For Quick Alerts
ALLOW NOTIFICATIONS  
For Daily Alerts

ಓಮು ಕಾಳಿನಿಂದ ನಿಮ್ಮ ಆರೋಗ್ಯಕ್ಕೆ ಏನು ಲಾಭ?

|
Health Benefits of Ajwain
ಅಜ್ವೈನ ಅಥವಾ ಓಮು ಕಾಳನ್ನು ಕರಿದ ಪದಾರ್ಥಗಳಿಗೆ ಸುವಾಸನೆಗೆಂದು ಬಳಸುತ್ತಾರೆ. ಆದರೆ ಓಮು ಕಾಳಿನಲ್ಲಿ ಅಚ್ಚರಿ ಮೂಡಿಸುವ ಕೆಲವು ಔಷಧೀಯ ಗುಣಗಳೂ ಇದೆ. ಔಷಧಗಳಲ್ಲೂ ಬಳಸಲಾಗುವ ಓಮು ಕಾಳಿನಿಂದ ಆರೋಗ್ಯಕ್ಕೆ ಇರುವ ಉಪಯೋಗದ ಕುರಿತು ತಿಳಿಯೋಣ.

ಓಮು ಕಾಳಿನಲ್ಲಿರುವ ಆರೋಗ್ಯಕರ ಅಂಶ:

* ಜೀರ್ಣಕ್ರಿಯೆ: ಓಮು ಕಾಳಿನಲ್ಲಿರುವ ಆಸಿಡ್ ನಿರೋಧಕ ಗುಣ ಜೀರ್ಣಕ್ರಿಯೆ ಸಮಸ್ಯೆ ನೀಗಿಸುತ್ತದೆ. ಮಜ್ಜಿಗೆಯೊಂದಿಗೆ ಸ್ವಲ್ಪ ಓಮು ಕಾಳನ್ನು ಬೆರೆಸಿ ಕುಡಿದರೆ ಜೀರ್ಣಕ್ರಿಯೆಗೆ ಒಳ್ಳೆಯದು.

* ಕೆಮ್ಮು, ನೆಗಡಿ: ಥಂಡಿ ಅಥವಾ ಚಳಿ ವಾತಾವರಣವಿದ್ದಾಗ, ಈ ಕಾಳನ್ನು ತಿಂದರೆ ಕೆಮ್ಮು ಮತ್ತು ನೆಗಡಿ ಉಪಶಮನವಾಗುತ್ತದೆ. ಓಮನ್ನು ಅಗಿದು ಬಿಸಿ ನೀರಿನೊಂದಿಗೆ ನುಂಗಬೇಕು. ಇದು ಅಸ್ತಮಾ ಖಾಯಿಲೆಗೂ ಸೂಕ್ತ. ಬೆಲ್ಲದೊಂದಿಗೆ ಓಮು ಕಾಳನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.

* ಹೊಟ್ಟೆ ನೋವು: ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ ಮುಂತಾದ ಕಾರಣದಿಂದ ಹೊಟ್ಟೆ ನೋವು ಬಂದಾಗ ಬಿಸಿ ನೀರಿನೊಂದಿಗೆ ಓಮು ಕಾಳನ್ನು ತಿನ್ನುವುದರಿಂದ ಉಪಶಮನಗೊಳ್ಳುತ್ತದೆ.

* ಕಿಡ್ನಿ ಕಲ್ಲು: ಓಮು ಕಾಳು ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳುವುದನ್ನು ತಡೆಯುವಲ್ಲಿ ಪರಿಣಾಮಕಾರಿ. ಇದರ ಸೇವನೆಯಿಂದ ಲಿವರ್ ಮತ್ತು ಕಿಡ್ನಿ ಸುಲಭವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

