For Quick Alerts
ALLOW NOTIFICATIONS  
For Daily Alerts

ಅಣಬೆಯಲ್ಲಿದೆ ಸ್ತನ ಕ್ಯಾನ್ಸರ್ ತಡೆಯುವ ಶಕ್ತಿ

|
ಎಲ್ಲರಿಗೂ ಇಷ್ಟವಾಗುವ, ಅದರಲ್ಲೂ ಸಸ್ಯಾಹಾರಿಗಳಿಗೆ ಅತಿ ಪ್ರಿಯವಾದ ಈ ಅಣಬೆಯಲ್ಲಿ ಅನೇಕ ಔಷಧೀಯ ಗುಣಗಳೂ ಇವೆ. ಮಧುಮೇಹ ನಿಯಂತ್ರಣ, ರೋಗನಿರೋಧಕ ಶಕ್ತಿ, ತೂಕ ಕಡಿಮೆ ಮಾಡುವುದು ಅಷ್ಟೇ ಅಲ್ಲ, ಮಹಿಳೆಯರನ್ನು ಕಾಡುತ್ತಿರುವ ಸ್ತನ ಕ್ಯಾನ್ಸರ್ ತಡೆಗಟ್ಟುವ ವಿಶೇಷ ಗುಣವನ್ನೂ ಅಣಬೆ ಹೊಂದಿದೆ.

ಇಡೀ ವಿಶ್ವದಾದ್ಯಂತ ಮಹಿಳೆಯರನ್ನು ಕಾಡುತ್ತಿರುವ ಗಂಭೀರ ಸಮಸ್ಯೆ ಸ್ತನ ಕ್ಯಾನ್ಸರ್ ತಡೆಯಲು ಮಶ್ರೂಮ್ ಅಥವಾ ಅಣಬೆ ಸೇವಿಸುವುದು ಸುಲಭ ಮಾರ್ಗ ಎಂದು ಸಂಶೋಧನೆಯೊಂದು ತಿಳಿಸಿಕೊಟ್ಟಿದೆ.

ಪ್ರತಿದಿನ ಒಂದು ಔನ್ಸ್ ನಷ್ಟು ಅಣಬೆ ಸೇವಿಸಿದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 64 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಇಂತಹದೇ ಇನ್ನೊಂದು ಅಧ್ಯಯನ, ಸ್ತನ ಕ್ಯಾನ್ಸರ್ ತಗುಲುವ ಸಾಧ್ಯತೆಯನ್ನು ಅಣಬೆ ಶೇಕಡಾ 90 ರಷ್ಟು ಕಡಿಮೆಗೊಳಿಸುತ್ತದೆ ಎಂದೂ ವರದಿ ಮಾಡಿದೆ.

ಅಂತರರಾಷ್ಟ್ರೀಯ ಕ್ಯಾನ್ಸರ್ ನಿಯತಕಾಲಿಕೆಯಲ್ಲಿ ಪ್ರಕಟಿಸಿರುವ ಸಂಶೋಧನೆ ಪ್ರಕಾರ, ಅಣಬೆಯಲ್ಲಿ ಗಂಟನ್ನು ನಿವಾರಿಸುವ ವಿಶೇಷ ಗುಣವಿರುವುದರಿಂದ ಸ್ತನ ಕ್ಯಾನ್ಸರ್ ಬರುವುದನ್ನು ಮುನ್ನವೇ ತಡೆದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಸ್ತನದಲ್ಲಿ ಗಡ್ಡೆ ಬೆಳೆಯಲು ಕಾರಣವಾಗುವ ಹಾರ್ಮೋನನ್ನು ಪ್ರತಿಬಂಧಿಸುವ ಶಕ್ತಿಯನ್ನು ಅಣಬೆ ಹೊಂದಿದೆ.

ವರದಿಯ ಪ್ರಕಾರ, ಬ್ರಿಟನ್ ನಲ್ಲಿ ಸುಮಾರು 40,000 ಮಹಿಳೆಯರು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದು, ಅವರ ಆಹಾರ ಕ್ರಮವೇ ಕ್ಯಾನ್ಸರ್ ಹೆಚ್ಚಲು ಕಾರಣ ಎನ್ನಲಾಗಿದೆ. ಇನ್ನೊಂದೆಡೆ ಚೀನಾದಲ್ಲಿ ಕೇವಲ 20,000 ಸ್ತನ ಕ್ಯಾನ್ಸರ್ ರೋಗಿಗಳಿದ್ದು, ಅವರು ತಮ್ಮ ಆಹಾರದಲ್ಲಿ ಹೆಚ್ಚಾಗಿ ಅಣಬೆ ಬಳಸಿಕೊಳ್ಳುತ್ತಿರುವುದೇ ಸ್ತನ ಕ್ಯಾನ್ಸರ್ ನಿಯಂತ್ರಣಕ್ಕೆ ಬರಲು ಸಹಾಯಕವಾಗಿದೆ ಎಂದು ತಿಳಿದುಬಂದಿದೆ.

English summary

Mushroom Prevents Breast Cancer- Study | Mushroom For Breast Cancer | ಸ್ತನ ಕ್ಯಾನ್ಸರ್ ತಡೆಯಲು ಅಣಬೆ ಬಳಕೆ | ಸ್ತನ ಕ್ಯಾನ್ಸರ್ ನಿವಾರಿಸುವ ಅಣಬೆ

Breast Cancer which is one of the biggest threat to women across the globe can now be prevented with mushroom consumption according to a study. Take a look to know the major benefits of mushroom and it's contribution to the cause of Breast Cancer.
Story first published: Monday, September 5, 2011, 17:12 [IST]
X
Desktop Bottom Promotion