For Quick Alerts
ALLOW NOTIFICATIONS  
For Daily Alerts

ಸಿಗರೇಟ್ ಸೇದುವವರೇ ಮರೆಯದೆ ಇಲ್ಲಿ ನೋಡಿ

|
Smokers Lose Memory Soon
ನಿರಂತರವಾಗಿ ಸಿಗರೇಟ್ ಸೇದುವ ಚಟ ಅಂಟಿಸಿಕೊಂಡಿರುವವರು ಬೇಗನೆ ತಮ್ಮ ಸ್ಮರಣಾ ಶಕ್ತಿ ಕಳೆದುಕೊಳ್ಳುತ್ತಾರೆ ಎಂದು ಹೊಸ ಸಂಶೋಧನೆಯೊಂದು ವರದಿ ಮಾಡಿದೆ.

ಸಿಗರೇಟ್ ಸೇದದವರಿಗೆ ಹೋಲಿಸಿದರೆ ಧೂಮಪಾನಿಗಳು ತಮ್ಮ ದಿನನಿತ್ಯ ಕೆಲಸದ ಮೂರನೇ ಒಂದು ಭಾಗವನ್ನು ಬೇಗನೆ ಮರೆತುಬಿಡುತ್ತಾರೆ ಎಂದು ತಿಳಿಸಿದೆ.ಹಾಗೆಯೇ, ಧೂಮಪಾನ ತ್ಯಜಿಸಿದವರು ತಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಿಕೊಂಡ ಉದಾಹರಣೆಯೂ ದೊರೆತಿರುವುದಾಗಿ ಸಂಶೋಧನೆ ಕೈಗೊಂಡಿದ್ದ ನಾರ್ಥಂಬ್ರಿಯಾ ವಿಶ್ವವಿದ್ಯಾಲಯ ತಿಳಿಸಿದೆ.

ಈ ಅಧ್ಯಯನ 18-25ರ ವಯೋಮಿತಿಯ 70 ಮಂದಿಯನ್ನು ಒಳಗೊಂಡಿದ್ದು, ಅವರಿಗೆ ಕೆಲವು ಕೆಲಸಗಳನ್ನು ವಹಿಸಲಾಗಿತ್ತು. ಕೊನೆಯಲ್ಲಿ ಅವರ ಕೆಲಸದ ನೆನಪನ್ನು ಮರುಕಳಿಸಿಕೊಳ್ಳಲು ತಿಳಿಸಿದಾಗ, ಧೂಮಪಾನಿಗಳಿಂದ ಕೇವಲ 59 % ನೆನಪನ್ನು ಮಾತ್ರ ಜ್ಞಾಪಿಸಿಕೊಳ್ಳಲು ಸಾಧ್ಯವಾಯಿತು.

ಹಾಗೆಯೇ ಧೂಮಪಾನ ತ್ಯಜಿಸಿದವರನ್ನು ಪರೀಕ್ಷಿಸಿದಾಗ 74% ನೆನಪನ್ನು, ಧೂಮಪಾನ ಮಾಡದಿದ್ದವರನ್ನು ಪರೀಕ್ಷಿಸಿದಾಗ 81% ನೆನಪನ್ನು ಸ್ಮರಣೆ ಮಾಡಿಕೊಂಡಿದ್ದಾರೆ.

ಧೂಮಪಾನ ಗೊತ್ತೇ ಆಗದಂತೆ ನಮ್ಮ ಸ್ಮರಣೆಯನ್ನು ಕಿತ್ತುಕೊಳ್ಳುತ್ತದೆ, ಸುಖಾಸುಮ್ಮನೆ ಧೂಮಪಾನದಿಂದ ತೊಂದರೆಗೊಳಗಾಗುವುದನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಎಂದು ಡೈಲಿ ಮೇಲ್ ವರದಿ ಮಾಡಿದೆ.

English summary

Smoking and Health Hazards | Smokers Lose Memory Soon | ಧೂಮಪಾನ ಮತ್ತು ಆರೋಗ್ಯ ಸಮಸ್ಯೆ | ಧೂಮಪಾನಿಗಳು ಬೇಗ ಜ್ಞಾಪಕ ಶಕ್ತಿ ಕಳೆದುಕೊಳ್ಳುತ್ತಾರೆ

A new research said that people who smoke regularly are in more risk of losing memory compared to non-smokers.
Story first published: Wednesday, September 28, 2011, 17:51 [IST]
X
Desktop Bottom Promotion