* ತಲೆ ನೋವು, ಎದೆ ಉರಿ: ಈ ಕಾಳಿನ ಸೇವನೆಯಿಂದ ತಲೆನೋವು, ಎದೆ ಉರಿ ಮತ್ತು ಕಿವಿ ನೋವನ್ನೂ ಕಡಿಮೆಗೊಳಿಸಬಹುದು. ಕಿವಿನೋವಿಗೆ ಓಮು ಕಾಳಿನ ಎಣ್ಣೆ ಬಿಡುವುದರಿಂದ ಕಿವಿ ನೋವು ಕಡಿಮೆಗೊಳ್ಳುತ್ತದೆ. ಬಿಸಿ ನೀರಿನೊಂದಿಗೆ ಕಾಳನ್ನು ಸೇವಿಸುವುದರಿಂದ ತಲೆ ನೋವು ಮತ್ತು ಎದೆ ಉರಿ ಕಡಿಮೆಯಾಗುತ್ತದೆ.

* ಕೀಲು ನೋವು: ಕೀಲು ನೋವಿನಿಂದ ಬಳಲುತ್ತಿದ್ದರೆ ಅಜ್ವೈನ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ನೋವು ಕಡಿಮೆಯಾಗುತ್ತದೆ.

* ವಾಂತಿ ಉಪಶಮನ: ಮದ್ಯ ಸೇವಿಸಿ ಹೊಟ್ಟೆ ತೊಳಸುವಂತಿದ್ದರೆ ಓಮು ಕಾಳು ಉಪಶಮನ ನೀಡುತ್ತದೆ. ವಾಂತಿ ನಿಯಂತ್ರಿಸಿ ಹಸಿವು ಹೆಚ್ಚುವಂತೆ ಮಾಡುತ್ತದೆ.

* ಬಾಯಿ ವಾಸನೆ: ಬಾಯಿ ವಾಸನೆ ಬರುತ್ತಿದ್ದರೆ ಓಮು ಜಿಗಿದರೆ ಕಡಿಮೆಯಾಗುತ್ತದೆ. ಹಲ್ಲು ನೋಯುತ್ತಿದ್ದರೆ ಬಿಸಿನೀರಿನಲ್ಲಿ ಓಮು ಕಾಳನ್ನು ಕುದಿಸಿ ಬಾಯಿ ಮುಕ್ಕಳಿಸಬೇಕು.

* ಮುಟ್ಟಿನ ನೋವು: ಓಮು ಕಾಳನ್ನು ಹುರಿದು ಹಾಲಿನೊಂದಿಗೆ ಕುಡಿದರೆ ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವಿಗೂ ಉಪಶಮನ ನೀಡುತ್ತದೆ.

* ಅಸಿಡಿಟಿ: ಜೀರಿಗೆಯೊಂದಿಗೆ ಈ ಕಾಳನ್ನು ಹುರಿದು ನೀರಿನಲ್ಲಿ ಬೇಯಿಸಿ ಸೋಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿದರೆ ನೈಸರ್ಗಿಕವಾಗಿಯೇ ಅಸಿಡಿಟಿ ಕಡಿಮೆಯಾಗುತ್ತದೆ.

* ರಕ್ತ ಶುದ್ಧೀಕರಣ: ಗರ್ಭಾವಸ್ಥೆ ಸಮಯದಲ್ಲಿ ಓಮು ಕಾಳಿನ ಸೇವನೆ ರಕ್ತಶುದ್ಧೀಕರಣಗೊಳಿಸಿ, ದೇಹದಲ್ಲಿ ರಕ್ತ ಸಂಚಲನ ಹೆಚ್ಚಿಸುತ್ತದೆ.

English summary

Health Benefits of Ajwain | Carom Seeds for Good Health | ಓಮು ಕಾಳಿನಲ್ಲಿದೆ ಆರೋಗ್ಯಕರ ಅಂಶ | ಉತ್ತಮ ಆರೋಗ್ಯಕ್ಕೆ ಓಮು ಕಾಳು ಸೇವನೆ

Carom seeds, commonly known as ajwain is used to add flavour to the deep fried dishes. But Ajwain, a herb has several health benefits also. It is also an ingredient for medicines. Following are few health benefits of ajwain (carom seeds).
Story first published: Wednesday, October 19, 2011, 17:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X