡೆಯುವಂತೆ ಮಾಡಿ ಒತ್ತಡ ತರುವ ಅಂಶಗಳನ್ನು ದೂರವಿರಿಸುತ್ತೆ.

5. ಕಬ್ಬಿಣಾಂಶದ ಕೊರತೆ: ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗಲೇ ಸುಸ್ತಾಗಿ ಅನವಶ್ಯಕ ಒತ್ತಡ ಹೆಚ್ಚಾಗಿ ಮೆದುಳಿನ ಕಾರ್ಯ ವೈಖರಿ ಮೇಲೆ ಪರಿಣಾಮ ಬೀರುತ್ತೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಿರುವ ಆಹಾರ ಹೆಚ್ಚಾಗಿ ಸೇವಿಸಬೇಕು. ಮಾಂಸಾಹಾರಿಗಳಾಗಿದ್ದರೆ ಮಾಂಸವನ್ನು ಹೆಚ್ಚಾಗಿ ಸೇವಿಸಿ. ಸಸ್ಯಾಹಾರಿಗಳು ಪಾಲಾಕ್, ತರಕಾರಿ, ಹಣ್ಣುಗಳನ್ನು ಸೇವಿಸಬಹುದು.

6. ಮೀನು: ಮೀನಿನೆಣ್ಣೆಯ ಆರೋಗ್ಯಕರ ಉಪಯೋಗದ ಬಗ್ಗೆ ತಿಳಿದೇ ಇದೆ. ಇದರಲ್ಲಿ ಒಳ್ಳೆಯ ಕೊಬ್ಬು ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸುವ ಅಂಶವಿದೆ. ಮೀನಿನಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ ಭಾವನಾತ್ಮಕ ಸ್ವಾಸ್ತ್ಯ ಹೆಚ್ಚಿಸುತ್ತದೆ. ಇದು ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳುವಲ್ಲಿ ಹೆಚ್ಚು ಸಹಕಾರಿ.

7. ಜ್ಯಾಮ್ ಮತ್ತು ಜೆಲ್ಲಿ: ನೀವು ತುಂಬಾ ಸುಸ್ತಾದಾಗ ದೇಹದಲ್ಲಿನ ಕಾರ್ಬೊಹೈಡ್ರೇಟ್ ತಕ್ಷಣವೇ ಶಕ್ತಿ ಒದಗಿಸುತ್ತದೆ. ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಒತ್ತಡ ನಿವಾರಕ ಸೆರೊಟೊನಿನ್ ಅಂಶವನ್ನು ಜ್ಯಾಮ್ ಜೆಲ್ಲಿ ನೀಡುವುದರಿಂದ ಇದರ ಸೇವನೆಯಿಂದ ಉಪಯೋಗ ಪಡೆಯಬಹುದು.

English summary

Food for Good Mood | 7 Foods to maintain Emotional Health | ಒತ್ತಡ ನಿವಾರಿಸುವ 7 ಬಗೆಯ ಆಹಾರ

Emotional health is just as important as physical health and both are undeniably connected. Whatever may be the cause of your distress it can be addressed by having certain foods that lift mood. Here is a list of some mood enhancing foods that should be included in your daily diet to keep you pleasantly disposed.
Story first published: Wednesday, November 30, 2011, 13:08 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more