For Quick Alerts
ALLOW NOTIFICATIONS  
For Daily Alerts

ವಯಸ್ಸಾಗುತ್ತಿದ್ದಾಗ ಪಾಪ್ ಕಾರ್ನ್ ತಿನ್ನಿ

By Super
|
ಸಂಶೋಧನೆಗಳ ಪ್ರಕಾರ ಸಮತೋಲನ ಆಹಾರ ಕ್ರಮ ಅನುಸರಿಸುವವರು, ಧೂಮಪಾನದಿಂದ ದೂರವಿರುವವರು ಮತ್ತು ನಿಯಮಿತ ವ್ಯಾಯಾಮ ಮಾಡುವವರು ಹೆಚ್ಚು ಕಾಲ ಆರೋಗ್ಯವಂತರಾಗಿ ಬಾಳುತ್ತಾರೆ ಎನ್ನಲಾಗಿದೆ. ವಯಸ್ಸಾಗುತ್ತಿದ್ದಂತೆ ಕೆಲವು ಆಹಾರಗಳನ್ನು ಸೇವಿಸದರೆ ಆರೋಗ್ಯವನ್ನು ಹೆಚ್ಚು ಸಂತುಷ್ಟಿಗೊಳಿಸಲು ಸಾಧ್ಯವಿದೆ. ಅದರಲ್ಲೂ ಪಾಪ್ ಕಾರ್ನ್ ಸೇವನೆ ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.

ಎಂತಹ ಆಹಾರ ಸೇವಿಸಿದರೆ ಏನು ಉಪಯೋಗ?

* ಎಲುಬುಗಳ ಶಕ್ತಿಗೆ: ಸ್ಟ್ರಿಂಗ್ ಚೀಸ್ ಯೌವ್ವನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದಷ್ಟೇ ಅಲ್ಲ, ಮೂಳೆ, ಎಲುಬುಗಳಿಗೆ ಅವಶ್ಯಕ ಕ್ಯಾಲ್ಸಿಯಂ ಒದಗಿಸುತ್ತದೆ. ವಯಸ್ಸಾಗುತ್ತಿದ್ದಂತೆ ಎಲುಬಿನ ಶಕ್ತಿ ಕುಸಿಯುವುದರಿಂದ ಚೀಸ್ ಮತ್ತು ಸೋಯ್ ಪ್ರೊಟೀನ್ ಇರುವ ಅಂಶವನ್ನು ಹೆಚ್ಚು ಬಳಸಬೇಕು.

* ಕಣ್ಣುಗಳ ತೀಕ್ಷ್ಣತೆಗೆ: ವಯಸ್ಸಾದಂತೆ ಕಣ್ಣುಗಳ ದೃಷ್ಟಿಯೂ ಕುಂದುತ್ತದೆ. ಆದ್ದರಿಂದ ಕಣ್ಣುಗಳಿಗೆ ಅಗತ್ಯ ಪೋಷಕಾಂಶವಾದ ಲ್ಯೂಟೀಮ್, ಝೀಕ್ಸಾಂಥಿನ್ ಪಡೆಯಲು ಮತ್ತು ದೃಷ್ಟಿ ಹೆಚ್ಚಿಸಿಕೊಳ್ಳಲು ಪಾಲಾಕ್ ಸೊಪ್ಪಿನ ಸಲಾಡನ್ನು ಕಿತ್ತಳೆ ಹಣ್ಣಿನೊಂದಿಗೆ ಸೇವಿಸಬೇಕು. ಮಲ್ಟಿ ವಿಟಮಿನ್ ಮತ್ತು ಮಿನರಲ್ ಇರುವ ಆಹಾರಗಳೂ ಸಹ ಲ್ಯೂಟೀಮ್ ಅಂಶವನ್ನು ಹೊಂದಿರುತ್ತದೆ.

* ಹೃದಯದ ಸ್ವಾಸ್ಥ್ಯಕ್ಕೆ: ಎಲ್ಲ ಧಾನ್ಯಗಳ ಸೇವನೆಯೂ ಕೂಡ ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತೆ. ಎಲ್ಲಾ ಧಾನ್ಯಗಳ ಅಂಶವನ್ನೂ ಪಡೆದುಕೊಂಡಿರುವ ಪಾಪ್ ಕಾರ್ನನ್ನು ಆಗಾಗ್ಗೆ ಸೇವಿಸುತ್ತಿದ್ದರೆ ಹೃದಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ.

* ಮೆದುಳಿನ ಆರೋಗ್ಯಕ್ಕೆ:
ಮೆದುಳನ್ನು ಚುರುಕಾಗಿಡಲು ಮತ್ತು ಮರೆವು ಕಾಯಿಲೆ ಬೇಗ ಬರದಂತೆ ತಡೆಯಲು ಮೀನು ಸೇವನೆ ಸಹಾಯಕ್ಕೆ ಬರುತ್ತೆ. ಅನೇಕ ಜಾತಿಯ ಮೀನುಗಳನ್ನು (ಟ್ಯೂನ, ಸ್ಯಾಲ್ಮನ್) ಸೇವಿಸಿದರೆ ಮೆದುಳಿಗೆ ಹೆಚ್ಚು ಉಪಯುಕ್ತ.

ಇವೆಲ್ಲದರ ಜೊತೆಗೆ ಧನಾತ್ಮಕ ಚಿಂತನೆ ಮತ್ತು ನಿರಂತರ ವ್ಯಾಯಾಮವೂ ಕೂಡ ದೇಹಕ್ಕೆ ಮತ್ತು ಮನಸ್ಸಿಗೆ ಅತ್ಯಗತ್ಯ.

English summary

Foods for Healthy Aging | Popcorn and Cheese | ವಯಸ್ಸಾಗುವ ಸಮಯದಲ್ಲಿ ಈ ಆಹಾರವಿರಲಿ | ಪಾಪ್ ಕಾರ್ನ್ ಮತ್ತು ಚೀಸ್

Balanced diet, regular exercise lead longer and healthy lives. If you want to know the secret of healthy aging, here are some simple tips to help you out. Take a look.
X
Desktop Bottom Promotion