For Quick Alerts
ALLOW NOTIFICATIONS  
For Daily Alerts

ಫ್ಲೂ ಗೆ ಎ.ಸಿ ಕಾರಣವಾಗಬಹುದು ಎಚ್ಚರಿಕೆ!

|
Seasonal flu
ಮಳೆಗಾಲ ಬರ್ತಿದ್ದಂತೆ ಮನೆಯಲ್ಲಿ ಬೆಚ್ಚಗೆ ಮಲಗಿಬಿಡಬೇಕೆಂಬ ಆಸೆಯಾಗುವುದು ಸಹಜ. ಆದರೆ ಸ್ವಲ್ಪ ಎಡವಿದರೆ ಮನೆಯಲ್ಲೇ ಮಲಗಿಬಿಡಬಹುದಾದ ಪ್ರಸಂಗ ಬಂದುಬಿಡಬಹುದು, ಎಚ್ಚರಿಕೆ!

ಹೌದು. ಮಳೆಗಾಲ ತನ್ನ ಜೊತೆ ವೈರಸ್ ಗಳನ್ನೂ ಕರೆದುಕೊಂಡು ಬರುತ್ತೆ. ವೈರಲ್ ರೋಗಗಳು ( ಫ್ಲೂ ) ತಗುಲುವ ಸಾಧ್ಯತೆ ಈ ಕಾಲದಲ್ಲಿ ಹೆಚ್ಚು. ಅದರಲ್ಲೂ ನೀವು ಏರ್ ಕಂಡೀಶನರ್ ಇದ್ದ ಜಾಗದಲ್ಲಿ ಹೆಚ್ಚು ಹೊತ್ತು ಕಳೆದರೆ ರೋಗದ ಸಾಧ್ಯತೆ ದುಪ್ಪಟ್ಟು.

ಎ.ಸಿ ಇರುವೆಡೆ ನೀವು ತುಂಬಾ ಹೊತ್ತು ಇದ್ದರೆ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಗಂಭೀರ ರೋಗಗಳು ತಗುಲುವ ಸಾಧ್ಯತೆ ಹೆಚ್ಚಿದೆಯಂತೆ.

ಆಸ್ಪತ್ರೆಗೆ ಬರುವ ಸುಮಾರು ಕೇಸುಗಳಲ್ಲಿ ಎಸಿಯಲ್ಲಿ ಕೆಲಸ ಮಾಡುವವರೇ ಇಂತಹ ವೈರಲ್ ರೋಗಗಳಿಗೆ ಹೆಚ್ಚು ಒಳಗಾಗುವುದು ಎಂಬ ಅಂಶ ತಿಳಿದು ಬಂದಿದೆ. ಏರ್ ಕಂಡೀಶನರ್ ಗಳು ವೈರಸ್ ಗಳನ್ನು ಹರಡಲು ಅನುವು ನೀಡುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಜುಲೈ-ಸೆಪ್ಟೆಂಬರ್ ತಿಂಗಳಿನ ಅವಧಿಯಲ್ಲೇ ಹೆಚ್ಚಾಗಿ ವೈರಲ್ ಖಾಯಿಲೆಗಳು ಕಂಡುಬರುವುದು, ಕೆಮ್ಮು, ಗಂಟಲು ನೋವು, ನೆಗಡಿ, ಜ್ವರ ಮತ್ತು ಮೈ ಕೈ ನೋವು ಬಂದರೆ ಅದು ಖಂಡಿತ ವೈರಲ್ ಫೀವರ್ ಆಗಿರುತ್ತೆ ಮತ್ತು ಈ ಕುರಿತು ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಲೇಬೇಕಾದ ಅಗತ್ಯವಿರುತ್ತದೆ ಎಂದು ಡಾ. ರಾಮನ್ ರಾವ್ ತಿಳಿಸಿದ್ದಾರೆ.

ವರ್ಷ ವರ್ಷವೂ ವೈರಲ್ ರೋಗಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹವಾಮಾನದ ಬದಲಾವಣೆ ಮತ್ತು ಒತ್ತಡದ ಜೀವನ ಶೈಲಿಯೂ ಕೂಡ ಇದಕ್ಕೆ ಕಾರಣ. ಆದರೆ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು ಮತ್ತು ಅನಾರೋಗ್ಯಕರ ಜೀವನ ಶೈಲಿ ಅನುಸರಿಸುತ್ತಿರುವವರು ಮಾತ್ರ ಬೇಗನೆ ರೋಗಕ್ಕೆ ತುತ್ತಾಗುತ್ತಾರೆ. ಅಲ್ಲದೆ ಮಳೆಗಾಲ ಬರುತ್ತಿದ್ದಂತೆ ಶಾಲೆಗೆ ಹೋಗುವ ಮಕ್ಕಳು ಬೇಗನೆ ರೋಗಗಳಿಗೆ ಗುರಿಯಾಗುವುದೂ ವೈರಸ್ ಗಳ ಕಾರಣದಿಂದ ಎಂದಿದ್ದಾರೆ.

English summary

Flu Season and Precaution | Viral Fever and Air Conditioner | ಮಳೆಗಾಲದಲ್ಲಿ ಫ್ಲೂ ಮತ್ತು ಮುನ್ನೆಚ್ಚರಿಕೆ ಕ್ರಮ | ವೈರಲ್ ಫೀವರ್ ಮತ್ತು ಏರ್ ಕಂಡೀಶನರ್

Its a happy monsoon Season. But it's also one that brings with it the seasonal flu. So it is mush to take precautions to avoid the serious impact of viral fever. One important point to be notice is that, you would be more prone to the viral infection if you are in an air-conditioned space for prolonged hours. Take a look for detail information.
Story first published: Wednesday, August 31, 2011, 17:18 [IST]
X
Desktop Bottom Promotion