For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಗುಟ್ಟು ದಾಸವಾಳದಿಂದ ರಟ್ಟು

|
Hibiscus Health Benefits
ಹಿತ್ತಲಲ್ಲಿ ದಾಸವಾಳ ಇದ್ರೆ ಅಂದವಾಗಿ ಮಾತ್ರ ಕಾಣುವುದಿಲ್ಲ, ಅದರಿಂದ ನೀವು ಇನ್ನೂ ಹೆಚ್ಚು ಉಪಯೋಗ ಪಡೆದುಕೊಳ್ಳಬಹುದು. ಆಯುರ್ವೇದದಲ್ಲಿ ಹೆಚ್ಚು ಬಳಕೆಯಲ್ಲಿರುವ ಈ ಹೂವು ಆರೋಗ್ಯಕ್ಕೂ ವರ.

ದಾಸವಾಳದಿಂದ ಆರೋಗ್ಯಕ್ಕೆ ಹೇಗೆ ಉಪಯೋಗ ಎಂದು ತಿಳಿದುಕೊಳ್ಳೋಣ.

1. ಹೃದಯದ ಸ್ವಾಸ್ಥ್ಯ: ಹೃದಯ ಸಂಬಂಧಿ ತೊಂದರೆಗಳಿಗೆ ದಾಸವಾಳ ಹೂವಿನ ನೈಸರ್ಗಿಕ ಅಂಶ ಪರಿಣಾಮಕಾರಿ. ಈ ಹೂವಿನ ರಸದ ಕಷಾಯವನ್ನು ಕುಡಿದರೆ ದೇಹದಲ್ಲಿನ ಅತಿಯಾದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತದೆ.

2. ಕೊಲೆಸ್ಟ್ರಾಲ್ ಗೆ ಬ್ರೇಕ್: ದೇಹದಲ್ಲಿರುವ ಅನಗತ್ಯ ಬೊಜ್ಜನ್ನು ಕರಗಿಸುವಲ್ಲಿ ದಾಸವಾಳ ಹೆಚ್ಚು ಪ್ರಯೋಜನ. ದಾಸವಾಳದ ಹೂವಿನ ಟೀ ಮಾಡಿ ಕುಡಿದರೆ ಅಥವಾ ಅದರ ರಸವನ್ನು ಸೇವಿಸಿದರೆ, ಹೃದಯ ಸ್ಥಂಭನಕ್ಕೆ ಕಾರಣವಾಗುವ, ರಕ್ತದಲ್ಲಿ ಸೇರಿಕೊಂಡ ಅನಗತ್ಯ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಈ ಮೂಲಕ ಹೃದಯ ಸ್ಥಂಭನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

3. ಉಷ್ಣತೆಗೆ ಬಳಸಿ: ದಾಸವಾಳದ ರಸ ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ, ಈ ಮೂಲಕ ಉಷ್ಣ ಸಂಬಂಧಿ ಸಮಸ್ಯೆಗಳು ತಲೆದೋರುವುದನ್ನು ತಡೆಯುತ್ತದೆ. ಅದರಲ್ಲೂ ಬಿಳಿ ಬಣ್ಣದ ದಾಸವಾಳದಲ್ಲಿ ತಂಪು ನೀಡುವ ಅಂಶ ಹೆಚ್ಚಿರುವುದರಿಂದ, ಅದು ಕಣ್ಣುಗಳನ್ನು ಆಯಾಸದಿಂದ ಮುಕ್ತವಾಗಿರಿಸಿ, ತಂಪನ್ನು ನೀಡುತ್ತದೆ.

4. ಮಧುಮೇಹ:
ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ದಾಸವಾಳದ ರಸವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.

5. ರಕ್ತ ಹೀನತೆ: ಕೆಂಪು ದಾಸವಾಳದ ಹೂವು ನೈಸರ್ಗಿಕವಾಗಿ ರಕ್ತದ ಬಣ್ಣವನ್ನು ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಇದು ಪರಿಣಾಮಕಾರಿ ಔಷಧಿ.

6. ಕೂದಲಿಗೆ ಅವಶ್ಯಕ: ಈ ಹೂವಿನಿಂದ ತೆಗೆದ ರಸ ಕೂದಲಿಗೆ ಹೊಳಪು ನೀಡಿ ಉತ್ತಮ ಕಂಡೀಶನರ್ ನಂತೆ ವರ್ತಿಸುತ್ತದೆ. ಇದನ್ನು ಕೂದಲಿಗೆ ಪೋಷಣೆ ಒದಗಿಸುವ ಅನೇಕ ಪ್ರಸಾದನಗಳಲ್ಲೂ ಬಳಸಲಾಗುತ್ತದೆ.

ಹೀಗಿದ್ದ ಮೇಲೆ ಹಿತ್ತಲಲ್ಲಿ ಸುಮ್ಮನೆ ಕೂತಿದ್ದ ದಾಸವಾಳದ ಉಪಯೋಗವನ್ನು ಪಡೆಯಲು ಇಂದಿನಿಂದಲೇ ಆರಂಭಿಸಿ.

English summary

Hibiscus Health Benefits | Rosemallow for Good Health | ದಾಸವಾಳದಿಂದ ಆರೋಗ್ಯಕ್ಕೆ ಉಪಯೋಗ | ಉತ್ತಮ ಆರೋಗ್ಯಕ್ಕೆ ದಾಸವಾಳದ ಉಪಯೋಗ

This trumpet shaped flower is widely used in Ayurveda, herbal hair care products and is said to be very beneficiary to health. Lets' brief you more about the health benefits of the hibiscus. Take a look.
Story first published: Monday, September 12, 2011, 15:59 [IST]
X
Desktop Bottom Promotion