For Quick Alerts
ALLOW NOTIFICATIONS  
For Daily Alerts

ನಿಮಗೆ ಯಾವ ಆಹಾರದಿಂದ ಅಲರ್ಜಿಯಾಗುತ್ತಿರಬಹುದು?

|
5 Common Food Allergies
ಕೆಲವೊಬ್ಬರಿಗೆ ಕೆಲವು ಆಹಾರ ಹಿಡಿಸುವುದಿಲ್ಲ, ಅಂದರೆ ಕೆಲವು ಆಹಾರ ಸೇವಿಸಿದರೆ ಒಬ್ಬೊಬ್ಬರಿಗೆ ಬೇಗನೆ ಅಲರ್ಜಿಯಾಗುತ್ತದೆ. ಇಂತಹ ಆಹಾರದ ಸೇವನೆಯಿಂದ ದೇಹದಲ್ಲಿ ಊತ, ಗುಳ್ಳೆ, ಉಸಿರಾಟ ವ್ಯತ್ಯಾಸಗೊಳ್ಳುವುದು ಹೀಗೆ ಹಲವು ರೀತಿ ಅಲರ್ಜಿಯಾಗಬಹುದು.

ಆಹಾರ ಅಲರ್ಜಿಯಲ್ಲಿ ಅನೇಕ ತರಹವಿದೆ. ಆದರೆ ಯಾವ ಆಹಾರ ಅಲರ್ಜಿ ಪ್ರಚೋದಕವಾಗಬಹುದು ಎಂದು ತಿಳಿಯುವುದು ಒಮ್ಮೊಮ್ಮೆ ಕಷ್ಟ. ಆದ್ದರಿಂದ ಇಲ್ಲಿ ಅಲರ್ಜಿ ಉಂಟುಮಾಡುವ ಐದು ರೀತಿಯ ಆಹಾರವನ್ನು ನೀಡಲಾಗಿದೆ.

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಐದು ಆಹಾರ ಅಲರ್ಜಿ:

* ಕಡಲೆಕಾಯಿ ಅಲರ್ಜಿ: ಸಣ್ಣಗಿರುವ ಕಡಲೆಕಾಯಿ ಹೇಗೆ ದೇಹಕ್ಕೆ ಅಷ್ಟು ತೊಂದರೆ ಕೊಡುತ್ತೆ ಎಂದು ಅಂದುಕೊಳ್ಳಬಹುದು, ಆದರೆ ಕೆಲವೊಬ್ಬರಿಗೆ ಕಡಲೆ ಕಾಯಿ ಅಲರ್ಜಿ ಆದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎಲ್ಲಾ ತರಹದ ಅಲರ್ಜಿಗೆ ಹೋಲಿಸಿದರೆ ಕಡಲೆಕಾಯಿಯ ಅಲರ್ಜಿ ಹೆಚ್ಚು ಗಂಭೀರವಾಗಿದ್ದು, ಮಕ್ಕಳಲ್ಲಿ ಇದು ಜಾಸ್ತಿ ಕಾಣಿಸಿಕೊಳ್ಳುತ್ತದೆ.

* ಸಮುದ್ರಾಹಾರದ ಅಲರ್ಜಿ:
ಕೆಲವು ಸಮುದ್ರ ಆಹಾರಗಳಾದ ಸೀಗಡಿ, ಚೇಳೇಡಿ, ಮೃದ್ವಂಗಿ ಮೀನು, ಕಪ್ಪೆ ಚಿಪ್ಪಿನ ಮೀನು ಅಥವಾ ಸಾದಾ ಮೀನೂ ಕೂಡ ಕೆಲವು ಬಾರಿ ಅಲರ್ಜಿ ಉಂಟು ಮಾಡುತ್ತದೆ. ಇದರಲ್ಲಿನ ಅಯೋಡಿನ್ ಅಂಶವೇ ಅಲರ್ಜಿಗೆ ಪ್ರಚೋದಕ. ಸುಮಾರು ಎಲ್ಲಾ ಸಮುದ್ರಾಹಾರದಲ್ಲೂ ಈ ಅಯೋಡಿನ್ ಅಂಶ ಇರುವುದರಿಂದ, ಈ ಆಹಾರ ದೇಹಕ್ಕೆ ಒಗ್ಗದವರು ಇದರಿಂದ ದೂರವಿದ್ದರೆ ಒಳಿತು.

