For Quick Alerts
ALLOW NOTIFICATIONS  
For Daily Alerts

ಬಿಪಿ ನಿಯಂತ್ರಣಕ್ಕೆ ಮೆಣಸಿನ ಕಾಯಿ ತಿನ್ನಿ!

|
Chilli Peppers Treatment for blood pressure
ಉಪ್ಪು ಖಾರ ಹೆಚ್ಚಾಗಿ ಸೇವಿಸುವವರಿಗೆ ರಕ್ತದೊತ್ತಡ ಹೆಚ್ಚಾಗುತ್ತೆ ಎಂಬ ಮಾತಿದೆ. ಆದ್ರೆ ದುಂಡು ಮೆಣಸಿನಕಾಯಿ ತಿಂದರೆ ರಕ್ತದೊತ್ತಡ ಕಡಿಮೆಯಾಗುತ್ತೆ ಎಂದಿದೆ ಇತ್ತೀಚಿನ ಸಂಶೋಧನೆ.

ದೊಣ್ಣೆ ಮೆಣಸಿನ ಕಾಯಿ ಅಥವಾ ದುಂಡು ಮೆಣಸಿನ ಕಾಯಿಯಲ್ಲಿರುವ ಕ್ಯಾಪ್ಸೇಸಿನ್ ಎಂಬ ಅಂಶವೇ ಬಿಪಿ ಕಡಿಮೆ ಮಾಡುವ ಉಪಯುಕ್ತ ಅಂಶವೆಂದು ತಿಳಿದುಬಂದಿದೆ. ಈ ಅಂಶ ರಕ್ತನಾಳವನ್ನು ವಿಶ್ರಾಂತಿಗೊಳಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ ಎಂದು ತಿಳಿಸಿದೆ.

ದೊಣ್ಣೆ ಅಥವಾ ದುಂಡು ಮೆಣಸಿನ ಕಾಯಿಯ ನಿರಂತರ ಸೇವನೆಯಿಂದ ಅದರಲ್ಲಿರುವ ಕ್ಯಾಪ್ಸೇಸಿನ್ ಅಂಶ ದೇಹಕ್ಕೆ ಹೆಚ್ಚಾಗಿ ದೊರೆಯುತ್ತದೆ. ಈ ಕ್ಯಾಪ್ಸೇಸಿನ್ ಅಂಶ ರಕ್ತನಾಳಗಳಲ್ಲಿರುವ TRPV1 ಚಾನೆಲ್ ಅನ್ನು ಚಟುವಟಿಕೆಗೊಳಿಸಿ ಹೆಚ್ಚು ನೈಟ್ರಿಕ್ ಆಕ್ಸೈಡ್ ಉತ್ಪತ್ತಿ ಮಾಡುತ್ತದೆ. ನೈಟ್ರಿಕ್ ಆಸಿಡ್ ರಕ್ತನಾಳಗಳಲ್ಲಿ ಕಾಣಿಸಿಕೊಳ್ಳುವ ಉರಿ ಮತ್ತು ಒತ್ತಡವನ್ನು ಕಡಿಮೆಗೊಳಿಸಲು ಸಹಾಯಕವಾಗುತ್ತೆ, ಈ ಮೂಲಕ ಬಿಪಿ ನಿಯಂತ್ರಣಗೊಳ್ಳುತ್ತದೆ ಎಂದು ತಿಳಿಸಿದೆ.

ಈ ಸಂಶೋಧನೆಯನ್ನು ಮೊದಲು ಇಲಿಗಳ ಮೇಲೆ ನಡೆಸಲಾಗಿದೆ. ಆದರೆ ದಿನಕ್ಕೆ ಎಷ್ಟು ಮೆಣಸಿನ ಕಾಯಿ ಸೇವನೆ ಎಷ್ಟು ಕ್ಯಾಪ್ಸೇಸಿನ್ ಅಂಶವನ್ನು ದೇಹಕ್ಕೆ ಒದಗಿಸುತ್ತದೆ ಎಂಬ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕಿದೆ ಎಂದು ತಿಳಿಸಿದೆ.

English summary

High Blood Pressure | Chilli Peppers Treatment | ಅತಿಯಾದ ರಕ್ತದೊತ್ತಡ | ರಕ್ತದೊತ್ತಡಕ್ಕೆ ಮೆಣಸಿನಕಾಯಿ ಚಿಕಿತ್ಸೆ

Chilli Peppers are now the medicine for high blood pressure, claim a new research. The research on hypertensive rats has shown that the active ingredient that gives the peppers their heat—a compound known as capsaicin, leads blood vessels to relax.
Story first published: Friday, September 30, 2011, 13:15 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more