For Quick Alerts
ALLOW NOTIFICATIONS  
For Daily Alerts

ಅನ್ನ ತಿನ್ನಲೇಬೇಕಾದ ಐದು ಕಾರಣ ಯಾವುದು?

|
Rice Health Benefits
ಭಾರತೀಯ ಅಡುಗೆ ಅನ್ನವಿಲ್ಲದೆ ಪರಿಪೂರ್ಣವಾಗೋದೇ ಇಲ್ಲ. ಪ್ರೊಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫಾಸ್ಪರಸ್, ಫೈಬರ್, ಕಬ್ಬಿಣಾಂಶ ಹೊಂದಿರುವ ಅನ್ನದಲ್ಲಿ ಆರೋಗ್ಯಕ್ಕೆ ಅನುವಾಗುವ ಇನ್ನೂ ಹಲವು ಅಂಶಗಳಿವೆ. ಅದೇನೆಂದು ಮುಂದೆ ತಿಳಿಯಿರಿ.

ಆರೋಗ್ಯಕ್ಕೆ ಅನ್ನದಿಂದ ಏನೇನು ಪ್ರಯೋಜನ?

* ಶಕ್ತಿ ನೀಡುತ್ತೆ: ಅಕ್ಕಿಯಲ್ಲಿ ಕಾರ್ಬೊಹೈಡ್ರೇಡ್ ಹೆಚ್ಚಿರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವ ಇಂಧನದಂತೆ ಕೆಲಸ ನಿರ್ವಹಿಸುವುದಲ್ಲದೆ ಮೆದುಳಿನ ಕಾರ್ಯವೈಖರಿ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಅನ್ನದಲ್ಲಿ ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಇರುವುದರಿಂದ ನಿಮ್ಮ ದಿನನಿತ್ಯದ ಆಹಾರದೊಂದಿಗೆ ಅನ್ನವಿದ್ದರೆ ಯಾವುದೇ ತೊಂದರೆಯುಂಟಾಗುವುದಿಲ್ಲ.

* ಹೃದಯದ ರೋಗ ತಡೆಯುತ್ತದೆ: ಭತ್ತದ ಹೊಟ್ಟಿನಿಂದ ತಯಾರಿಸುವ ಎಣ್ಣೆ (ರೈಸ್ ಬ್ರಾನ್ ಆಯಿಲ್) ಯಲ್ಲಿರುವ ಕೆಲವು ಆರೋಗ್ಯಕರ ಅಂಶ ಹೃದಯಕ್ಕೆ ಶಕ್ತಿ ನೀಡಿ ದೇಹದಲ್ಲಿ ಬೊಜ್ಜಿನ ಮಟ್ಟವನ್ನು ಕಡಿಮೆಮಾಡುತ್ತದೆ.

* ಅತಿಯಾದ ರಕ್ತದೊತ್ತಡ ನಿಯಂತ್ರಣ: ಅನ್ನದಲ್ಲಿ ಕಡಿಮೆ ಸೋಡಿಯಂ ಇರುವುದರಿಂದ ಇದರ ಸೇವನೆ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ. ಅತಿಯಾದ ರಕ್ತದೊತ್ತಡ ಮತ್ತು ಹೃದ್ರೋಗದಿಂದ ಬಳಲುತ್ತಿದ್ದವರಿಗೆ ಇದು ಒಳ್ಳೆಯ ಆಹಾರ.

* ಕ್ಯಾನ್ಸರ್ ತಡೆ: ಕೆಂಪಕ್ಕಿ ಅನ್ನದಲ್ಲಿ ಹೆಚ್ಚು ನಾರಿನಂಶವಿರುವುದರಿಂದ ಅನೇಕ ತರಹದ ಕ್ಯಾನ್ಸರ್ ದೂರಿವಿರಿಸಲು ಸಹಾಯವಾಗುತ್ತದೆ. ದೇಹದಲ್ಲಿ ಕ್ಯಾನ್ಸರ್ ತರುವ ಕಣಗಳು ಇರದಂತೆ ಅನ್ನದಲ್ಲಿನ ಫೈಬರ್ ಅಂಶ ಹೋರಾಡುತ್ತದೆ ಎನ್ನಲಾಗಿದೆ.

* ತ್ವಚೆ ರಕ್ಷಣೆ: ಅಕ್ಕಿ ಹಿಟ್ಟು ಮೊಡವೆ ಮತ್ತು ಕಲೆಗಳನ್ನು ತೊಲಗಿಸುವಲ್ಲಿ ಹೆಚ್ಚು ಪರಿಣಾಮಕಾರಿ. ಚರ್ಮ ಉರಿಯುತ್ತಿದ್ದರೆ ಅಕ್ಕಿ ಗಂಜಿ ಲೇಪಿಸಿದರೆ ಮತ್ತು ಹೊಟ್ಟೆ ಕೆಟ್ಟರೆ ಅಕ್ಕಿ ಗಂಜಿ ಕುಡಿದರೆ ಉಪಶಮನವಾಗುತ್ತದೆ ಎನ್ನಲಾಗಿದೆ.

ದಿನಕ್ಕೆ ಒಂದು ಕಪ್ ಅನ್ನ ಅಥವಾ ಕೆಂಪಕ್ಕಿ ಅನ್ನದ ಸೇವನೆ ನಿಮ್ಮ ದೇಹವನ್ನು ಶಕ್ತಿಯುತವಾಗಿರಿಸಿ ಕ್ಯಾನ್ಸರ್ ಮತ್ತು ಹೃದ್ರೋಗದಿಂದಲೂ ತಡೆಯಲು ಸಹಾಯಕವಾಗುತ್ತದೆ. ಆದರೆ ಪಾಲಿಶ್ ಅಕ್ಕಿಯನ್ನು ಬಳಸುತ್ತಿರುವವರಿಗೆ ಇದರ ಸಂಪೂರ್ಣ ಪ್ರಯೋಜನ ದೊರೆಯದೆ ಹೋಗಬಹುದು.

English summary

Rice Health Benefits | Brown Rice for Good Health | ಅನ್ನ ಸೇವನೆ ಆರೋಗ್ಯಕ್ಕೆ ಉತ್ತಮ | ಕೆಂಪಕ್ಕಿ ಅನ್ನದಿಂದ ಆರೋಗ್ಯ ವೃದ್ಧಿ

Rice is one of the most commonly consumed staple food in India. Rice is a good source of proteins, vitamin D calcium, phosphorous, fiber and iron. Brown rice is rich in most of the nutrients and minerals. Here are some of other important health benefits of rice. Have a look.
Story first published: Tuesday, October 18, 2011, 17:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more