* ಮೊಟ್ಟೆ ಅಲರ್ಜಿ: ತುಂಬಾ ಚಿಕ್ಕವರಿದ್ದಾಗ ಸಾಮಾನ್ಯವಾಗಿ ಮೊಟ್ಟೆ ಅಲರ್ಜಿ ಕಾಣಿಸಿಕೊಂಡು ಬೆಳವಣಿಗೆ ಹೊಂದುತ್ತಿದ್ದಂತೆ ಮಾಯವಾಗುತ್ತದೆ. ಮೊಟ್ಟೆ ಬಿಳಿಭಾಗವಾದ ಆಲ್ಬುಮಿನ್ ಅಲರ್ಜಿಗೆ ಕಾರಣ ಅಂಶ. ಮೊಟ್ಟೆ ಬಿಳಿ ಭಾಗವನ್ನು ತಿನ್ನದಿದ್ದರೆ ಈ ಅಲರ್ಜಿಯಿಂದ ಸುಲಭವಾಗಿ ಪಾರಾಗಬಹುದು.

* ಹಾಲಿನ ಅಲರ್ಜಿ: ಹಾಲಿನಲ್ಲಿರುವ ಲ್ಯಾಕ್ಟೋಸ್ ಕೆಲವೊಬ್ಬರಿಗೆ ಅಲರ್ಜಿ ನೀಡಬಹುದು.ನಿಮ್ಮ ದೇಹದಲ್ಲಿ ಅವಶ್ಯಕ ಎಂಜೈಮ್ ಇಲ್ಲದಿದ್ದರೆ ಅಥವಾ ಜೀರ್ಣಕ್ರಿಯೆ ಸರಿಯಿಲ್ಲದಿದ್ದ ಸಮಯದಲ್ಲಿ ಈ ಅಲರ್ಜಿ ಬೇಗನೆ ತಗುಲುತ್ತದೆ. ಚೀಸ್, ಬೆಣ್ಣೆ, ಮೊಸರು ಇಂತಹ ಪದಾರ್ಥಗಳನ್ನು ತಿನ್ನದಿದ್ದರೆ ಈ ಅಲರ್ಜಿಯಿಂದ ತಪ್ಪಿಸಿಕೊಳ್ಳಬಹುದು.

* ಸೋಯಾ ಅಲರ್ಜಿ:
ಸೋಯಾ ಬೀನ್ ಅಂಶದಿಂದ ಉತ್ಪಾದಿಸಿದ ಸೋಯಾ ಹಾಲು, ಸೋಯಾ ಸಾಸ್ ಕೂಡ ಅಲರ್ಜಿಗೆ ಕಾರಣವಾಗುತ್ತದೆ. ಆದರೆ ಇದು ತುಂಬಾ ವಿರಳ.

English summary

5 Common Food Allergies | Foods to Avoid | ಅಲರ್ಜಿ ಉಂಟುಮಾಡುವ 5 ಸಾಮಾನ್ಯ ಆಹಾರ | ಅಲರ್ಜಿ ತಡೆಗೆ ಯಾವ ಆಹಾರ ನಿಷಿದ್ಧ?

You must have heard people say that 'I am allergic to this food or that'. What it basically means is that, consuming that particular food triggers an unfavorable reaction in the body. There are many types of food allergies; some are more common than others. Here is a list of the 5 most common food allergies people suffer from so that you can check if you fall under any category.
Story first published: Friday, October 14, 2011, 18:22 [IST]
X
Desktop Bottom Promotion